• Home
  • »
  • News
  • »
  • national-international
  • »
  • Tamil Nadu Vs Tamizhagam: ತಮಿಳುನಾಡಿನಲ್ಲಿ ಪೊಂಗಲ್ ಆಹ್ವಾನ ಪತ್ರಿಕೆ ವಿವಾದ, ರಾಜ್ಯಪಾಲರ ನಡೆಗೆ ಸರ್ಕಾರದ ವಿರೋಧ!

Tamil Nadu Vs Tamizhagam: ತಮಿಳುನಾಡಿನಲ್ಲಿ ಪೊಂಗಲ್ ಆಹ್ವಾನ ಪತ್ರಿಕೆ ವಿವಾದ, ರಾಜ್ಯಪಾಲರ ನಡೆಗೆ ಸರ್ಕಾರದ ವಿರೋಧ!

ತಮಿಳುನಾಡು ರಾಜ್ಯಪಾಲ ಆರ್​ಎನ್ ರವಿ

ತಮಿಳುನಾಡು ರಾಜ್ಯಪಾಲ ಆರ್​ಎನ್ ರವಿ

ತಮಿಳುನಾಡು ರಾಜ್ಯದ ಹೆಸರಿಗೆ ಸಂಬಂಧಿಸಿದಂತೆ ರಾಜ್ಯಪಾಲ ಎನ್​.ಆರ್. ರವಿ ಹಾಗೂ ಡಿಎಂಕೆ ಸರ್ಕಾರ ಮತ್ತು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (Tamil Nadu CM M.K. Stalin) ಅವರೊಂದಿಗಿನ ನಡೆಯುತ್ತಿರುವ ಸಂಘರ್ಷದ ತಾರಕಕ್ಕೇರಿದೆ. ಈ ಮಧ್ಯೆ ರಾಜಭವನದಲ್ಲಿ ನಡೆಯಲಿರುವ ಪೊಂಗಲ್ ಹಬ್ಬದ ಆಹ್ವಾನ ಪತ್ರಿಕೆಯಲ್ಲಿ ರಾಜ್ಯದ ಹೆಸರನ್ನು 'ತಮಿಳಗಂ' ಅಂತ ಬಳಸಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ!

ಮುಂದೆ ಓದಿ ...
  • News18 Kannada
  • Last Updated :
  • Tamil Nadu, India
  • Share this:

ಚೆನ್ನೈ: ತಮಿಳುನಾಡು ರಾಜ್ಯಪಾಲ ಆರ್‌ಎನ್ ರವಿ (R.N. Ravi) ಇತ್ತೀಚೆಗೆ ತಮಿಳುನಾಡು ಹೆಸರು ಬದಲಾವಣೆ ಕುರಿತು ನೀಡಿರುವ ಹೇಳಿಕೆ ರಾಜ್ಯದಲ್ಲಿ ದೊಡ್ಡ ವಿವಾದ ಸೃಷ್ಟಿಸಿತ್ತು. ಇದೀಗ ಪೊಂಗಲ್ (Pongal) ಆಚರಣೆಯ ಕುರಿತು ರಾಜ್ಯಪಾಲರ (Governor) ರಾಜಭವನದಿಂದ ಹೊರಬಂದಿರುವ ಆಹ್ವಾನ ಪತ್ರಿಕೆಯಲ್ಲಿ ತಮಿಳುನಾಡು (Tamil Nadu) ಲೋಗೋವನ್ನು ತಮಿಳಗಂ vs ತಮಿಳುನಾಡು ಎಂಬಂತೆ ಬಿಂಬಿತವಾಗುತ್ತಿದೆ.


ರಾಜ್ಯದ ಹೆಸರಿಗೆ ಸಂಬಂಧಿಸಿದಂತೆ ರಾಜ್ಯಪಾಲ ಎನ್​ಆರ್ ರವಿ ಹಾಗೂ ಡಿಎಂಕೆ ಸರ್ಕಾರ ಮತ್ತು ಮುಖ್ಯಮಂತ್ರಿ ಎಂಕೆ ಸ್ಟಾಲಿನ್(Tamil Nadu CM M.K. Stalin) ಅವರೊಂದಿಗಿನ ನಡೆಯುತ್ತಿರುವ ಸಂಘರ್ಷದ ಮಧ್ಯದಲ್ಲಿ ರಾಜಭವನದಲ್ಲಿ ನಡೆಯಲಿರುವ ಪೊಂಗಲ್ ಹಬ್ಬದ ಆಹ್ವಾನದಲ್ಲಿ ರಾಜ್ಯದ ಹೆಸರನ್ನು ತಮಿಳಗಂ ಅನ್ನು ಬಳಸಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.


ಅಹ್ವಾನ ಪತ್ರಿಕೆಯಲ್ಲಿಲ್ಲ ರಾಜ್ಯ ಲಾಂಛನ 


ತಮಿಳುನಾಡಿದ ಪ್ರಸಿದ್ಧ ಹಬ್ಬಗಳಲ್ಲಿ ಒಂದಾದ ಪೊಂಗಲ್​ ಹಬ್ಬವನ್ನು ರಾಜಭವನದಲ್ಲಿ ಆಚರಿಸುವ ಕುರಿತು ತಮಿಳು ಭಾಷೆಯಲ್ಲಿರುವ ಆಹ್ವಾನ ಪತ್ರಿಕೆಯಲ್ಲಿ ತಮಿಳಗಂ ಪದ ಬಳಸಿರುವುದಲ್ಲದೆ, ರಾಜ್ಯ ಸರ್ಕಾರದ ಲಾಂಛನವನ್ನು ಕೈಬಿಡಲಾಗಿದೆ. ಆಹ್ವಾನ ಪತ್ರಿಕೆಯಲ್ಲಿ ಭಾರತ ಸರ್ಕಾರದ ಲಾಂಛನವನ್ನು ಮಾತ್ರ ನಮೂದಿಸಲಾಗಿದೆ.


ಇದನ್ನೂ ಓದಿ:Tamil Nadu Governor: ತಾರಕಕ್ಕೇರಿದ ತಮಿಳುನಾಡು ಗವರ್ನರ್-ಸರ್ಕಾರದ ಸಂಘರ್ಷ; ಸದನದಿಂದ ಹೊರನಡೆದ ರಾಜ್ಯಪಾಲ!


ನಿನ್ನೆಯಷ್ಟೇ ತಮಿಳುನಾಡಿಗೆ 'ತಮಿಳಗಂ' ಹೆಸರು ಸೂಕ್ತ ಎಂದು ಸೂಚಿಸಿದ್ದ ರಾಜ್ಯಪಾಲರ ಹೇಳಿಕೆ ಬಗ್ಗೆ ಭಾರಿ ವಿರೋಧ ವ್ಯಕ್ತವಾಗಿತ್ತು. "ತಮಿಳುನಾಡು ಎಂದರೆ ತಮಿಳು ನೆಲ ಅಥವಾ ತಮಿಳು ದೇಶ" ಆದರೆ ತಮಿಳಗಂ ಎಂದರೆ ತಮಿಳು ಜನರ ನೆಲ, ಇದು ಈ ಪ್ರದೇಶದ ಪ್ರಾಚೀನ ಹೆಸರು ಎಂದು ಅವರು ಪ್ರತಿಪಾದಿಸಿದ್ದರು. ಅದರ ಬೆನ್ನಲ್ಲೇ ರವಿ ಅವರ ಪೊಂಗಲ್ ಆಹ್ವಾನವು ಆಡಳಿತಾರೂಢ ಡಿಎಂಕೆ ಪಕ್ಷವನ್ನು ಹಾಗೂ ಕಾರ್ಯಕರ್ತರನ್ನು ಕೆರಳಿಸಿದೆ.


 ಉತ್ತರ ನೀಡಲು ರಾಜ್ಯಪಾಲರಿಗೆ ಆಗ್ರಹ


ತಮಿಳುನಾಡು ಹೆಸರಿನ ಬದಲಾಯಿಸರವಿ ಅವರನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸಲಾಗುತ್ತಿದೆ. ಸಿಪಿಐ(ಎಂ) ಸಂಸದ ಸು. ವೆಂಕಟೇಶನ್ ರಾಜ್ಯಪಾಲರ ಭವನದಿಂದ ಬಂದ ಈ ವರ್ಷದ ಹಾಗೂ ಕಳೆದ ವರ್ಷದ ಆಹ್ವಾನ ಪತ್ರಿಕೆಗಳನ್ನು ಹೋಲಿಸುವ ಸ್ಕ್ರೀನ್‌ಶಾಟ್‌ಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವರ್ಷದ ಪೊಂಗಲ್‌ ಆಚರಣೆಯ ರಾಜ್ಯಪಾಲರ ಆಹ್ವಾನ ಪತ್ರಿಕೆಯಲ್ಲಿ "ತಮಿಳಗಂ ರಾಜ್ಯಪಾಲ" ಎಂದು ಉಲ್ಲೇಖಿಸಿದೆ, ಆದರೆ ಹಿಂದಿನ ಆಹ್ವಾನದಲ್ಲಿ "ತಮಿಳುನಾಡು ರಾಜ್ಯಪಾಲ" ಎಂದು ಬಳಸಲಾಗಿತ್ತು. ಜೊತೆಗೆ ಈ ವರ್ಷದ ಆಹ್ವಾನ ಪತ್ರಿಕೆಯಲ್ಲಿ ರಾಜ್ಯದ ಲಾಂಛನವನ್ನು ಕೈಬಿಟ್ಟು ಕೇಂದ್ರ ಸರ್ಕಾರದ ಲೋಗೋವನ್ನು ಬಳಸಲಾಗಿದೆ ಎಂದು ವೆಂಕಟೇಶನ್​ ಟ್ವೀಟ್​ ಮಾಡಿ ಅಸಮಧಾನ ಹೊರ ಹಾಕಿದ್ದು, ಇದನ್ನು ರಾಜ್ಯಪಾಲರು ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.


ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮತ್ತು ರಾಜ್ಯಪಾಲರಾದ ಆರ್​ಎನ್​ ರವಿ


ಆರ್​ಎಸ್​ಎಸ್​ ಸಿದ್ಧಾಂತ ತುರುಕುವ ಯತ್ನ


ತಮಿಳುನಾಡಿಗೆ ತಮಿಳಿಗಂ ಎಂದು ಹೆಸರಿಡುವ ಮೂಲಕ ರಾಜ್ಯದಲ್ಲಿ ರಾಜ್ಯಪಾಲರು ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಸೂಚಿಯನ್ನು ತುರುಕುವ ಯತ್ನಕ್ಕೆ ಮುಂದಾಗಿದ್ದಾರೆ ಎಂದು ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳು ಆರೋಪಿಸಿವೆ.


ಸದನದಿಂದ ಹೊರ ನಡೆದಿದ್ದ ರವಿ


ವಾಡಿಕೆಯಂತೆ ಚಳಿಗಾಲದ ವಿಧಾನಸಭಾ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡಬೇಕಿತ್ತು. ಆರ್‌ಎನ್ ರವಿ ಸದನಕ್ಕೆ ಬರುತ್ತಿದ್ದಂತೆ ರಾಜ್ಯ ಸರ್ಕಾರ ನೀಡಿರುವ ಭಾಷಣದ ಪ್ರತಿ ಮಾತ್ರ ಓದಬೇಕೆಂದು ಆಡಳಿತಾರೂಢ ಡಿಎಂಕೆ ಸದಸ್ಯರು ಪಟ್ಟು ಹಿಡಿದರು. ರಾಜ್ಯಪಾಲರು ತಾವು ಸೇರಿಸಿರುವ ಭಾಷಣದ ಸಾಲುಗಳನ್ನು ತೆಗೆಯುವಂತೆ ಖುದ್ದು ಸಿಎಂ ಎಂಕೆ ಸ್ಟಾಲಿನ್ ಮನವಿ ಮಾಡಿದ್ರು. ಆದರೆ ಇದಕ್ಕೆ ಒಪ್ಪದ ರಾಜ್ಯಪಾಲ ಆರ್‌ಎನ್‌ ರವಿ, ತಾವೇ ಸಿದ್ಧಪಡಿಸಿಕೊಂಡು ಬಂದ ಭಾಷಣ ಓದಲು ಮುಂದಾಗಿದ್ದಾರೆ. ಇದನ್ನು ಮುಖ್ಯಮಂತ್ರಿ ಸ್ಟಾಲಿನ್​ ಅಡ್ಡಿಪಡಿಸಿ, ರಾಜ್ಯಪಾಲರು ಭಾಷಣದಲ್ಲಿ ಸೇರಿಸಿರುವ ಸಾಲುಗಳನ್ನು ಕಡತದಿಂದ ತೆಗೆದು ಹಾಕಲು ಮನವಿ ಮಾಡಿದರು. ಇದರಿಂದ ಕುಪಿತಗೊಂಡ ರಾಜ್ಯಪಾಲರು ಸದನದಿಂದ ಹೊರ ನಡೆದಿದ್ದರು.


ಟ್ವಿಟರ್​ ಟ್ರೆಂಡ್ ಆದ #GetOut Ravi


ಈ ವಿವಾದದ ನಂತರ ಕಳೆದ ಎರಡು ಮೂರು ದಿನಗಳಿಂದ ಟ್ವಿಟರ್​ನಲ್ಲಿ #GetOut Ravi ಎಂಬುದು ಟ್ರೆಂಡಿಂಗ್ ಆಗುತ್ತಿದೆ. ಜೊತೆಗೆ ಚೆನ್ನೈ ನಗರದ ಹಲವೆಡೆ ಈ ಹ್ಯಾಸ್​ಟ್ಯಾಗ್ ಇರುವ ಪೋಸ್ಟರ್​ಗಳು ಕಾಣಿಸುತ್ತಿವೆ ಎಂದು ಎಎನ್​ಐ ವರದಿ ಮಾಡಿದೆ.


ರವಿ ಪರ ನಿಂತ ಬಿಜೆಪಿ


ತಮಿಳಿಗಂ ವಿವಾದದ ನಂತರ ರಾಜ್ಯಪಾಲ ಆರ್​ಎನ್​ ರವಿ ಬೆನ್ನಿಗೆ ಬಿಜೆಪಿ ನಿಂತಿದೆ. 1967ರಲ್ಲಿ ಡಿಎಂದ ಅಧಿಕಾರಕ್ಕೆ ಬಂದ ನಂತರ ಮದ್ರಾಸ್​ ಎಂದಿದ್ದ ಹೆಸರನ್ನು ತಮಿಳು ನಾಡು ಎಂದು ಮರುನಾಮಕರಣ ಮಾಡಿತ್ತು ಎಂದು ತಿಳಿಸಿದೆ.


ಡಿಎಂಕೆ ಮತ್ತು ರಾಜ್ಯಪಾಲರು ಹಲವು ವಿಷಯಗಳಲ್ಲಿ ತಿಂಗಳುಗಳಿಂದ ಜಗಳವಾಡುತ್ತಿದ್ದಾರೆ. ಇದೀಗ ಮತ್ತೆ ರಾಜ್ಯದ ಹೆಸರಿನಲ್ಲಿ ದೊಡ್ಡ ಮಟ್ಟದ ವಿವಾದ ಉಂಟಾಗಿದ್ದು ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

Published by:Rajesha B
First published: