ಕುರಿ ಕಾಯಲು ಬಾಲಕನನ್ನು 5 ಸಾವಿರಕ್ಕೆ ಖರೀದಿಸಿದ್ದ ಕುರಿಗಾಹಿ: ಹುಡುಗನನ್ನು ರಕ್ಷಿಸಿದ ಸ್ಥಳೀಯರು

ದಲ್ಲಾಳಿಯ ಸಹಾಯದಿಂದ 5 ಸಾವಿರಕ್ಕೆ 7 ವರ್ಷದ ಬಾಲಕನನ್ನು ಕುರಿಗಾಹಿಯೊಬ್ಬರು ಖರೀದಿಸಿದ್ದು, 150 ಕುರಿಗಳನ್ನು ನೋಡಿಕೊಳ್ಳಲು ಈತ ಬಾಲಕನನ್ನು ಬಳಸಿಕೊಂಡಿದ್ದರಂತೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಣ್ಣ ಮಕ್ಕಳನ್ನು ಕಾರ್ಮಿಕರನ್ನಾಗಿ ದುಡಿಸಿಕೊಳ್ಳುವ ಪದ್ಧತಿಯನ್ನು ನಿಷೇಧಿಸಿ ಕಾನೂನು ಜಾರಿಗೆ ಬಂದಿದ್ದರೂ ಈ ಕಾನೂನು ಅಷ್ಟೊಂದು ಪರಿಣಾಮಕಾರಿಯಲ್ಲ ಎಂಬುದು ಈ ಘಟನೆಯಿಂದ ತಿಳಿದುಬರುತ್ತದೆ. ಮಕ್ಕಳನ್ನು ಮಾರಾಟ ಮಾಡುವುದು ಹಾಗೂ ಖರೀದಿ ಮಾಡುವುದು ಕಾನೂನುಬಾಹಿರ. ಇಂತಹವರಿಗೆ ಕಠಿಣ ಸಜೆ ವಿಧಿಸಲಾಗುತ್ತಿದೆ ಮತ್ತು ಶಿಕ್ಷಾರ್ಹ ಅಪರಾಧವೆಂದು ಇದನ್ನು ಪರಿಗಣಿಸಲಾಗಿದೆ. ಆದರೆ ತಮಿಳು ನಾಡಿನಲ್ಲಿ ಕುರಿಗಾಹಿಯೊಬ್ಬ  5 ಸಾವಿರಕ್ಕೆ ಬಾಲಕನನ್ನು ಖರೀದಿಸಿದ್ದು, ತನ್ನ ಕುರಿಗಳ ಮಂದೆಯನ್ನು ನೋಡಿಕೊಳ್ಳಲು ಬಾಲಕನನ್ನು ಖರೀದಿ ಮಾಡಿದ್ದಾರೆ ಅನ್ನೋದು ತಿಳಿದು ಬಂದಿದೆ.

ಈತ ದಲ್ಲಾಳಿಯ‌ ಸಹಾಯದಿಂದ ಈ ಹುಡುಗನನ್ನು ಕಾನೂನು ಬಾಹಿರವಾಗಿ ಖರೀದಿಸಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ತನ್ನ 150 ಕುರಿಗಳನ್ನು ನೋಡಿಕೊಳ್ಳಲು ಈತ ಬಾಲಕನನ್ನು ಖರೀದಿಸಿದ್ದು, ಬಾಲಕನನ್ನು ಈಗ ರಕ್ಷಿಸಲಾಗಿದೆ. 7 ವರ್ಷ ಪ್ರಾಯದ ಹುಡುಗನನ್ನು 40ರ ಹರೆಯದ ಕುರಿಗಾಹಿಯೊಬ್ಬ 5 ಸಾವಿರಕ್ಕೆ ಖರೀದಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.ಈ ವ್ಯಕ್ತಿಯ ಅಕ್ಕಪಕ್ಕದ ಮನೆಯವರು ಈ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿ ಹುಡುಗನನ್ನು ಆಶ್ರಯದಾಣಕ್ಕೆ ಸೇರಿಸಲಾಗಿದೆ. ಪುದುಕೋಟೆ ಜಿಲ್ಲೆಯ ಸೆಲ್ವತ್ತೂರಿನಿಂದ ಏಳು ವರ್ಷದ ಹುಡುಗನನ್ನು ಮೂರು ತಿಂಗಳ ಹಿಂದೆ ಹರಿರಾಜ್ ಎಂಬ ಕುರಿಗಾಹಿ ಖರೀದಿಸಿದ್ದಾರೆ. ಅಕ್ಕಪಕ್ಕದ ಮನೆಯವರಿಗೆ ಹುಡುಗ ತನ್ನ ಮಗ ಎಂದು ಹರಿರಾಜ್ ಹೇಳಿಕೊಂಡಿದ್ದನಂತೆ. ತನ್ನ ಕುರಿಮಂದೆಯನ್ನು ನೋಡಿಕೊಳ್ಳಲು ಹರಿರಾಜ್ ಹುಡುಗನನ್ನು ಬಳಸಿಕೊಂಡಿದ್ದ ಎನ್ನಲಾಗಿದೆ.

ಇದನ್ನೂ ಓದಿ: Bigg Boss 8: ಬಕೆಟ್​ ಅಂತ ಕರೆಸಿಕೊಂಡಿದ್ದ ಶಮಂತ್​ ಕೈಗೆ ಚೊಂಬು ಕೊಟ್ಟ ರಘು ಗೌಡ..!

ಒಂದು ದಿನ ಹುಡುಗ ಅಳುತ್ತಿರುವುದನ್ನು ಕಂಡು ಅಕ್ಕಪಕ್ಕದ ಮನೆಯವರು ವಿಚಾರಿಸಿದ್ದಾರೆ. ಹರಿರಾಜ್‌ನ ಮಗ ನನ್ನನ್ನು ಹೊಡೆದದ್ದಕ್ಕೆ ತಾನು ಅಳುತ್ತಿರುವುದಾಗಿ ಹುಡುಗ ಹೇಳಿದ್ದಾನೆ. ಹರಿರಾಜ್‌ನ ಮಗನನ್ನು ಕೇಳಿದಾಗ ಆ ಹುಡುಗನನ್ನು ಖರೀದಿಸಿರುವ ವಿಷಯ ತಿಳಿದುಬಂದಿದೆ. ಈ ಸುದ್ದಿ ಅರಿತ ಒಡನೆಯೇ ಸ್ಥಳೀಯರು ಇದನ್ನು ಮಕ್ಕಳ ಸಹಾಯವಾಣಿ ಮತ್ತು ಪೋಲೀಸ್ ಇಲಾಖೆಗೆ ತಿಳಿಸಿದ್ದಾರೆ. ಈತ ಸಣ್ಣ ಬಾಲಕನಾಗಿರುವುದರಿಂದ ಮೊದಲಿಗೆ ಬಾಲಾಭಿವೃದ್ಧಿ ಮಂಡಳಿಯ ಮುಂದೆ ಹುಡುಗನನ್ನು ಹಾಜರುಪಡಿಸಿ ನಂತರ ಮನೆಗೆ ಕಳುಹಿಸಲಾಯಿತು.

ಗಣೇಶನ್ ಎಂಬ ಹೆಸರಿನ ದಲ್ಲಾಳಿ ಹರಿರಾಜ್‌ಗೆ ಹುಡುಗನನ್ನು ಖರೀದಿಸಲು ಸಹಾಯ ಮಾಡಿದ್ದ ಎಂಬುದು ತಿಳಿದಿದೆ. ಹುಡುಗನ ಪೋಷಕರಿಗೆ ಹುಡುಗ ಒಳ್ಳೆಯ ಸ್ಥಳದಲ್ಲಿರುವುದಾಗಿ ನಂಬಿಸಿ ನಂತರ ಸಂಪರ್ಕದಲ್ಲಿರಲಿಲ್ಲ ಎಂಬುದು ತಿಳಿದು ಬಂದಿದೆ. ಬಾಲಕನ ಪೋಷಕರನ್ನು ಕೇಳಿದಾಗ ತಮ್ಮ ಮಗನನ್ನು ನಾವು ಮಾರಾಟ ಮಾಡಿಲ್ಲ ಮತ್ತು ಆತನನ್ನು ಬಾಲ ಕಾರ್ಮಿಕನಿಗೆ ಬಳಸಲಾಗಿದೆ ಎಂಬುದು ನಮಗೆ ಗೊತ್ತಿರಲಿಲ್ಲ ಎಂದಿದ್ದಾರೆ. ಗಣೇಶ ನೀಡಿದ ಫೋನ್‌ನಲ್ಲಿ ನಾವು ನಿತ್ಯವೂ ಮಗನೊಂದಿಗೆ ಮಾತನಾಡುತ್ತಿದ್ದೆವು ಎಂದು ಪೋಷಕರು ತಿಳಿಸಿದ್ದಾರೆ.

ಇದನ್ನೂ ಓದಿ: Bigg Boss 8: ಅರವಿಂದ್​ಗಾಗಿ ಆಟವನ್ನು ಬಿಡುವುದಿಲ್ಲ ಎಂದ ದಿವ್ಯಾ ಉರುಡುಗ: ಅರವಿಂದ್​ ಪ್ರತಿಕ್ರಿಯೆ ಬೇರೆನೇ ಆಗಿತ್ತು...!

ಜಿಲ್ಲಾಧಿಕಾರಿ ಈ ವಿಷಯವನ್ನು ತುಸು ಗಂಭೀರವಾಗಿಯೇ ತೆಗೆದುಕೊಂಡಿದ್ದು, ಹುಡುಗನ ಹೆತ್ತವರು, ಹರಿರಾಜ್, ಗಣೇಶನ್ ಮೇಲೆ ಕೇಸು ದಾಖಲಾಗಿದೆ. ಹುಡುಗನು ಸಣ್ಣ ವಯಸ್ಸಿನವನಾದ್ದರಿಂದ ಆತನನ್ನು ಇಂತಹ ಪರಿಸ್ಥಿತಿಗೆ ತಳ್ಳಿದ್ದು ಖೇದಕರ ಸಂಗತಿಯಾಗಿದೆ ಎಂದು ಕಲೆಕ್ಟರ್ ತಿಳಿಸಿದ್ದಾರೆ. ಇಂತಹ ಕೃತ್ಯಗಳು ನಮಗೆ ಗೊತ್ತಿಲ್ಲದಂತೆಯೇ ನಡೆಯುತ್ತಿದ್ದು ಇಂತಹ ಘಟನೆಗಳು ನಡೆಯುವಾಗ ಸ್ಥಳೀಯರು ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಸ್ಥಳೀಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Published by:Anitha E
First published: