news18-kannada Updated:February 21, 2021, 3:47 PM IST
ಮದುಮಕ್ಕಳಿಗೆ ಪೆಟ್ರೋಲ್, ಗ್ಯಾಸ್ ಸಿಲಿಂಡರ್ ಉಡುಗೊರೆ ನೀಡುತ್ತಿರುವುದು.
ಚೆನ್ನೈ (ಫೆಬ್ರವರಿ 21); ಮದುವೆಯಾದ ಹೊಸ ದಂಪತಿಗಳಿಗೆ ಚಿನ್ನ-ಬೆಳ್ಳಿ ಆಭರಣಗಳು ಅಥವಾ ವಿವಿಧ ಬೆಲೆಬಾಳುವ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು ವಾಡಿಕೆ. ಆದರೆ, ಇಲ್ಲೊಂದು ಮದುವೆಯಲ್ಲಿ ಗೆಳೆಯರು ನವ ದಂಪತಿಗಳಿಗೆ ಪೆಟ್ರೋಲ್, ಗ್ಯಾಸ್ ಸಿಲಿಂಡರ್ ಮತ್ತು ಈರುಳ್ಳಿಯನ್ನು ಉಡುಗೊರೆಯಾಗಿ ನೀಡುವ ಮೂಲಕ ಅಚ್ಚರಿಕೆ ಕಾರಣರಾಗಿದ್ದಾರೆ. ಅಲ್ಲದೆ, ಈ ಮೂಲಕ ಬೆಲೆ ಏರಿಕೆಯ ವಿರುದ್ಧ ಪರೋಕ್ಷವಾಗಿ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದಾರೆ. 45 ಸೆಕೆಂಡ್ಗಳ ಈ ಕ್ಲಿಪ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಅಷ್ಟಕ್ಕೂ ಈ ಮದುವೆ ನಡೆದದ್ದು ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ. ಮದುವೆ ಸಮಾರಂಭದಲ್ಲಿ ವಧು-ವರರ ಸ್ನೇಹಿತರು ದುಬಾರಿ ಉಡುಗೊರೆ ನೀಡಲು ಯೋಚಿಸಿ, ಒಂದು ಎಲ್ಪಿಜಿ ಸಿಲಿಂಡರ್, ಕ್ಯಾನ್ ಪೆಟ್ರೋಲ್ ನೀಡಿದ್ದಾರೆ. ಜೊತೆಗೆ ಈರುಳ್ಳಿಯಿಂದ ಮಾಡಿದ ಹೂಮಾಲೆಗಳನ್ನು ತೋಡಿಸಿ ಗಮನ ಸೆಳೆದಿದ್ದಾರೆ. 45 ಸೆಕೆಂಡ್ಗಳ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ನೂರಾರು ಮಂದಿ ತಮ್ಮ ವಾಲ್ಗಳಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ವಿವಿಧ ರೀತಿಯಲ್ಲಿ ಕಮೆಂಟ್ಗಳನ್ನೂ ಮಾಡಿದ್ದಾರೆ.
ನವ ದಂಪತಿಯಾದ ಕಾರ್ತಿಕ್ ಮತ್ತು ಶರಣ್ಯ ಈ ಗಿಫ್ಟ್ಗಳಿಂದ ಆಶ್ಚರ್ಯಚಕಿತರಾಗಿದ್ದು, ಎಲ್ಪಿಜಿ ಸಿಲಿಂಡರ್, ಪೆಟ್ರೋಲ್, ಈರುಳ್ಳಿ ಹಾರಗಳನ್ನು ಧರಿಸಿ ಫೋಟೋಗೆ ಪೋಸ್ ನೀಡಿದ್ದಾರೆ. ಮದುವೆಗೆ ಆಗಮಿಸಿದ್ದ ಅತಿಥಿಗಳು ಕೂಡ ಸ್ನೇಹಿತರ ಈ ಉಡುಗೊರೆಗಳನ್ನು ನೋಡಿ ನಗು ಚೆಲ್ಲಿದ್ದಾರೆ.
ದೇಶದಲ್ಲಿ ಕಳೆದ 12 ದಿನಗಳಿಂದ ಇಂಧನ ಬೆಲೆ ಸತತವಾಗಿ ಹೆಚ್ಚಾಗುತ್ತಿದೆ. ಇದರ ಜೊತೆಗೆ ಒಕ್ಕೂಟ ಸರ್ಕಾರ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಯುವ ಜನತೆ ಹೀಗೆ ಉಡುಗೊರೆಗಳನ್ನು ನೀಡುವ ಮೂಲಕ ಬೆಲೆ ಏರಿಕೆಯನ್ನು ವಿಭಿನ್ನವಾಗಿ ವಿರೋಧಿಸಿದ್ದಾರೆ.
ಇದನ್ನೂ ಓದಿ: Bird Flu: ಮನುಷ್ಯರಿಗೂ ಹರಡುತ್ತೆ ಹಕ್ಕಿ ಜ್ವರ; ರಷ್ಯಾದ 7 ಜನರಲ್ಲಿ ವಿಶ್ವದ ಮೊದಲ H5N8 ವೈರಸ್ ಪತ್ತೆ
ಚೆನ್ನೈನಲ್ಲಿ ಪೆಟ್ರೋಲ್ಗೆ ಪ್ರತಿ ಲೀಟರ್ಗೆ 92.25 ರೂ. ಮತ್ತು ಲೀಟರ್ ಡೀಸೆಲ್ಗೆ 85.63 ರೂ. ಮಾರಾಟ ಮಾಡಲಾಗುತ್ತಿದೆ. ದೆಹಲಿಯಲ್ಲಿ, ಮೊದಲ ಬಾರಿಗೆ ಪೆಟ್ರೋಲ್ ಬೆಲೆ ಶುಕ್ರವಾರ 90 ರೂ. ಗಡಿ ದಾಟಿದೆ. ಇನ್ನೂ ರಾಜಸ್ಥಾನ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ ಈಗಾಗಲೇ 100 ರೂ.ಗಳ ಗಡಿ ದಾಟಿದೆ.
ಇಂಧನ ದರ ಏರಿಕೆ ಖಂಡಿಸಿ ದೇಶದಲ್ಲಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಮೀಮ್ಸ್ಗಳು ಹರಿದಾಡುತ್ತಿವೆ. ನಿನ್ನೆಯಷ್ಟೇ (ಫೆ.20) ಮಹಾರಾಷ್ಟ್ರದಲ್ಲಿ ಅಂತರರಾಜ್ಯ ಡೀಸೆಲ್ ಕಳ್ಳರ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿ, ಗ್ಯಾಂಗ್ನ 14 ಸದಸ್ಯರನ್ನು ವಶಕ್ಕೆ ಪಡೆದಿದ್ದರು.
Published by:
MAshok Kumar
First published:
February 21, 2021, 3:47 PM IST