farm laws: ಮೂರು ಕೃಷಿ ಕಾನೂನುಗಳ ವಿರುದ್ದ ನಿರ್ಣಯ ಮಂಡಿಸಿದ ತಮಿಳುನಾಡು ಸರ್ಕಾರ

ಕಳೆದ ವರ್ಷ ಆಗಸ್ಟ್ 9 ರಿಂದ ರೈತರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಸುದೀರ್ಘ ಶಾಂತಿಯುತ ಪ್ರತಿಭಟನೆಗೆ ಗೌರವಾರ್ಥವಾಗಿ, ನಮ್ಮ ತಮಿಳುನಾಡು ಸರ್ಕಾರವು ಈ ನಿರ್ಣಯವನ್ನು ಮುಂದಿಡುತ್ತದೆ "ಎಂದು ಮುಖ್ಯಮಂತ್ರಿ MK Stalin ಹೇಳಿದರು.

ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್​

ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್​

 • Share this:
  Tamil Nadu : ತಮಿಳುನಾಡು ವಿಧಾನಸಭೆಯು ಶನಿವಾರದ ನಿರ್ಣಯವನ್ನು ಅಂಗೀಕರಿಸಿತು, ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಕೇಂದ್ರ ಸರ್ಕಾರ ತರಲು ಹೊರಟಿರುವ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿದರು, ಇದು ರೈತರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಇದನ್ನು ವಿರೋಧಿಸಿ ವಿರೋಧ ಪಕ್ಷಗಳಾದ ಎಐಎಡಿಎಂಕೆ ಮತ್ತು ಬಿಜೆಪಿ ವಿಧಾನಸಭೆಯಿಂದ ಹೊರ ನಡೆದವು.

  ಪಶ್ಚಿಮ ಬಂಗಾಳ, ರಾಜಸ್ಥಾನ, ಪಂಜಾಬ್, ಛತ್ತೀಸ್‌ಗಡ, ಕೇರಳ ಮತ್ತು ದೆಹಲಿಯ ನಂತರ ಕೃಷಿ ಕಾನೂನುಗಳಿಗೆ ( farm laws) ವಿರೋಧ ವ್ಯಕ್ತಪಡಿಸಿತು. ಮೂರು ಕೃಷಿ ಕಾನೂನುಗಳ ವಿರುದ್ದ ಹಾಗೂ ಅವುಗಳನ್ನು ಜಾರಿಗೆ ತರದಂತೆ ನಿರ್ಣಯವನ್ನು ಅಂಗೀಕರಿಸಿದ ರಾಜ್ಯಗಳಲ್ಲಿ ತಮಿಳುನಾಡು ಏಳನೇ ರಾಜ್ಯವಾಗಿದೆ.

  "ರೈತರ ಜೀವನೋಪಾಯವನ್ನು ಹೆಚ್ಚಿಸಲು ಈ ನೂತನ ಕೃಷಿ ಕಾನೂನುಗಳನ್ನು ರಚಿಸಲಾಗಿದೆ ಎಂದು ಸರ್ಕಾರವು ಹೇಳುತ್ತಿದೆ, ಆದರೆ ಈ ಕಾನೂನುಗಳು ರೈತರ ವಿರುದ್ಧವಾಗಿ ಕೆಲಸ ಮಾಡುತ್ತಿವೆ. ಕೇಂದ್ರ ಬಿಜೆಪಿ ಸರ್ಕಾರ ರೈತರನ್ನು ನಾಶಮಾಡಲು ಕೆಲಸ ಮಾಡುತ್ತಿದೆ ಹೊರತು, ಬದುಕಿಸಲು ಅಲ್ಲ .  ಒಕ್ಕೂಟ ಸರ್ಕಾರವು ಕಾನೂನನ್ನು ತಂದ ರೀತಿಯೂ ಸಹ ಪ್ರಜಾಪ್ರಭುತ್ವದ ಹಾಗೂ ಒಕ್ಕೂಟ ವ್ಯವಸ್ಥೆಯ ಮನೋಭಾವಕ್ಕೆ ವಿರುದ್ಧವಾಗಿದೆ’’, ಎಂದು ಮುಖ್ಯಮಂತ್ರಿ ಸ್ಟಾಲಿನ್ ಅಸೆಂಬ್ಲಿಯಲ್ಲಿ ಮೂರು ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ನಿರ್ಣಯವನ್ನು ಮಂಡನೆ ಮಾಡುವ ವೇಳೆ ಮಾಡಿದ ಭಾಷಣದಲ್ಲಿ ಹೇಳಿದರು.

  ಕಳೆದ ವರ್ಷ ಆಗಸ್ಟ್ 9 ರಿಂದ ರೈತರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಸುದೀರ್ಘ ಶಾಂತಿಯುತ ಪ್ರತಿಭಟನೆಗೆ ಗೌರವಾರ್ಥವಾಗಿ, ನಮ್ಮ ತಮಿಳುನಾಡು ಸರ್ಕಾರವು ಈ ನಿರ್ಣಯವನ್ನು ಮುಂದಿಡುತ್ತದೆ "ಎಂದು ಮುಖ್ಯಮಂತ್ರಿ MK Stalin ಹೇಳಿದರು.

  ಕೇಂದ್ರ ಬಿಜೆಪಿ ಸರ್ಕಾರ ಜಾರಿಗೆ ತರಲು ಹೊರಟಿರುವ ಮೂರು ಕಾನೂನುಗಳಾದ - ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಬಡ್ತಿ ಮತ್ತು ಸೌಲಭ್ಯ) ಕಾಯಿದೆ, ರೈತರ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಒಪ್ಪಂದ, ಮತ್ತು ಅಗತ್ಯ ವಸ್ತುಗಳ (ತಿದ್ದುಪಡಿ) ಕಾಯಿದೆ. ಹೊಸದಾಗಿ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು November 26 ರಿಂದ ರಾಷ್ಟ್ರ ರಾಜಧಾನಿಯ ವಿವಿಧ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

  ಇತ್ತೀಚಿಗೆ ನಡೆದ ರಾಜ್ಯ ಚುನಾವಣೆಗಳಿಗೆ ಮುನ್ನ ಪ್ರಸ್ತುತ ವಿರೋಧ ಪಕ್ಷವಾಗಿರುವ ಎಐಎಡಿಎಂಕೆ ಪಕ್ಷವು ಕೃಷಿ ಕಾನೂನುಗಳು ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಸೇರಿದಂತೆ ಹಲವು ವಿಷಯಗಳನ್ನು ಬೆಂಬಲಿಸಿ ಬಿಜೆಪಿಗೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿತ್ತು. ಆದರೆ ಈಗ ಚುನಾವಣೆ ಸೋತ ನಂತರವೂ ಸಹ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳದ AIADMK ನಿರ್ಣಯದ ವಿರುದ್ದ ಮಾತನಾಡಿ ಸಭೆಯಿಂದ ಹೊರ ನಡೆದಿದೆ.


   ರಾಜ್ಯ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಂತರ, ಡಿಎಂಕೆ ತನ್ನ ಇತ್ತೀಚಿನ ಕೃಷಿ ಕಾನೂನುಗಳನ್ನು ವಿರೋಧಿಸಿ, ಬಿಜೆಪಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದೆ. ಕೇಂದ್ರದ ವಿರುದ್ಧ "ಎಲ್ಲರೂ ಒಟ್ಟಾಗಿ ವಿರೋಧ" ವ್ಯಕ್ತಪಡಿಸುವ ಅಭಿಯಾನಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ರಾಷ್ಟ್ರವ್ಯಾಪಿ ವಿರೋಧ ಪಕ್ಷಗಳನ್ನು ಕರೆದು ನಡೆಸಿದ ಸಭೆಗೆ ಡಿಎಂಕೆ ಪಕ್ಱವು ಬೆಂಬಲ ನೀಡಿತ್ತು.

  ಇದನ್ನೂ ಓದಿ: Mysuru Gang Rape Case: ಮುಂದಿನ ತನಿಖೆ ಹೇಗೆ ನಡೆಯಲಿದೆ ಇಲ್ಲಿದೆ ಮಾಹಿತಿ...

  ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಪ್ರಾದೇಶಿಕ ಪಕ್ಷಗಳ ಶಕ್ತಿಗಳ ನಡುವೆ ತನ್ನದೇ ಆದ ಮಹತ್ವದ ಪಾತ್ರ ವಹಿಸುತ್ತದೆ ಎಂದು ರಾಜಕೀಯ ಲೆಕ್ಕಾಚಾರದ ಪಂಡಿತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: