ತಮಿಳುನಾಡಿ (Tamil Nadu)ನಲ್ಲಿ ಮಳೆಯ (Rainfall) ಆರ್ಭಟ ಹೆಚ್ಚಾಗಿದ್ದು, ಜನರ ಸ್ಥಿತಿ ಶೋಚನೀಯವಾಗಿದೆ. ವರುಣನ ಆರ್ಭಟಕ್ಕೆ ಸುಮಾರು ರಾಜ್ಯಾದ್ಯಂತ 100ಕ್ಕೂ ಹೆಚ್ಚು ರಸ್ತೆಗಳು ಜಲಾವೃತಗೊಂಡಿವೆ. ಮಳೆಯ ಅವಾಂತರದಿಂದಾಗಿ ಒಂದೇ ದಿನ ಮೂರು ಮಂದಿ ಸಾವನ್ನಪ್ಪಿ (Death)ದ್ದಾರೆ. ಭಾರೀ ಮಳೆಯ ಕಾರಣ ತಮಿಳುನಾಡಿನ 4 ಜಿಲ್ಲೆಗಳಾದ ಚೆನ್ನೈ (Chennai), ಕಾಂಚಿಪುರಂ, ತಿರುವಳ್ಳೂರ್ ಮತ್ತು ಚಿಂಗ್ಲೆಪೇಟ್ನಲ್ಲಿ ರೆಡ್ ಅಲರ್ಟ್ (Red Alert) ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮಾಹಿತಿ ನೀಡಿದೆ.
106 ರಸ್ತೆಗಳು ಜಲಾವೃತ
ರಾಜ್ಯ ಕಂದಾಯ & ವಿಪತ್ತು ನಿರ್ವಹಣಾ ಸಚಿವ ಕೆಕೆಎಸ್ಎಸ್ಆರ್ ರಾಮಚಂದ್ರನ್ ಮಾತನಾಡಿ, ಚೆನ್ನೈ, ಕಾಂಚಿಪುರಂ, ತಿರುವಳ್ಳೂರ್ ಮತ್ತು ಚಿಂಗಲ್ಪೇಟ್ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ತಮಿಳುನಾಡಿನಲ್ಲಿ ಭಾರೀ ಮಳೆಯ ಕಾರಣದಿಂದಾಗಿ 106 ರಸ್ತೆಗಳು ಜಲಾವೃತಗೊಂಡಿವೆ. ಮಳೆಯ ಆರ್ಭಟ ಕಡಿಮೆಯಾದ ಬಳಿಕ ಜಲಾವೃತಗೊಂಡಿರುವ ರಸ್ತೆಗಳು ಕ್ಲಿಯರ್ ಆಗಲಿವೆ ಎಂದರು.
ಇದನ್ನೂ ಓದಿ: Karnataka Weather Report: ತಗ್ಗಿದ ಚಳಿ ಪ್ರಮಾಣ, ಕೋಲಾರ ಜಿಲ್ಲೆಯಲ್ಲಿ ಮಳೆ ಸಾಧ್ಯತೆ
ಇನ್ನೂ ಒಂದು ವಾರ ಮಳೆ ಸಾಧ್ಯತೆ
ತಮಿಳುನಾಡಿನಲ್ಲಿ ಇನ್ನೂ ಒಂದು ವಾರ ಧಾರಾಕಾರ ಮಳೆಯಾಗುವ ನಿರೀಕ್ಷೆ ಇದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಗುರುವಾರ ರಾತ್ರಿ ಗ್ರೇಟರ್ ಚೆನ್ನೈ ಕಾರ್ಪೊರೇಷನ್ನ ಪ್ರವಾಹ ನಿಯಂತ್ರಣ ಕೊಠಡಿಗೆ ಭೇಟಿ ನೀಡಿ ನಗರದ ವಿವಿಧ ಭಾಗಗಳಲ್ಲಿ ಮಳೆ, ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನು ಪರಿಶೀಲಿಸಿದ್ದಾರೆ.
3 ಮಂದಿ ಸಾವು
ಚೆನ್ನೈನಲ್ಲಿ ತೀವ್ರ ಮಳೆಯ ನಂತರ ಇಬ್ಬರು ಮಹಿಳೆಯರು ಮತ್ತು ಒಬ್ಬ ಹುಡುಗ ಸೇರಿದಂತೆ ಮೂವರು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ. ಇತ್ತೀಚಿನ ವರ್ಷಗಳಲ್ಲಿನ ಅತೀ ಭೀಕರ ಮಳೆಗೆ ಇದು ಸಾಕ್ಷಿಯಾಗಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಚೆನ್ನೈ, ಕಾಂಚೀಪುರಂ, ತಿರುವಳ್ಳೂರು ಮತ್ತು ಚಿಂಗ್ಲೆಪೇಟ್ ಸೇರಿದಂತೆ ತಮಿಳುನಾಡಿನ ನಾಲ್ಕು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಇಂದು ವಿದ್ಯುತ್ ಸ್ಪರ್ಶದಿಂದ ಮೂವರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಕೆಕೆಎಸ್ಎಸ್ಆರ್ ರಾಮಚಂದ್ರನ್ ಹೇಳಿದ್ದಾರೆ.
ಜಲಾವೃತಗೊಂಡ ರಸ್ತೆಗಳು, ಟ್ರಾಫಿಕ್ ಜಾಮ್
ರಸ್ತೆಗಳು ಮತ್ತು ಸುರಂಗಮಾರ್ಗಗಳು ಜಲಾವೃತಗೊಂಡು ನಗರ ಮತ್ತು ಉಪನಗರಗಳಲ್ಲಿ ಸಂಚಾರ ದಟ್ಟಣೆಗೆ ಕಾರಣವಾದ ವಾಹನ ಸವಾರರು ತಮ್ಮ ವಾಹನಗಳನ್ನು ಚಲಾಯಿಸಲು ಹರಸಾಹಸ ಪಡಬೇಕಾಯಿತು. ಪ್ರಯಾಣಿಕರು ಸುರಕ್ಷಿತವಾಗಿ ತಮ್ಮ ಗಮ್ಯಸ್ಥಾನಗಳನ್ನು ತಲುಪಲು ಸಹಾಯ ಮಾಡಲು ಮೆಟ್ರೋ ಅಧಿಕಾರಿಗಳು ರೈಲು ಸೇವೆಗಳನ್ನು 12 ಗಂಟೆಯವರೆಗೆ ವಿಸ್ತರಿಸಿದರು.
ಎಲ್ಲೆಲ್ಲಿ ಎಷ್ಟು ಮಳೆ?
ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಚೆನ್ನೈನ ಎಂಆರ್ಸಿ ನಗರದಲ್ಲಿ 17.65 ಸೆಂ.ಮೀ ಮಳೆ ದಾಖಲಾಗಿದೆ. ನುಂಗಂಬಾಕ್ಕಂ ಮತ್ತು ಮೀನಂಬಾಕ್ಕಂನಲ್ಲಿ ಕ್ರಮವಾಗಿ 14.65 ಸೆಂ.ಮೀ ಮತ್ತು 10 ಸೆಂ.ಮೀ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ನೆರೆಯ ತಿರುವಳ್ಳೂರು ಮತ್ತು ಕಾಂಚಿಪುರಂ ಜಿಲ್ಲೆಗಳು ಸೇರಿದಂತೆ ಇತರ ಪ್ರದೇಶಗಳಲ್ಲಿ, 1 ಸೆಂ.ಮೀ (ಮಾಧವರಂ) ನಿಂದ 10 ಸೆಂ.ಮೀ (ನಂದನಂ) ವರೆಗೆ ಮಳೆಯಾಗಿದೆ. ಗುರುವಾರ ಬೆಳಗ್ಗೆ 8.30ರಿಂದ ಸಂಜೆ 6.15ರವರೆಗೆ ಮಳೆಯ ಮಾಹಿತಿ ದಾಖಲಾಗಿದೆ.
ಇದನ್ನೂ ಓದಿ: Morning Digest: ಬೆಂಗಳೂರಿನಲ್ಲಿ ಪವರ್ ಕಟ್, ಕಡಿಮೆಯಾದ ಚಿನ್ನದ ಬೆಲೆ, ಕೋಲಾರದಲ್ಲಿ ಮಳೆ; ಬೆಳಗಿನ ಟಾಪ್ ನ್ಯೂಸ್ಗಳು
ಈ ಭಾಗಗಳಲ್ಲಿ ಮಳೆ ಸಾಧ್ಯತೆ
ಹವಾಮಾನ ಇಲಾಖೆಯ ಪ್ರಕಾರ, ಮುಂದಿನ ಮೂರು ದಿನ ಉತ್ತರ ಕರಾವಳಿ ತಮಿಳುನಾಡು ಮತ್ತು ದಕ್ಷಿಣ ಕರಾವಳಿ ಆಂಧ್ರಪ್ರದೇಶದ ಪಕ್ಕದ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ನಂತರ ಕಡಿಮೆಯಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ