Video: ತಗಳ್ಳಪ್ಪಾ.. ರೌಡಿನ ಹುಡ್ಕೋಕೂ ಡ್ರೋಣ್ ಬೇಕಾಯ್ತು! ಪೊಲೀಸರಿಂದ ತಪ್ಪಿಸಿಕೊಂಡ ಈತ ಎಲ್ಲಿ ಅಡಗಿದ್ದ ಗೊತ್ತಾ?

ಡ್ರೋಣ್ ಅನ್ನು ಪೊಲೀಸ್ ಇಲಾಖೆ ಕೂಡ ಬಳಸಿಕೊಂಡಿದೆ. ಅದೂ ರೌಡಿ ಶೀಟರ್ ಹಿಡಿಯೋದಕ್ಕೆ ಪೊಲೀಸರು ಡ್ರೋಣ್ ಬಳಸಿಕೊಂಡಿದ್ದಾರೆ. ಪೊಲೀಸರು ಡ್ರೋಣ್ ಬಳಸಿ ರೌಡಿ ಶೀಟರ್‌ನನ್ನು ಹಿಡಿದಿದ್ದಾರೆ. ಇದೀಗ ಈ ಕಾರ್ಯಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಡ್ರೋಣ್‌ನಲ್ಲಿ ಸೆರೆಯಾದ ಆರೋಪಿ ಚಿತ್ರ

ಡ್ರೋಣ್‌ನಲ್ಲಿ ಸೆರೆಯಾದ ಆರೋಪಿ ಚಿತ್ರ

  • Share this:
ತಮಿಳುನಾಡು: ‘ಡ್ರೋಣ್’ (Drone) ಎಂದ ಕೂಡಲೇ ನೆನಪಿಗೆ ಬರುವುದು ಡ್ರೋಣ್ ಪ್ರತಾಪ್ (Drone Pratap). ಡ್ರೋಣ್ ವಿಚಾರದಲ್ಲಿ ಕಾಗೆ ಹಾರಿಸಿ, ಎಲ್ಲರನ್ನೂ ಈತ ಯಾಮಾರಿಸಿದ್ದ. ಇನ್ನು ಡ್ರೋಣ್ ಹಲವು ಕೆಲಸಗಳಿಗೆ ಬಳಕೆ (Use) ಆಗ್ತಿರೋದು ನಿಮ್ಮೆಲ್ಲರಿಗೂ ಗೊತ್ತೇ ಇದೆ. ಇದೀಗ ಈ ಡ್ರೋಣ್ ಅನ್ನು ಪೊಲೀಸ್ ಇಲಾಖೆ (Police Department) ಕೂಡ ಬಳಸಿಕೊಂಡಿದೆ. ಅದೂ ರೌಡಿ ಶೀಟರ್ (Rowdy Sheeter) ಹಿಡಿಯೋದಕ್ಕೆ ಪೊಲೀಸರು ಡ್ರೋಣ್ ಬಳಸಿಕೊಂಡಿದ್ದಾರೆ. ತಮಿಳುನಾಡು (Tamil Nadu) ರಾಜ್ಯದ ಚೆನ್ನೈ (Chennai) ಪೊಲೀಸರು ಡ್ರೋಣ್ ಬಳಸಿ ರೌಡಿ ಶೀಟರ್‌ನನ್ನು ಹಿಡಿದಿದ್ದಾರೆ. ಇದೀಗ ಈ ಕಾರ್ಯಾಚರಣೆಯ (Operation) ವಿಡಿಯೋ (Video) ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಾಕಷ್ಟು ವೈರಲ್ (Viral) ಆಗಿದೆ.

 ಡ್ರೋಣ್ ಬಳಸಿ ರೌಡಿ ಶೀಟರ್ ಅರೆಸ್ಟ್

ಆಧುನಿಕ ತಂತ್ರಜ್ಞಾನವು ಅಪರಾಧ ನಿಗ್ರಹಕ್ಕೆ ಹೆಚ್ಚು ಅನುಕೂಲಕಾರಿ ಎಂಬುದನ್ನು ತಮಿಳುನಾಡಿನ ಪೊಲೀಸ್ ಇಲಾಖೆ ಸಾಬೀತು ಮಾಡಿದೆ. ಚೆನ್ನೈನ ಪೊಲೀಸರು ಡ್ರೋನ್‌ ಬಳಸಿ ರೌಡಿ ಶೀಟರ್ ಒಬ್ಬನನ್ನು ಒಬ್ಬನನ್ನು ಹಿಡಿದಿದ್ದಾರೆ. ಈ ಕಾರ್ಯಾಚರಣೆಯು ರೆಕಾರ್ಡ್ ಆಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಎಸ್ಕೇಪ್ ಆಗಿದ್ದ ರೌಡಿ ಶೀಟರ್ ಯಾರು?

ರೌಡಿ ಶೀಟರ್‌ ಶಾಹುಲ್ ಹಮೀದ್ ಎಂಬಾತನನ್ನು ಪತ್ತೆ ಹಚ್ಚಿ, ಅರೆಸ್ಟ್ ಮಾಡಲು ಪೊಲೀಸರು ಡ್ರೋಣ್ ಬಳಸಿದ್ದಾರೆ. ಈತ ತಮಿಳುನಾಡಿನ ತೆಂಕಶಿ ಜಿಲ್ಲೆಯವನಾಗಿದ್ದು, ಈತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಹಲವಾರು ಅಪರಾಧ ಪ್ರಕರಣಗಳು ಬಾಕಿ ಇವೆ. ಕೊಲೆ ಯತ್ನ ಪ್ರಕರಣ ಒಂದರಲ್ಲಿ  ಈತನಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದರು.

ಇದನ್ನೂ ಓದಿ: Acid Attack: ಅಪ್ರಾಪ್ತ ಪತ್ನಿ ಪರೀಕ್ಷೆ ಬರೆದಿದ್ದಕ್ಕೆ ಗಂಡನಿಂದ ಆ್ಯಸಿಡ್ ದಾಳಿ! ಇಲ್ಲಿದೆ ಓದಿ 'ಪುಟ್ಟಗೌರಿ' ವ್ಯಥೆ!

ಕೆರೆಯಲ್ಲಿ ಅಡಗಿ ಕುಳಿತಿದ್ದ ರೌಡಿ ಶೀಟರ್ ಶಾಹುಲ್ ಹಮೀದ್

ರೌಡಿ ಶೀಟರ್ ಶಾಹುಲ್ ಹಮೀದ್ ಸಾರ್ವಜನಿಕರ ಮೇಲೆ ಹಲ್ಲೆನಡೆಸಿ ಅರೆಸ್ಟ್ ಆಗಿದ್ದ. ಪಾಚನಾಯಕನಪೊಟ್ಟೈ ಪ್ರದೇಶಕ್ಕೆ ತೆರಳಿ ಸಾರ್ವಜನಿಕರಿಗೆ ಯಾರೂ ತನ್ನ ಜಾಗಕ್ಕೆ ಬರಬೇಡಿ ಎಂದು ಬೆದರಿಕೆ ಹಾಕಿದ್ದ.

ಸ್ಥಳೀಯರ ಮೇಲೆ ಬಾಟಲಿಯಿಂದ ಹಲ್ಲೆ ನಡೆಸಿ ಎಸ್ಕೇಪ್

ಇಲ್ಲಿನ ನಿವಾಸಿ ಬೀರ್ ಮೊಹಮ್ಮದ್ ಎಂಬಾತ ಬಿಯರ್ ಹಿಡಿದು ಬಂದಿದ್ದಾಗ ಶಾಹುಲ್ ಆತನ ಮೇಲೆ  ಹಲ್ಲೆ ನಡೆಸಿದ್ದಾನೆ. ಬೀರ್ ಮೊಹಮ್ಮದ್ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೆರೆಯಲ್ಲಿ ಅಡಗಿ ಕುಳಿತು ಮಹಿಳೆಯರಿಗೆ ತೊಂದರೆ ಕೊಡುತ್ತಿದ್ದ

ಕೊಳದ ಬಳಿ ಯಾರೋ ಬೆದರಿಕೆ ಹಾಕುತ್ತಿದ್ದಾರೆ ಎಂದು ಆ ಪ್ರದೇಶದ ಕೆಲವು ಮಹಿಳೆಯರು ಪೊಲೀಸರಿಗೆ ತಿಳಿಸಿದ್ದಾರೆ. ಈ ವೇಳೆ ಪೊಲೀಸರು ಕೆರೆ ಬಳಿ ಬಂದು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಶಾಹುಲ್‌ ಹಮೀದ್‌ ಕೆರೆಯಲ್ಲಿ ಅವಿತುಕೊಂಡಿರುವುದನ್ನು ಪತ್ತೆ ಮಾಡಿದ್ದಾರೆ.


ಡ್ರೋಣ್‌ನಲ್ಲಿ ಪತ್ತೆಯಾದ ರೌಡಿ ಶೀಟರ್

ತೆಂಕಶಿ ಜಿಲ್ಲಾ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಲು ಡ್ರೋನ್‌ ಬಳಸಿದ್ದಾರೆ. ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಅವರ ಅನುಮತಿ ಪಡೆದ ಪೊಲೀಸರು, ಕಾರ್ಚಾಚರಣೆಗೆ ಇಳಿದಿದ್ದಾರೆ. ಇದಕ್ಕಾಗಿ ಡ್ರೋಣ್ ಬಳಕೆ ಮಾಡಲು ಪೊಲೀಸರು ನಿರ್ಧರಿಸಿದ್ದಾರೆ.

ಇದನ್ನೂ ಓದಿ: Psycho Killer: ರಸ್ತೆ ಬದಿ ಮಲಗಿದ್ದೋರೇ ಇವನ ಟಾರ್ಗೆಟ್! ಸೈಕೋ ಕಿಲ್ಲರ್ ಹಿಡಿಯಲು ಭಿಕ್ಷುಕರ ವೇಷ ಹಾಕಿದ ಪೊಲೀಸರು!

ಕೆರೆಯಲ್ಲಿ ಈಜಿ ಎಸ್ಪೇಕ್ ಆಗಲು ಯತ್ನಿಸಿದ ರೌಡಿ ಶೀಟರ್

ಕೆರೆಯ ಬಳಿ ಹೋದ ಡ್ರೋನ್‌, ಆರೋಪಿಯನ್ನು ಪತ್ತೆಹಚ್ಚಿದ್ದು, ಆತ ಅಡಗಿ ಕೂತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೂಡಲೇ ಪೊಲೀಸರು ಸ್ಥಳಕ್ಕೆ ತೆರಳಿ ಬಂಧಿಸುವ ಯತ್ನ ಮಾಡಿದ್ದಾರೆ. ಆದರೆ ಚಾಲಾಕಿ ರೌಡಿ ಶೀಟರ್, ಕೆರೆಯಲ್ಲಿ ಈಜಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಆಗ ನಾಲ್ಕೂ ಕಡೆಯಿಂದ ಸುತ್ತುವರಿದ ಪೊಲೀಸರು ಆತನನ್ನು ಬಂಧಿಸಲುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಪೊಲೀಸರ ಚಾಣಾಕ್ಷತನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
Published by:Annappa Achari
First published: