BJP ವಿರೋಧಿ ಘೋಷಣೆ ಕೂಗಿ ಅರೆಸ್ಟ್ ಆದ ಯುವತಿಗೆ 2 ಲಕ್ಷ ಪರಿಹಾರ

ಸೋಫಿಯಾ ಅವರು ಚೆನ್ನೈನಿಂದ ತೂತುಕುಡಿಗೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಸಹ-ಪ್ರಯಾಣಿಸುತ್ತಿದ್ದ ತಮಿಳಿಸೈ (ಈಗ ತೆಲಂಗಾಣ ರಾಜ್ಯಪಾಲರು) ಅವರನ್ನು ಭೇಟಿ ಮಾಡಿದಾಗ ವಿಮಾನ ಲ್ಯಾಂಡ್ ಆಗಿದ್ದು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಬಿಜೆಪಿ

ಬಿಜೆಪಿ

  • Share this:
ಬಿಜೆಪಿ ವಿರೋಧಿ ಘೋಷಣೆ (Anti BJP Slogans) ಕೂಗಿದ್ದಕ್ಕೆ ತಮಿಳುನಾಡು (Tamilnadu) ಯುವತಿಯನ್ನು (Youth) ಬಂಧಿಸಿದ್ದ ಘಟನೆಗೆ ಸಂಬಂಧಿಸಿ ಆಕೆಗೆ 2 ಲಕ್ಷ ಪರಿಹಾರ (Compensation) ಘೋಷಿಸಲಾಗಿದೆ. ಆಗಿನ ಬಿಜೆಪಿ ರಾಜ್ಯಾಧ್ಯಕ್ಷೆ ತಮಿಳಿಸೈ ಸೌಂದರರಾಜನ್ ಅವರು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ (Flight) ಸಹ ಪ್ರಯಾಣಿಕಳಾಗಿದ್ದ ಯುವತಿ ಬಿಜೆಪಿ ಸರ್ಕಾರದ (BJP Government) ವಿರುದ್ಧ ಘೋಷಣೆಗಳನ್ನು ಕೂಗಿದ್ದಕ್ಕಾಗಿ ಆಕೆಯನ್ನು ಬಂಧಿಸಲಾಗಿತ್ತು. ತಮಿಳುನಾಡು ಮೂಲದ ಕೆನಡಾ ಮೂಲದ ವಿದ್ಯಾರ್ಥಿನಿ ಲೋಯಿಸ್ ಸೋಫಿಯಾಳ ಬಂಧನವನ್ನು (Arrest) ರಾಜ್ಯ ಮಾನವ ಹಕ್ಕುಗಳ ಆಯೋಗ (ಎಸ್‌ಎಚ್‌ಆರ್‌ಸಿ) ವಿರೋಧಿಸಿದೆ. 2018 ರ ಈ ಘಟನೆಗೆ ಸಂಬಂಧಿಸಿ ಆಕೆಗೆ 2 ಲಕ್ಷ ಪರಿಹಾರ ನೀಡಲು ಸೂಚನೆ ನೀಡಲಾಗಿದೆ. ಆಯೋಗವು ತನ್ನ ಮುಂದೆ ಅರ್ಜಿ ಸಲ್ಲಿಸಿದ ಆಕೆಯ ತಂದೆ ಸಾಮಿಗೆ 2 ಲಕ್ಷ ರೂಪಾಯಿ (2 Lakh Rupees) ಪರಿಹಾರವನ್ನು ಪಾವತಿಸಲು ಆದೇಶಿಸಿದೆ. ಆಕೆಯನ್ನು ಬಂಧಿಸಿದ ಪೊಲೀಸ್ ಸಿಬ್ಬಂದಿಯಿಂದ ಹಣವನ್ನು ವಸೂಲಿ ಮಾಡುವಂತೆ ಸೂಚಿಸಿದೆ.

ಸೋಫಿಯಾ ಅವರು ಚೆನ್ನೈನಿಂದ ತೂತುಕುಡಿಗೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಸಹ-ಪ್ರಯಾಣಿಸುತ್ತಿದ್ದ ತಮಿಳಿಸೈ (ಈಗ ತೆಲಂಗಾಣ ರಾಜ್ಯಪಾಲರು) ಅವರನ್ನು ಭೇಟಿ ಮಾಡಿದಾಗ ವಿಮಾನ ಲ್ಯಾಂಡ್ ಆಗಿದ್ದು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪಕ್ಷದ ದೂರಿನ ನಂತರ ವಿದ್ಯಾರ್ಥಿನಿ ಅರೆಸ್ಟ್

ಇದು ಬಿಜೆಪಿ ನಾಯಕನೊಂದಿಗೆ ವಾಗ್ವಾದಕ್ಕೆ ಕಾರಣವಾಯಿತು. ಪಕ್ಷದ ಪದಾಧಿಕಾರಿಗಳ ದೂರಿನ ಮೇರೆಗೆ ಪೊಲೀಸರು ಸೋಫಿಯಾಳನ್ನು ಬಂಧಿಸಿದರು.

ಆಕೆಯ ಬಂಧನ ಮತ್ತು ನಂತರದ ನ್ಯಾಯಾಂಗ ಬಂಧನವನ್ನು ಪ್ರಶ್ನಿಸಿ, ಆಕೆಯ ತಂದೆ ಪೊಲೀಸ್ ಅಧಿಕಾರಿಗಳು ಆಕೆಗೆ ಚಿತ್ರಹಿಂಸೆ ನೀಡಿದ್ದಾರೆ. ಆಕೆಗೆ ಆಳವಾದ ಮಾನಸಿಕ ಸಂಕಟವನ್ನು ಉಂಟುಮಾಡಿದ್ದಾರೆ ಎಂದು ಆರೋಪಿಸಿ SHRC ಗೆ ತೆರಳಿದರು. ಆಕೆಯ ಬಂಧನವು ಸುಪ್ರೀಂ ಕೋರ್ಟ್‌ನ ನಿರ್ದೇಶನವನ್ನು ಉಲ್ಲಂಘಿಸಿದೆ ಎಂದು ಅವರು ವಾದಿಸಿದರು.

ಪೊಲೀಸರ ಅರೋಪ

ಪೊಲೀಸ್ ಅಧಿಕಾರಿಗಳು, ಅವಳು ಸಹ-ಪ್ರಯಾಣಿಕರಿಗೆ (Co-Passengers) ಕಿರುಚಾಡುವ ಮೂಲಕ ಮತ್ತು ಹೆಚ್ಚಿನ ಭದ್ರತಾ ವಲಯದಲ್ಲಿ - ವಿಮಾನ ನಿಲ್ದಾಣದಲ್ಲಿ (Airport) ಸೀನ್ ಕ್ರಿಯೇಟ್ ಮಾಡಿ ತೊಂದರೆ ಉಂಟುಮಾಡಿದ್ದಾಳೆ ಎಂದು ಹೇಳಿದ್ದಾರೆ.

ಕೋರ್ಟ್ ಕಾರ್ಯವಿಧಾನ ಅನುಸರಿಸದೆ ಅರೆಸ್ಟ್

ಆಕೆಯ ವಿರುದ್ಧ ಹೊರಿಸಲಾದ ಆರೋಪಗಳಿಗೆ ಆಕೆಯ ಬಂಧನವು (Arrest) ಅನಿವಾರ್ಯವಲ್ಲ ಎಂದು SHRC ಸದಸ್ಯ ಡಿ ಜಯಚಂದ್ರನ್ ಹೇಳಿದ್ದಾರೆ. ಸುಪ್ರೀಂ ಕೋರ್ಟ್ (Court) ನಿಗದಿಪಡಿಸಿದ ಕಾರ್ಯವಿಧಾನವನ್ನು ಅನುಸರಿಸದೆ ಪೊಲೀಸರು ಅವಳನ್ನು ಬಂಧಿಸಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ರಾಕೆಟ್ ಮೇಲಿದ್ದ ಅಮೆರಿಕಾ, ಬ್ರಿಟನ್ ಧ್ವಜಗಳಿಗೆ ಕೊಕ್: ಭಾರತದ ಧ್ವಜವನ್ನು ಉಳಿಸಿಕೊಂಡ Russia.. ಏಕೆ?

ಯುವತಿ ತಂದೆಗೆ 2 ಲಕ್ಷ ರೂಪಾಯಿ

ಆದ್ದರಿಂದ ಆಕೆಯ ತಂದೆಗೆ 2 ಲಕ್ಷ ರೂಪಾಯಿ (2 lakh Rupees) ಪರಿಹಾರ ನೀಡುವಂತೆ ಆದೇಶಿಸಿದರು. ಈ ಮೊತ್ತವನ್ನು ಏಳು ಪೊಲೀಸ್ (Police) ಸಿಬ್ಬಂದಿಯಿಂದ ಒಬ್ಬರಿಂದ 50,000 ರೂ.ನಂತೆ ಮತ್ತು ಆರು ಇತರರಿಂದ ತಲಾ 25,000 ರೂ.ನಂತೆ ವಸೂಲಿ ಮಾಡಬೇಕು ಎಂದು ಎಸ್‌ಎಚ್‌ಆರ್‌ಸಿ (SHRC) ತಿಳಿಸಿದೆ.

ಇದನ್ನೂ ಓದಿ: Police commissioner: ಪರ್ಸನಲ್ ಮೊಬೈಲ್​ ನಂಬರ್ ಫೇಸ್​ಬುಕ್​ನಲ್ಲಿ ಶೇರ್ ಮಾಡಿದ ಕಮಿಷನರ್..! ಕಾರಣ?

ರಾಜಕೀಯ ಮುಖಂಡರು , ನಾಯಕರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಇಂಥಹ ಘಟನೆಗಳಾಗುವುದು ಸಾಮಾನ್ಯ. ಬಹಳಷ್ಟು ಸಂದರ್ಭದಲ್ಲಿ ರ್ಯಾಲಿ, ಕ್ಯಾಂಪೇನ್​ಗಳಲ್ಲಿ (Campaign) ಇಂತಹ ಘಟನೆಗಳು ನಡೆಯುತ್ತಿರುತ್ತವೆ. ಇದೀಹ 2018ರ ಪ್ರಕರಣದಲ್ಲಿ ಮಗಳ ಪರವಾಗಿ ಕೋರ್ಟ್ ಮೆಟ್ಟಿಲೇರಿದ್ದ ತಂದೆಗೆ ಕೊನೆಗೂ ಪರಿಹಾರ ಸಿಕ್ಕಿದೆ.
Published by:Divya D
First published: