Murder News: ಟಿವಿ ರಿಮೋಟ್ ಕೇಳಿದ 7 ವರ್ಷದ ಬಾಲಕಿಯ ಬರ್ಬರ ಹತ್ಯೆ; ಪ್ಲಾಸ್ಟಿಕ್ ಡ್ರಮ್​ನಲ್ಲಿ ಹೆಣ ಸಾಗಿಸಿದ ನೆರೆಯವರು!

Crime News: ಬಾಲಕಿಯ ಉಸಿರುಗಟ್ಟಿಸಿ ಕೊಲೆ ಮಾಡಿದ ಬಳಿಕ ಈ ವಿಷಯ ಬೇರೆಯವರಿಗೆ ಗೊತ್ತಾದರೆ ಕಷ್ಟವೆಂದು ಆಕೆಯನ್ನು ಪ್ಲಾಸ್ಟಿಕ್ ಡ್ರಮ್​ನಲ್ಲಿ ಮುಚ್ಚಿಟ್ಟು, ಪಕ್ಕದ ಮನೆಯವರು 2 ಕಿ.ಮೀ. ದೂರದ ಕಾಲುವೆಗೆ ಬಿಸಾಡಿ ಹೋಗಿದ್ದಾರೆ.

Sushma Chakre | news18-kannada
Updated:July 16, 2020, 5:55 PM IST
Murder News: ಟಿವಿ ರಿಮೋಟ್ ಕೇಳಿದ 7 ವರ್ಷದ ಬಾಲಕಿಯ ಬರ್ಬರ ಹತ್ಯೆ; ಪ್ಲಾಸ್ಟಿಕ್ ಡ್ರಮ್​ನಲ್ಲಿ ಹೆಣ ಸಾಗಿಸಿದ ನೆರೆಯವರು!
ಸಾಂದರ್ಭಿಕ ಚಿತ್ರ
  • Share this:
ಚೆನ್ನೈ (ಜು. 16): ಟಿವಿ ನೋಡಬೇಕೆಂಬ ಆಸೆಯಿಂದ ಪಕ್ಕದ ಮನೆಗೆ ಹೋಗಿದ್ದ 7 ವರ್ಷದ ಬಾಲಕಿ ಚಾನೆಲ್ ಬದಲಾಯಿಸಲು ರಿಮೋಟ್ ಕೊಡುವಂತೆ ಕೇಳಿದ್ದಕ್ಕೆ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಅಮಾನುಷ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತಾಂಕುಲಂನಲ್ಲಿ ಈ ಘಟನೆ ನಡೆದಿದೆ. ತನ್ನ ಮನೆಯಲ್ಲಿ ಕರೆಂಟ್ ಇಲ್ಲದಿದ್ದಾಗ ಬಾಲಕಿ ಯಾವಾಗಲೂ ಪಕ್ಕದ ಮನೆಗೆ ಹೋಗಿ ಟಿವಿ ನೋಡುತ್ತಿದ್ದಳು. ಬುಧವಾರ ಕೂಡ ಅದೇ ರೀತಿ ಪಕ್ಕದ ಮನೆಗೆ ಹೋದ ಆಕೆ ಬೇರೆ ಚಾನೆಲ್ ನೋಡಲು ಬಯಸಿದ್ದಳು. ಹೀಗಾಗಿ, ಆ ಮನೆಯವರ ಬಳಿ ರಿಮೋಟ್ ಬೇಕೆಂದು ಕೇಳಿದಳು. ಆದರೆ, ಆ ವೇಳೆಗೆ ಆತ ತನ್ನ ತಂದೆಯ ಜೊತೆಗೆ ಜಗಳ ಮಾಡುತ್ತಿದ್ದ. ಅದೇ ವೇಳೆಗೆ ಬಾಲಕಿ ರಿಮೋಟ್ ಕೇಳಿದ್ದರಿಂದ ಕೋಪದಿಂದ ಆಕೆಯನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: TTD Coronavirus: ತಿರುಪತಿ ದೇವಸ್ಥಾನದ 15 ಅರ್ಚಕರು, 91 ಸಿಬ್ಬಂದಿಗೆ ಕೊರೋನಾ ಸೋಂಕು

ಬಾಲಕಿಯ ಉಸಿರುಗಟ್ಟಿಸಿ ಕೊಲೆ ಮಾಡಿದ ಬಳಿಕ ಈ ವಿಷಯ ಬೇರೆಯವರಿಗೆ ಗೊತ್ತಾದರೆ ಕಷ್ಟವೆಂದು ಆಕೆಯನ್ನು ಪ್ಲಾಸ್ಟಿಕ್ ಡ್ರಮ್​ನಲ್ಲಿ ಮುಚ್ಚಿಟ್ಟು, ಪಕ್ಕದ ಮನೆಯವರು 2 ಕಿ.ಮೀ. ದೂರದ ಕಾಲುವೆಗೆ ಬಿಸಾಡಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟ ಬಾಲಕಿಯ ತಾಯಿ ದಿನಗೂಲಿ ಕೆಲಸ ಮಾಡುತ್ತಿದ್ದರು ಎಂಬುದು ತಿಳಿದುಬಂದಿದೆ.

ಆದರೆ, ಸ್ಥಳೀಯ ಪತ್ರಿಕೆಗಳ ವರದಿ ಪ್ರಕಾರ, ಬಾಲಕಿಯ ಪಕ್ಕದ ಮನೆಯವರು ಡ್ರಗ್​ ತೆಗೆದುಕೊಳ್ಳುತ್ತಿದ್ದರು. ಅದರ ಅಲಿನಲ್ಲಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ ಎಂದು ಬಾಲಕಿಯ ಸಂಬಂಧಿಕರು ಮತ್ತು ಗ್ರಾಮಸ್ಥರು ಆರೋಪಿಸಿದ್ದಾರೆ. ಆದರೆ, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಈ ಬಗ್ಗೆ ನಿಖರ ಮಾಹಿತಿ ಲಭ್ಯವಾಗಲಿದೆ. ಕಾಲುವೆ ಬಳಿ ನಡೆದುಕೊಂಡು ಹೋಗುತ್ತಿದ್ದ ಊರ ಯುವಕನೊಬ್ಬ ಅನುಮಾನಾಸ್ಪದವಾಗಿ ಬಿದ್ದಿದ್ದ ಪ್ಲಾಸ್ಟಿಕ್ ಡ್ರಮ್ ಅನ್ನು ನೋಡಿ ಪೊಲೀಸರಿಗೆ ವಿಷಯ ತಿಳಿಸಿದ್ದ. ಬಾಲಕಿಯ ಪಕ್ಕದ ಮನೆಯವರ ಮೇಲೆ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಲಾಗಿದೆ.
Published by: Sushma Chakre
First published: July 16, 2020, 5:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading