Gold: 5 ಕೆಜಿ ಚಿನ್ನಾಭರಣ ಧರಿಸಿ ನಾಮಪತ್ರ ಸಲ್ಲಿಸಿದ ತಮಿಳುನಾಡು ಬಂಗಾರದ ಮನುಷ್ಯ

ಈತ ನಾಮಪತ್ರ ಸಲ್ಲಿಕೆ ವೇಳೆ ಚಿನ್ನದ ಪ್ರದರ್ಶನ ನಡೆಸಿದರೆ, ಮತ್ತೋರ್ವ ಅಭ್ಯರ್ಥಿ ಚೆನ್ನೈ ನಲ್ಲಿ ಪಿಪಿಇ ಸೂಟ್​ ಧರಿಸಿ ನಾಮಪತ್ರ ಸಲ್ಲಿಸಿದರು.

ಹರಿ ನದರ್​​

ಹರಿ ನದರ್​​

  • Share this:
    ಚುನಾವಣಾ ಕಣಗಳು ಜಿದ್ದಾಜಿದ್ದಿ ಕಣಗಳಾಗಿ ಮಾರ್ಪಡುವ ಜೊತೆಗೆ ಹಲವು ಕುತೂಹಲಕ್ಕೆ ಕಾರಣವಾಗುತ್ತದೆ. ಇದೇ ರೀತಿ ತಮಿಳುನಾಡಿನ ವ್ಯಕ್ತಿಯೊಬ್ಬ ನಾಮಪತ್ರ ಸಲ್ಲಿಸಿಕೆ ವೇಳೇ ದೇಶದ ಗಮನಸೆಳೆದಿದ್ದಾನೆ. ಪಕ್ಷೇತರ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿದ್ದ ಸಾಮಾನ್ಯ ವ್ಯಕ್ತಿ ಬಗ್ಗೆ ಜನರು ಮೂಗಿನ ಮೇಲೆ ಬೆರಳಿಟ್ಟುಕೊಂಡು ನೋಡುವಂತೆ ಆಗಿದೆ. ಕಾರಣ ನಾಮಪತ್ರ ಸಲ್ಲಿಕೆ ವೇಳೆ ಈತ ಧರಿಸಿದ್ದ ಚಿನ್ನದ ಆಭರಣಗಳು. ಬರೋಬ್ಬರಿ 5 ಕೆಜಿ ಚಿನ್ನದ ಆಭರಣಗಳನ್ನು ಧರಿಸಿ ಈತ ನಾಮ ಪತ್ರ ಸಲ್ಲಿಕೆ ಮಾಡಿ ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದ್ದಾನೆ. ಬಂಗಾರದ ಬೆಲೆ ಗಗನಮುಖಿಯಾಗುತ್ತಿರುವ ಸಂದರ್ಭದಲ್ಲಿ ಈತ ಈ ಪಾಟಿ ಚಿನ್ನವನ್ನು ನಿರ್ಭಯವಾಗಿ ಧರಿಸಿ ಸುದ್ದಿಯಾಗಿದ್ದಾನೆ. ಹರಿ ನದರ್​ ಎಂಬ ಚಿನ್ನದ ಮನುಷ್ಯ ತಿರುನೆಲ್ವಿಲಿ ಜಿಲ್ಲೆಯ ಅಲಂಗುಲಂ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

    ತಮಿಳುನಾಡು ವಿಧಾನಸಭಾ  ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ. ಹರಿ ನದರ್​ ಕೂಡ ನಾಮ ಪತ್ರವನ್ನು ಚುನಾವಣಾ ಅಧಿಕಾರಿ ಸಲ್ಲಿಸಿದ್ದು, ಈ ವೇಳೆ ಐದು ಕೆಜಿ ಬಂಗಾರವನ್ನು ಧರಿಸುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ಪೆನಂಗಟ್ಟು ಪಡೈ ಕಚ್ಚಿ ಸಂಯೋಜಕರಾಗಿರುವ ಇವರ ಬಳಿ 11.2 ಕೆಜಿ ಬಂಗಾರ ಇರುವುದಾಗಿ ಅಫಿಡೆವಿಟ್​ ಸಲ್ಲಿಸಿದ್ದಾರೆ.

    ಪ್ರಮುಖ ರಾಜಕೀಯ ಪಕ್ಷಗಳ ಹೊರತಾಗಿ ಅನೇಕ ಸ್ವತಂತ್ರ ಅಭ್ಯರ್ಥಿಗಳು ತಮಿಳುನಾಡು ವಿಧಾನಸಭಾ ಚುನಾವಣಾ ಕಣದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ವೇಳೆ ಅನೇಕ ಅಭ್ಯರ್ಥಿಗಳು ವಿಶೇಷ ರೀತಿಯಲ್ಲಿ ನಾಮಪತ್ರ ಸಲ್ಲಿಸುವ ಮೂಲಕ ಚುನಾವಣಾ ರಂಗು ಹೆಚ್ಚಿಸುತ್ತಿದ್ದಾರೆ. ಹರಿನದರ್​ ಚಿನ್ನದ ಪ್ರದರ್ಶನ ನಡೆಸಿದರೆ ಮತ್ತೋರ್ವ ಅಭ್ಯರ್ಥಿ ಚೆನ್ನೈ ನಲ್ಲಿ ಪಿಪಿಇ ಸೂಟ್​ ಧರಿಸಿ ನಾಮಪತ್ರ ಸಲ್ಲಿಸಿದರು.
    Published by:Seema R
    First published: