ತಮಿಳುನಾಡು(ಜೂ.01): ಪಾಗಲ್ ಪ್ರೇಮಿಗಳ ಅವಾಂತರಗಳು ಒಂದೆರಡಲ್ಲ. ಇಂಥಹ ಲವ್ ಸ್ಟೋರಿಗಳೆಲ್ಲವೂ ದುರಂತವಾಗಿ ಕೊನೆಯಾಗುತ್ತವೆ. ವನ್ ಸೈಡ್ ಲವ್ ಸ್ಟೋರಿ (Love Story) ದುರಂತವಾಗಿ ಕೊನೆಯಾಗುವುದು ನಡೆಯುತ್ತಿರುತ್ತವೆ. ತಮಿಳುನಾಡಿನಲ್ಲಿ (Tamil Nadu) ನಡೆದ ಘಟನೆಯೊಂದರಲ್ಲಿ ತನ್ನ ಪ್ರೀತಿ (Love) ಒಪ್ಪಿಕೊಳ್ಳದ ಚಿಕ್ಕ ಬಾಲಕಿಯನ್ನು ಚಾಕುವಿನಿಂದ ಇರಿದಿದ್ದಾನೆ ಈ ಯುವಕ. ಈ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದ್ದು ಅಮಾಯಕ ವಿದ್ಯಾರ್ಥಿ ಪಾಗಲ್ ಪ್ರೇಮಿಯ ಹುಚ್ಚುತನಕ್ಕೆ ಗಂಭೀರ ಸ್ಥಿತಿಯಲ್ಲಿದ್ದಾರೆ. ತಮಿಳುನಾಡಿನ ತಿರುಚ್ಚಿಯಲ್ಲಿ ಪ್ರೀತಿ ನಿರಾಕರಿಸಿದ್ದಕ್ಕೆ ಯುವಕನೊಬ್ಬ ಅಪ್ರಾಪ್ತೆಯನ್ನು (Minor) 16 ಬಾರಿ ಚುಚ್ಚಿ ಕೊಂದಿದ್ದಾನೆ. 16 ವರ್ಷದ ಯುವತಿಯೊಬ್ಬಳು ತನ್ನ ಪ್ರೀತಿಯನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಕ್ಕಾಗಿ 22 ವರ್ಷದ ಯುವಕನಿಂದ 14 ಬಾರಿ ಇರಿದಿದ್ದಾನೆ.
ವ್ಯಕ್ತಿಯನ್ನು ಕೇಶವನ್ ಎಂದು ಗುರುತಿಸಲಾಗಿದ್ದು, ಪೊಲೀಸರು ಆತನನ್ನು ಹುಡುಕುತ್ತಿದ್ದಾರೆ. ತಿರುಚ್ಚಿಯ ಅತಿಕುಲಂ ನಿವಾಸಿಯಾಗಿರುವ ಬಾಲಕಿ 11ನೇ ತರಗತಿಯಲ್ಲಿ ಓದುತ್ತಿದ್ದಳು. ಪರೀಕ್ಷೆ ಮುಗಿಸಿ ಸಂತ್ರಸ್ತೆ ತನ್ನ ಸಂಬಂಧಿಯನ್ನು ಭೇಟಿಯಾಗಲು ತೆರಳುತ್ತಿದ್ದಾಗ ಆರೋಪಿ ಕೇಶವನ್ ರೈಲ್ವೇ ಮೇಲ್ಸೇತುವೆ ಬಳಿ ಆಕೆಯನ್ನು ತಡೆದಿದ್ದಾನೆ.
ಬಾಲಕಿಯನ್ನು ಫಾಲೋ ಮಾಡುತ್ತಿದ್ದ ಯುವಕ
ಕೇಶವನ್ ಬಾಲಕಿಯನ್ನು ಹಿಂಬಾಲಿಸುತ್ತಿದ್ದ ಎನ್ನಲಾಗಿದೆ. ಜೂನ್ 2021 ರಲ್ಲಿ ಅದೇ ಹುಡುಗಿಯನ್ನು ಅಪಹರಿಸಿದ್ದಕ್ಕಾಗಿ ಕೇಶವನ್ ಅವರನ್ನು ಈಗಾಗಲೇ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ, 2012 (ಪೋಕ್ಸೊ) ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಸಂತ್ರಸ್ತೆಯ ಸಂಬಂಧಿಯೊಬ್ಬರು ತಿಳಿಸಿದ್ದಾರೆ. ಅವರು ಇತ್ತೀಚೆಗೆ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.
ಬಾಲಕಿ ಕಿರುಚಲು ಪ್ರಯತ್ನಿಸಿದಾಗ ಚಾಕುವಿನಿಂದ ಚುಚ್ಚಿ ಓಡಿದ
ಚೂರಿ ಇರಿತದ ದಿನ ತಾನು ಆಕೆಯನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿದ್ದಾನೆ. ಬಾಲಕಿ ನಿರಾಕರಿಸಿದಾಗ, ಮಗು ಸಹಾಯಕ್ಕಾಗಿ ಕೂಗುವ ಮೊದಲೇ ಕೇಶವನ್ ಆಕೆಗೆ 14 ಬಾರಿ ಇರಿದಿದ್ದಾನೆ. ಬಳಿಕ ಚಾಕುವನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿದ್ದಾನೆ.
ಕೆಳಗೆ ಬಿದ್ದಿದ್ದ ಬಾಲಕಿಯನ್ನು ನೋಡಿ ಬಂದ ಪ್ರಯಾಣಿಕರು
ಬಾಲಕಿ ಕೆಳಗೆ ಬಿದ್ದಿರುವುದನ್ನು ಕಂಡ ಪ್ರಯಾಣಿಕರು ಆಕೆಯ ದೇಹದಿಂದ ರಕ್ತ ಸೋರುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದರು. ಆಕೆ ಚಿಂತಾಜನಕ ಸ್ಥಿತಿಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ಆರೋಪಿ ಬಂಧನಕ್ಕೆ 3 ವಿಶೇಷ ತಂಡ
ಆರೋಪಿಯನ್ನು ತಿರುಚ್ಚಿಯ ಪೋತಮೆಟ್ಟುಪಟ್ಟಿ ನಿವಾಸಿ ಕೇಶವನ್ ಎಂದು ಗುರುತಿಸಿರುವ ಪೊಲೀಸರು ಆತನಿಗಾಗಿ ಶೋಧ ನಡೆಸುತ್ತಿದ್ದಾರೆ. ಘಟನೆ ಕುರಿತು ಟ್ವೀಟ್ ಮಾಡಿರುವ ಕರೂರಿನ ಕಾಂಗ್ರೆಸ್ ಸಂಸದೆ ಜೋತಿಮಣಿ, ಶಾಲಾ ವಿದ್ಯಾರ್ಥಿನಿಯೊಬ್ಬಳಿಗೆ 14 ಬಾರಿ ಇರಿದಿರುವ ಸುದ್ದಿ ಕೇಳಿ ಆಘಾತವಾಯಿತು. ಕೇಶವನ್ನನ್ನು ಬಂಧಿಸಲು ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅವರೊಂದಿಗೆ ಮಾತನಾಡಿದ್ದೇನೆ ಎಂದು ಅವರು ಹೇಳಿದರು.
ಇದನ್ನೂ ಓದಿ: Children Murder: ತನ್ನ 6 ಮಕ್ಕಳನ್ನು ಬಾವಿಗೆ ತಳ್ಳಿದ ತಾಯಿ! ಬೇಡಮ್ಮ ಅಂತ ಕಣ್ಣೀರಿಟ್ಟರೂ ಕರಗಲಿಲ್ಲ ಮಾತೃ ಹೃದಯ
"ಇಂತಹ ದೌರ್ಜನ್ಯಗಳು ಸಂಭವಿಸಿದಾಗಲೆಲ್ಲಾ ನಾವು ಅಸಮಾಧಾನಗೊಳ್ಳುತ್ತೇವೆ, ಆದರೆ ನಾವು ಅದನ್ನು ಮೀರುತ್ತೇವೆ. ಅಂತಹ ಅಪರಾಧಗಳು ಮಹಿಳೆಯು ಕೇವಲ ಆತ್ಮಸಾಕ್ಷಿಯಿಲ್ಲದ ಪುರುಷನೊಂದಿಗೆ ಒಪ್ಪಿಕೊಳ್ಳಬೇಕಾದ ದೇಹ ಎಂಬ ಕಲ್ಪನೆಯಿಂದ ಮಾತ್ರ ಹುಟ್ಟಿಕೊಳ್ಳುತ್ತವೆ. ಕಠಿಣ ಶಿಕ್ಷೆಯ ಜೊತೆಗೆ ಶಿಕ್ಷಣದ ಮೂಲಕ ಸಮಾಜದಲ್ಲಿ ಇಂತಹ ಅತಿರೇಕದ ಮನಸ್ಥಿತಿಯನ್ನು ಬದಲಾಯಿಸಬೇಕು” ಎಂದು ಜೋತಿಮಣಿ ಟ್ವೀಟ್ ಮಾಡಿದ್ದಾರೆ.
ರೈಲ್ವೇ ಹಳಿಯಲ್ಲಿ ಶವವಾಗಿ ಪತ್ತೆಯಾದ ಯುವಕ
ತನ್ನ ಪ್ರೇಮ ಪ್ರಸ್ತಾಪವನ್ನು ಒಪ್ಪದ ಅಪ್ರಾಪ್ತ ಬಾಲಕಿಗೆ ಕೇಶವನ್ 14 ಬಾರಿ ಚಾಕುವಿನಿಂದ ಇರಿದಿದ್ದಾನೆ. ಆತ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಮೂರು ವಿಶೇಷ ತಂಡಗಳು ಶೋಧ ನಡೆಸುತ್ತಿವೆ. ಮಂಗಳವಾರ ರಾತ್ರಿ ರೈಲ್ವೆ ಹಳಿ ಮೇಲೆ ಆರೋಪಿ ಶವವಾಗಿ ಪತ್ತೆಯಾಗಿದ್ದಾನೆ.
ಇದನ್ನೂ ಓದಿ: UP Accident: ಆ್ಯಂಬುಲೆನ್ಸ್-ಟ್ರಕ್ ಮುಖಾಮುಖಿ, ಚೆಕಪ್ ಮುಗಿಸಿ ಬರ್ತಿದ್ದ ಒಂದೇ ಕುಟುಂಬದ 6 ಜನ ಸೇರಿ 7 ಸಾವು
ಕೇಶವನ್ ಎಂದು ಗುರುತಿಸಲಾದ ಆರೋಪಿಯನ್ನು ಹಿಡಿಯಲು ಪೊಲೀಸರು ಮೂರು ತಂಡಗಳನ್ನು ರಚಿಸಿದಾಗ, ಮನಪ್ಪರೈ ಬಳಿಯ ರೈಲ್ವೆ ಹಳಿಗಳ ಮೇಲೆ ಶವವಿರುವ ಬಗ್ಗೆ ಅವರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ಶವದ ಬಳಿಯಿಂದ ಮೊಬೈಲ್ ಅನ್ನು ಪಡೆದುಕೊಂಡರು ಮತ್ತು ಕೇಶವನ ತಂದೆಯನ್ನು ಕರೆತಂದರು, ಅವರು ಶವವನ್ನು ಗುರುತಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ