Tamil Nadu: ಮತ್ತೊಬ್ಬ ವಿದ್ಯಾರ್ಥಿನಿ ಆತ್ಮಹತ್ಯೆ! 2 ವಾರದಲ್ಲಿ ನಾಲ್ವರು ಸಾವು

Tamil Nadu: ತಮಿಳುನಾಡಲ್ಲಿ 2 ವಾರದಲ್ಲಿ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಇತ್ತೀಚಿನ ಪ್ರಕರಣದಲ್ಲಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚೆನ್ನೈ(ಜು.27): ತಮಿಳುನಾಡಿನಲ್ಲಿ ವಿದ್ಯಾರ್ಥಿಗಳ (Students) ಆತ್ಮಹತ್ಯೆ ಪ್ರಕರಣ (Suicide) ಹೆಚ್ಚಾಗುತ್ತಿದ್ದು ಪೋಷಕರಲ್ಲಿ ಆತಂಕ ಮೂಡಿಸಿದೆ. ಬೋರ್ಡ್ ಎಕ್ಸಾಂ (Board Exam) ರಿಸಲ್ಟ್​ ನಂತರ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವುದು ಇದೇ ಮೊದಲಲ್ಲ. ಆದರೆ ಒಂದೇ ವಾರದಲ್ಲಿ ನಾಲ್ಕು ವಿದ್ಯಾರ್ಥಿಗಳ ಸಾವು ಎಲ್ಲೆಡೆ ಸುದ್ದಿಯಾಗಿದೆ. ಕಳೆದೆರಡು ವಾರಗಳಿಂದ ತಮಿಳುನಾಡಿನಲ್ಲಿ (Tamil Nadu) ನಡೆದ ಶಾಲಾ ಬಾಲಕಿಯರ ಭೀಕರ ಸಾವಿನ ಸರಣಿಗೆ (Death) 11ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಸೇರ್ಪಡೆಯಾಗಿದ್ದಾಳೆ. ನಿನ್ನೆ ಶಿವಕಾಶಿಯ ತನ್ನ ಮನೆಯಲ್ಲಿ ವಿದ್ಯಾರ್ಥಿನಿಯೊಬ್ಬಳು (Student) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಾಲಕಿ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಇನ್ನು ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಾಲಕಿ ದೀರ್ಘಕಾಲದ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಎರಡು ವಾರಗಳಲ್ಲಿ ರಾಜ್ಯದಲ್ಲಿ 12 ನೇ ತರಗತಿಯ ಮೂವರು ಮತ್ತು ಈಗ 11 ನೇ ತರಗತಿಯ ಬಾಲಕಿ ಸಾವನ್ನಪ್ಪಿದ್ದಾರೆ. ಕಡಲೂರು ಜಿಲ್ಲೆಯಲ್ಲಿ 12ನೇ ತರಗತಿಯ ವಿದ್ಯಾರ್ಥಿ ಶವವಾಗಿ ಪತ್ತೆಯಾದ ಕೆಲವೇ ಗಂಟೆಗಳಲ್ಲಿ ಶಿವಕಾಶಿಯಲ್ಲಿ ಈ ಘಟನೆ ನಡೆದಿದೆ.

ನಾಲ್ಕು ಪುಟಗಳ ಸೂಸೈಡ್ ನೋಟ್

ನಾಲ್ಕು ಪುಟಗಳ ಸೂಸೈಡ್ ನೋಟ್‌ನಲ್ಲಿ, ತನ್ನ ಹೆತ್ತವರು ತನ್ನ ಮೇಲೆ ಇಟ್ಟಿರುವ ಐಎಎಸ್ ಆಕಾಂಕ್ಷೆಗಳನ್ನು ಪೂರೈಸಲು ತನ್ನ ಅಸಮರ್ಥತೆ ಎಂದು ಆಕೆ ಆರೋಪಿಸಿದ್ದಾರೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಕಾರ್ತಿಕ್ ಹೇಳಿದ್ದಾರೆ.

ಸಿಎಂ ಸಲಹೆ

ಮರುಕಳಿಸುವ ಸಾವಿನಿಂದ ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ವಿದ್ಯಾರ್ಥಿನಿಯರು ಆತ್ಮಹತ್ಯೆಯ ಆಲೋಚನೆಗಳನ್ನು ದೂರವಿಡುವಂತೆ ಮನವಿ ಮಾಡಿದ್ದಾರೆ. ಹೆಣ್ಣು ಮಕ್ಕಳನ್ನು ಯಾವತ್ತೂ ಆತ್ಮಹತ್ಯಾ ಯೋಚನೆಗೆ ತಳ್ಳಬಾರದು, ಪ್ರಯೋಗಗಳನ್ನು ಸಾಧನೆಯಾಗಿ ಪರಿವರ್ತಿಸಿ, ವಿದ್ಯಾರ್ಥಿನಿಯರಿಗೆ ಲೈಂಗಿಕ, ಮಾನಸಿಕ, ದೈಹಿಕ ಕಿರುಕುಳ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದನ್ನೂ ಓದಿ: Suicide: 6 ವರ್ಷ ಹಿಂದೆ ತಂದೆ ಸೂಸೈಡ್, ಈಗ ತಾಯಿ ಮಗಳು ಆತ್ಮಹತ್ಯೆ! ಪರೀಕ್ಷೆ ಫೇಲ್ ಆಗಿದ್ದಕ್ಕೆ ದುಡುಕಿನ ನಿರ್ಧಾರ

ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ (Tiruvallur district) 12 ನೇ ತರಗತಿಯ ಬಾಲಕಿ ಸೋಮವಾರ ನಸುಕಿನಲ್ಲಿ ತನ್ನ ಹಾಸ್ಟೆಲ್ ಕೋಣೆಯಲ್ಲಿ ಆತ್ಮಹತ್ಯೆ (suicide) ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆಕೆಯ ಸ್ನೇಹಿತರ ಪ್ರಕಾರ, ಅವಳು ಒಂದು ತಿಂಗಳಿನಿಂದ ಮನೆಗೆ ಭೇಟಿ ನೀಡಿರಲಿಲ್ಲ. ಬೇಸರದಲ್ಲಿರುವಂತೆ ಕಾಣುತ್ತಿದ್ದಳಂತೆ. ಆಕೆ ಸರ್ಕಾರಿ ಅನುದಾನಿತ ಶಾಲೆಯಲ್ಲಿ ಓದಿತ್ತಿದ್ದು, ಆಕೆಯ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಿರುವಳ್ಳು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕೊಂಡೊಯ್ಯಲಾಯಿತು.

ಭಾರೀ ಪೊಲೀಸ್ ನಿಯೋಜನೆಯಲ್ಲಿ ಶಾಲಾ ಆವರಣದ ಬಳಿ ಸ್ಥಳೀಯರು ಮತ್ತು ಪೋಷಕರಿಂದ ಹಲವಾರು ಪ್ರತಿಭಟನೆಗಳು ನಡೆದವು. ಬಾಲಕಿಯ ಪೋಷಕರು ದಿನಗೂಲಿ ಕಾರ್ಮಿಕರಾಗಿದ್ದು, ಕಿಲಚೇರಿ ಗ್ರಾಮದಲ್ಲಿ ವಾಸವಿದ್ದಾರೆ. ಜಿಲ್ಲೆಯ ತಿರುತ್ತಣಿ ಪಟ್ಟಣದಲ್ಲಿ ಆಕೆಯ ಗ್ರಾಮದ ಜನರು ಬಸ್ ಮತ್ತು ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು.

ಸೋಮವಾರ ಬೆಳಗ್ಗೆ ಬಾಲಕಿಯರೆಲ್ಲಾ ಶಾಲೆಗೆ ತೆರಳಿದ ಬಳಿಕ ಸಂತ್ರಸ್ತೆ ತನ್ನ ಸ್ನೇಹಿತರಿಗೆ ತಡವಾಗಿ ಬರುವುದಾಗಿ ಹೇಳಿದ್ದಳು. ಆದರೆ ಆಕೆ ಹಿಂತಿರುಗದ ಕಾರಣ ಸಿಬ್ಬಂದಿ ಆಕೆಯ ಹಾಸ್ಟೆಲ್ ಕೊಠಡಿಯನ್ನು ಪರಿಶೀಲಿಸಿದಾಗ ಆಕೆಯು ನೇಣು ಹಾಕಿಕೊಂಡಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ನಂತರ, ಹಾಸ್ಟೆಲ್‌ನಿಂದ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮಪ್ಪೇಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕ್ರೈಂ ಬ್ರಾಂಚ್-ಅಪರಾಧ ತನಿಖಾ ವಿಭಾಗಕ್ಕೆ (ಸಿಬಿ-ಸಿಐಡಿ) ವರ್ಗಾಯಿಸಲಾಗಿದೆ. ಸಿಬಿ-ಸಿಐಡಿ ಅಧಿಕಾರಿಗಳು ಈಗ ಶಾಲಾ ಕ್ಯಾಂಪಸ್‌ನಲ್ಲಿರುವ ಶಾಲಾ ಸಿಬ್ಬಂದಿ ಮತ್ತು ಹಾಸ್ಟೆಲ್ ವಾರ್ಡನ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
Published by:Divya D
First published: