HOME » NEWS » National-international » TAMIL NADU GOVERNMENT GIFTED GOLD RING TO NEW BORN BABYS AS A PART OF JAYALALITHAA 72ND BIRTHDAY CELEBRATION SCT

ಜಯಲಲಿತಾ ಜನ್ಮದಿನದಂದು ಹುಟ್ಟಿದ ಮಕ್ಕಳಿಗೆ ತಮಿಳುನಾಡು ಸರ್ಕಾರದಿಂದ ಚಿನ್ನದ ಉಂಗುರ ಗಿಫ್ಟ್​

ತಮಿಳುನಾಡಿನ ರಾಯಪುರಂನಲ್ಲಿರುವ ಆರ್​ಎಸ್​ಆರ್​ಎಂ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ಹುಟ್ಟಿದ ಮಕ್ಕಳಿಗೆ ಸಚಿವ ಡಿ. ಜಯಕುಮಾರ್ ಚಿನ್ನದ ಉಂಗುರಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

Sushma Chakre | news18-kannada
Updated:February 25, 2020, 10:21 AM IST
ಜಯಲಲಿತಾ ಜನ್ಮದಿನದಂದು ಹುಟ್ಟಿದ ಮಕ್ಕಳಿಗೆ ತಮಿಳುನಾಡು ಸರ್ಕಾರದಿಂದ ಚಿನ್ನದ ಉಂಗುರ ಗಿಫ್ಟ್​
ಜಯಲಲಿತಾ ಹುಟ್ಟುಹಬ್ಬ ಪ್ರಯುಕ್ತ ನವಜಾತ ಶಿಶುಗಳಿಗೆ ಚಿನ್ನದ ಉಂಗುರ ನೀಡಿದ ಸಚಿವ
  • Share this:
ಚೆನ್ನೈ(ಫೆ. 25): ತಮಿಳುನಾಡಿನ ಮಾಜಿ ಸಿಎಂ ದಿ. ಜೆ. ಜಯಲಲಿತಾ ಅವರ ಜನ್ಮದಿನವಾದ ಫೆ. 24ರಂದು ಹುಟ್ಟಿದ ನವಜಾತ ಶಿಶುಗಳಿಗೆ ತಮಿಳುನಾಡು ಸರ್ಕಾರದಿಂದ ಚಿನ್ನದ ಉಂಗುರಗಳನ್ನು ವಿತರಿಸಲಾಗಿದೆ.

ತಮಿಳುನಾಡಿನ ರಾಯಪುರಂನಲ್ಲಿರುವ ಆರ್​ಎಸ್​ಆರ್​ಎಂ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ಹುಟ್ಟಿದ ಮಕ್ಕಳಿಗೆ ಸಚಿವ ಡಿ. ಜಯಕುಮಾರ್ ಚಿನ್ನದ ಉಂಗುರಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಜಯಲಲಿತಾ ಅವರ ಹುಟ್ಟುಹಬ್ಬವನ್ನು ಸರ್ಕಾರದ ವತಿಯಿಂದಲೇ ಆಚರಿಸಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅಧಿವೇಶನದಲ್ಲಿ ಘೋಷಿಸಿದ್ದರು. ಅಲ್ಲದೆ, ಜಯಲಲಿತಾ ಅವರ ಜನ್ಮದಿನವನ್ನು ಮಹಿಳಾ ಮತ್ತು ಮಕ್ಕಳ ಸುರಕ್ಷತಾ ದಿನ ಎಂದು ಘೋಷಿಸುವುದಾಗಿಯೂ ಹೇಳಿದ್ದರು. ಅದರಂತೆ ಇನ್ನು ಪ್ರತಿವರ್ಷವೂ ಫೆ. 24ನ್ನು ಸರ್ಕಾರಿ ದಿನವನ್ನಾಗಿ ಆಚರಿಸಲಾಗುತ್ತದೆ.



ಇದನ್ನೂ ಓದಿ: ಜಯಲಲಿತಾ ಹುಟ್ಟುಹಬ್ಬಕ್ಕೆ ತಲೈವಿ ಅವತಾರ ತಾಳಿದ ಕಂಗನಾ; ಟ್ವಿಟ್ಟರ್​ನಲ್ಲಿ ಫೋಟೋ ವೈರಲ್ಜಯಲಲಿತಾ ಸ್ಮರಣಾರ್ಥ ಎಐಎಡಿಎಂಕೆ ಪಕ್ಷ ಬಡವರಿಗೆ ನೆರವು ನೀಡಲು ಮತ್ತು ವೈದ್ಯಕೀಯ ಶಿಬಿರ ನಡೆಸಲು ಕಾರ್ಯಕರ್ತರಿಗೆ ಕರೆನೀಡಿತ್ತು. ಅದೇ ರೀತಿ ಜಯಲಲಿತಾ ಅವರ ಹೆಸರಿನಲ್ಲಿ ಅನೇಕ ಯೋಜನೆಗಳನ್ನು ಕೂಡ ತಮಿಳುನಾಡು ಸರ್ಕಾರ ಘೋಷಿಸಿದೆ. ಮುಂದಿನ ವರ್ಷಗಳಲ್ಲೂ ಫೆ. 24ರಂದು ಜಯಲಲಿತಾ ಹುಟ್ಟುಹಬ್ಬದ ಪ್ರಯುಕ್ತ ಅಂದು ಜನಿಸಿದ ಮಕ್ಕಳಿಗೆ ಚಿನ್ನದ ಉಂಗುರಗಳನ್ನು ನೀಡುವುದಾಗಿ ಸರ್ಕಾರ ಘೋಷಿಸಿದೆ.
Youtube Video
First published: February 25, 2020, 10:21 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories