Hindi ಮಾತನಾಡುವವರು ನಮ್ಮೂರಲ್ಲಿ ಪಾನಿಪೂರಿ ಮಾರುತ್ತಿದ್ದಾರೆ; ಸಚಿವ ಪೊನ್ಮುಡಿ

ಹಿಂದೆ ಹಿಂದಿ ಕಲಿತರೆ ಉದ್ಯೋಗ ಸಿಗುತ್ತದೆ ಎಂದು ಹೇಳುತ್ತಿದ್ದರು. ಕೊಯಮತ್ತೂರಿನಲ್ಲಿ ಈಗ ಯಾರು ಪಾನಿ ಪುರಿ ಮಾರುತ್ತಿದ್ದಾರೆಂದು ನೋಡಿದ್ದೀರಾ? ಎನ್ನುವ ಮೂಲಕ ಹಿಂದಿ ಹೇರಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು

ಸಚಿವ ಪೊನ್ಮಡಿ

ಸಚಿವ ಪೊನ್ಮಡಿ

  • Share this:
    ಭಾಷೆ ವಿಚಾರದಲ್ಲಿ ಹಿಂದಿಗಿಂತ (Hindi) ಇಂಗ್ಲಿಷ್ (English) ಹೆಚ್ಚು ಮೌಲ್ಯಯುತವಾಗಿದೆ.  ನಮ್ಮೂರಿನ ಕೊಯಮತ್ತೂರಿನಲ್ಲಿ ಪಾನಿ ಪೂರಿ ಮಾತನಾಡುವವರು ಹಿಂದಿಯವರು ಎಂದು ತಮಿಳುನಾಡು ಉನ್ನತ ಶಿಕ್ಷಣ ಸಚಿವ ಪೊನ್ಮುಡಿ ತಿಳಿಸಿದ್ದಾರೆ. ಕೊಯಮತ್ತೂರಿನ ಭಾರತಿಯಾರ್ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಹಿಂದಿ ಹೇರಿಕೆ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ

    ಇಂಗ್ಲಿಷ್​ ಇರುವಾಗ ಹಿಂದಿ ಯಾಕೆ ಬೇಕು
    ಘಟಿಕೋತ್ಸವ ದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಪ್ರಯೋಜನಕಾರಿ ಅಂಶಗಳನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದರು, ಆದರೆ ರಾಜ್ಯ ಸರ್ಕಾರವು ಕೇವಲ ದ್ವಿಭಾಷಾ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಿದೆ. ತಮಿಳು ವಿದ್ಯಾರ್ಥಿಗಳು ಯಾವುದೇ ಭಾಷೆಯನ್ನು ಕಲಿಯಲು ಸಿದ್ಧರಿದ್ದಾರೆ . ಹಿಂದಿ ಐಚ್ಛಿಕವಾಗಿರಬೇಕು ಹೊರತು ಕಡ್ಡಾಯವಾಗಿರಬಾರದು ಎಂದು ಅವರು ಹೇಳಿದರು.
    ಈಗಾಗಲೇ ಅಂತಾರಾಷ್ಟ್ರೀಯ ಭಾಷೆಯಾದ ಇಂಗ್ಲಿಷ್ ಕಲಿಸುತ್ತಿರುವಾಗ ಹಿಂದಿಯನ್ನು ಏಕೆ ಕಲಿಯಬೇಕು ಎಂದು ಪ್ರಶ್ನಿಸಿದರು

    ತಮಿಳು, ಇಂಗ್ಲಿಷ್​ ಸಾಕು
    ಭಾರತದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ತಮಿಳುನಾಡು ಮುಂಚೂಣಿಯಲ್ಲಿದೆ. ತಮಿಳು ವಿದ್ಯಾರ್ಥಿಗಳು ಯಾವುದೇ ಭಾಷೆಯನ್ನು ಕಲಿಯಲು ಸಿದ್ಧರಿದ್ದಾರೆ. ಹಿಂದಿಯನ್ನು ಅವರು ಕಲಿಯುತ್ತಾರೆ. ಆದರೆ, ಅದು ಐಚ್ಛಿಕ ಭಾಷೆಯಾಗಿ ಮಾತ್ರ. ಹಿಂದಿಗಿಂತ ಇಂಗ್ಲಿಷ್ ಹೆಚ್ಚು ಮೌಲ್ಯಯುತವಾಗಿದೆ. ಈಗ ಇಂಗ್ಲಿಷ್ ಅಂತರಾಷ್ಟ್ರೀಯ ಭಾಷೆಯಾಗಿದೆ. ತಮಿಳುನಾಡು ವಿದ್ಯಾರ್ಥಿಗಳು ಉದ್ಯೋಗದ ದೃಷ್ಟಿಯಿಂದ ಇಂಗ್ಲಿಷ್ ಕಲಿಯುತ್ತಿದ್ದು, ಸ್ಥಳೀಯ ಭಾಷೆಯಾಗಿ ತಮಿಳು ಕಲಿಯುತ್ತಿದ್ದಾರೆ ಎಂದರು.

    ಇದನ್ನು ಓದಿ: ಪಕ್ಷ ನಮಗೆಲ್ಲ ಸಾಕಷ್ಟು ನೀಡಿದೆ; ಅದರ ಋಣ ತೀರಿಸುವ ಸಮಯ ಬಂದಿದೆ; ಸೋನಿಯಾ ಗಾಂಧಿ

    ಹಿಂದಿ ಮಾತನಾಡುವವರು ಪಾನಿಪುರಿ ಮಾರುತ್ತಿದ್ದಾರೆ

    ಹಿಂದೆ ಹಿಂದಿ ಕಲಿತರೆ ಉದ್ಯೋಗ ಸಿಗುತ್ತದೆ ಎಂದು ಹೇಳುತ್ತಿದ್ದರು. ಕೊಯಮತ್ತೂರಿನಲ್ಲಿ ಈಗ ಯಾರು ಪಾನಿ ಪುರಿ ಮಾರುತ್ತಿದ್ದಾರೆಂದು ನೋಡಿದ್ದೀರಾ? ಎನ್ನುವ ಮೂಲಕ ಹಿಂದಿ ಹೇರಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು

    ಹಿಂದಿ ಹೇರಿಕೆ ವಿರುದ್ಧ ಹೋರಾಟ 

    ತಮಿಳುನಾಡಿನಲ್ಲಿ 30, 40ರ ದಶಕದಲ್ಲೇ ಹಿಂದಿ ವಿರೋಧಿ ಚಳುವಳಿ, ಸ್ವತಂತ್ರ್ಯ ದ್ರಾವಿಡ ರಾಷ್ಟ್ರ ಚಳುವಳಿ ಹುಟ್ಟಿಕೊಂಡಿತ್ತು. ಚಳುವಳಿಯ ಜೊತೆಗೆ ದೊಡ್ಡ ದೊಡ್ಡ ನಾಯಕರೂ ಉದಯವಾಗಿತ್ತು.

    ಇದನ್ನು ಓದಿ: Mann ki Baatನಲ್ಲಿ ಪ್ರಧಾನಿ ಮೋದಿ ಮಾತನಾಡಲು ದೇಶದ ಜನರು ಸಲಹೆ ನೀಡಬಹುದು

    1965 ರಲ್ಲಿ ಪ್ರಧಾನಿ ಜವಹರ್ ಲಾಲ್ ನೆಹರು ಮರಣಾನಂತರ ಲಾಲ್‍ ಬಹದ್ದೂರ್ ಶಾಸ್ತ್ರಿಯವರ ಕಾಲದಲ್ಲಿ ಮತ್ತೊಮ್ಮೆ ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಘೋಷಿಸುವ ಎಲ್ಲಾ ಪ್ರಯತ್ನಗಳು ವ್ಯಾಪಕವಾಗಿ ನಡೆದಿತ್ತು. ಕಾಂಗ್ರೆಸ್‍ನ ಈ ಪ್ರಯತ್ನಕ್ಕೆ ಎಲ್ಲಾ ರಾಜ್ಯಗಳು, ಪ್ರಾದೇಶಿಕ ಪಕ್ಷಗಳು ಮೌನ ಸಮ್ಮತಿ ನೀಡಿದ್ದವು. ಆದ್ರೆ ಆ ಒಂದು ಪ್ರಾದೇಶಿಕ ಪಕ್ಷ ಮಾತ್ರ ಹಿಂದಿ ಹೇರಿಕೆಯ ವಿರುದ್ಧ ದ್ವನಿ ಎತ್ತಿತ್ತು. ಆ ಪಕ್ಷದ ಹೆಸರೇ “ದ್ರಾವಿಡ ಮುನ್ನೇಟ್ರ ಕಳಗಂ” ತಂದೈ ಪೆರಿಯಾರ್, ಅಣ್ಣಾದೊರೈ ಹಾಗೂ ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಕರುಣಾನಿಧಿ ಈ ಚಳುವಳಿಯ ಮುಂಚೂಣಿ ನಾಯಕರಾಗಿದ್ದರು.

    ಹೋರಾಟ ನಡೆಸಿದ್ದ ತಮಿಳು ನಾಯಕರು

    1965 ರಲ್ಲಿ ಪ್ರಧಾನಿ ಜವಹರ್ ಲಾಲ್ ನೆಹರು ಮರಣಾನಂತರ ಲಾಲ್‍ ಬಹದ್ದೂರ್ ಶಾಸ್ತ್ರಿಯವರ ಕಾಲದಲ್ಲಿ ಮತ್ತೊಮ್ಮೆ ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಘೋಷಿಸುವ ಎಲ್ಲಾ ಪ್ರಯತ್ನಗಳು ವ್ಯಾಪಕವಾಗಿ ನಡೆದಿತ್ತು.  ಈ ಪ್ರಯತ್ನಕ್ಕೆ ಎಲ್ಲಾ ರಾಜ್ಯಗಳು, ಪ್ರಾದೇಶಿಕ ಪಕ್ಷಗಳು ಮೌನ ಸಮ್ಮತಿ ನೀಡಿದ್ದವು. ಆದ್ರೆ ಆ ಒಂದು ಪ್ರಾದೇಶಿಕ ಪಕ್ಷ ಮಾತ್ರ ಹಿಂದಿ ಹೇರಿಕೆಯ ವಿರುದ್ಧ ದ್ವನಿ ಎತ್ತಿತ್ತು. ಆ ಪಕ್ಷದ ಹೆಸರೇ “ದ್ರಾವಿಡ ಮುನ್ನೇಟ್ರ ಕಳಗಂ” ತಂದೈ ಪೆರಿಯಾರ್, ಅಣ್ಣಾದೊರೈ ಹಾಗೂ ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಕರುಣಾನಿಧಿ ಈ ಚಳುವಳಿಯ ಮುಂಚೂಣಿ ನಾಯಕರಾಗಿದ್ದರು. ಇವರ ಹೋರಾಟ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿತ್ತು. ಪರಿಣಾಮ ಕೊನೆಗೂ ಮಣಿದ ಕೇಂದ್ರ ಸರ್ಕಾರ ಹಿಂದಿಯನ್ನು ರಾಷ್ಟ್ರಭಾಷೆ ಮಾಡುವ ತನ್ನ ನಿರ್ಧಾರವನ್ನು ಕೈಬಿಟ್ಟಿತ್ತು.
    Published by:Seema R
    First published: