ಇಲ್ಲೊಂದು ಅಪರೂಪದ ಘಟನೆ; 3 ವರ್ಷದ ಹಿಂದೆ ಕಳೆದುಹೋದ ಗಂಡನನ್ನು ಟಿಕ್​ಟಾಕ್​ನಲ್ಲಿ ಹುಡುಕಿದ ಮಹಿಳೆ!

ಆತನ ಹೆಸರು ಸುರೇಶ್. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಈತ ಜಯಪ್ರದ ಎಂಬ ಮಹಿಳೆಯನ್ನು ಮದುವೆಯಾಗಿದ್ದ ಇವರಿಗೆ ಒಬ್ಬರು ಮಕ್ಕಳು ಇದ್ದಾರೆ. ಆದರೆ, ಈತ 2016ರಲ್ಲಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ.

MAshok Kumar | news18
Updated:July 3, 2019, 5:09 PM IST
ಇಲ್ಲೊಂದು ಅಪರೂಪದ ಘಟನೆ; 3 ವರ್ಷದ ಹಿಂದೆ ಕಳೆದುಹೋದ ಗಂಡನನ್ನು ಟಿಕ್​ಟಾಕ್​ನಲ್ಲಿ ಹುಡುಕಿದ ಮಹಿಳೆ!
ಜಯಪ್ರದ ಮತ್ತು ಸುರೇಶ್
  • News18
  • Last Updated: July 3, 2019, 5:09 PM IST
  • Share this:
ಚೆನ್ನೈ (ಜುಲೈ.03); ಇಡೀ ದೇಶದಾತ್ಯಂತ ಇಂದು ಟಿಕ್​ಟಾಕ್ ವೈರಲ್ ಆಗುತ್ತಿದೆ. ಜನರ ಅಚ್ಚುಮೆಚ್ಚಿನ ಮನರಂಜನಾ ಆ್ಯಪ್ ಆಗಿ ಬದಲಾಗಿದೆ. ಕೆಲವೊಮ್ಮೆ ಜನರ ಜೀವಕ್ಕೆ ಇದೇ ಆ್ಯಪ್ ಕುತ್ತು ತಂದಿರುವ ಉದಾಹರಣೆಯೂ ಇದೆ. ಆದರೆ, ಅದೇ ಆ್ಯಪ್ ಇಂದು ದೂರಾಗಿದ್ದ ಕುಟುಂಬವನ್ನು ಒಟ್ಟುಗೂಡಿಸಿದ ಹಿರಿಮೆಗೆ ಪಾತ್ರವಾಗಿದೆ.

ಆತನ ಹೆಸರು ಸುರೇಶ್. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಈತ ಜಯಪ್ರದ ಎಂಬ ಮಹಿಳೆಯನ್ನು ಮದುವೆಯಾಗಿದ್ದ ಇವರಿಗೆ ಒಬ್ಬರು ಮಕ್ಕಳು ಇದ್ದಾರೆ. ಆದರೆ, ಈತ 2016ರಲ್ಲಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ. ಎಷ್ಟು ದಿನವಾದರೂ ಗಂಡ ಮನೆಗೆ ಹಿಂದಿರುಗದಿದ್ದರಿಂದ ಆತಂಕಕ್ಕೆ ಈಡಾಗಿದ್ದ ಜಯಪ್ರದ ಆತನ ಗೆಳೆಯರು ಹಾಗೂ ಕುಟುಂಬಸ್ಥರನ್ನೆಲ್ಲಾ ಕೇಳಿದ್ದಾರೆ, ಗಂಡ ಎಲ್ಲೂ ಪತ್ತೆಯಾಗದಿದ್ದರಿಂದ ಕೊನೆಗೂ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಕಳೆದ ಮೂರು ವರ್ಷದಿಂದ ಸುರೇಶ್ ಕುರಿತು ಯಾವುದೇ ಮಾಹಿತಿ ಸಿಕ್ಕಿರಲಿಲ್ಲ.

ಇದನ್ನೂ ಓದಿ : ಟಿಕ್​ಟಾಕ್​ಗೆ ಗೃಹಿಣಿ ಬಲಿ; ತಾನು ವಿಷ ಕುಡಿಯುವುದನ್ನೂ ವಿಡಿಯೋ ಮಾಡಿ ಸತ್ತ ಮಹಿಳೆ!

ಆದರೆ, ಜಯಪ್ರದ ಕೆಲವು ದಿನಗಳ ಹಿಂದೆ ಟಿಕ್​ಟಾಕ್​ನಲ್ಲಿ ಒಂದು ವಿಡಿಯೋ ನೋಡಿದ್ದರು, ಆ ವಿಡಿಯೋದಲ್ಲಿರುವುದು ತಮ್ಮ ಪತಿ ಸುರೇಶ್ ಎಂಬುದನ್ನು ಖಚಿತಪಡಿಸಿಕೊಂಡರು. ಅಲ್ಲದೆ, ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಎಚ್ಚೆತ್ತ ಪೊಲೀಸರು ಹೊಸೂರಿಗೆ ತೆರಳಿ ಸುರೇಶ್ ನನ್ನು ಪತ್ತೆಹಚ್ಚಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, “ಕುಟುಂಬದ ತಾಪತ್ರಯಗಳನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದ ಸುರೇಶ್ ಅದೇ ಕಾರಣಕ್ಕೆ ಕೃಷ್ಣಗಿರಿ ತೊರೆದು ಹೊಸೂರ್ ಜಿಲ್ಲೆಯಲ್ಲಿ ಮೆಕಾನಿಕ್ ಆಗಿ ಕೆಲಸ ನಿರ್ವಹಿಸಿದ್ದಾರೆ. ಅಲ್ಲದೆ ಲಿಂಗಪರಿವರ್ತನೆಯಾದ ಮಹಿಳೆ ಜೊತೆ ವಸಿಸುತ್ತಿದ್ದರು ಎಂದು ತಿಳಿಸಿದ್ದಾರೆ.

ಕೊನೆಗೂ ಜಯಪ್ರದ ಟಿಕ್​ಟಾಕ್ ಮೂಲಕ ತನ್ನ ಪತಿಯನ್ನು ಹುಡುಕಿಕೊಂಡಿದ್ದಾರೆ. ಒಟ್ಟಾರೆ ಇಷ್ಟು ದಿನ ಮನರಂಜನೆಯ ಸರಕಾಗಿ ಬಳಕೆಯಾಗಿದ್ದ ಟಿಕ್ಟಾಕ್ ಇಂದು ಒಂದು ಕುಟುಂಬವನ್ನು ಒಂದು ಮಾಡಿರುವುದು ಹಲವರ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ಟಿಕ್​ಟಾಕ್​ ತಂದ ಆಪತ್ತು: ಜೀವಕ್ಕೆ ಕುತ್ತು ತಂದು ಕೊಂಡ ಯುವಕ
First published: July 3, 2019, 5:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading