ಒಂದು ಕೆಜಿ ಚಹಾ ಪುಡಿಗೆ 350 ರಿಂದ 400 ರೂ ಇರುತ್ತದೆ. ಕೊಳ್ಳುವವರು ಹಾಗೂ ಮಾರುವವರು ನಿಗದಿತ ದರಕ್ಕಿಂತ 500 ಅಥವಾ 1000 ರೂ ಕೊಡುತ್ತಾರೆ. ಆದರೆ ಇಲ್ಲೊಂದು ಚಹಾದ ಪುಡಿ 16,400ರೂಗೆ ಹರಾಜಾಗಿದೆ. ನಂಬಲು ಅಸಾಧ್ಯವಾದರೂ ನಂಬಲೇಬೇಕು. ನೀಲಗಿರಿ ಜಿಲ್ಲೆಯ ಕೂನೂರಿನ ಖಾಸಗಿ ಕಾರ್ಖಾನೆಯ ಒಂದು ಕಿಲೋಗ್ರಾಂ ಬಿಳಿ ಚಹಾ ಪುಡಿ (ಬೆಳ್ಳಿ ಸೂಜಿ) ದಾಖಲೆಯ ಬೆಲೆ 16,400 ರೂ.ಗೆ ಅಂತಾರಾಷ್ಟ್ರೀಯ ಚಹಾ ಹರಾಜಿನಲ್ಲಿ ಬಿಕರಿಯಾಗಿದೆ.
ವಿವಿಧ ಪ್ರದೇಶದ ಕಾರ್ಖಾನೆಗಳಲ್ಲಿ ತಯಾರಿಸಿದ ವಿಶೇಷ ಚಹಾ ಪುಡಿಗಳು ಅಂತರಾಷ್ಟ್ರೀಯ ಚಹಾ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದವು. ಪ್ರಸ್ತುತ ಹರಾಜನ್ನು ಚಹಾ ಮಂಡಳಿಯ ಅಂತರರಾಷ್ಟ್ರೀಯ ಚಹಾ ದಿನಾಚರಣೆಯ (ಐಟಿಡಿ) ಆಚರಣೆಯ ಅಂಗವಾಗಿ ಕೂನೂರು ಟೀ ಟ್ರೇಡ್ ಅಸೋಸಿಯೇಶನ್‍ನಿಂದ (ಸಿಟಿಟಿಎ) ಆನ್‍ಲೈನ್‍ನಲ್ಲಿ ಹರಾಜನ್ನು ನಡೆಸಿತ್ತು. ಅವುಗಳಲ್ಲಿ ಕೂನೂರು ಬಿಲ್ಲಿಮಲೈ ಟೀ ಎಸ್ಟೇಟ್‍ನ ಕಡೆಯಿಂ ಸಿಲ್ವರ್ ಸೂಜಿ ಎಂಬ ಬಿಳಿ ಚಹಾವನ್ನು ಹರಾಜು ಮಾಡಲಾಯಿತು. ಈ ವಿಶೇಷ ಚಹಾ ಪುಡಿಯನ್ನು ಗರಿಷ್ಠ 16,400 ರೂ.ಗೆ ಹರಾಜು ಮಾಡಲಾಗಿದ್ದು, ಇದು ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಬೆಲೆಯೆಂದು ದಾಖಲಿಸಿದೆ.
ಈ ಚಹಾದ ಎಲೆಗಳನ್ನು ಸೂರ್ಯೋದಯಕ್ಕೆ ಮುಂಚಿತವಾಗಿ ಹಿಮ ಬೀಳುವ ವೇಳೆ ತರಿಯಬೇಕಾಗುತ್ತದೆ. 10 ಎಕರೆ ಭೂಮಿಯ ಪ್ರದೇಶದಲ್ಲಿ ಕೇವಲ 5 ಕೆಜಿ ಚಹಾವನ್ನು ಮಾತ್ರ ಬೆಳೆಯಲು ಸಾಧ್ಯವಾಗುತ್ತದೆ. ಅವುಗಳನ್ನು ಒಂದು ನಿರ್ದಿಷ್ಟ ತಾಪಮಾನದಲ್ಲಿ ನಿರಂತರವಾಗಿ ಸಂಸ್ಕರಿಸುವ ಮೂಲಕ 1 ಕೆಜಿ ಸಿಲ್ವರ್ ನೀಡಲ್ ಚಹಾ ಅಥಾವ ಬಿಳಿ ಚಹಾಪುಡಿ ಪಡೆಯಲಾಗುತ್ತದೆ. ಇದು ಈ ಚಹಾಪುಡಿ ವಿಶೇಷತೆಯ ಹಿಂದಿನ ರಹಸ್ಯ. ಇದೀಗ ಒಂದು ಕೆಜಿ ಹರಾಜಾಗಿದ್ದು, ಇನ್ನು ಉಳಿದ ಒಟ್ಟು 4 ಕೆಜಿ ಚಹಾ ಪುಡಿ ಚಹಾವನ್ನು ವಿದೇಶಗಳಿಗೆ ರಫ್ತು ಮಾಡುವ ಸಲುವಾಗಿ ಇಡಲಾಗಿದೆ.
ತಮಿಳುನಾಡಿನ ನೀಲಗಿರಿ ಜಿಲ್ಲೆಯು ವಿಶೇಷ ಬಗೆಯ ಚಹಾ ಎಲೆಗಳನ್ನು ಉತ್ಪಾದಿಸುತ್ತಿದ್ದು, ಇಲ್ಲಿನ ಉತ್ಪನ್ನಗಳು ಜಗತ್ತಿನಾದ್ಯಂತ ವಿಸ್ತಾರವಾಗಿದೆ. ಹಸಿರು ಎಲೆಗಳು, ಆರ್ಥಡೆಕ್ಸ್ ಟೀ, ಗ್ರೀನ್ ಟೀ, ಸಿಲ್ವರ್ ನೀಡಲ್ ಟೀ ಇವೆಲ್ಲವೂ ನೀಲಗಿರಿ ಜಿಲ್ಲೆಯ ವಿಶೇಷತೆ. ಇಲ್ಲಿ ಕೇವಲ ರಾಜ್ಯದ ಸರ್ಕಾರದ ಸ್ವಾಮ್ಯದ ಕಾರ್ಖಾನೆಗಳು ಮಾತ್ರವಲ್ಲ ಖಾಸಗಿ ಕಂಪೆನಿಗಳು ಸಹ ಟೀ ಪುಡಿ ವ್ಯಾಪಾರವನ್ನು ನಡೆಸುತ್ತಿದೆ. ಸುಮಾರು 6000 ರೈತರು ಟೀ ಬೆಳೆಯ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಲ್ಲಿ ಉತ್ಪಾದಿಸುವ ಚಹಾ ಪುಡಿಯನ್ನು ಸಂಗ್ರಹಿಸಿ ಕೂನೂರಿನ ಚಹಾ ಹರಾಜು ಕೇಂದ್ರಕ್ಕೆ ಅಂತಾರಾಷ್ಟ್ರೀಯ ಹರಾಜಿಗೆ ಕೊಂಡೊಯ್ಯಲಾಗುತ್ತದೆ.
ಇದನ್ನೂ ಓದಿ: Bigg Boss 8: ಪ್ರಶಾಂತ್ ಸಂಬರಗಿ ನಂತರ ನಿಧಿ ಸುಬ್ಬಯ್ಯ ವಿಚ್ಛೇದನದ ವಿಷಯ ಚರ್ಚಿಸಿದ ಚಕ್ರವರ್ತಿ ಚಂದ್ರಚೂಡ..!
ಬಿಳಿ ಚಹಾದಲ್ಲಿದೆ ಆರೋಗ್ಯದ ಗುಟ್ಟು
1. ಆ್ಯಂಟಿಆಕ್ಸಿಡೆಂಟ್‍ಗಳು ಹೆಚ್ಚಾಗಿರುವ ಕಾರಣ ದೀರ್ಘಕಾಲದ ಉರಿಯೂತವನ್ನು ಕಡಿಮೆ ಮಾಡುತ್ತದೆ.
2. ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಿಸುತ್ತದೆ.
3. ದೇಹದ ತೂಕ ಇಳಿಕೆಗೆ ಸಹಾಯಕ
4. ಹಲ್ಲುಗಳನ್ನು ಬ್ಯಾಕ್ಟೀರಿಯಾಗಳಿಂದ ರಕ್ಷಿಸುತ್ತದೆ
5. ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ
6. ಇನ್ಸುಲಿನ್ ಪ್ರತಿರೋಧದ ಅಪಾಯ ಕಡಿಮೆ ಮಾಡುತ್ತದೆ
7. ಬಿಳಿ ಚಹಾದಲ್ಲಿನ ಅಂಶಗಳು ಆಸ್ಟಿಯೊಪೊರೋಸಿಸ್ ವಿರುದ್ಧ ರಕ್ಷಿಸಬಹುದು
8. ಚರ್ಮ ಸುಕ್ಕುಗಟ್ಟುವುದನ್ನು ತಡೆಯುತ್ತದೆ
9. ಪಾರ್ಕಿನ್ಸನ್ ಮತ್ತು ಅಲ್ಜಮೈರ್ ಕಾಯಿಲೆಗಳ ವಿರುದ್ಧ ರಕ್ಷಿಸಲು ಸಹಾಯ ಮಾಡಬಹುದು
ಇದನ್ನೂ ಓದಿ: Ranveer Singh: ರಣವೀರ್ ಸಿಂಗ್ ಸ್ಟೈಲ್ ನೋಡಿ ಶಾಕ್ ಆದ ಅಭಿಮಾನಿಗಳು: ಹುಚ್ಚ ಎಂದ ಪೂಜಾ ಹೆಗ್ಡೆ
ನ್ಯೂಸ್18 ಕನ್ನಡ ಕಳಕಳಿ:
ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ