Tiger Cub: ಬೆಕ್ಕಿಗೆ ಬಣ್ಣ ಹಚ್ಚಿ ಹುಲಿಮರಿ ಎಂದು ಮಾರಾಟ!

ಮೂರು ತಿಂಗಳ ವಯಸ್ಸಿನ ಮೂರು ಹುಲಿಮರಿಗಳು ಮಾರಾಟಕ್ಕಿವೆ ಎಂದು ಪಾರ್ಥಿಬನ್ ವಾಟ್ಸಾಪ್‌ನಲ್ಲಿ ಸಂದೇಶ ಕಳುಹಿಸಿದ್ದ. ಪ್ರತಿ ಮರಿಗೆ 25 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಮುನ್ನಾರ್: ಬೆಕ್ಕನ್ನು ಹುಲಿಮರಿ ಎಂದು ನಂಬಿಸಿ ಮೋಸ ಮಾಡಲು ಯತ್ನಿಸಿದ್ದ ಅಪರೂಪದ ಆರೋಪದ ಕೃತ್ಯವೊಂದು ನಡೆದಿದೆ. ಬೆಕ್ಕಿಗೆ ಹುಲಿಮರಿಯ (Tiger Cub) ಬಣ್ಣ ಬಳಿದು ಹಣ ಸುಲಿಗೆ ಮಾಡಲು ಯತ್ನಿಸಿದ ಆರೋಪದ ಮೇಲೆ ತಮಿಳುನಾಡು ಮೂಲದ ಯುವಕನೊಬ್ಬನನ್ನು ಕೇರಳದ ಇಡುಕ್ಕಿಯಲ್ಲಿ ಬಂಧಿಸಲಾಗಿದೆತಮಿಳುನಾಡಿನ (Tamil Nadu) ಗಡಿ ಗ್ರಾಮವಾದ ತಿರುವಣ್ಣಾಮಲ ಅರಣಿ ನಿವಾಸಿ ಪಾರ್ಥಿಬನ್ (24) ಎಂಬ ವ್ಯಕ್ತಿಯೇ ಬೆಕ್ಕಿಗೆ (Cat) ಹುಲಿ ಮರಿಯ ಬಣ್ಣ ಬಳಿದು ಮಾರಾಟ ಮಾಡಲು ಯತ್ನಿಸಿದ ಪೊಲೀಸರು ಬಂಧಿಸಿದ ಆರೋಪಿ. ಈ ಮೂಲಕ ಬೆಕ್ಕಿಗೆ ಬಣ್ಣ ಬಳಿದು ಹುಲಿಮರಿ ಎಂದು ಜನರನ್ನು ನಂಬಿಸಿಯೂ ಹಣ ಮಾಡಬಹುದು ಎಂದು ಖತರ್ನಾಕ್ ಯೋಜನೆ ರೂಪಿಸಿದ ವ್ಯಕ್ತಿ ಬಂಧನವಾಗಿದೆ. 


ಮೂರು ತಿಂಗಳ ವಯಸ್ಸಿನ ಮೂರು ಹುಲಿಮರಿಗಳು ಮಾರಾಟಕ್ಕಿವೆ ಎಂದು ಪಾರ್ಥಿಬನ್ ವಾಟ್ಸಾಪ್ನಲ್ಲಿ ಸ್ಟೇಟಸ್ ಹಾಕಿದ್ದ. ಪ್ರತಿ ಮರಿಗೆ 25 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದು, ಖರೀದಿದಾರರ ಮನೆಗೆ ತಲುಪಿಸುವುದಾಗಿ ತಿಳಿಸಿದ್ದ. ಸ್ಟೀಲ್ ಬೌಲ್ ನಲ್ಲಿ ಹುಲಿ ಮರಿಗಳಿಗೆ ಆಹಾರ ನೀಡುತ್ತಿರುವ ಚಿತ್ರವನ್ನೂ ಹಾಕಿದ್ದ.




ಬೆಕ್ಕಿಗೆ ಬಣ್ಣ ಹಚ್ಚಿ ಹುಲಿಮರಿ ಎಂದು ಮಾರಾಟಕ್ಕೆ ಯತ್ನಿಸಿದ್ದ ಆರೋಪಿ


ಅರಣ್ಯ ಇಲಾಖೆ ಬೆನ್ನುಬಿದ್ದಂತೆ ಆರೋಪಿ ಭೂಗತ
ಈ ವಿಷಯ ತಿಳಿದ ಅರಣ್ಯ ಇಲಾಖೆ ಹೀಗೆ ಸಂದೇಶ ರವಾನಿಸುತ್ತಿದ್ದ ವ್ಯಕ್ತಿಯ ಬೆನ್ನುಬಿದ್ದಿತ್ತು.ಅರಣ್ಯಾಧಿಕಾರಿಗಳು ಆತನನ್ನು ಹುಡುಕುತ್ತಿರುವ ಬಗ್ಗೆ ಮಾಹಿತಿ ಪಡೆದ ಪಾರ್ಥಿಬನ್ ಭೂಗತನಾಗಿದ್ದ. ಅರಣ್ಯಾಧಿಕಾರಿಗಳು ಇವರ ಮನೆಯಲ್ಲಿ ಹುಡುಕಾಟ ನಡೆಸಿದ್ದು ಹುಲಿ ಮರಿಗಳು ಪತ್ತೆಯಾಗಿಲ್ಲ. ನಂತರ ಸ್ಥಳೀಯ ಪೊಲೀಸರ ನೆರವಿನಿಂದ ಆತನನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ.

ಇದನ್ನೂ ಓದಿ: Tongue Cut: ತನ್ನ ನಾಲಿಗೆಯನ್ನೇ ಕತ್ತರಿಸಿ ದೇವಿ ಮುಂದಿಟ್ಟ ಭಕ್ತ! ಅಂಧಭಕ್ತಿಯ ಕಥೆ ಕೇಳಿದ್ರೆ ಶಾಕ್ ಆಗ್ತೀರಿ

ಮೂರು ವಾರಗಳ ಹಿಂದೆ ಇದೇ ವ್ಯಕ್ತಿಯನ್ನು ಸಾಕುಪ್ರಾಣಿ ಅಂಗಡಿಯಲ್ಲಿ ನಕ್ಷತ್ರ ಆಮೆಗಳನ್ನು ಮಾರಾಟ ಮಾಡಿದ್ದಕ್ಕಾಗಿ ಬಂಧಿಸಲಾಗಿತ್ತು. ತನಿಖೆಯ ಸಮಯದಲ್ಲಿ, ಅರಣ್ಯ ಇಲಾಖೆ ಅಧಿಕಾರಿಗಳು ಪಾರ್ಥಿಭನ್ ಅವರ ವಾಟ್ಸಾಪ್ ಸ್ಟೇಟಸ್‌ಗೆ ಕಾರಣವಾದ ಇತರ ಆಸ್ತಿಗಳ ಜೊತೆಗೆ ಅವರ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್ ಅನ್ನು ಪರಿಶೀಲಿಸಿದ್ದರು ಎಂದು ಹೇಳಲಾಗಿದೆ.

10 ವರ್ಷದ ಬಾಲಕನ ಮುಖಕ್ಕೆ ನಾಯಿ ಕಚ್ಚಿದ್ದಕ್ಕೆ 150 ಹೊಲಿಗೆ ಹಾಕುವಂತಾಯ್ತು!
ಬೀದಿನಾಯಿಗಳ (Street Dogs) ಬಗ್ಗೆ ಎಷ್ಟು ಎಚ್ಚರ ವಹಿಸಿದರೂ ಕಡಿಮೆಯೇ. ಅದರಲ್ಲೂ ಬೆಂಗಳೂರಿನಲ್ಲಿ ಬೀದಿನಾಯಿಗಳ ಕಾಟ ಅಷ್ಟಿಷ್ಟಲ್ಲ. 10 ವರ್ಷದ ಬಾಲಕನ ಮೇಲೆ ನಾಯಿ ಕಚ್ಚಿ (Pitbull Bite 10 Year Boy) ಒಂದಲ್ಲ ಎರಡಲ್ಲ ಬರೋಬ್ಬರಿ 150 ಹೊಲಿಗೆ ಹಾಕಿದ ದುರ್ಘಟನೆಯೊಂದು ನಡೆದಿದೆ. ಆಟ ಆಡುತ್ತಿದ್ದ 10 ವರ್ಷದ ಬಾಲಕನ ಮೇಲೆ ನಾಯಿ ದಾಳಿ ಮಾಡಿದೆ. ಮಗುವಿನ ಮೇಲೆ ನಾಯಿ ದಾಳಿಗೆ ಜನರು ಬೆಚ್ಚಿಬಿದ್ದಿದ್ದಾರೆ. ಸ್ಥಳದಲ್ಲೇ ಇದ್ದ ಜನರು ಮಗುವನ್ನು ರಕ್ಷಿಸಲು ಪ್ರಯತ್ನಿಸಿದರೂ ಸಹ ನಾಯಿ ದಾಳಿಯಿಂದ ಮಗುವನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: Mass Shooting: ಹಾಡಹಗಲೇ ಮನೆಗೆ ನುಗ್ಗಿ ಗುಂಡಿನ ದಾಳಿ, ಮಕ್ಕಳು ಅಂತಾನೂ ನೋಡ್ದೇ ಐವರ ಕೊಂದ ದುಷ್ಕರ್ಮಿ!

ಜನರು ರಕ್ಷಿಸುವ ಮುನ್ನವೇ ದಾಳಿ ನಡೆಸಿದ ನಾಯಿ ಮಗುವಿನ ಮುಖ ಮತ್ತು ಕಿವಿಯನ್ನು ಕಚ್ಚಿದೆ. ಮಗುವಿನ ಮುಖಕ್ಕೆ ಸುಮಾರು 150 ಹೊಲಿಗೆ ಹಾಕಲಾಗಿದೆ. ಈ ಸಂಬಂಧ ಈವರೆಗೆ ಪೊಲೀಸ್ ದೂರು ದಾಖಲಾಗಿಲ್ಲ ಎಂದು ವರದಿಯಾಗಿದೆ.
Published by:ಗುರುಗಣೇಶ ಡಬ್ಗುಳಿ
First published: