HOME » NEWS » National-international » TAMIL PRIDE RAVANA IS TRENDING IN SOCIAL MEDIA AS CONSTRUCTION OF RAM TEMPLE SET TO BEGIN SNVS

TamilPrideRavanaa - ಸೋಷಿಯಲ್ ಮೀಡಿಯಾದಲ್ಲಿ ‘ತಮಿಳರ ಹೆಮ್ಮೆ ರಾವಣ’ ಟ್ರೆಂಡಿಂಗ್

ರಾವಣ ತಮಿಳರ ಹೆಮ್ಮೆ, ಸ್ತ್ರೀಯರಿಗೆ ಮರ್ಯಾದೆ ಕೊಡುವ ಧೀಮಂತ ಇತ್ಯಾದಿ ವಾದಗಳೊಂದಿಗೆ #TamilPrideRavanaa ಮೊದಲಾದವರು ಟ್ವಿಟ್ಟರ್​ನಲ್ಲಿ ಟ್ರೆಂಡಿಂಗ್ ಆಗಿವೆ. ಲಕ್ಷಾಂತರ ಟ್ವೀಟ್​ಗಳಾಗಿವೆ.

news18
Updated:August 5, 2020, 6:03 PM IST
TamilPrideRavanaa - ಸೋಷಿಯಲ್ ಮೀಡಿಯಾದಲ್ಲಿ ‘ತಮಿಳರ ಹೆಮ್ಮೆ ರಾವಣ’ ಟ್ರೆಂಡಿಂಗ್
ರಾವಣನ ಪ್ರಾತಿನಿಧಿಕ ಚಿತ್ರ
  • News18
  • Last Updated: August 5, 2020, 6:03 PM IST
  • Share this:
ಬೆಂಗಳೂರು(ಆ. 05): ಅಯೋಧ್ಯೆಯಲ್ಲಿ ರಾಮನ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನಡೆಯುತ್ತಿರುವ ಹೊತ್ತಲ್ಲೇ ಸೋಷಿಯಲ್ ಮೀಡಿಯಾದಲ್ಲಿ ರಾಮ ರಾವಣ ಸಮರ ಪ್ರಾರಂಭವಾಗಿದೆ. ಟ್ವಿಟ್ಟರ್​ನಲ್ಲಿ #TamilPrideRavanaa #LandOfRavanan #TamilArasanRavanan ಮೊದಲಾದವರು ಟ್ರೆಂಡಿಂಗ್ ಆಗಿವೆ. ದಶಕಂಠ ರಾವಣನ ವ್ಯಕ್ತಿತ್ವವನ್ನು ಶ್ಲಾಘಿಸಿ, ಭಾರತ ರಾವಣನ ದೇಶವೇ ಹೊರತು ರಾಮನ ನಾಡಲ್ಲ ಎಂದು ಹಲವರು ವಾದ ಮುಂದಿಡುತ್ತಿದ್ದಾರೆ.

ಆರ್ಯ ದ್ರಾವಿಡ ಸೈದ್ಧಾಂತಿಕ ಸಮರ; ತಮಿಳರು ಹಿಂದೂಗಳಲ್ಲ; ರಾವಣ ತಮಿಳರ ದೊರೆ; ರಾವಣ ದೈವಪುರುಷ; ರಾಮ ಸೀತೆಯ ಅಗ್ನಿ ಪ್ರವೇಶ ಮಾಡಿದರೆ ರಾವಣ ಸೀತೆಯ ಮೈ ಮುಟ್ಟದ ಶ್ರೇಷ್ಠ;  ರಾಮ ವಿಷ್ಣು ಅವತಾರವಾದರೆ ರಾವಣ ಮಹಾ ಶಿವಭಕ್ತ, ಇವೇ ಮುಂತಾದ ವಿಚಾರಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯ ಸರಕುಗಳಾಗಿವೆ.

ತಮಿಳುನಾಡಿನಲ್ಲಿ ಬೆಳೆದುಬಂದ ದ್ರಾವಿಡ ಹೋರಾಟಕ್ಕೆ ಆರ್ಯ ದ್ರಾವಿಡ ಸಿದ್ಧಾಂತರವೇ ತಳಹದಿ. ರಾಮ ಆರ್ಯ ರಾಜನಾದರೆ ರಾವಣ ದ್ರಾವಿಡರ ದೊರೆ ಎಂಬ ಪರಿಕಲ್ಪನೆ ಇದೆ. ಈ ಹಿನ್ನೆಲೆಯಲ್ಲಿ ದ್ರಾವಿಡ ಹೋರಾಟಗಾರರು ರಾಮ, ಸಂಸ್ಕೃತ ಇತ್ಯಾದಿಗಳನ್ನ ಕಟುವಾಗಿ ವಿರೋಧಿಸಿಕೊಂಡು ಬಂದಿದ್ಧಾರೆ. ಈಗ ಸೋಷಿಯಲ್ ಮೀಡಿಯಾದಲ್ಲಿ ಅದೇ ರೀತಿಯ ಚರ್ಚೆಗಳು ನಡೆಯುತ್ತಿವೆ.ಇತ್ತ, ರಾಮನ ಪರ ಕೂಡ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ರಾಮ ಕ್ಷತ್ರಿಯ, ರಾವಣ ಬ್ರಾಹ್ಮಣ. ಇಲ್ಲಿ ಆರ್ಯ ದ್ರಾವಿಡ ಸಿದ್ಧಾಂತ ಸುಳ್ಳು. ಸೀತೆಯ ಅಪಹರಣಕ್ಕೆ ರಾವಣನಿಗೆ ಶಿಕ್ಷೆಯಾಗಿದೆ ಎಂಬುದು ರಾಮನ ಭಕ್ತರ ವಾದ. ಒಟ್ಟಾರೆ ಸೋಷಿಯಲ್ ಮೀಡಿಯಾದಲ್ಲಿ ರಾಮ ಮತ್ತು ರಾವಣ ಸಮರ್ಥಕರ ಮಧ್ಯೆ ನಡೆಯುತ್ತಿರುವ ವಾಗ್ಯುದ್ಧ ರಾಮಾಯಣದ ರಾಮ ರಾವಣ ಯುದ್ಧದಂತೆಯೇ ಭಾಸವಾದರೆ ಅಚ್ಚರಿ ಇಲ್ಲ.
Published by: Vijayasarthy SN
First published: August 5, 2020, 6:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories