ತಮಿಳುನಾಡಿನಲ್ಲಿ 9, 10, 11ನೇ ತರಗತಿಗೆ ಪರೀಕ್ಷೆಯೇ ರದ್ದು; ಎಲ್ಲರೂ ಪಾಸ್​

ತಮಿಳುನಾಡು ಸರ್ಕಾರವು 12 ನೇ ತರಗತಿ ಪರೀಕ್ಷೆಗಳನ್ನು ನಡೆಸಲಿದೆ. ಇದಕ್ಕಾಗಿ ತಮಿಳುನಾಡು ಸರ್ಕಾರಿ ಪರೀಕ್ಷೆಗಳ ನಿರ್ದೇಶನಾಲಯ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ತಮಿಳುನಾಡು(ಫೆ.25): ಕೊರೋನಾ ವೈರಸ್​​ ಭೀತಿ ಹೆಚ್ಚಾಗಿದ್ದರಿಂದ ಕಳೆದ ವರ್ಷ 1-9 ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆ ಹಾಗೆಯೇ ಪಾಸು ಮಾಡಲಾಗಿತ್ತು. ಈಗ ಕೊರೋನಾ ಎರಡನೇ ಅಲೆ ಶುರುವಾಗಿದ್ದು, ಇನ್ನೂ ಸಹ ಆತಂಕ ಕಡಿಮೆಯಾಗಿಲ್ಲ. ಕೊರೋನಾ ಭೀತಿ ನಡುವೆಯೇ ಬಹುತೇಕ ರಾಜ್ಯಗಳಲ್ಲಿ ಶಾಲೆಗಳನ್ನು ಶುರು ಮಾಡಲಾಗಿದೆ. ಆದರೆ ತಮಿಳುನಾಡು ರಾಜ್ಯ ಸರ್ಕಾರವು ಕೊರೋನಾ ಆತಂಕ ಹೆಚ್ಚಾಗಿರುವುದರಿಂದ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಒಂದು ನಿರ್ಧಾರಕ್ಕೆ ಬಂದಿದೆ. ಅದೇನೆಂದರೆ, ಈ ಸಾಲಿನ 9,10 ಮತ್ತು 11 ನೇ ತರಗತಿ ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆ ನಡೆಸದೆ ಪಾಸು ಮಾಡಲು ಮುಂದಾಗಿದೆ. ತಮಿಳುನಾಡು ಸಿಎಂ ಎಡಪ್ಪಾಡಿ ಕೆ.ಪಳನಿಸ್ವಾಮಿ ಈ ನಿರ್ಧಾರ ಪ್ರಕಟಿಸಿದ್ದಾರೆ.

  ವೈದ್ಯ ತಜ್ಞರ ಸಲಹೆ ಮೇರೆಗೆ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಸಿಎಂ ತಿಳಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದು ಕಷ್ಟಸಾಧ್ಯ. ಹೀಗಾಗಿ 9,10 ಮತ್ತು 11 ನೇ ತರಗತಿ ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆ ನಡೆಸದೇ ಮುಂದಿನ ತರಗತಿಗೆ ಪಾಸು ಮಾಡಿದ್ದೇವೆ ಎಂದು ಹೇಳಿದ್ದಾರೆ.  ಇನ್ನು, ವಿದ್ಯಾರ್ಥಿಗಳು ಇಂಟರ್​​ನಲ್​ ಅಸೆಸ್ಮ್ಂಟ್​​ನಲ್ಲಿ ತೆಗೆದಿರುವ ಅಂಕಗಳ ಆಧಾರದ ಮೇಲೆ ಅವರ ಮೌಲ್ಯಮಾಪನ ಮಾಡಲಾಗುತ್ತದೆ. ತ್ರೈಮಾಸಿಕ ಮತ್ತು ಅರ್ಧವಾರ್ಷಿಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಪರ್ಫ್​ಫಾರ್ಮೆನ್ಸ್​​ ಆಧಾರದ ಮೇಲೆ ಶೇ.80ರಷ್ಟು ಅಂಕಗಳನ್ನು ನೀಡಲಾಗುತ್ತದೆ. ಇನ್ನುಳಿದ ಶೇ.20ರಷ್ಟು ಅಂಕಗಳು ವಿದ್ಯಾರ್ಥಿಗಳ ಹಾಜರಾತಿಯನ್ನು ಅವಲಂಬಿಸಿರುತ್ತದೆ.

  ಈ ವಿಷಯಕ್ಕೆ ಸಂಬಂಧಿಸಿದಂತೆ ತಮಿಳುನಾಡು ಶಿಕ್ಷಣ ಇಲಾಖೆಯು ಇನ್ನೂ ಸಹ ರಾಜ್ಯಾದ್ಯಂತ ಶಾಲೆಗಳಿಗೆ ನೋಟಿಸ್ ನೀಡಿಲ್ಲ.

  ತಮಿಳುನಾಡು ಸರ್ಕಾರವು 12 ನೇ ತರಗತಿ ಪರೀಕ್ಷೆಗಳನ್ನು ನಡೆಸಲಿದೆ. ಇದಕ್ಕಾಗಿ ತಮಿಳುನಾಡು ಸರ್ಕಾರಿ ಪರೀಕ್ಷೆಗಳ ನಿರ್ದೇಶನಾಲಯ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
  Published by:Latha CG
  First published: