• Home
 • »
 • News
 • »
 • national-international
 • »
 • Accident: ಬೈಕ್​ ಸವಾರನ ಪಾಲಿಗೆ ಯಮನಾದ ಟ್ರಕ್​​ನ ಹಗ್ಗ; ಗಾಳಿಯಲ್ಲಿ ಹಾರಿ ರಸ್ತೆಗೆ ಅಪ್ಪಳಿಸಿದ!

Accident: ಬೈಕ್​ ಸವಾರನ ಪಾಲಿಗೆ ಯಮನಾದ ಟ್ರಕ್​​ನ ಹಗ್ಗ; ಗಾಳಿಯಲ್ಲಿ ಹಾರಿ ರಸ್ತೆಗೆ ಅಪ್ಪಳಿಸಿದ!

ಬೈಕ್ ಅಪಘಾತ

ಬೈಕ್ ಅಪಘಾತ

ಎದುರುನಿಂದ ಬಂದ ಲಾರಿಗೆ ನೇತಾಡುತ್ತಿದ್ದ ಹಗ್ಗ ಯುವಕನ ಕುತ್ತಿಗೆಗೆ ಸುತ್ತಿಕೊಂಡಿದ್ದು, ಪರಿಣಾಮ ಆತ ಬೈಕ್​​ನಿಂದ ಗಾಳಿಯಲ್ಲಿ ತೇಲಿ ಬಂದು ರಸ್ತೆಗೆ ಬಿದ್ದಿದ್ದಾನೆ. ಆದರೆ ಅದೃಷ್ಟವಶಾತ್ ಆತ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

 • News18 Kannada
 • 5-MIN READ
 • Last Updated :
 • Tamil Nadu, India
 • Share this:

ಅದೃಷ್ಟ ಇದ್ದರೇ ಎಂತಹವುದೇ ಪ್ರಮಾದದಿಂದ ಆದರೂ ಜೀವ ಉಳಿಸಿಕೊಳ್ಳಬಹುದು, ಸುರಕ್ಷಿತವಾಗಿ ಪಾರಾಗಬಹುದು ಎಂಬ ಮಾತನ್ನು ಹಿರಿಯರು ಆಗಾಗ್ಗೆ ಹೇಳುತ್ತಾರೆ. ಇಂತಹದ್ದೇ ಘಟನೆಯೊಂದು ತಮಿಳುನಾಡಿನಲ್ಲಿ (Tamil Nadu) ನಡೆದಿದ್ದು, ಭೀಕರ ಅಪಘಾತದಲ್ಲಿ (Accident) ಬೈಕ್​ ಸವಾರನೊಬ್ಬ (Bike Rider) ಪವಾಡ ಸದೃಶವಾಗಿ ಬದುಕುಳಿದಿದ್ದಾನೆ. ಹೌದು, ಈ ಘಟನೆ ತಮಿಳುನಾಡಿನ ತೂತುಕುಡಿಯಲ್ಲಿ (Thoothukudi) ನಡೆದಿದ್ದು,  ಎದುರುನಿಂದ ಬಂದ ಲಾರಿಗೆ ನೇತಾಡುತ್ತಿದ್ದ ಹಗ್ಗ ಯುವಕನ ಕುತ್ತಿಗೆಗೆ ಸುತ್ತಿಕೊಂಡಿದ್ದು, ಲಾರಿ ಚಲಿಸುತ್ತಿದ್ದ ಕಾರಣ ಆತ ಬೈಕ್​​ನಿಂದ ಗಾಳಿಯಲ್ಲಿ ತೇಲಿ ಬಂದು ರಸ್ತೆಗೆ ಬಿದ್ದಿದ್ದಾನೆ. ಆದರೆ ಅದೃಷ್ಟವಶಾತ್ ಆತ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.


ಟ್ರಕ್​ಗೆ ನೇತಾಡುತ್ತಿದ್ದ ಹಗ್ಗ, ಬೈಕ್​ ಸವಾರನ ಕುತ್ತಿಗೆಗೆ ಸುತ್ತಿಕೊಂಡಿದೆ


ತಮಿಳುನಾಡಿನ ತೂತುಕುಡಿ ಜಿಲ್ಲೆಯ ಶ್ರೀವೈಕುಂಠ ಪಟ್ಟಣದ ನಿವಾಸಿಯಾಗಿದ್ದ ಬೈಕ್ ಸವಾರ ಬೈಕ್​ ಮೇಲೆ ಚಲಿಸುತ್ತಿದ್ದ. ಇದೇ ವೇಳೆಯಲ್ಲಿ ಬೈಕ್​ ಸವಾರನ ಎದುರಿನಿಂದ ಟ್ರಕ್​ ಒಂದು ಪಾಸ್​ ಆಗಿದೆ. ತೂತುಕುಡಿಯ ಎರಲ್​ ಪ್ರದೇಶದಲ್ಲಿ ಸಾಗುತ್ತಿದ್ದ ವೇಳೆ ಏಕಾಏಕಿ ಲಾರಿಗೆ ನೇತಾಡುತ್ತಿದ್ದ ಹಗ್ಗ, ಪಕ್ಕದಲ್ಲೇ ಬೈಕ್​ ಮೇಲೆ ಹೋಗುತ್ತಿದ್ದ ಸವಾರನ ಕುತ್ತಿಗೆಗೆ ಸುತ್ತಿಕೊಂಡಿದೆ. ಇದರಿಂದ ಸವಾರ ಮುತ್ತು ಒಮ್ಮೆಲೆ ಬೈಕ್​ ಮೇಲಿನಿಂದ ಗಾಳಿಯಲ್ಲಿ ಹಾರಿ ರಸ್ತೆ ಬಂದು ಬಿದ್ದಿದ್ದಾನೆ.


ಇದನ್ನೂ ಓದಿ: Success Story: ಭಾರೀ ಫೇಮಸ್ ಈ ಇಡ್ಲಿ ಮಲ್ಲಪ್ಪ! ಇಲ್ಲಿದೆ ನೋಡಿ ಇವರ ಬ್ಯುಸಿನೆಸ್ ಗುಟ್ಟು


ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರು


ಯುವಕನ ಕುತ್ತಿಗೆಗೆ ಹಗ್ಗ ಮತ್ತಷ್ಟು ಸುತ್ತಿಕೊಳ್ಳುವ ವೇಳೆ ಸ್ಥಳದಲ್ಲಿದ್ದ ಕೆಲವರು ಆತನ ನೆರವಿಗೆ ಧಾವಿಸಿದ್ದು, ಕೂಡಲೇ ಆತನ ಕುತ್ತಿಗೆಗೆ ಸುತ್ತಿಕೊಂಡಿದ್ದ ಹಗ್ಗವನ್ನು ತೆಗೆದು ರಕ್ಷಣೆ ಮಾಡಿದ್ದಾರೆ. ಇದರಿಂದ ಸಣ್ಣಪುಟ್ಟ ಗಾಯಗಳೊಂದಿಗೆ ಮುತ್ತು ಜೀವ ಉಳಿದಿದೆ. ಈ ವೇಳೆ ಕ್ಷಣ ಕಾಲ ಯಾಮಾರಿದ್ರು ಆತ ಜೀವನನ್ನೇ ಕಳೆದುಕೊಳ್ಳುವ ಸಾಧ್ಯತೆ ಇತ್ತು. ಟ್ರಕ್​ನ ಹಗ್ಗವೇ ಆತನ ಜೀವನದಲ್ಲಿ ನೇಣುಕುಣಿಕೆ ಆಗುತ್ತಿತ್ತು.


Tamil Nadu Thoothukudi Accident Rope from truck wraps biker s neck in freak road accident sns
ಅಪಘಾತದ ದೃಶ್ಯ


ಭೀಕರ ಅಪಾಘತದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆ


ಇನ್ನು, ಕ್ಷಣಮಾತ್ರದಲ್ಲಿ ಘಟನೆಯಿಂದ ಶಾಕ್​ಗೆ ಒಳಗಾದ ಬೈಕ್​ ಸವಾರನಿಗೆ ತನಗೆ ಏನಾಯ್ತು ಅಂತ ತಿಳಿದುಕೊಳ್ಳಲು ಎರಡು ನಿಮಿಷಗಳೇ ಬೇಕಾಯಿತು. ನಿರ್ಲಕ್ಷ್ಯದಿಂದ ಟ್ರಕ್​​ಗೆ ಹಗ್ಗ ಕಟ್ಟಿದ್ದ ಚಾಲಕನನ್ನು ಹಿಡಿದುಕೊಂಡು ಸ್ಥಳೀಯರು ಬಿಸಿ ಮುಟ್ಟಿಸಿದ್ದರು. ಸದ್ಯ ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭ ಮಾಡಿದ್ದಾರೆ. ಇನ್ನು, ಅಪಘಾತದ ಭೀಕರ ದೃಶ್ಯಗಳು ಸ್ಥಳದಲ್ಲಿದ್ದ ಸಿಸಿಟಿವಿ ವಿಡಿಯೋದಲ್ಲಿ ಸೆರೆಯಾಗಿದೆ.


ಇದನ್ನೂ ಓದಿ: Bengaluru: ಪ್ರಿಯಕರನನ್ನು ಸರಿ ದಾರಿಗೆ ತರಲು ಯತ್ನಿಸಿದ್ದೇ ತಪ್ಪಾಯ್ತಾ - ಪ್ರೀತಿಸಿದವಳ ಬೈಕನ್ನೇ ಸುಟ್ಟ ಪಾಗಲ್ ಪ್ರೇಮಿ


ಇಬ್ಬರು ಬೈಕ್‌ ಸವಾರರ ದುರ್ಮರಣ


ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಚಾಮರಾಜನಗರ (Chamarajanagara)  ಜಿಲ್ಲೆ ಗುಂಡ್ಲುಪೇಟೆ (Gudibanda) ಪಟ್ಟಣದ ಸರ್ಕಾರಿ ಐಟಿಐ ಕಾಲೇಜು (Government ITI College) ಎದುರು ರಾಷ್ಟ್ರೀಯ ಹೆದ್ದಾರಿ 67ರಲ್ಲಿ (National Highway 67 ) ನಡೆದಿದೆ.


ಜಕ್ಕಹಳ್ಳಿ ಗ್ರಾಮದ ಚಂದ್ರು ಹಾಗೂ ಲಕ್ಕೂರು ಗ್ರಾಮದ ಅನಿಲ್ ಮೃತ ದುರ್ದೈವಿಗಳು. ಬೈಕ್‍ನಲ್ಲಿದ್ದ ಗುಂಡ್ಲುಪೇಟೆಯ ವೇಣು ಎಂಬಾತನಿಗೆ ತೀವ್ರ ಗಾಯಗಳಾಗಿದ್ದು, ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಅತೀ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

Published by:Sumanth SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು