ತೆಲುಗು-ತಮಿಳಿನಲ್ಲೂ ಕನ್ನಡದ `ಯಜಮಾನ'ನ ಗುಣಗಾನ: ಪರಭಾಷೆಯಲ್ಲೂ ಶುರುವಾಯಿತು ಡಿ-ಬಾಸ್ ಹವಾ..!

ತಮಿಳುನಾಡಿನಲ್ಲೂ ಈಗ 'ಯಜಮಾನ'ನ ಗುಣಗಾನ... ತಮಿಳು ಪತ್ರಿಕೆಗಳಲ್ಲಿ ದರ್ಶನ್​ರ ಬಗ್ಗೆ ಹೊಗಳಿ ವರದಿ ಮಾಡಲಾಗುತ್ತಿದೆ. ಏನಿದರ ಹಿಂದಿನ ಸತ್ಯ ಇಲ್ಲಿದೆ ಓದಿ...

Anitha E | news18
Updated:January 10, 2019, 6:28 PM IST
ತೆಲುಗು-ತಮಿಳಿನಲ್ಲೂ ಕನ್ನಡದ `ಯಜಮಾನ'ನ ಗುಣಗಾನ: ಪರಭಾಷೆಯಲ್ಲೂ ಶುರುವಾಯಿತು ಡಿ-ಬಾಸ್ ಹವಾ..!
ಸ್ಯಾಂಡಲ್​ವುಡ್​ನ 'ಯಜಮಾನ' ದರ್ಶನ್​
Anitha E | news18
Updated: January 10, 2019, 6:28 PM IST
ಚಾಲೆಂಜಿಂಗ್‍ಸ್ಟಾರ್ ದರ್ಶನ್ ಸ್ಯಾಂಡಲ್‍ವುಡ್‍ನ ರಜಿನಿಕಾಂತ್ ಇದ್ದ ಹಾಗೆ. ಇಲ್ಲಿ ದರ್ಶನ್ ಬಾಕ್ಸಾಫೀಸ್ ಸುಲ್ತಾನ್. ದಾಸನ ಸಿನಿಮಾ ಬರುತ್ತೆ ಅಂದರೆ ಸಾಕು ಪರಭಾಷೆ ಸ್ಟಾರ್​ಗಳೂ ಸ್ವಲ್ಪ ಯೋಚನೆ ಮಾಡುತ್ತಾರೆ. ಅದಕ್ಕೆ ಕಾರಣ ದರ್ಶನ್‍ಗಿರೋ ದೊಡ್ಡ ಅಭಿಮಾನಿ ಬಳಗ. ದರ್ಶನ್ ಅನ್ನೋ ಹೆಸರಿಗಿರೋ ಶಕ್ತಿ... ಈಗ ತಮಿಳರೂ ಕೂಡ ದರ್ಶನ್ ಬಗ್ಗೆ ಯೋಚಿಸುತ್ತಿದ್ದಾರೆ. ಆರಡಿ ಹ್ಯಾಂಡ್‍ಸಮ್ ಹಂಕ್ ಬಗ್ಗೆ ಗುಣಗಾನ ಮಾಡುತ್ತಿದ್ದಾರೆ ಅಂದರೆ ನಂಬುತ್ತೀರಾ..? ಹವದು ನಂಬಲೇಬೇಕು...

ಇದನ್ನೂ ಓದಿ: ಸಂಕ್ರಾಂತಿ ಹಬ್ಬಕ್ಕೆ 'ಶಿವನಂದಿ'ಯನ್ನು ಉಡುಗೊರೆಯಾಗಿ ಕೊಡುತ್ತಿರುವ ಡಿ-ಬಾಸ್​ 'ಯಜಮಾನ'

ಚಂದನವನದ ಸ್ಟಾರ್​ಗಳು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವ ಸುವರ್ಣ ಯುಗ ಇದು. 'ಕೆ.ಜಿ.ಎಫ್' ಚಿತ್ರ ಬಂದ ನಂತರವಂತೂ ಪರಭಾಷೆಗಳವರೂ ಕನ್ನಡದಲ್ಲೂ ಚಿನ್ನದಂಥ ಪ್ರತಿಭೆಗಳಿವೆ ಎಂದು ಒಪ್ಪಿಕೊಂಡಿದ್ದು, ಸ್ಟಾರ್ ನಟರನ್ನು ಗುರುತಿಸುತ್ತಿದ್ದಾರೆ. ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ರ ಮುಂದಿನ ಸಿನಿಮಾ 'ಯಜಮಾನ'ನ ಬಗ್ಗೆ ತಮಿಳು ಪತ್ರಿಕೆಗಳೂ ಬರೆಯುತ್ತಿವೆ.

ತೆಲುಗು ಪತ್ರಿಕೆಯಲ್ಲಿ ದರ್ಶನ್​ ಸುದ್ದಿ


ತಮಿಳು ಪತ್ರಿಕೆಯಲ್ಲಿ ದರ್ಶನ್​ ಗುಣಗಾನ


ತಮಿಳುನಾಡು ಕನ್ನಡ ಸಿನಿಮಾಗಳ ಪಾಲಿಗೆ ಅಭೇದ್ಯ ಕೋಟೆಯಾಗಿತ್ತು. ಅಲ್ಲಿ ಕನ್ನಡ ಸಿನಿಮಾಗಳ ಪರಿಚಯ ಇರೋದೇ ಕಷ್ಟ ಎನ್ನುವುದು ಇಲ್ಲಿಯವರೆಗಿನ ಲೆಕ್ಕಾಚಾರ ಆಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ನಮ್ಮನ್ನು ಕಡೆಗಣಿಸಿದರೆ ನಿಮ್ಮನ್ನೂ ಮೀರಿ ನಿಲ್ಲುತ್ತೇವೆ ಅಂತ ಯಾವಾಗ ಸ್ಯಾಂಡಲ್‍ವುಡ್ ಒಂದು ಝಲಕ್ ಕೊಡ್ತೋ ಆಗ ಬೇರೆ ಭಾಷೆಗಳವರೂ ಕೂಡ ಕನ್ನಡವನ್ನು ಸ್ವಾಗತಿಸುತ್ತಿದ್ದಾರೆ.

ಇದನ್ನೂ ಓದಿ: ಬಾಲಯ್ಯನನ್ನು ಕೊಂಡಾಡಿದ ಪ್ರಿನ್ಸ್​ ಮಹೇಶ್​ ಬಾಬು: 'ಕಥಾನಾಯಕುಡು' ಸಿನಿಮಾಗೆ ಹೊಗಳಿಕೆಯ ಸುರಿ ಮಳೆ
Loading...

ಯಾವುದೇ ಭಾಷೆಗೆ ಹೋದರೂ ದರ್ಶನ್‍ರಂತಹ ಹೀರೋಗಳು ಸಿಕ್ಕೋದು ಅಪರೂಪದಲ್ಲಿ ಅಪರೂಪ... ಹೀರೋಯಿಸಂಗೆ ಹೇಳಿ ಮಾಡಿಸಿದ ಆರಡಿಯ ಅಜಾನುಬಾಹು ಅವತಾರ... ಅಮೋಘ ನಟನೆ ನೋಡೋಕೂ ಹ್ಯಾಂಡ್‍ಸಮ್... ಈ ಮೂರರ ಸಂಗಮ ಆಗೋದು ಅತ್ಯಂತ ವಿರಳ. ಇಂತಜ ದರ್ಶನ್​ರನ್ನು ತಮಿಳು ಚಿತ್ರಪ್ರೇಮಿಗಳೂ ಒಪ್ಪಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.ಸಂಕ್ರಾಂತಿಗೆ ಬರಲಿರೋ 'ಯಜಮಾನ' ಹಾಡಿನ ಬಗ್ಗೆ ನಿರೀಕ್ಷೆಗಳು ದುಪಟ್ಟಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಡಿ-ಬಾಸ್ ಅಭಿಮಾನಿಗಳು ಹಬ್ಬ ಮಾಡೋಕೆ ತಯಾರಿ ನಡೆಸಿದ್ದಾರೆ. ಹರಿಕೃಷ್ಣ ಸಂಗೀತದಲ್ಲಿ ದರ್ಶನ್‍ಗೆ ಹೇಳಿ ಮಾಡಿಸಿದ ಮಾಸ್ ಸಾಂಗ್‍ಗಳು ಸುಗ್ಗಿ ಸಂಭ್ರಮ ತರಲಿವೆ. ಸದ್ಯ ಊಟಕ್ಕಿಂತ ಮೊದಲು ಉಪ್ಪಿನಕಾಯಿ ಹಾಗೆ ಯಜಮಾನನಿಗೆ ತಮಿಳಲ್ಲೂ ನಿರೀಕ್ಷೆ ಶುರುವಾಗಿರೋ ಸುದ್ದಿ ಬಂದಿದ್ದು ಅಭಿಮಾನಿಗಳು ಚಪ್ಪರಿಸಿ ಸವಿಯುವಂತಾಗಿದೆ.

 ಕನ್ನಡದ ಚಾಲೆಂಜಿಂಗ್‍ಸ್ಟಾರ್ ತಮಿಳು ಮಾಧ್ಯಮಗಳಲ್ಲಿ ಶೈನಾಗುತ್ತಿದ್ದರೆ, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ನಮ್ಮ 'ಯಜಮಾನ' ಅಂದರೆ ದೇಶಕ್ಕೆಲ್ಲ ಅಭಿಮಾನ ಅಂತ ಖುಷಿಯಿಂದ ಹೇಳಿಕೊಳ್ಳುತ್ತಿದ್ದಾರೆ. ಈ ಖುಷಿ ಸದಾ ಇರಲಿ... ಎಲ್ಲ ತಾರೆಯರಿಗೂ ಸಿಗಲಿ...

First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ