ತಮಿಳುನಾಡು: ಪಶ್ಚಿಮ ಬಂಗಾಳ (West Bengal), ತಮಿಳುನಾಡು (Tamil Nadu) ಸೇರಿದಂತೆ ಹಲವು ರಾಜ್ಯಗಳಲ್ಲಿ ರಾಜ್ಯಪಾಲರು ವರ್ಸಸ್ ರಾಜ್ಯ ಸರ್ಕಾರ (Governor Vs State Government)ಎನ್ನುವಂತಾಗಿದೆ. ಇದೀಗ ತಮಿಳುನಾಡಲ್ಲಿ ವಿಧಾನಸಭಾ ಅಧಿವೇಶನ (Assembly Session) ನಡೆಯುತ್ತ ಇರುವಾಗಲೇ ರಾಜ್ಯಪಾಲರು ಸದನದಿಂದ ಹೊರ ನಡೆದ ಘಟನೆ ನಡೆದಿದೆ. ಇಂದು ತಮಿಳುನಾಡಲ್ಲಿ ಚಳಿಗಾಲದ ವಿಧಾನಸಭಾ ಅಧಿವೇಶನ (Winter Assembly Session) ಆರಂಭವಾಗಿದೆ. ಮೊದಲ ದಿನವಾದ ಇಂದು ರಾಜ್ಯಪಾಲರು ಆಗಮಿಸಿ, ಭಾಷಣ (Governor Speech) ಮಾಡಬೇಕಿತ್ತು. ಆದರೆ ಭಾಷಣಕ್ಕೆ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ (Tamil Nadu CM M.K. Stalin) ಅಡ್ಡಿಪಡಿಸಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಆಕ್ರೋಶಗೊಂಡ ರಾಜ್ಯಪಾಲ ಆರ್.ಎನ್. ರವಿ (R.N. Ravi) ಭಾಷಣ ಮಾಡದೇ, ಸದನದಿಂದಲೇ ಹೊರ ನಡೆದಿದ್ದಾರೆ. ಇನ್ನು ರಾಜ್ಯಪಾಲ ಆರ್.ಎನ್. ರವಿ ವಿರುದ್ಧ ಆಡಳಿತಾರೂಢ ಡಿಎಂಕೆ (DMK) ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದು, “ರಾಜ್ಯಪಾಲರೇ, ತಮಿಳುನಾಡು ಬಿಟ್ಟು ತೊಲಗಿ” ಎಂದು ಘೋಷಣೆ ಕೂಗಿದ್ದಾರೆ.
ಚಳಿಗಾಲದ ಅಧಿವೇಶನದ ಮೊದಲ ದಿನ ಕೋಲಾಹಲ
ತಮಿಳುನಾಡಲ್ಲಿ ಇಂದಿನಿಂದ ಚಳಿಗಾಲದ ವಿಧಾನಸಭಾ ಅಧಿವೇಶನ ಆರಂಭವಾಗಿದೆ. ಸಂಪ್ರದಾಯದಂತೆ ಮೊದಲ ದಿನ ರಾಜ್ಯಪಾಲರು ಬಂದು ಅಧಿವೇಶನದಲ್ಲಿ ಭಾಷಣ ಮಾಡುವುದು ವಾಡಿಕೆ. ಆದರೆ ಮೊದಲ ದಿನವಾದ ಇಂದು ತಮಿಳುನಾಡು ವಿಧಾನಸಭೆಯಲ್ಲಿ ಕೋಲಾಹಲವೇ ನಡೆದಿದೆ.
#WATCH | Chennai: Governor RN Ravi walks out of Tamil Nadu assembly after CM MK Stalin alleged Governor R N Ravi skipped certain parts of the speech & "has completely gone against the decorum of the assembly."
(Video Source: Tamil Nadu Assembly) pic.twitter.com/KGPmvRMQCu
— ANI (@ANI) January 9, 2023
ರಾಜ್ಯಪಾಲ ಆರ್ಎನ್ ರವಿ ಸದನಕ್ಕೆ ಬರುತ್ತಿದ್ದಂತೆ ರಾಜ್ಯ ಸರ್ಕಾರ ನೀಡಿರುವ ಭಾಷಣದ ಪ್ರತಿ ಮಾತ್ರ ಓದಬೇಕೆಂದು ಆಡಳಿತಾರೂಢ ಡಿಎಂಕೆ ಸದಸ್ಯರು ಪಟ್ಟು ಹಿಡಿದರು. ರಾಜ್ಯಪಾಲರು ತಾವು ಸೇರಿಸಿರುವ ಭಾಷಣದ ಸಾಲುಗಳನ್ನು ತೆಗೆಯುವಂತೆ ಖುದ್ದು ಸಿಎಂ ಎಂಕೆ ಸ್ಟಾಲಿನ್ ಮನವಿ ಮಾಡಿದ್ರು. ಆದರೆ ಇದಕ್ಕೆ ಒಪ್ಪದ ರಾಜ್ಯಪಾಲ ಆರ್ಎನ್ ರವಿ, ತಾವೇ ಸಿದ್ಧಪಡಿಸಿಕೊಂಡು ಬಂದ ಭಾಷಣ ಓದಲು ಮುಂದಾಗಿದ್ದಾರೆ.
ಇದನ್ನೂ ಓದಿ: Bharat Jodo Yatra: ರಾಹುಲ್ ಜೊತೆ `ಹೆಜ್ಜೆ ಹಾಕಿದ ಮಾಜಿ ಸೇನಾ ಮುಖ್ಯಸ್ಥ ದೀಪಕ್ ಕಪೂರ್: ಹಗರಣ ನೆನಪಿಸಿದ ಬಿಜೆಪಿ!
ರಾಜ್ಯಪಾಲರ ಭಾಷಣಕ್ಕೆ ಸಿಎಂ ಸ್ಟಾಲಿನ್ ಅಡ್ಡಿ
ರಾಜ್ಯಪಾಲ ಆರ್ಎನ್ ರವಿ ತಾವು ಸಿದ್ಧಪಡಿಸಿಕೊಂಡು ಬಂದಿದ್ದ ಭಾಷಣ ಮಾಡಲು ಆರಂಭಿಸುತ್ತಿದ್ದಂತೆ ಸದನದಲ್ಲಿ ಕೋಲಾಹಲ ಉಂಟಾಯಿತು. ಸಿಎಂ ಸ್ಟಾಲಿನ್ ರಾಜ್ಯಪಾಲರು ಸೇರಿಸಿರುವ ಭಾಷಣದ ಸಾಲುಗಳನ್ನು ಕಡತದಿಂದ ತೆಗೆದುಹಾಕಿ, ರಾಜ್ಯ ಸರ್ಕಾರ ನೀಡಿದ್ದ ಭಾಷಣದ ಸಾಲುಗಳನ್ನು ಮಾತ್ರ ಕಡತದಲ್ಲಿ ಉಳಿಸಿಕೊಳ್ಳುವಂತೆ ಆಗ್ರಹಿಸಿದರು.
ಅಧಿವೇಶನದಿಂದಲೇ ಹೊರ ನಡೆದ ರಾಜ್ಯಪಾಲರು
ಸಿಎಂ ಮಾತಿಗೆ ಕೆಂಡಾಮಂಡಲರಾದ ರಾಜ್ಯಪಾಲ ಎನ್ಆರ್ ರವಿ, ತಾವು ಭಾಷಣ ಮುಂದುವರೆಸುವುದಿಲ್ಲ ಅಂತ ಪಟ್ಟು ಹಿಡಿದರು. ಅಲ್ಲದೇ ತಾವು ಸದನದಿಂದ ನಿರ್ಗಮಿಸುವುದಾಗಿ ಘೋಷಿಸಿದರು. ಕೂಡಲೇ ವಿಧಾನಸಭಾ ಅಧಿವೇಶನದಿಂದ ಹೊರ ನಡೆದೇ ಬಿಟ್ಟರು. ರಾಜ್ಯಪಾಲರ ಭಾಷಣಕ್ಕೆ ಖುದ್ದು ಸಿಎಂ ಎಂಕೆ ಸ್ಟಾಲಿನ್ ಅವರೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಗವರ್ನರ್ ಸದನದಿಂದ ನಿರ್ಗಮಿಸಿದರು.
ರಾಜ್ಯಪಾಲರ ಭಾಷಣದ ವಿರುದ್ಧ ನಿರ್ಣಯ ಅಂಗೀಕಾರ
ಇನ್ನು ಗವರ್ನರ್ ಅವರು ಸದನದಿಂದ ಹೊರನಡೆಯುತ್ತಿದ್ದಂತೆ ಡಿಎಂಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ರಾಜ್ಯ ಸರ್ಕಾರ ಸಿದ್ದಪಡಿಸಿದ ರಾಜ್ಯಪಾಲರ ಮೂಲ ಭಾಷಣವನ್ನು ಮಾತ್ರ ಕಡತಕ್ಕೆ ಸೇರಿಸುವಂತೆ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.
ಇದನ್ನೂ ಓದಿ: Brazil Riots: ಬ್ರೆಜಿಲ್ನಲ್ಲಿ ತೀವ್ರ ಗಲಭೆ; ಪ್ರಧಾನಿ ಮೋದಿ ಕಳವಳ, ದಾಳಿಕೋರರ ವಿರುದ್ಧ ಖಂಡನೆ
ಗವರ್ನರ್ ವಿರುದ್ಧ ಸಿಎಂ ಆಕ್ರೋಶ
ಇನ್ನು ಗವರ್ವರ್ ಆರ್ಎನ್ ರವಿ ನಡೆಗೆ ಸಿಎಂ ಎಂ.ಕೆ. ಸ್ಟಾಲಿನ್ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣದಲ್ಲಿ ಜಾತ್ಯತೀತತೆ, ಪೆರಿಯಾರ್, ಬಿಆರ್ ಅಂಬೇಡ್ಕರ್, ಕೆ. ಕಾಮರಾಜ್, ಸಿಎನ್ ಅಣ್ಣಾದೊರೈ ಮತ್ತು ಕರುಣಾನಿಧಿ ಅವರಂತಹ ನಾಯಕರ ಹೆಸರನ್ನು ಉಲ್ಲೇಖಿಸಲಾಗಿತ್ತು. ಆದರೆ, ರಾಜ್ಯಪಾಲರು ಅವರ ಹೆಸರನ್ನು ತಮ್ಮ ಭಾಷಣದಲ್ಲಿ ಇಂತಹ ಮಹಾನ್ ನಾಯಕರ ಹೆಸರನ್ನೇ ಪ್ರಸ್ತಾಪ ಮಾಡಿರಲಿಲ್ಲ. ಹೀಗಾಗಿ ರಾಜ್ಯಪಾಲರ ಕ್ರಮ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ನಿರ್ಣಯದಲ್ಲಿ ಮುಖ್ಯಮಂತ್ರಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ