ಅಕ್ಕಿಯ ಮೇಲಿನ 5 ಶೇಕಡಾ ಸರಕು ಮತ್ತು ಸೇವಾ ತೆರಿಗೆಯನ್ನು (GST) ತಪ್ಪಿಸಲು ತಮಿಳುನಾಡಿನ (Tamil Nadu) ಅಕ್ಕಿ ಮಾರಾಟಗಾರರ ಗುಂಪು ಸರಳ ಪರಿಹಾರವನ್ನು ಕಂಡುಹಿಡಿದಿದೆ! ಹೌದು, ಸಾಮಾನ್ಯವಾಗಿ 25 ಕೆಜಿ ಚೀಲಗಳಲ್ಲಿ ಅಕ್ಕಿಯನ್ನು ಮಾರಾಟ ಮಾಡಲಾಗುತ್ತದೆ. ಆದರೆ ತಮಿಳುನಾಡಿನ ಅಕ್ಕಿ ಮಾರಾಟಗಾರರ ಗುಂಪೊಂದು 25 ಕೆಜಿ ಅಕ್ಕಿ ಬದಲಿಗೆ 26 ಕೆಜಿ ಚೀಲಗಳಲ್ಲಿ ಅಕ್ಕಿ ಮಾರಾಟ ಮಾಡುವ ವಿಧಾನ ಕಂಡುಕೊಂಡಿದೆ. ಈಮೂಕ ಕೇಂದ್ರ ಸರ್ಕಾರದ ಜಿಎಸ್‌ಟಿ ತೆರಿಗೆಯನ್ನು ತಪ್ಪಿಸಿಕೊಳ್ಳುವ (To Avoid GST) ಹೊಸ ದಾರಿಯನ್ನು ತಮಿಳುನಾಡಿನ ಅಕ್ಕಿ ಮಾರಾಟಗಾರರ ಗುಂಪೊಂದು ಕಂಡುಕೊಂಡಿದೆ.
ಕೇಂದ್ರ ಸರ್ಕಾರ ಚಾಪೆ ಕೆಳಗೆ ತೂರಿದರೆ ತಮಿಳುನಾಡಿನ ಈ ಅಕ್ಕಿ ಮಾರಾಟಗಾರರ ಗುಂಪು ರಂಗೋಲಿ ಕೆಳಗೆ ನುಸುಳುವ ಮೂಲಕ ಜಿಎಸ್‌ಟಿ ಉಳಿತಾಯದ ದಾರಿ ಕಂಡುಕೊಂಡಿದೆ.
ಏಕೆ ಹೀಗೆ?
ಸರ್ಕಾರವು 25 ಕೆಜಿಗಿಂತ ಹೆಚ್ಷು ತೂಕದ ಅಕ್ಕಿ ಚೀಲಗಳನ್ನು ಚಿಲ್ಲರೆ ಸಗಟು ಎಂದು ಪರಿಗಣಿಸುತ್ತದೆ. ಹೀಗಾಗಿ ಈ ಅಕ್ಕಿಚೀಲದ ಪ್ರತಿ ಕೆಜಿ ಅಕ್ಕಿಯೂ ಈಗ ಮೊದಲಿಗಿಂತ 2-3 ರೂ ಹೆಚ್ಚು ದುಬಾರಿಯಾಗಿದೆ.
ಒಂದು ಚೀಲ ಇಷ್ಟು ದುಬಾರಿಯಾಗಿತ್ತು
ಈ ಹೊಸ ನೀತಿಯಿಂದಾಗಿ ಅಕ್ಕಿ ಖರೀದಿ ಮಾಡಬೇಕಿರುವ ಗ್ರಾಹಕರು 25 ಕೆಜಿ ಅಕ್ಕಿ ಚೀಲಕ್ಕೆ 50-80 ರೂ. ಗಳಷ್ಟು ಹೆಚ್ಚು ಪಾವತಿಸುವಂತಾಗಿದೆ. ಆದರೆ ವ್ಯಾಪಾರಸ್ಥರು 25 ಕೆಜಿ ಅಕ್ಕಿಯನ್ನು 26 ಕೆಜಿ ಪ್ರಮಾಣದಲ್ಲಿ ಮಾರಾಟ ಮಾಡುವ ಮೂಲಕ ಈ ಶುಲ್ಕದಿಂದ ತಪ್ಪಿಸಿಕೊಳ್ಳುವ ಮಾರ್ಗವನ್ನು ಕಂಡುಕೊಂಡಿದ್ದಾರೆ.
ಇದನ್ನೂ ಓದಿ: Coronavirus: ಪುರಾತನ ಚೀನಾ ಕವಿತೆಯಲ್ಲಿ ಕೊರೊನಾ ಕಡಿಮೆಯಾಗುವ ಸುಳಿವು?
ಬ್ರಾಂಡ್ ಮಾಡದ ಸರಕುಗಳಿಗೆ ಮುಂಚಿತ ಪ್ಯಾಕೇಜ್, ಲೇಬಲ್ ಆಗಿದ್ದರೆ ಮತ್ತು 25 ಕೆಜಿಯೊಳಗಿನ ಎಲ್ಲಾ ಅಕ್ಕಿ ಚೀಲಗಳ ಮೇಲೆ 5% ಜಿಎಸ್‌ಟಿ ಹೆಚ್ಚಳವಾಗಿದೆ. ಇದರಿಂದ ಸಾಮಾನ್ಯ 25 ಕೆಜಿ ಅಕ್ಕಿ ಚೀಲ ಕೊಂಚ ದುಬಾರಿಯಾಗಿದೆ. ಆದರೆ, ಈಗ ಅಕ್ಕಿಯನ್ನು 26 ಕೆಜಿ ಚೀಲಗಳಲ್ಲಿ ಪ್ಯಾಕ್ ಮಾಡಲಾಗಿದ್ದು, ಅಕ್ಕಿ ಸಗಟು ವಿಭಾಗಕ್ಕೆ ಸೇರುತ್ತದೆ.
ಇದನ್ನೂ ಓದಿ: Shocking News: ಅಮ್ಮನನ್ನು ರೇಪ್ ಮಾಡಿದ್ದ ಅಪ್ಪನನ್ನು ಹಿಡಿದುಕೊಟ್ಟ ಮಗ; ಶಾಕಿಂಗ್ ಸುದ್ದಿ ಬಹಿರಂಗ
ಜಿಎಸ್‌ಟಿ ಹಿಂಪಡೆಯಲು ಆಗ್ರಹ
ಇದು ಗ್ರಾಹಕರ ಮೇಲಿನ ಹೆಚ್ಚಿನ ಹಣದ ಹೊರೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಆದರೆ, ಒಂದೇ ಬಾರಿಗೆ ಇಷ್ಟು ದೊಡ್ಡ ಪ್ರಮಾಣದ ಅಕ್ಕಿಯನ್ನು ಖರೀದಿಸಲು ಸಾಧ್ಯವಾಗದ ಗ್ರಾಹಕರಿಗೆ ಇದು ಸಹಾಯ ಮಾಡುವುದಿಲ್ಲ. ಈ ಕಾರಣಕ್ಕಾಗಿ, ವರ್ತಕರು ಜಿಎಸ್‌ಟಿ ದರಗಳ ಹೆಚ್ಚಳವನ್ನು ಹಿಂಪಡೆಯಲು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಶೇಕಡಾ 5ರಷ್ಟು ತೆರಿಗೆ
ಪ್ಯಾಕ್ ಮಾಡಿದ ಲೇಬಲ್ ಮಾಡಿದ ಮೊಸರು, ಲಸ್ಸಿ ಮತ್ತು ಮಜ್ಜಿಗೆ ಸೇರಿದಂತೆ ಹಲವಾರು ಉತ್ಪನ್ನಗಳಿಗೆ ತೆರಿಗೆ ವಿನಾಯಿತಿಯನ್ನು ಕೊನೆಗೊಳಿಸುವ ಕುರಿತ ಜಿಎಸ್‌ಟಿ ಕೌನ್ಸಿಲ್‌ನ ನಿರ್ಧಾರದ ಬಗ್ಗೆ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ ಗುರುವಾರವಷ್ಟೇ ಅಧಿಸೂಚನೆ ಹೊರಡಿಸಿತ್ತು. ಇಂತಹ ವಸ್ತುಗಳ ಮೇಲೆ ಜುಲೈ 18 ರಿಂದ ಶೇ. 5ರಷ್ಟು ಸರಕು ಮತ್ತು ಸೇವಾ ತೆರಿಗೆ ಅನ್ವಯವಾಗಿದೆ.
ಜಿಎಸ್‌ಟಿ ಎಂದರೇನು?
ಸಾಮಾನ್ಯವಾಗಿ ಜಿಎಸ್‌ಟಿ ಅಥವಾ ಸರಕು ಮತ್ತು ಸೇವಾ ತೆರಿಗೆ, ಸರಕು ಮತ್ತು ಸೇವೆಗಳ ಪೂರೈಕೆಯ ಮೇಲೆ ವಿಧಿಸಲಾದ ಪರೋಕ್ಷ ತೆರಿಗೆಯಾಗಿದೆ. ಇದು ಬಹು-ಹಂತದ, ಗಮ್ಯಸ್ಥಾನ-ಆಧಾರಿತ ತೆರಿಗೆಯಾಗಿದ್ದು, ಪ್ರತಿ ಮೌಲ್ಯ ಸೇರ್ಪಡೆಯ ಮೇಲೆ ವಿಧಿಸಲಾಗುತ್ತದೆ, ವ್ಯಾಟ್, ಅಬಕಾರಿ ಸುಂಕ, ಸೇವಾ ತೆರಿಗೆಗಳು ಇತ್ಯಾದಿ ಸೇರಿದಂತೆ ಬಹು ಪರೋಕ್ಷ ತೆರಿಗೆಗಳನ್ನು ಬದಲಾಯಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ