ಶಾಲಾ ಕೊಠಡಿಯಲ್ಲಿ ಶಿಕ್ಷಕ ಮತ್ತು ಅಂಗನವಾಡಿ ಕಾರ್ಯಕರ್ತೆ ಅನೈತಿಕ ಚಟುವಟಿಕೆ; ಗ್ರಾಮಸ್ಥರಿಂದ ಥಳಿತ

ಕಳೆದ ಹಲವು ತಿಂಗಳಿಂದ ಇವರಿಬ್ಬರ ಸಂಬಂಧವನ್ನು ಶಾಲಾ ವಿದ್ಯಾರ್ಥಿಗಳು ಗಮನಿಸಿದ್ದರು. ಈ ವಿಚಾರವನ್ನು  ವಿದ್ಯಾರ್ಥಿಗಳು ಪೋಷಕರ ಬಳಿ ಹೇಳಿದ್ದರು. ಈ ಬಗ್ಗೆ ವಿಚಾರಿಸಲು ಗ್ರಾಮಸ್ಥರು ಶಾಲೆಗೆ ಬಂದಾಗ ಇವರಿಬ್ಬರು ಶಾಲಾ ಕೊಠಡಿಯಲ್ಲಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾಗ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾರೆ.

news18-kannada
Updated:September 11, 2019, 8:38 PM IST
ಶಾಲಾ ಕೊಠಡಿಯಲ್ಲಿ ಶಿಕ್ಷಕ ಮತ್ತು ಅಂಗನವಾಡಿ ಕಾರ್ಯಕರ್ತೆ ಅನೈತಿಕ ಚಟುವಟಿಕೆ; ಗ್ರಾಮಸ್ಥರಿಂದ ಥಳಿತ
ಶಿಕ್ಷಕನಿಗೆ ಥಳಿಸುತ್ತಿರುವ ಗ್ರಾಮಸ್ಥರು
  • Share this:
ತಮಿಳುನಾಡು(ಸೆ.11):  ಶಾಲಾ ಶಿಕ್ಷಕನೊರ್ವ ಅಂಗನವಾಡಿ ಕಾರ್ಯಕರ್ತೆಯ ಜೊತೆ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದು, ಆಕ್ರೋಶಗೊಂಡ ಸ್ಥಳೀಯರು ಇಬ್ಬರಿಗೆ ಹಿಗ್ಗಾಮುಗ್ಗ ಥಳಿಸಿದ ಘಟನೆ ತಮಿಳುನಾಡಿನ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದೆ.

ನಮ್ಮಕ್ಕಲ್​ ಉಡುಪ್ಪಂ ಸರ್ಕಾರಿ ಶಾಲಾ ಶಿಕ್ಷಕ ಶಾಲಾ ಸಮಯದ ವೇಳೆ ಅಂಗನವಾಡಿ ಕಾರ್ಯಕರ್ತೆ ಜೊತೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು, ಇದನ್ನು ಗಮನಿಸಿದ ಸ್ಥಳೀಯರು, ಇಬ್ಬರನ್ನು, ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ.

ಕಳೆದ ಹಲವು ತಿಂಗಳಿಂದ ಇವರಿಬ್ಬರ ಸಂಬಂಧವನ್ನು ಶಾಲಾ ವಿದ್ಯಾರ್ಥಿಗಳು ಗಮನಿಸಿದ್ದರು. ಈ ವಿಚಾರವನ್ನು  ವಿದ್ಯಾರ್ಥಿಗಳು ಪೋಷಕರ ಬಳಿ ಹೇಳಿದ್ದರು. ಈ ಬಗ್ಗೆ ವಿಚಾರಿಸಲು ಗ್ರಾಮಸ್ಥರು ಶಾಲೆಗೆ ಬಂದಾಗ ಇವರಿಬ್ಬರು ಶಾಲಾ ಕೊಠಡಿಯಲ್ಲಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾಗ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಇದನ್ನೂ ಓದಿ: ದುಬಾರಿ ಸಂಚಾರಿ ದಂಡದ ಮುಖ್ಯ ಉದ್ದೇಶ ಜೀವ ರಕ್ಷಣೆ; ನೂತನ ಕಾಯ್ದೆ ಸಮರ್ಥಿಸಿಕೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

ಶಾಲಾ ಸಮಯದ ವೇಳೆ ಇಂತಹ ಚಟುವಟಿಕೆ ನಡೆಸಿದ ಶಾಲಾ ಶಿಕ್ಷಕ ಮತ್ತು ಅಂಗನವಾಡಿ ಕಾರ್ಯಕರ್ತೆಗೆ ಗ್ರಾಮಸ್ಥರು ಧರ್ಮದೇಟು ಕೊಟ್ಟಿದ್ದಾರೆ. ನಂತರ ಪುಂಡನ್​ಸಂಡೈ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೋಲಿಸರು ಇವರಿಬ್ಬರನ್ನು ​ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಶಾಲಾ ಮುಖ್ಯೋಪಾಧ್ಯಾಯರು ಇವರಿಬ್ಬರನ್ನು ಕೆಲಸದಿಂದ ಅಮಾನತು ಮಾಡಿದ್ದಾರೆ.

First published:September 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ