Student Death: ತಮಿಳುನಾಡಲ್ಲಿ ಅನುಮಾನಾಸ್ಪದವಾಗಿ ವಿದ್ಯಾರ್ಥಿನಿ ಸಾವು, ಶಾಲಾ ಬಸ್‍ಗೆ ಬೆಂಕಿ!

ತಮಿಳುನಾಡಿನ ಕಲ್ಲಕುರುಚಿಯ ಕಾಲೇಜಿನಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಪೋಷಕರು, ಸಂಬಂಧಿಕರು, ವಿದ್ಯಾರ್ಥಿಗಳು ಸೇರಿ ಸಾವಿರಾರು ಜನರಿಂದ‘ ಪ್ರತಿಭಟನೆ ನಡೆದಿದೆ. ಶಾಲಾ ಬಸ್‍ಗಳಿಗೆ ಬೆಂಕಿ ಇಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಲೇಜಿನ ವಸ್ತುಗಳೆಲ್ಲಾ ಪುಡಿ ಪುಡಿ ಮಾಡಿದ್ದಾರೆ.

ಶಾಲಾ ಬಸ್‍ಗಳಿಗೆ ಬೆಂಕಿ

ಶಾಲಾ ಬಸ್‍ಗಳಿಗೆ ಬೆಂಕಿ

  • Share this:
    ತಮಿಳುನಾಡಿನಲ್ಲಿ (Tamil Nadu) ಕಲ್ಲಕುರುಚಿ ವಿದ್ಯಾರ್ಥಿನಿಯೊಬ್ಬಳು  ಅನುಮಾನಾಸ್ಪದ ಸಾವನ್ನಪ್ಪಿದ್ದಾಳೆ . ಶಕ್ತಿ ಇಂಟನ್ರ್ಯಾಷನಲ್ ಶಾಲೆಯಲ್ಲಿ 17 ವರ್ಷದ ಶ್ರೀಮತಿ ಎನ್ನೋ ವಿದ್ಯಾರ್ಥಿನಿ ( Student) ಶಕ್ತಿ ಇಂಟನ್ರ್ಯಾಷನಲ್ ಶಾಲೆಯಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಳು. ಶಾಲೆಯ ಹಾಸ್ಟೆಲ್ (Hostel) ನಲ್ಲಿ ಉಳಿದುಕೊಂಡಿದ್ದಳು. ಕಳೆದ ಮೂರು ದಿನಗಳ ಹಿಂದೆ ಹಾಸ್ಟೆಲ್‍ನ ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿತ್ತು. ಆದರೆ ಘಟನಾ ಸ್ಥಳದಲ್ಲಿ ಯಾವುದೇ ರಕ್ತದ ಕಲೆಗಳು ಇರಲಿಲ್ಲ. ಬದಲಿಗೆ ಹಾಸ್ಟೆಲ್ ಶೌಚಾಲಯದ ಗೋಡೆ ಮೇಲೆ ರಕ್ತ ಸಿಕ್ತ ಕಲೆಗಳು ಪತ್ತೆಯಾಗಿದೆ. ನ್ಯಾಯಕ್ಕಾಗಿ ಪೋಷಕರು ಹೋರಾಟ ನಡೆಸುತ್ತಿದ್ದರು. ಇಂದು ಪ್ರತಿಭಟನೆ (Protest) ಹಿಂಸಾಚರಕ್ಕೆ (Violent) ತಿರುಗಿ, ಶಾಲೆಯ 20 ಬಸ್‍ಗಳಿಗೆ ಬೆಂಕಿ (Fire) ಹಚ್ಚಿದ್ದಾರೆ. ಕಾಲೇಜಿನ ಕೆಲ ಕೊಠಡಿಗಳಿಗೂ ಬೆಂಕಿ ಹಚ್ಚಿದ್ದಾರಂತೆ. ಕಾಲೇಜಿನ ಕಿಟಕಿ, ಸಿಕ್ಕ ಸಿಕ್ಕ ವಸ್ತಗಳನ್ನು ಹೊಡೆದು ಹಾಕಿದ್ದಾರೆ.

    ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಶಾಲಾ ಬಸ್‍ಗಳಿಗೆ ಬೆಂಕಿ!
    17 ವರ್ಷದ ಶ್ರೀಮತಿ ಎನ್ನೋ ವಿದ್ಯಾರ್ಥಿನಿ ಶಕ್ತಿ ಇಂಟನ್ರ್ಯಾಷನಲ್ ಸ್ಕೂಲ್‍ನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಳು. ಕಳೆದ ಬುಧವಾರು ಆಕೆ ಹಾಸ್ಟೆಲ್ 3ನೇ ಮಹಡಿಯಿಂದ ಹಾರಿ ಬಿದ್ದು ಸತ್ತಿದ್ದಾಳೆ ಎಂದು ಸುದ್ದಿಯಾಗಿತ್ತು. ಆದ್ರೆ ಆಕೆ ಸಾಯವುದಕ್ಕೂ ಮುಂಚೆಯೇ ತಲೆಗೆ ಬಲವಾದ ಹೊಡೆತ ಬಿದ್ದಿತ್ತು ಎಂದು ಗೊತ್ತಾಗಿದೆ. ಅದರಿಂದ ಪೋಷಕರು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಶಾಲೆಯ 20ಕ್ಕೂ ಹೆಚ್ಚು ಬಸ್‍ಗಳಿಗೆ ಬೆಂಕಿ ಹಚ್ಚಿದ್ದಾರೆ.

    ಸಿಡಿದೆದ್ದ ವಿದ್ಯಾರ್ಥಿಗಳಿಂದ ಕಾಲೇಜಿಗೆ ಬೆಂಕಿ!
    ಇನ್ನು ತಮ್ಮ ಸ್ನೇಹಿತೆಯ ಸಾವಿನಿಂದ ನೊಂದ ವಿದ್ಯಾರ್ಥಿಗಳ ಗುಂಪು ಕಾಲೇಜಿನ ಕೆಲ ಕೊಠಿಡಿಗಳಿಗೆ ಬೆಂಕಿ ಹಚ್ಚಿದ್ದಾರೆ. ಕಾಲೇಜಿನಲ್ಲಿ ಸಿಕ್ಕ ಸಿಕ್ಕ ವಸ್ತುಗಳನ್ನು ಹೊಡೆದು ಹಾಕಿದ್ದಾರೆ. ಬಸ್‍ಗಳ ಗಾಜು ಪುಡಿ ಪುಡಿ ಮಾಡಿ, ಬೆಂಕಿ ಇಟ್ಟಿದ್ದಾರೆ. ಕಾಲೇಜಿನ ಕಿಟಕಿ ಗಾಜುಗಳಿಗೆ ಕಲ್ಲಿನಿಂದ ಹೊಡೆದಿದ್ದಾರೆ, ತಮ್ಮ ಸಹಪಾಠಿಯ ಸಾವು ಸಹಜವಲ್ಲ ಅಸಹಜ, ನ್ಯಾಯ ಕೊಡಿಸಿ ಎಂದು ರೊಚ್ಚಿಗೆದ್ದಿದ್ದಾರೆ.

    ಕಲ್ಲಕುರಿಯಲ್ಲಿ ಆಕ್ರೋಶದ ಜ್ವಾಲೆ!
    ತಮಿಳುನಾಡಿನ ಕಲ್ಲಕುರುಚಿ ಪಟ್ಟಣದಲ್ಲಿ ಆಕ್ರೋಶ ಭುಗಿಲೆದ್ದಿದೆ. ಕಾಲೇಜಿನ ಬಳಿ ಸಾವಿರಾರು ಜನ ಸೇರಿ ಪ್ರತಿಭಟನೆ ನಡೆಸುತ್ತಿದ್ದರು. ಪೊಲೀಸರು ಭದ್ರತೆ ಕೊಟ್ಟಿದ್ದರು, ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆಯಿತು. ವಿದ್ಯಾರ್ಥಿನ ಸಾವಿನ ರಹಸ್ಯ ಬಯಲಾಗಬೇಕು. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸಿಕ್ಕ ಸಿಕ್ಕ ವಸ್ತುಗಳಿಗೆ ಪ್ರತಿಭಟನಾಕಾರರು ಬೆಂಕಿ ಇಟ್ಟಿದ್ದಾರೆ.

    ಇದನ್ನೂ ಓದಿ: Ramanagara: ವಿದ್ಯಾರ್ಥಿ ಮೇಲೆ ಸಬ್ ಇನ್ಸ್‌ಪೆಕ್ಟರ್‌ ಹಲ್ಲೆ; ಠಾಣೆಗೆ ಮುತ್ತಿಗೆಹಾಕಿ‌ ಪ್ರತಿಭಟನೆ, SP ಸ್ಪಷ್ಟನೆ

    ಪರಿಸ್ಥಿತಿ ನಿಯಂತ್ರಿಸಲು ಪೊಲೀಸರ ಹರಸಾಹಸ!
    ಕಲ್ಲಕುರಿಯ ಕಾಲೇಜು ಬಳಿ ಪ್ರತಿಭಟಿಸುತ್ತಿದ್ದ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಪ್ರತಿಭಟನೆ ಹತ್ತಿಕ್ಕಲು ಯತ್ನಿಸಿದ ಪೆÇಲೀಸರ ಮೇಲು ಕಲ್ಲು ತೂರಾಟ ನಡೆಸಲಾಗಿದೆ. ಓರ್ವ ಹಿರಿಯ ಪೊಲೀಸ್ ಅಧಿಕಾರಿ ಸೇರಿ 20ಕ್ಕೂ ಹೆಚ್ಚು ಪೊಲೀಸರಿಗೆ ಗಾಯಗಳಾಗಿವೆ. ಪೊಲೀಸರ ವಾಹನಕ್ಕೂ ಬೆಂಕಿ ಹಚ್ಚಿದ್ದಾರೆ.

    ಅನುಮಾನ ಹುಟ್ಟಿಸಿದ ವಿದ್ಯಾರ್ಥಿನಿ ಸಾವು!
    ವಿದ್ಯಾರ್ಥಿನಿಯು ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಳು ಎಂದು ಹೇಳಲಾಗಿತ್ತು. ಆದ್ರೆ ಸಾವನ್ನಪ್ಪಿದ ಜಾಗದಲ್ಲಿ ಯಾವುದೇ ರಕ್ತದ ಕಲೆಗಳು ಇರಲಿಲ್ಲ. ಬದಲಿಗೆ ಹಾಸ್ಟೆಲ್‍ನ ಶೌಚಾಲಯದ ಗೋಡೆ ಬಳಿ ರಕ್ತದ ಕಲೆಗಳು ಕಾಣಿಸಿವೆ. ಅಲ್ಲದೇ ಮರಣೋತ್ತರ ಪರೀಕ್ಷೆಯಲ್ಲೂ ವಿದ್ಯಾರ್ಥಿನಿ ಸಾಯೋಕು ಮೊದಲೇ ತಲೆಗೆ ಬಲವಾಗಿ ಪೆಟ್ಟು ಬಿದ್ದಿತ್ತು ಎಂದು ತಿಳಿದು ಬಂದಿದೆ. ಹಾಗಾದ್ರೆ ಯಾರಾದ್ರೂ ಮೊದಲೇ ಕೊಂದು, ಆತ್ಮಹತ್ಯೆ ಎಂದು ಬಿಂಬಿಸಿದ್ದಾರಾ ಎಂದು ಪೋಷಕರಿಗೆ ಅನುಮಾನಗಳು ಹೆಚ್ಚಾಗಿವೆ.

    ಇದನ್ನೂ ಓದಿ: Sri Lanka Couple: ದೇಶದಲ್ಲೂ ತುರ್ತು ಪರಿಸ್ಥಿತಿ; ಶ್ರೀಲಂಕಾದ ಈ ಜೋಡಿಗೂ 'ತುರ್ತು ಪರಿಸ್ಥಿತಿ'!

    ಆಕೆಯ ಸಾವಿನಿಂದ ಆಘಾತಕ್ಕೊಳಗಾದ ಆಕೆಯ ಪೋಷಕರು, ಸಂಬಂಧಿಕರು ಮತ್ತು ಕಡಲೂರು ಜಿಲ್ಲೆಯ ವೇಪ್ಪೂರ್‍ನ ಪೆರಿಯನಸಲೂರ್ ಗ್ರಾಮಕ್ಕೆ ಸೇರಿದ ಜನರು ನ್ಯಾಯಕ್ಕಾಗಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಯ ಪೆÇೀಷಕರು ಮತ್ತು ಇತರ ಕುಟುಂಬ ಸದಸ್ಯರು 'ಅಂತರರಾಷ್ಟ್ರೀಯ' ಶಾಲಾ ಅಧಿಕಾರಿಗಳನ್ನು ದೂಷಿಸಿದ್ದಾರೆ. ಮತ್ತು ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
    Published by:Savitha Savitha
    First published: