National Flag: ರಾಷ್ಟ್ರಧ್ವಜದ ಮೇಲೆ “ಜೀಸಸ್, ಭಾರತವನ್ನು ಆಶೀರ್ವದಿಸಿ" ಎಂದು ಬರೆದ ಶಿಕ್ಷಕ ಅರೆಸ್ಟ್

ಮನೆಯ ಬಾಲ್ಕನಿಯಲ್ಲಿ ಧ್ವಜ ಹಾರಿಸಿದ ಶಿಕ್ಷಕ, ಧ್ವಜದ ಮೇಲೆ ಒಂದು ಪತ್ರವನ್ನು ಬರೆದು ಅಂಟಿಸಿದ್ದ. ಪತ್ರದಲ್ಲಿ"ಜೀಸಸ್ ಭಾರತವನ್ನು ಆಶೀರ್ವದಿಸಲಿ" ಎಂದು ಬರೆದು ಧ್ವಜಕ್ಕೆ ಅಂಟಿಸಿ ಹಾರಿಸಿದ್ದ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:

ತಮಿಳುನಾಡಿನ ತಿರುಪುರ್ ಜಿಲ್ಲೆಯಲ್ಲಿ ತ್ರಿವರ್ಣ ಧ್ವಜವನ್ನು (Tricolor Flag)  ಅವಮಾನಿಸಿದ ಶಾಲೆಯ ಶಿಕ್ಷಕನನ್ನು (School Teacher) ಪೊಲೀಸರು ಬಂಧಿಸಿದ್ದಾರೆ.  36 ವರ್ಷದ ಎವಿನ್, ತಮಿಳುನಾಡಿನ (Tamil Nadu) ತಿರುಪುರ್ ಜಿಲ್ಲೆಯ ಧಾರಾಪುರಂ ಪಟ್ಟಣದಲ್ಲಿ ಶಾಲಾ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾನೆ. 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಪ್ರತಿಯೊಬ್ಬರ ಮನೆಯಲ್ಲಿ ಧ್ವಜಾರೋಹಣ ಮಾಡಬೇಕೆಂಬ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ‘ಹರ್ ಘರ್ ತಿರಂಗ್’ (Har Ghar Tiranga) ಮನವಿಯನ್ನು ಅನುಸರಿಸಿ, ಎವಿನ್ ತಮ್ಮ ಮನೆಯ ಬಾಲ್ಕನಿಯಲ್ಲಿ ತ್ರಿವರ್ಣ ಧ್ವಜವನ್ನು ಕಟ್ಟಿದರು. ಕೇವಲ ಧ್ವಜ ಕಟ್ಟಿ ಹಾರಿಸಿದ್ದರೆ ಶಿಕ್ಷಕ ಎವಿನ್ ಜೈಲು ಪಾಲಾಗುತ್ತಿರಲ್ಲಿಲ್ಲ. ಬದಲಿಗೆ ಆತ ಮಾಡಿದ್ದೇ ಬೇರೆಯದ್ದಾಗಿತ್ತು. ಶಿಕ್ಷಕನಾಗಿ ನಿಯಮಗಳನ್ನು ಮೀರಿ ರಾಷ್ಟ್ರ ಧ್ವಜಕ್ಕೆ (National Flag) ಅವಮಾನ ಮಾಡಿದ್ದಾನೆ.


ಶಿಕ್ಷಕ ಮಾಡಿದ್ದೇನು?
ಮನೆಯ ಬಾಲ್ಕನಿಯಲ್ಲಿ ಧ್ವಜ ಹಾರಿಸಿದ ಶಿಕ್ಷಕ, ಧ್ವಜದ ಮೇಲೆ ಒಂದು ಪತ್ರವನ್ನು ಬರೆದು ಅಂಟಿಸಿದ್ದ. ಪತ್ರದಲ್ಲಿ"ಜೀಸಸ್ ಭಾರತವನ್ನು ಆಶೀರ್ವದಿಸಲಿ" ಎಂದು ಬರೆದು ಧ್ವಜಕ್ಕೆ ಅಂಟಿಸಿ ಹಾರಿಸಿದ್ದ. ಎವಿನ್ ಕೃತ್ಯವನ್ನು ಗಮನಿಸಿದ ನೆರೆಹೊರೆಯವರು ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ. ಎವಿನ್ ಮನೆಗೆ ಕೂಡಲೇ ಧಾವಿಸಿದ ತಮಿಳುನಾಡು ಪೊಲೀಸರು ಧ್ವಜವನ್ನು ಮತ್ತು ಅದರ ಮೇಲೆ ಬರೆದಂತಹ "ಜೀಸಸ್ ಭಾರತವನ್ನು ಆಶೀರ್ವದಿಸಲಿ" ಎಂಬ ಪತ್ರವನ್ನು ಪರಿಶೀಲಿಸಿ, ಬಂಧಿಸಿದರು.


ರಾಷ್ಟ್ರ ಧ್ವಜದ ಮೇಲೆ ಇಲ್ಲ ಸಲ್ಲದನ್ನು ಬರೆದಿದ್ದಕ್ಕಾಗಿ, ಎವಿನ್ ಅನ್ನು ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆಗಟ್ಟುವಿಕೆ ಕಾಯಿದೆ, 1971 ರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಲಾಗಿದೆ. ಆರೋಪಿಯನ್ನು ನಂತರ ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಪೊಲೀಸ್ ವರದಿಗಳು ಹೇಳಿರುವ ಪ್ರಕಾರ, “ಎವಿನ್ ಒಂದು ಕಾಗದದ ಮೇಲೆ ಜೀಸಸ್, ಭಾರತವನ್ನು ಆಶೀರ್ವದಿಸಿ ಎಂದು ಬರೆದು ತ್ರಿವರ್ಣ ಧ್ವಜದ ಬಿಳಿ ಪಟ್ಟಿಯ ಮೇಲೆ ಅಂಟಿಸಿ ನಂತರ, ಅವರು ತಮ್ಮ ಬಾಲ್ಕನಿಯಲ್ಲಿ ಧ್ವಜವನ್ನು ಕಟ್ಟಿದರು. ಈ ಮೂಲಕ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ. ಈ ಬಗ್ಗೆ ನೆರೆಹೊರೆಯವರು ದೂರು ದಾಖಲಿಸಿದ್ದರು” ಎಂದು ಪೊಲೀಸಲು ತಿಳಿಸಿದ್ದಾರೆ.


ಕೊಯಂಬತ್ತೂರಿನಲ್ಲೂ ಇದೇ ರೀತಿಯ ಘಟನೆ ವರದಿ
ಕೊಯಂಬತ್ತೂರು ಜಿಲ್ಲೆಯ ಸುಂದರಪುರಂ ಪಟ್ಟಣದಲ್ಲಿ ಇದೇ ರೀತಿಯ ಪ್ರಕರಣವೊಂದು ವರದಿಯಾಗಿದ್ದು, "ಜೀಸಸ್, ಭಾರತವನ್ನು ಆಶೀರ್ವದಿಸಿ" ಎಂಬ ಬೋರ್ಡ್‌ನೊಂದಿಗೆ ರಾಷ್ಟ್ರಧ್ವಜವನ್ನು ಹಾರಿಸಲಾಗಿದೆ. ಈ ಪ್ರಕರಣವನ್ನು ಕೊಯಮತ್ತೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಇದನ್ನೂ ಓದಿ: Viral News: ಮಗನ ಜೊತೆ ತಾಯಿಯೂ ಶಾಲೆ ಕಲೀತಾಳೆ! ಹೀಗೊಂದು ವಿಚಿತ್ರ ಘಟನೆ

ಧ್ವಜಾರೋಹಣ ಮಾಡಲು ನಿರಾಕರಿಸಿದ ಶಿಕ್ಷಕಿ
ಮತ್ತೊಂದು ಪ್ರಕರಣದಲ್ಲಿ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಬೇಡರಹಳ್ಳಿಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಕ್ರಿಶ್ಚಿಯನ್ ಮುಖ್ಯೋಪಾಧ್ಯಾಯಿನಿ ತಮಿಳ್ ಸೆಲ್ವಿ ಧ್ವಜಾರೋಹಣ ಮಾಡಲು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ. ತಾನು ಯೇಸುವನ್ನು ಮಾತ್ರ ಆರಾಧಿಸುತ್ತೇನೆ ಮತ್ತು ಬೇರೆ ಯಾವುದಕ್ಕೂ ತಲೆ ಬಾಗಲಾರೆ ಎಂದು ಹೇಳಿ ಧ್ವಜಾರೋಹಣ ಮಾಡಲು ಸುತಾರಾಂ ಒಪ್ಪದ ಶಿಕ್ಷಕಿಯ ಈ ನಡೆಯ ವಿರುದ್ಧ ಗ್ರಾಮಸ್ಥರು ದೂರು ದಾಖಲಿಸಿದ್ದಾರೆ.


ಇದನ್ನೂ ಓದಿ: Canada: ಕೆನಡಾದಲ್ಲಿ ಉದ್ಯೋಗ, ವಾಸ್ತವ್ಯ ಹೂಡಲು ಬಯಸುವವರಿಗೆ ಶುಭಸುದ್ದಿ!

ಈ ವರ್ಷ ಶಿಕ್ಷಕಿ ನಿವೃತ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಅವರೇ ಧ್ವಜಾರೋಹಣ ಮಾಡುವಂತೆ ಶಾಲಾ ಮಂಡಳಿ ಮನವಿ ಮಾಡಿದ್ದರು. ಆದರೆ ಶಿಕ್ಷಕಿ ಯೇಸುವನ್ನು ಹೊರತುಪಡಿಸಿ ಬೇರೆ ಯಾವುದಕ್ಕೂ ನಮಸ್ಕಾರಗಳನ್ನು ಸಲ್ಲಿಸಲು ಸಾಧ್ಯವಿಲ್ಲ ಮತ್ತು ಧ್ವಜವನ್ನು ವಂದಿಸಲು ಸಾಧ್ಯವಿಲ್ಲ ಎಂದು ಧ್ವಜಾರೋಹಣ ಮಾಡಲು ನಿರಾಕರಿಸಿದ್ದಾರೆ.

Published by:Ashwini Prabhu
First published: