• Home
 • »
 • News
 • »
 • national-international
 • »
 • Tamil Nadu: ತಮಿಳು ಭಾಷಾ ಪರೀಕ್ಷೆಯಲ್ಲಿ ಪಾಸ್ ಆದ್ರೆ ಮಾತ್ರ ತಮಿಳುನಾಡಿನಲ್ಲಿ ಸರ್ಕಾರಿ ಉದ್ಯೋಗ; ವಿಧೇಯಕ ಅಂಗೀಕಾರ

Tamil Nadu: ತಮಿಳು ಭಾಷಾ ಪರೀಕ್ಷೆಯಲ್ಲಿ ಪಾಸ್ ಆದ್ರೆ ಮಾತ್ರ ತಮಿಳುನಾಡಿನಲ್ಲಿ ಸರ್ಕಾರಿ ಉದ್ಯೋಗ; ವಿಧೇಯಕ ಅಂಗೀಕಾರ

ತಮಿಳುನಾಡು ವಿಧಾನಸಭೆ

ತಮಿಳುನಾಡು ವಿಧಾನಸಭೆ

ತಮಿಳುನಾಡು ಸರ್ಕಾರಿ ನೌಕರರ (ಸೇವಾ ಷರತ್ತುಗಳು) ಕಾಯಿದೆ ಸೆಕ್ಷನ್ 21 ರ ಪ್ರಕಾರ ತಮಿಳು ಭಾಷೆಯ ಬಗ್ಗೆ ಅಭ್ಯರ್ಥಿಗೆ ಸಾಕಷ್ಟು ಜ್ಞಾನವಿದ್ದರೂ, ಅಂತಹ ವ್ಯಕ್ತಿ ನೇರ ನೇಮಕಾತಿ ಮೂಲಕ ಯಾವುದೇ ಸರ್ಕಾರಿ ಹುದ್ದೆ ನೇಮಕಾತಿಗೆ ಅರ್ಹನಾಗಿರುವುದಿಲ್ಲ. ತಮಿಳು ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಮಾತ್ರ ಸರಕಾರಿ ಸೇವೆ ಮತ್ತು ಸರಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಹುದ್ದೆಗಳ್ನು ಪಡೆಯಲು ಅರ್ಹ ಎಂದು ತಮಿಳುನಾಡು ಸರಕಾರ ತಿಳಿಸಿದೆ.

ಮುಂದೆ ಓದಿ ...
 • News18 Kannada
 • 5-MIN READ
 • Last Updated :
 • Chennai [Madras], India
 • Share this:

ಚೆನ್ನೈ: ತಮಿಳುನಾಡು ಸರ್ಕಾರ (Tamil Nadu Government) ಸರಕಾರಿ ಹುದ್ದೆಗಳಿಗೆ (Government Jobs ) ನಡೆಸಲಾಗುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ (competitive exams) ತಮಿಳು ಭಾಷಾ ಪ್ರಶ್ನೆ ಪತ್ರಿಕೆಯನ್ನು ಕಡ್ಡಾಯಗೊಳಿಸಿ ಶುಕ್ರವಾರ ಕಾಯಿದೆಗೆ ತಿದ್ದುಪಡಿ ತಂದಿದೆ. 2016ರ ತಮಿಳುನಾಡು ರಾಜ್ಯ ಸಾರ್ವಜನಿಕ ಸೇವಾ ಕಾಯಿದೆಗೆ ತಿದ್ದುಪಡಿ ತರುವ ಪ್ರಸ್ತಾವಕ್ಕೆ ವಿಧಾನಸಭೆ ಶುಕ್ರವಾರ ಧ್ವನಿ ಮತದ ಮೂಲಕ ಅನುಮೋದಿಸಿದೆ. ಡಿಸೆಂಬರ್ 1, 2021ರಿಂದ ರಾಜ್ಯ ಸರ್ಕಾರಿ ಸೇವೆಗಳ ನೇಮಕಾತಿಗೆ (recruitment) ತಮಿಳು ಭಾಷಾ ಪತ್ರಿಕೆ ಕಡ್ಡಾಯಗೊಳಿಸಲು ವಿಧಾನಸಭೆಯಲ್ಲಿ ಶಾಸನವನ್ನು ತಿದ್ದುಪಡಿ ಮಾಡಿದೆ.


ತಮಿಳುನಾಡು ಸರ್ಕಾರಿ ನೌಕರರ (ಸೇವಾ ಷರತ್ತುಗಳು) ಕಾಯಿದೆ ಸೆಕ್ಷನ್ 21 ರ ಪ್ರಕಾರ ತಮಿಳು ಭಾಷೆಯ ಬಗ್ಗೆ ಅಭ್ಯರ್ಥಿಗೆ ಸಾಕಷ್ಟು ಜ್ಞಾನವಿದ್ದರೂ, ಅಂತಹ ವ್ಯಕ್ತಿ ನೇರ ನೇಮಕಾತಿ ಮೂಲಕ ಯಾವುದೇ ಸರ್ಕಾರಿ ಹುದ್ದೆ ನೇಮಕಾತಿಗೆ ಅರ್ಹನಾಗಿರುವುದಿಲ್ಲ. ತಮಿಳು ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಮಾತ್ರ ಸರಕಾರಿ ಸೇವೆ ಮತ್ತು ಸರಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಹುದ್ದೆಗಳ್ನು ಪಡೆಯಲು ಅರ್ಹ ಎಂದು ತಮಿಳುನಾಡು ಸರಕಾರ ತಿಳಿಸಿದೆ.


ಇದನ್ನೂ ಓದಿ: Tamil Nadu Vs Tamizhagam: ತಮಿಳುನಾಡಿನಲ್ಲಿ ಪೊಂಗಲ್ ಆಹ್ವಾನ ಪತ್ರಿಕೆ ವಿವಾದ, ರಾಜ್ಯಪಾಲರ ನಡೆಗೆ ಸರ್ಕಾರದ ವಿರೋಧ!


ಎರಡು ವರ್ಷದೊಳಗೆ ಪಾಸ್ ಮಾಡಿಕೊಳ್ಳಲು ಅವಕಾಶ


ಅಭ್ಯರ್ಥಿಯು ಅರ್ಜಿ ಸಲ್ಲಿಸುವ ಸಮಯದಲ್ಲಿ ತಮಿಳು ಭಾಷೆಯಲ್ಲಿ ಸಾಕಷ್ಟು ಜ್ಞಾನವನ್ನು ಹೊಂದಿಲ್ಲದಿದ್ದರೂ ಅವರಿಗೆ ನೇಮಕಾತಿಗಾಗಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಒಂದು ವೇಳೆ ಅಂತಹ ಅಭ್ಯರ್ಥಿಗಳು ಅರ್ಹತೆ ಪಡೆದು ನೇಮಕಾತಿಗೊಂಡರೆ ಅವರು ನೇಮಕಾತಿಗೊಂಡ ದಿನಾಂಕದಿಂದ ಎರಡು ವರ್ಷಗಳ ಒಳಗೆ ತಮಿಳಿನಲ್ಲಿ ದ್ವಿತೀಯ ದರ್ಜೆಯ ಭಾಷಾ ಪರೀಕ್ಷೆಯಲ್ಲಿ (second class language test) ಉತ್ತೀರ್ಣರಾಗಬೇಕು ಎಂಬ ಷರತ್ತಿಗೆ ಒಳಪಟ್ಟಿರುತ್ತದೆ. ನೇಮಕಾತಿಯ ದಿನಾಂಕದಿಂದ ಎರಡು ವರ್ಷಗಳ ಅವಧಿಯಲ್ಲಿ ಆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದರೆ ಅವರನ್ನು ಸೇವೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ವಿಧೇಯಕ ಹೇಳಿದೆ.
ತಮಿಳು ಭಾಷಾ ಪತ್ರಿಕೆ ಕಡ್ಡಾಯ


ಡಿಸೆಂಬರ್ 1ರಂದು ಸರ್ಕಾರ ಹೊರಡಿಸಿದರುವ ಆದೇಶದಂತೆ ರಾಜ್ಯದಲ್ಲಿನ ಎಲ್ಲಾ ರಾಜ್ಯ ಸರ್ಕಾರಿ ಇಲಾಖೆಗಳು ಮತ್ತು ರಾಜ್ಯ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಶೇ 100 ರಷ್ಟು ತಮಿಳು ಯುವಕರ ನೇಮಕಾತಿಯನ್ನು ಖಚಿತಪಡಿಸಿಕೊಳ್ಳಲು, ಎಲ್ಲಾ ನೇಮಕಾತಿ ಏಜೆನ್ಸಿಗಳು ನಡೆಸುವ ನೇರ ನೇಮಕಾತಿಗಾಗಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತಮಿಳು ಭಾಷಾ ಪತ್ರಿಕೆಯನ್ನು ಕಡ್ಡಾಯಗೊಳಿಸಿಲಾಗಿದೆ ಮತ್ತು ಅದರಂತೆ ಆದೇಶಗಳನ್ನು ಹೊರಡಿಸಲಾಗಿದೆ.


ಶೇ.40 ಅಂಕ ಕಡ್ಡಾಯ


ವಿದೇಯಕವು ಸೆಕ್ಷನ್ 21ರ ನಂತರ ಹೊಸ ವಿಭಾಗವನ್ನು ಸೆಕ್ಷನ್ 21 Aರಲ್ಲಿ ಅಳವಡಿಸಲಾಗಿದೆ. ಸೆಕ್ಷನ್ 21ರಲ್ಲಿನ ಅಂಶಗಳು ಏನೇ ಇದ್ದರೂ, 2021ರ ಡಿ 1ರಿಂದ, ಯಾವುದೇ ಸೇವೆಯ ಯಾವುದೇ ನೇಮಕಾತಿಗೆ ಅರ್ಜಿ ಸಲ್ಲಿಸಿರುವ ಯಾವುದೇ ವ್ಯಕ್ತಿ, ನೇರ ನೇಮಕಾತಿಗಾಗಿ ನಡೆಸುವ ಪರೀಕ್ಷೆಯಲ್ಲಿ ತಮಿಳು ಭಾಷಾ ಪತ್ರಿಕೆಯಲ್ಲಿ ಶೇ. 40 ಅಂಕವನ್ನು ಕಡ್ಡಾಯವಾಗಿ ಪಡೆದು ಉತ್ತೀರ್ಣರಾಗಬೇಕಾಗುತ್ತದೆ " ಎಂದು ವಿಧೇಯಕ ಸ್ಪಷ್ಟಪಡಿಸಿದೆ.


ಸರ್ಕಾರಿ ಹುದ್ದೆಗೆ ತಮಿಳು ಭಾಷೆ ಕಡ್ಡಾಯಗೊಳಿಸಿದ ತಮಿಳುನಾಡು


ಎಲ್ಲಾ ಹುದ್ದೆಗೆ ತಮಿಳಿಗರನ್ನೇ ನೇಮಕಾತಿ ಮಾಡಲು ಒತ್ತಾಯ


ರಾಜ್ಯದ ಸರಕಾರಿ ಸೇವೆಗಳಿಗೆ ಸ್ಥಳೀಯ ತಮಿಳು ಭಾಷಿಕರನ್ನು ಮಾತ್ರವೇ ನೇಮಕಾತಿ ಮಾಡಿಕೊಳ್ಳಬೇಕು ಎಂಬುದನ್ನು ಖಾತರಿಪಡಿಸಿಕೊಳ್ಳಲು ವಿಧೇಯಕವನ್ನು ಮರು ಪರಿಶೀಲನೆ ನಡೆಸಬೇಕು ಎಂದು ಡಿಎಂಕೆಯ ಟಿ. ವೇಲುಮುರುಗನ್ ಮನವಿ ಮಾಡಿದ್ದಾರೆ. ತಮಿಳಿಗರಿಗೆ ಮಾತ್ರವೇ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ವಿಸಿಕೆ ಸದಸ್ಯ ಜೆ ಮೊಹಮ್ಮದ್ ಶಾನವಾಸ್ ಸಹಾ ವೇಲುಮುರುಗನ್​ಗೆ ಬೆಂಬಲಿಸಿ ಒತ್ತಾಯಿಸಿದರು. ಈ ವಿಧೇಯಕವನ್ನು ಧ್ವನಿಮತದಿಂದ ಅಂಗೀಕರಿಸಲಾಗಿದೆ.

Published by:Rajesha B
First published: