ನರ್ಸ್ ಅಚಾತುರ್ಯಕ್ಕೆ ನವಜಾತ ಶಿಶುವಿನ ಹೆಬ್ಬೆರಳು ಕಟ್!

ತಮಿಳುನಾಡಿನ ತಂಜಾವೂರಿನ ಸರ್ಕಾರಿ ಆಸ್ಪತ್ರೆ ಒಂದರಲ್ಲಿ, ನರ್ಸ್ ಒಬ್ಬರು ಕತ್ತರಿ ಬಳಸಿ ಇಂಟ್ರಾವೇನಸ್ ಲೈನ್‍ನ್ನು ತೆಗೆದುಹಾಕಲು ಪ್ರಯತ್ನಿಸುತ್ತಿರುವಾಗ, ಮಗುವಿನ ಎಡ ಹೆಬ್ಬೆರಳಿನ ಒಂದು ಭಾಗವನ್ನು ತುದಿಯಿಂದ ಮಧ್ಯದ ವರೆಗೆ ಕತ್ತರಿಸಿ ಹಾಕಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:

ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡುವಾಗ ನಡೆಯುವ ಆಚಾತುರ್ಯಗಳ ಬಗ್ಗೆ ಆಗಾಗ ವರದಿಯಾಗುತ್ತಲೇ ಇರುತ್ತದೆ. ಶಸ್ತ್ರ ಚಿಕಿತ್ಸೆ ನಡೆಸಿದಾದ ಹೊಟ್ಟೆಯೊಳಗೆ ಕತ್ತರಿ ಬಿಟ್ಟು ಹೊಲಿಗೆ ಹಾಕಿರುವ ಹಳೆಯ ಘಟನೆಗಳಂತೂ ಸಾಕಷ್ಟಿದ್ದು, ಅವು ಜೋಕ್‍ಗಳ ರೂಪವನ್ನು ಕೂಡ ಪಡೆದುಕೊಂಡಿವೆ. ಸದ್ಯಕ್ಕೆ ಅಂತದ್ದೇ ಕತ್ತರಿ ಕಮಾಲ್ ಮಾಡಿ ನರ್ಸಮ್ಮ ಒಬ್ಬರು ಸುದ್ದಿಯಾಗಿದ್ದಾರೆ. ಆದರೆ ಅವರು ಕತ್ತರಿಯನ್ನು ರೋಗಿಯ ಹೊಟ್ಟೆಯಲ್ಲಿ ಬಿಟ್ಟಿದ್ದಲ್ಲ, ಅದರಿಂದ ಬೆರಳನ್ನೇ ಕತ್ತರಿಸಿದ್ದಾರೆ. ಹೌದು, ಆ ನರ್ಸ್‍ನ ಅಚಾತುರ್ಯಕ್ಕೆ ನವಜಾತ ಶಿಶುವಿನ ಹೆಬ್ಬೆರಳು ಬಲಿಯಾಗಿದೆ.


ತಮಿಳುನಾಡಿನ ತಂಜಾವೂರಿನ ಸರ್ಕಾರಿ ಆಸ್ಪತ್ರೆ ಒಂದರಲ್ಲಿ, ನರ್ಸ್ ಒಬ್ಬರು ಕತ್ತರಿ ಬಳಸಿ ಇಂಟ್ರಾವೇನಸ್ ಲೈನ್‍ನ್ನು ತೆಗೆದುಹಾಕಲು ಪ್ರಯತ್ನಿಸುತ್ತಿರುವಾಗ, ಮಗುವಿನ ಎಡ ಹೆಬ್ಬೆರಳಿನ ಒಂದು ಭಾಗವನ್ನು ತುದಿಯಿಂದ ಮಧ್ಯದ ವರೆಗೆ ಕತ್ತರಿಸಿ ಹಾಕಿದ್ದಾರೆ. ಈ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಹಿರಿಯ ವೈದ್ಯರೊಬ್ಬರು, ಶಸ್ತ್ರಚಿಕಿತ್ಸೆ ನಡೆಸಿ ಸ್ಟೆಂಟ್ ಅಳವಡಿಸಿ, ಬೆರಳಿನ ಭಾಗವನ್ನು ಮೂಲ ಭಾಗಕ್ಕೆ ಜೋಡಿಸಿದ್ದಾರೆ, ನರ್ಸ್ ಮಾಡಿರುವ ತಪ್ಪಿನಿಂದ ತನ್ನ ಎರಡು ವಾರದ ಶಿಶುವಿನ ಹೆಬ್ಬೆರಳು ತುಂಡಾಗಿದೆ, ಆಕೆಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಗುವಿನ ತಂದೆ ಸುದ್ದಿಗಾರರಿಗೆ ತಿಳಿಸಿದ್ದಾರೆ.


ಕತ್ತರಿ ಉಪಯೋಗಿಸಿ ಇಂಟ್ರಾವೇನಸ್ ಲೈನ್‍ ಅನ್ನು ತೆಗೆದುಹಾಕುತ್ತಿರುವಾಗ ಬಹುಶ: ಮಗು ನಡುಗಿರಬಹುದು, ಆಗ ಮಗುವಿನ ಬೆರಳಿನ ತುದಿ ಕಟ್ಟಾಗಿರಬಹುದು ಎಂದು ಸರ್ಕಾರಿ ಆಸ್ಪತ್ರೆಯ ಡೀನ್ ಡಾ. ಜಿ ರವಿಕುಮಾರ್ ಹೇಳಿದ್ದು, ಈ ಕುರಿತು ಇಲಾಖಾ ಮಟ್ಟದಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ.


“ಕತ್ತರಿ ಬಳಸಿ ಇಂಟ್ರಾವೇನಸ್ ಲೈನ್‍ ಅನ್ನು ತೆಗೆಯುವಾಗ ಮಗು ಆಲ್ಲಾಡಿದ್ದರಿಂದ ಹೀಗಾಯಿತು ಎಂದು ನನಗೆ ಮಾಹಿತಿ ನೀಡಲಾಗಿದೆ. ಈ ಕುರಿತು ಇಲಾಖಾ ಮಟ್ಟದ ವಿಚಾರಣೆ ನಡೆಸುತ್ತೇವೆ, ಅದಕ್ಕಾಗಿ ಈಗಾಗಲೇ ಒಂದು ವಿಚಾರಣಾ ಸಮಿತಿ ರಚಿಸಲಾಗಿದೆ. ಖಿನ್ನತೆಯಿಂದಾಗಿ ನರ್ಸ್ ಆಸ್ಪತ್ರೆಗೆ ಬಂದಿಲ್ಲ. ಆಕೆ ಕರ್ತವ್ಯಕ್ಕೆ ಮರಳಿದ ನಂತರ ಸರಿಯಾಗಿ ವಿಚಾರಣೆ ನಡೆಸಿ, ಆ ವಿಚಾರಣೆಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು” ಎಂದು ಡಾ. ಜಿ ರವಿಕುಮಾರ್ ಅವರು ತಿಳಿಸಿದ್ದಾರೆ.


ಶಸ್ತ್ರಚಿಕಿತ್ಸೆಯ ಮೂಲಕ ಬೆರಳನ್ನು ಅದರ ಸರಿಯಾದ ಜಾಗಕ್ಕೆ ಯಶಸ್ವಿಯಾಗಿ ಮರುಜೋಡಿಸುವ ಸಂಭವನೀಯತೆ ಬಗ್ಗೆ ಮಾತನಾಡಿದ ಅವರು, ಅದನ್ನು ತಿಳಿಯಲು ಕನಿಷ್ಟ ಮೂರು ದಿನಗಳು ಬೇಕು. ಈಗಲೇ ಅದನ್ನು ಪರಿಶೀಲಿಸಲು ಹೋದರೆ ಗಾಯ ಗುಣವಾಗುವ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ. ಆ ಕಾರಣಕ್ಕೆ, ವೈದ್ಯರು ಸದ್ಯಕ್ಕೆ ಗಾಯಕ್ಕೆ ತೊಂದರೆ ಕೊಡಲು ಹೋಗುವುದಿಲ್ಲ” ಎಂದು ತಿಳಿಸಿದ್ದಾರೆ.




ಸೋಮವಾರ ಆ ಮಗುವನ್ನು ಡಿಸ್ಚಾರ್ಜ್ ಮಾಡಬೇಕಿತ್ತು. ಆದರೆ ಅದೇ ಸಂದರ್ಭದಲ್ಲಿ ಈ ದುರದೃಷ್ಟಕರ ಘಟನೆ ನಡೆಯಿತು ಎಂದು ಅವರು ತಿಳಿಸಿದ್ದಾರೆ. ವಿಚಾರಣಾ ಸಮಿತಿಯು ಹಲವಾರು ಹಿರಿಯ ವೈದ್ಯರನ್ನು ಒಳಗೊಂಡಿದ್ದು, ಅದರ ಮೂಲಕ ನರ್ಸನ್ನು ಸೂಕ್ತ ರೀತಿಯಲ್ಲಿ ವಿಚಾರಣೆಗೆ ಒಳಪಡಿಸಲಾಗುವುದು ಎಂದಿರುವ ಡಾ. ಜಿ ರವಿಕುಮಾರ್, ಮಗುವಿನ ಹೆಬ್ಬೆರಳು ತುಂಡಾದ ಘಟನೆಯ ಸಂಪೂರ್ಣ ಅನುಕ್ರಮವನ್ನು ತಿಳಿದುಕೊಳ್ಳಲಾಗುತ್ತದೆ, ಮತ್ತು ಸರಿಯಾದ ಕ್ರಮದಲ್ಲಿ ಎಲ್ಲಾ ರೀತಿಯ ವಿಚಾರಣೆ ನಡೆಸಿ, ಆ ವಿಚಾರಣೆಯ ಆಧಾರದ ಮೇಲೆ ನರ್ಸ್ ಕುರಿತು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.


First published: