Heart Attack: ಅಯ್ಯೋ ದುರ್ವಿಧಿಯೇ, ಕಬಡ್ಡಿ ಆಡುವಾಗ ಕೇವಲ 22 ವರ್ಷದ ಯುವಕನಿಗೆ ಹೃದಯಾಘಾತ!

ಕ್ಯಾಚ್ ಹಿಡಿಯಲು ಬಂದ ಎದುರಾಳಿ ಅಟಗಾರನ ಮೇಲೆ ಹಾರಿ ತಪ್ಪಿಸಿಕೊಂಡಿದ್ದ. ಆದ್ರೆ ವಿಧಿಯಾಟದ ಮುಂದೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕುಸಿದು ಬಿದ್ದವನು ಮತ್ತೆ ಮೇಲೇಳಲೇ ಇಲ್ಲ.

ಕಬಡ್ಡಿ ಪಂದ್ಯ

ಕಬಡ್ಡಿ ಪಂದ್ಯ

  • Share this:
ಚೆನ್ನೈ: ಸಾವು (Death) ಹೇಗೆಲ್ಲಾ ಬರುತ್ತೆ ಅಂತ ಹೇಳೋದಕ್ಕೂ ಆಗಲ್ಲ. ನಾವೆಲ್ಲಾ ಸಾವಿಗೂ ಒಂದು ನ್ಯಾಯ ಇರಬೇಕು ಅಂದುಕೊಳ್ಳುತ್ತೇವೆ. ಆದರೆ ವಿಧಿಗೆ ಇದ್ಯಾವುದರ ಪರಿವೇ ಇರುವುದಿಲ್ಲ. ವಿಧಿಗೆ ಯಾವುದೇ ಕರುಣೆ ಇಲ್ಲ. ಕೇವಲ 22 ವರ್ಷದ ಯುವಕನನ್ನು ಹೃದಯಾಘಾತ (Heart Attack) ರೂಪದಲ್ಲಿ ಸಾವಿನ ಮನೆ ಸೇರಿಸಿದೆ. ಕಬಡ್ಡಿ (kabaddi) ಆಟದ ಮೈದಾನದಲ್ಲಿ ಚೆಂಡಿನಂತೆ ಪುಟಿಯುತ್ತಿದ್ದ ಯುವಕ ನೋಡನೋಡುತ್ತಿದಂತೆ ಕುಸಿದು ಬಿದ್ದು, ಕೆಲವೇ ಕ್ಷಣಗಳಲ್ಲಿ ಹೆಣವಾಗಿದ್ದಾನೆ. ಈ ದಾರುಣ ಘಟನೆ ನಡೆದಿರುವುದು ತಮಿಳುನಾಡಿನ ಮಾನ್ನಾಡಿಕುಪ್ಪಂನಲ್ಲಿ.  ಪುರಾಂಗಣಿಯ ವಿಮಲ್ ರಾಜ್ (22) ಮೃತಪಟ್ಟ ಸ್ಥಳೀಯ ಕಬಡ್ಡಿ ಅಟಗಾರ. ಎಂದಿನಂತೆ ಆಟನ ನಡೆಯುತ್ತಿತ್ತು, ವಿಮಲ್​ ರಾಜ್​​ ರೈಡ್ ವೇಳೆ ಇಬ್ಬರು ಆಟಗಾರರನ್ನು ಔಟ್ ಮಾಡಿ ಗೆರೆ ಮುಟ್ಟಿದ್ದ. ಆದರೆ ಮರು ಕ್ಷಣವೇ ಮೇಲೇಳಲಾಗದೆ ಕುಸಿದು ಬಿದ್ದ. ಕ್ಯಾಚ್ ಹಿಡಿಯಲು ಬಂದ ಎದುರಾಳಿ ಅಟಗಾರನ ಮೇಲೆ ಹಾರಿ ತಪ್ಪಿಸಿಕೊಂಡಿದ್ದ. ಆದ್ರೆ ವಿಧಿಯಾಟದ ಮುಂದೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕುಸಿದು ಬಿದ್ದವನು ಮತ್ತೆ ಮೇಲೇಳಲೇ ಇಲ್ಲ. ಕಬಡ್ಡಿ ಪಂದ್ಯ ವೀಕ್ಷಿಸಿತ್ತಿದ್ದ ಜನ ಆಟಗಾರನ ದಿಢೀರ್​ ಸಾವನ್ನು ಕಂಡು ಶಾಕ್​ಗೆ ಒಳಗಾದರು.

ಕಾಲೇಜು ವಿದ್ಯಾರ್ಥಿ ರಜೆಯಲ್ಲಿ ಊರಿಗೆ ಬಂದಿದ್ದ

ನಿನ್ನೆ ರಾತ್ರಿ ತಮಿಳುನಾಡಿನ ಕಡಲೂರು ಜಿಲ್ಲೆಯ ಪನ್ರುತಿ ಬಳಿಯ ಮನ್ನಾಡಿಕುಪ್ಪಂ ಗ್ರಾಮದಲ್ಲಿ 22 ವರ್ಷದ ಖಾಸಗಿ ಕಾಲೇಜು ವಿದ್ಯಾರ್ಥಿಯೊಬ್ಬ ಕಬ್ಬಡಿ ಆಡುತ್ತಿದ್ದ ವೇಳೆ ದಾರುಣವಾಗಿ ಸಾವನ್ನಪ್ಪಿದ್ದಾನೆ. ಸೇಲಂ ಜಿಲ್ಲೆಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಎಸ್ಸಿ ಪ್ರಾಣಿಶಾಸ್ತ್ರ ವ್ಯಾಸಂಗ ಮಾಡುತ್ತಿದ್ದ ಮೃತ ವಿಮಲರಾಜ್ ವಾರಾಂತ್ಯಕ್ಕೆ ಮನೆಗೆ ಬಂದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅವರು ನಿನ್ನೆ ಸಂಜೆ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಮುರಟ್ಟು ಕಾಳಾಯಿ ತಂಡವನ್ನು ಪ್ರತಿನಿಧಿಸುತ್ತಿದ್ದರು.

ಮೃತ ವಿಮಲ್​ ರಾಜ್​


ಯುವ ಆಟಗಾರನ ಮರಣೋತ್ತರ ಪರೀಕ್ಷೆ

ಆಟದಲ್ಲಿ ದಾಳಿಗೆ ಹೋದಾಗ, ಎದುರಾಳಿ ತಂಡದ ಸದಸ್ಯರು ಅವರನ್ನು ಕೆಳಕ್ಕೆ ಎಳೆದ ತಕ್ಷಣ ಅವರು ನೆಲದ ಮೇಲೆ ಕುಸಿದರು. ತಕ್ಷಣ ಅವರನ್ನು ಪಂರುತಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು. ಅವರು ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ವಿಲ್ಲುಪುರಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Lottery Surprise: ವಿಪರೀತ ಸಾಲ, ಮನೆ ಮಾರುವ ಬರೀ 2 ಗಂಟೆ ಮುನ್ನ ಹೊಡೆಯಿತು ಕೋಟಿ ಲಾಟರಿ!

ತಮಿಳುನಾಡಿನಲ್ಲಿ ವಿದ್ಯಾರ್ಥಿನಿಯರ ಸರಣಿ ಆತ್ಮಹತ್ಯೆಗಳು

ತಮಿಳುನಾಡಿನಲ್ಲಿ ಮತ್ತೊಬ್ಬ ವಿದ್ಯಾರ್ಥಿಯ ಸಾವು ಪ್ರಕರಣ ವರದಿಯಾಗಿದ್ದು, ಸಂಚಲನ ಮೂಡಿಸಿದೆ. ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ 12 ನೇ ತರಗತಿಯ ಬಾಲಕಿ ಸೋಮವಾರ ನಸುಕಿನಲ್ಲಿ ತನ್ನ ಹಾಸ್ಟೆಲ್ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಳೆದ 2 ವಾರದಲ್ಲಿ ರಾಜ್ಯದಲ್ಲಿ ಇದು 3ನೇ ವಿದ್ಯಾರ್ಥಿನಿಯ ಸಾವಿನ ಪ್ರಕರಣವಾಗಿದೆ. ಆಕೆಯ ಸ್ನೇಹಿತರ ಪ್ರಕಾರ, ಅವಳು ಒಂದು ತಿಂಗಳಿನಿಂದ ಮನೆಗೆ ಭೇಟಿ ನೀಡಿರಲಿಲ್ಲ. ಬೇಸರದಲ್ಲಿರುವಂತೆ ಕಾಣುತ್ತಿದ್ದಳಂತೆ. ಆಕೆ ಸರ್ಕಾರಿ ಅನುದಾನಿತ ಶಾಲೆಯಲ್ಲಿ ಓದಿತ್ತಿದ್ದು, ಆಕೆಯ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಿರುವಳ್ಳು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕೊಂಡೊಯ್ಯಲಾಯಿತು. ಕಳೆದ 2 ವಾರದಲ್ಲಿ ರಾಜ್ಯದಲ್ಲಿ ಇದು 3ನೇ ವಿದ್ಯಾರ್ಥಿನಿಯ ಸಾವಿನ ಪ್ರಕರಣವಾಗಿದೆ. ಜುಲೈ 13 ರಂದು ಕಲ್ಲಕುರಿಚಿಯ ಖಾಸಗಿ ಶಾಲೆಯ ಹಾಸ್ಟೆಲ್ ಆವರಣದಲ್ಲಿ 16 ವರ್ಷದ ಬಾಲಕಿ ಸಾವನ್ನಪ್ಪಿದ್ದಳು. ಬಾಲಕಿಯ ಪೋಷಕರು ಕೊಲೆ ಎಂದು ಶಂಕಿಸಿದ್ದರು. ಆದರೆ ಪೊಲೀಸರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
Published by:Kavya V
First published: