ತಮಿಳುನಾಡು ರಾಜ್ಯಪಾಲರು ಪತ್ರಕರ್ತೆಯ ಕೆನ್ನೆ ಸವರಿ ವಿವಾದ ಎಳೆದುಕೊಂಡ್ರಾ ?

news18
Updated:April 18, 2018, 1:32 PM IST
ತಮಿಳುನಾಡು ರಾಜ್ಯಪಾಲರು ಪತ್ರಕರ್ತೆಯ ಕೆನ್ನೆ ಸವರಿ ವಿವಾದ ಎಳೆದುಕೊಂಡ್ರಾ ?
news18
Updated: April 18, 2018, 1:32 PM IST

ನ್ಯೂಸ್ 18 ಕನ್ನಡ


ಚೆನ್ನೈ (ಏ.18) :  ತಮಿಳುನಾಡು ರಾಜ್ಯಪಾಲ ಬನ್ವಾರಿ ಲಾಲ್ ಪುರೋಹಿತ್ ಅವರು, ಪತ್ರಕರ್ತೆಯೊಬ್ಬರ ಕೆನ್ನೆ ಸವರಿ ವಿವಾದಕ್ಕೆ ಗುರಿಯಾಗಿದ್ದಾರೆ.  


ಮಂಗಳವಾರ ರಾಜ್ಯಪಾಲ ಪುರೋಹಿತ್ ಅವರು ಕರೆದಿದ್ದ ಸುದ್ದಿಗೋಷ್ಠಿಗೆ ಆಗಮಿಸಿದ್ದ ಪತ್ರಕರ್ತೆ ಲಕ್ಷ್ಮೀ ಸುಬ್ರಮಣಿಯನ್ ಅವರು ಪ್ರಶ್ನೆಯೊಂದನ್ನು ಕೇಳಿದ್ದರು. ಇದಕ್ಕೆ ಉತ್ತರಿಸುವ ಬದಲು ಪುರೋಹಿತ್ ಅವರು ಪತ್ರಕರ್ತೆಯ ಕೆನ್ನೆ ಸವರಿ ಮುಂದಕ್ಕೆ ಹೋಗಿದ್ದಾರೆಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ, ವೈರಲ್​ ಆಗಿದ್ದು ಟ್ರೋಲ್​ ಆಗುತ್ತಿದೆ. ಅಲ್ಲದೇ, ಖಾಸಗಿ ಪತ್ರಿಕೆಯ ವರದಿಗಾರ್ತಿ ಲಕ್ಷ್ಮೀ ಸುಬ್ರಮಣಿಯನ್ ಕೂಡ ಬನ್ವರಿಲಾಲ್​ ವಿರುದ್ಧ ಟ್ವಿಟರ್​​ನಲ್ಲಿ ಹರಿಹಾಯ್ದಿದ್ದಾರೆ.ನಾನು ರಾಜ್ಯಪಾಲರಿಗೆ ಒಂದು ಪ್ರಶ್ನೆ ಕೇಳಿದೆ. ಆದರೆ ನನ್ನ ಅನುಮತಿಯಿಲ್ಲದೇ ಅವರು ನನ್ನ ಕೆನ್ನೆಯನ್ನ ಸವರಿ ಉತ್ತರ ನೀಡಿದರು ಅಂತ ಹೇಳಿಕೊಂಡಿದ್ದಾರೆ. ಇನ್ನು ನಾನು ಮನೆಗೆ ಬಂದು ಅನೇಕ ಸಾರಿ ನನ್ನ ಮುಖವನ್ನು ತೊಳೆದುಕೊಂಡೆ. ಆದರೇ ಆ ಕೊಳೆ ಮಾತ್ರ ಹೋಗಿಲ್ಲ. ಬನ್ವರಿಲಾಲ್​ ಇದು ನಿಮಗೆ ಅಜ್ಜನಂತ ಸಲುಗೆ ಎನ್ನುವ ಹೊಗಳಿಕೆ ನಿಮಗೆ ಬರಬಹುದು ಆದ್ರೆ ನನ್ನ ಪ್ರಕಾರ ಇದು ತಪ್ಪು ಎಂದು ಟ್ವಿಟರ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ತಮಿಳುನಾಡು ಪತ್ರಕರ್ತರು ಈ ಸಂಬಂಧ ಕ್ಷಮೆ ಕೇಳುವಂತೆ ಆಗ್ರಹಿಸಿ ಸಹಿ ಸಂಗ್ರಹ ಆರಂಭಿಸಿದ್ದಾರೆ.

ಇನ್ನೂ ಈ ಬಗ್ಗೆ  ಡಿಎಂಕೆ ರಾಜ್ಯಾಧ್ಯಕ್ಷ  ಎಂ.ಕೆ.ಸ್ಟಾಲಿನ್,  ರಾಜ್ಯಸಭಾ ಸದಸ್ಯೆ ಕನ್ನಿಮೋಳ್ ಸೇರಿದಂತೆ ಅನೇಕ ರಾಜಕೀಯ ನಾಯಕರುಗಳು ರಾಜ್ಯಪಾಲರ ವಿರುದ್ಧ ಆಕ್ರೊಶವನ್ನು ವ್ಯಕ್ತಪಡಿಸಿದ್ದಾರೆ.

ಪದವಿ ಪಾಸಾಗಲು ಅಧಿಕಾರಿಗಳೊಂದಿಗೆ ದೈಹಿಕ ಸಂಪರ್ಕ ಬೆಳೆಸುವಂತೆ ಆಮಿಷವೊಟ್ಟಿದ್ದ ಉಪನ್ಯಾಸಕಿ ಪ್ರಕರಣದಲ್ಲಿ ರಾಜ್ಯಪಾಲರ ಹೆಸರು ಕೇಳಿ ಬಂದಿದ್ದು.

 

 
First published:April 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...