• Home
  • »
  • News
  • »
  • national-international
  • »
  • Hunt Tiger: ನಾಲ್ಕು ಜನರನ್ನ ತಿಂದು ತೇಗಿದ ಹುಲಿರಾಯ! ಕಂಡಲ್ಲಿ ಗುಂಡಿಕ್ಕಿ ಕೊಲ್ಲುವಂತೆ ಆರ್ಡರ್

Hunt Tiger: ನಾಲ್ಕು ಜನರನ್ನ ತಿಂದು ತೇಗಿದ ಹುಲಿರಾಯ! ಕಂಡಲ್ಲಿ ಗುಂಡಿಕ್ಕಿ ಕೊಲ್ಲುವಂತೆ ಆರ್ಡರ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತಮಿಳುನಾಡು ಮುಖ್ಯ ವನ್ಯಜೀವಿ ವಾರ್ಡನ್ ಡಾ. ಶೇಖರ್ ಕುಮಾರ್ ನಿರಜ್ (IFS) ಶುಕ್ರವಾರ ಹುಲಿಯನ್ನು ಕೊಲ್ಲಲು ಆದೇಶ ನೀಡಿದ್ದಾರೆ. ಅದನ್ನು ಜೀವಂತವಾಗಿ ಸೆರೆ ಹಿಡಿಯಲು ಪ್ರಯತ್ನಿಸಿ ಈ ಹಿಂದೆ ಅರಣ್ಯ ಇಲಾಖೆಯ ವಿಫಲಗೊಂಡಿತ್ತು

  • Share this:

    ತಮಿಳುನಾಡಿನ(Tamil Nadu) ಗುಡ್ಲೂರಿನ ಗ್ರಾಮಸ್ಥರು ಹುಲಿ(Tiger)ಯೊಂದರ ಅಟ್ಟಹಾಸಕ್ಕೆ ನಲುಗಿ ಹೋಗಿದ್ದಾರೆ. ಕಳೆದ ಕೆಲದಿನಗಳಿಂದ ಗುಡ್ಲೂರಿ(Gudlur) ನಲ್ಲಿ ನೆಲೆಸಿರೋ ಹುಲಿ ಇಲ್ಲಿರುವ ಜನರ ನೆಮ್ಮದಿಯನ್ನು ಹಾಳು ಮಾಡಿದೆ. ಸಿಕ್ಕ ಸಿಕ್ಕ ಜಾನುವಾರಗಳನ್ನು ಎಳೆದುಕೊಂಡು ಹೋಗಿ ತಿಂದು ತೆಗುತ್ತಿದೆ. ಇಷ್ಟಕ್ಕೆ ಹಸಿವು ದಾಹ ನೀಗದ ಹುಲಿ 4 ಜನರನ್ನ ಕೊಂದುಹಾಕಿದೆ. ಗುಡ್ಲೂರು ಊಟಿಯಿಂದ 50 ಕಿಲೋ ಮೀಟರ್ ದೂರದಲ್ಲಿದೆ. ಈ ಗ್ರಾಮ ಕೇರಳ ಗಡಿಗೆ ಹೊಂದಿಕೊಂಡಿದೆ. ಇಲ್ಲಿನ ಜನ ಕಳೆದ ಕೆಲದಿನಗಳಿಂದ ಮನೆಯಿಂದ ಹೊರಬರಲು ಬೆಚ್ಚಿಬೀಳುತ್ತಿದ್ದಾರೆ. ಮನೆಯಿಂದ ಹೊರಗೆ ಕಾಲಿಟ್ಟವರನ್ನ ಗಂಡು ಹುಲಿಯೊಂದು ಕೊಂದು, ತಿಂದು ಮುಗಿಸಿದೆ. ನರಭಕ್ಷಕನ ಅಟ್ಟಹಾಸಕ್ಕೆ ಶುಕ್ರವಾರ ಮತ್ತೊಂದು ಬಲಿಯಾಗಿದೆ. ಹೀಗಾಗಿ ತಮಿಳುನಾಡು ಮುಖ್ಯ ವನ್ಯಜೀವಿ ವಾರ್ಡನ್ ಹುಲಿಯನ್ನು ಕೊಲ್ಲಲು ಆದೇಶ ನೀಡಿದ್ದಾರೆ. ಈ ಹುಲಿಗೆ T-23 ಅಂತ ಕೋಡ್ ನೀಡಲಾಗಿತ್ತು. ಕಳೆದ ಕೆಲದಿನಗಳ ಹಿಂದೆ ಗುಡ್ಲೂರಿಗೆ ಆಹಾರ ಅರಸಿ ಬಂದಿತ್ತು.ಮೇಯಲು ಬಿಟ್ಟಿದ್ದ ಜಾನುವಾರಗಳನ್ನು ತಿಂದುಹಾಕಿ, ಬಳಿಕ ಮನುಷ್ಯರನ್ನು ಕೊಂದು ತಿಂದು ಮುಗಿಸಿದೆ.


    ತಮಿಳುನಾಡು ಮುಖ್ಯ ವನ್ಯಜೀವಿ ವಾರ್ಡನ್ ಡಾ. ಶೇಖರ್ ಕುಮಾರ್ ನಿರಜ್ (IFS) ಶುಕ್ರವಾರ ಹುಲಿಯನ್ನು ಕೊಲ್ಲಲು ಆದೇಶ ನೀಡಿದ್ದಾರೆ. ಅದನ್ನು ಜೀವಂತವಾಗಿ ಸೆರೆ ಹಿಡಿಯಲು ಪ್ರಯತ್ನಿಸಿ ಈ ಹಿಂದೆ ಅರಣ್ಯ ಇಲಾಖೆಯ ವಿಫಲಗೊಂಡಿತ್ತು. ಹೀಗಾಗಿ ನರಭಕ್ಷಕ ಹುಲಿಯನ್ನು ಗುಂಡಿಕ್ಕಿ ಕೊಲ್ಲಲು ಆದೇಶ ನೀಡಲಾಗಿದೆ. 1 ವಾರದ ಹಿಂದೆ
    ಗುಡ್ಲೂರಿನ ನೀಲಗಿರಿಯ ಎಸ್ಟೇಟ್ ಬಳಿ, 10 ವರ್ಷದ ಗಂಡು ಹುಲಿ ಕುರಿಗಾಹಿಯನ್ನ ಕೊಂದು ಹಾಕಿತ್ತು. ಈ ಘಟನೆ ಬಳಿಕ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಹುಲಿ ಬೇಟೆಗೆ ಕಾರ್ಯಾಚರಣೆ ನಡೆಸಿದರು. 75 ಅರಣ್ಯ ಇಲಾಖೆ ಸಿಬ್ಬಂದಿಯನ್ನು ಒಳಗೊಂಡ ಐದು ತಂಡಗಳು ವ್ಯಾಘ್ರನ ಬೇಟೆಗೆ ಇಳಿದಿತ್ತು. ಜೊತೆಗೆ ಸ್ಲೀಪರ್ ನಾಯಿಗಳು, ಡ್ರೋನ್ ಗಳು, ಹಾಗೂ ಆನೆಗಳನ್ನು ಬಳಸಿಕೊಂಡು ಹುಲಿಗಾಗಿ ಹುಡುಕಾಟ ಶುರು ಮಾಡಿತ್ತು.


    ಇದನ್ನೂ ಓದಿ:Viral video: ಮೇಕೆ ಮರಿ ಮೇಲೆ ಕುಳಿತು ಚೆರಿ ಹಣ್ಣು ತಿಂದ ಕೋತಿ ಮರಿ; ಕ್ಯೂಟ್​​ ವಿಡಿಯೋ ವೈರಲ್


    ಕಾರ್ಯಾಚರಣೆ ಮಧ್ಯೆಯೇ ಒಂದು ಬಾರಿ ಹುಲಿ ಹಿಡಿಯುವ ಕಾರ್ಯ ವಿಫಲಗೊಂಡಿತ್ತು. ಈ ವೇಳೆ ಹುಲಿಗೂ ಕೆಲ ಗಾಯವಾಗಿದೆ. ಈ ವ್ಯಾಘ್ರನ ಬೇಟೆಗಾಗಿ ಕೇರಳದಿಂದ ಸ್ಪೆಷಲ್ ಟಾಸ್ಕ್ ಫೋರ್ಸ್ ಟೀಮ್ ಕೂಡ ಕಾರ್ಯಾಚರಣೆಗಿಳಿದಿತ್ತು. ಕಳೆದ ಆರು ದಿನಗಳಿಂದ ಹುಲಿಯನ್ನು ಬೇಟೆಯಾಡಲು ಸತತ ಪ್ರಯತ್ನಗಳು ನಡೆಯುತ್ತಿತ್ತು. ವ್ಯಕ್ತಿಯನ್ನು ಕೊಂದುಹಾಕಿದ ಸ್ಥಳದಿಂದ ಎರಡು ಕಿಲೋಮೀಟರ್ ಒಳಗೆ ಹುಲಿ ಇರುವುದು ಸ್ಪಷ್ಟವಾಗಿತ್ತು. ಮತ್ತೆ ಸೆಪ್ಟೆಂಬರ್ 29 ರಂದು ಕುರಿಯೊಂದನ್ನು ಹುಲಿ ಕೊಂದು ಹಾಕಿತ್ತು. ಇದಾದ ಬಳಿಕ ಅಟ್ಟಕರೈಗೆ ಪ್ರದೇಶಕ್ಕೆ ಹುಲಿ ಎಂಟ್ರಿಯಾಗಿದೆ. ನಿನ್ನೆ ಮಧ್ಯಾಹ್ನ ವೇಳೆಗೆ ಮತ್ತೆ 85 ವರ್ಷದ ವ್ಯಕ್ತಿಯನ್ನು ಹುಲಿ ಕೊಂದು ಹಾಕಿದೆ.


    ಹುಲಿರಾಯನ ಸತತ ಕಾಟದಿಂದ ರೋಸಿಹೋಗಿದ್ದ ಗ್ರಾಮಸ್ಥರು ಆಕ್ರೋಶ ಹೊರಹಾಕಿದರು. ಹುಲಿಯಿಂದ ನಮ್ಮ ಪ್ರವಾಸೋದ್ಯಮ ವ್ಯಾಪಾರ ಕುಸಿದು ಹೋಗಿದೆ. ದಯವಿಟ್ಟು ಹುಲಿಯನ್ನ ಹಿಡಿಯುವಂತೆ ಶುಕ್ರವಾರ ಪ್ರತಿಭಟನೆ ನಡೆಸಿದರು. ಮಸಿನಕುಡಿ ಅರಣ್ಯ ರಸ್ತೆಯನ್ನು ತಡೆದು ಆಕ್ರೋಶ ಹೊರಹಾಕಿದರು. ಕೊನೆಗೂ ಮಣಿದ ಅರಣ್ಯ ಇಲಾಖೆ ಸೆಕ್ಷನ್ 11 (1) (ಎ) ಅಡಿಯಲ್ಲಿ ಹುಲಿಯನ್ನು ಕಂಡಲ್ಲಿ ಕೊಲ್ಲಲು ಆದೇಶ ನೀಡಿದೆ. ಮತ್ತೊಬ್ಬರನ್ನು ತಿಂದು ತೇಗುವ ಮುನ್ನ, ಈ ನರಭಕ್ಷಕನನ್ನ ಕೊಂದು ಹಾಕಿ ಎಂದು ಗ್ರಾಮಸ್ಥರು ಹೇಳಿದ್ದಾರೆ.


    • ವರದಿ - ವಾಸುದೇವ್. ಎಂ

    Published by:Latha CG
    First published: