Woman Kidnapped: ಮನೆಗೆ ನುಗ್ಗಿ ಮಹಿಳೆಯನ್ನು ಎಳೆದೊಯ್ದ 15 ಪುರುಷರ ಗ್ಯಾಂಗ್: ಕ್ಯಾಮರಾದಲ್ಲಿ ಸೆರೆ

ಆರೋಪಿಯು ಈ ಹಿಂದೆ ಸಂತ್ರಸ್ತೆಯ ಜೊತೆ ಸ್ನೇಹ ಬೆಳೆಸಿದ್ದು, ನಂತರ ಆಕೆಯನ್ನು ಹಿಂಬಾಲಿಸಲು ಆರಂಭಿಸಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮಹಿಳೆ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಳು. ಪೊಲೀಸರು ಆರೋಪಿಗೆ ಎಚ್ಚರಿಕೆ ನೀಡಿದ್ದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
 ಚೆನ್ನೈ: 15 ಜನರ ಗುಂಪು (Mob of 15 Men) ಮನೆಗೆ ನುಗ್ಗಿ ಮಹಿಳೆಯನ್ನು ಅಪಹರಿಸಿರುವ (Woman Kidnapped) ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ (Tamil Nadu) ನಡೆದಿದೆ. ಮಹಿಳೆಯನ್ನು ಕಿಡ್ನಾಪ್​ ಮಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆರೋಪಿಗಳನ್ನು ಆಕೆಯನ್ನು ಹಿಂಬಾಲಿಸುತ್ತಿದ್ದರು. ಪ್ರಮುಖ ಆರೋಪಿ ತನ್ನ 14 ಸಹಚರರನ್ನು ತನ್ನೊಂದಿಗೆ ಬರುವಂತೆ ಕೇಳಿಕೊಂಡಿದ್ದಾನೆ. ನಂತರ ಎಲ್ಲರೂ ಮನೆಯ ಮನೆಯ ಬಳಿ ಜಮಾಯಿಸಿ ಆಕೆಯನ್ನು ಕಿಡ್ನ್ಯಾಪ್​ ಮಾಡಿದ್ದಾರೆ. ಈ ಘಟನೆಯು ತಮಿಳುನಾಡಿನ ಮೈಲಾಡುತುರೈನಲ್ಲಿ ವರದಿಯಾಗಿದೆ. ಮಂಗಳವಾರ ರಾತ್ರಿ ಘಟನೆ ನಡೆದಿದೆ. ವರದಿಗಳ ಪ್ರಕಾರ, ಪ್ರಕರಣದ ಆರೋಪಿಯನ್ನು ವಿಘ್ನೇಶ್ವರನ್ ಎಂದು ಗುರುತಿಸಲಾಗಿದೆ. ಈ ಸಂಪೂರ್ಣ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ವಿಡಿಯೋದಲ್ಲಿ ಏನಿದೆ?

ವೀಡಿಯೊದಲ್ಲಿ ಹಲವಾರು ಪುರುಷರು ಒಬ್ಬರ ನಂತರ ಒಬ್ಬರು ಮಹಿಳೆಯ ಮನೆಗೆ ನುಗ್ಗುವುದನ್ನು ನೋಡಬಹುದದಾಗಿದೆ. ಅವರು ತಮ್ಮ ಎಲ್ಲಾ ಶಕ್ತಿಯಿಂದ ಅದನ್ನು ತಳ್ಳುವ ಮತ್ತು ಎಳೆಯುವ ಮೂಲಕ ಮುಖ್ಯ ಗೇಟ್‌ಗೆ ಹೋಗುತ್ತಾರೆ. ಬಾಗಿಲು ತೆರೆದ ನಂತರ, ಅವರು ನಿವಾಸಕ್ಕೆ ನುಗ್ಗುತ್ತಾರೆ. ಮೊದಲ ಕೆಲವು ಪುರುಷರು ಒಳಗೆ ಪ್ರವೇಶಿಸಿದ ನಂತರ, ಆರೋಪಿಯು ಇಡೀ ಗುಂಪನ್ನು ಕರೆತಂದಿರುವುದನ್ನು ನೋಡಬಹುದು. ಪುರುಷರ ಗುಂಪು ಮಹಿಳೆಯನ್ನು ಹೊರಗೆ ಎಳೆದು ತಂದು ತಮ್ಮೊಂದಿಗೆ ತಂದಿದ್ದ ಟ್ರಕ್‌ ನಲ್ಲಿ ಅಪಹರಿಸಿದ್ದಾರೆ.





ಮಹಿಳೆಯನ್ನು ಹಿಂಬಾಲಿಸುತ್ತಿದ್ದ ಆರೋಪಿ

ತಮಿಳುನಾಡಿನ ಮೈಲಾಡುತುರೈನಲ್ಲಿ ವರದಿಯಾದ ಭೀಕರ ಘಟನೆಯಲ್ಲಿ, ಅಪರಿಚಿತ ಮಹಿಳೆಯನ್ನು 15 ಜನರ ಗುಂಪೊಂದು ಅಪಹರಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಂತರ ಮಹಿಳೆಯನ್ನು ರಕ್ಷಿಸಲಾಯಿತು ಮತ್ತು ಘಟನೆಯ ಪ್ರಾಥಮಿಕ ಆರೋಪಿಯನ್ನು ಬಂಧಿಸಲಾಯಿತು. ಆರೋಪಿಯು ಈ ಹಿಂದೆಯೂ ಮಹಿಳೆಗೆ ಕಿರುಕುಳ ನೀಡಿದ್ದು, ಆಕೆಯನ್ನು ಹಿಂಬಾಲಿಸುತ್ತಿದ್ದ ಎನ್ನಲಾಗಿದೆ. ಆರೋಪಿಯನ್ನು ವಿಘ್ನೇಶ್ವರನ್ ಎಂದು ಗುರುತಿಸಲಾಗಿದೆ.

ಸಿಸಿಟಿವಿಯಲ್ಲಿ ಸೆರೆಯಾದ ವೀಡಿಯೊದಲ್ಲಿ, ಮಹಿಳೆಯನ್ನು ಗುಂಪು ಹೊಂಚುಹಾಕಿ ಅಪಹರಿಸುತ್ತಿರುವುದನ್ನು ನೋಡಬಹುದಾಗಿದೆ. ನಿವಾಸದಲ್ಲಿದ್ದ ಇತರ ಮಹಿಳೆಯರು ತಡೆಯಲು ಪ್ರಯತ್ನಿಸಿದರು. ಸಂತ್ರಸ್ಥೆಯ ನಿವಾಸಕ್ಕೆ ನುಗ್ಗಲು ಪ್ರಯತ್ನಿಸುತ್ತಿರುವ ಪುರುಷರ ಗುಂಪಿನೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಹಲವಾರು ಪುರುಷರು ಎಲ್ಲಾ ಬಲವನ್ನು ಪ್ರಯೋಗಿಸುವ ಮೂಲಕ ಮತ್ತು ತಮ್ಮ ಎಲ್ಲಾ ಶಕ್ತಿಯಿಂದ ಬಾಗಿಲನ್ನು ತಳ್ಳುವ ಮೂಲಕ ಬಾಗಿಲು ಒಡೆಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಕೆಲವೇ ಸೆಕೆಂಡುಗಳಲ್ಲಿ, ಬಾಗಿಲು ಬೀಳುತ್ತದೆ ಮತ್ತು ಅಪಹರಣಕಾರರು ನಿವಾಸಕ್ಕೆ ನುಗ್ಗುತ್ತಾರೆ.

ಇದನ್ನೂ ಓದಿ: Gang Rape: ಗಣಿಯಲ್ಲಿ ಸಾಂಗ್ ಶೂಟಿಂಗ್ ವೇಳೆ 8 ಮಾಡೆಲ್​​ಗಳ ಮೇಲೆ 80 ಪುರುಷರಿಂದ ಗ್ಯಾಂಗ್​ರೇಪ್​

ಕೂಡಲೇ ಮೈಲಾಡುತುರೈ ಪೊಲೀಸರಿಗೆ ವಿಷಯ ಮುಟ್ಟಿಸಲಾಯಿತು. ತಕ್ಷಣ ಶೋಧ ತಂಡವನ್ನು ರಚಿಸಲಾಯಿತು ಮತ್ತು ಸಂತ್ರಸ್ತರನ್ನು ಸಾಗಿಸುತ್ತಿದ್ದ ವಾಹನವನ್ನು ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಯಿತು. ಪೊಲೀಸರು ಪ್ರಾಥಮಿಕ ಆರೋಪಿ ಮತ್ತು ಆತನ ಇಬ್ಬರು ಸಹಚರರನ್ನು ಬಂಧಿಸಿ ಸಂತ್ರಸ್ತೆಯನ್ನು ಪೊಲೀಸರು ರಕ್ಷಿಸಿದ್ದಾರೆ.

ಈ ಹಿಂದೆಯೂ ಮಹಿಳೆಗೆ ಕಿರುಕುಳ

ಆರೋಪಿಯು ಈ ಹಿಂದೆ ಸಂತ್ರಸ್ತೆಯ ಜೊತೆ ಸ್ನೇಹ ಬೆಳೆಸಿದ್ದು, ನಂತರ ಆಕೆಯನ್ನು ಹಿಂಬಾಲಿಸಲು ಆರಂಭಿಸಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮಹಿಳೆ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಳು. ಪೊಲೀಸರು ಆರೋಪಿಗೆ ಎಚ್ಚರಿಕೆ ನೀಡಿದ್ದರು ಮತ್ತು ಬಿಡುಗಡೆ ಮಾಡುವ ಮೊದಲು ಅವರಿಂದ ಲಿಖಿತ ಹೇಳಿಕೆಯನ್ನು ಪಡೆದಿದ್ದರು.

ಈ ಹಿಂದೆಯೂ ಆರೋಪಿಗಳು ಮಹಿಳೆಯನ್ನು ಅಪಹರಿಸಲು ಪ್ರಯತ್ನಿಸಿದ್ದರು ಎಂಬುದು ಗಮನಿಸಬೇಕಾದ ಸಂಗತಿ. ಆದರೆ ಮಹಿಳೆ ಹೇಗೋ ತಪ್ಪಿಸಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಅಂದಿನಿಂದ ತಲೆಮರೆಸಿಕೊಂಡಿದ್ದ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ ಮಂಗಳವಾರದಂದು ಆರೋಪಿಗಳು ಮತ್ತು ಇತರ 14 ಪುರುಷರು ಮಹಿಳೆಯರ ನಿವಾಸಕ್ಕೆ ನುಗ್ಗಿದ್ದರು. ಸಂತ್ರಸ್ತೆಯ ಕುಟುಂಬಕ್ಕೆ ಚಾಕುವಿನಿಂದ ಬೆದರಿಸಿ ಆಕೆಯನ್ನು ಅಪಹರಿಸುವಲ್ಲಿ ಯಶಸ್ವಿಯಾಗಿದ್ದರು.
Published by:Kavya V
First published: