M K Stalin: ದೆಹಲಿಗೆ ಕೈಕಟ್ಟಿ ನಿಲ್ಲಲು ಹೋಗಲ್ಲ, ಬಿಜೆಪಿ ಜೊತೆ ಹೊಂದಾಣಿಕೆಯೇ ಇಲ್ಲ: ಎಂ ಕೆ ಸ್ಟಾಲಿನ್

ತಮಿಳುನಾಡು ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವಿನ ಸಂಬಂಧವನ್ನು ಡಿಎಂಕೆ ಮತ್ತು ಬಿಜೆಪಿ ನಡುವಿನ ಸಂಬಂಧ ಎಂದು ತಪ್ಪಾಗಿ ಭಾವಿಸಬಾರದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಚೆನ್ನೈ: ಬಿಜೆಪಿ ಜೊತೆ ಸಣ್ಣ ಹೊಂದಾಣಿಕೆಯನ್ನೂ ಮಾಡಿಕೊಳ್ಳುವುದಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ, ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ ಖಚಿತಪಡಿಸಿದ್ದಾರೆ. ಬಿಜೆಪಿ ಮತ್ತು ಡಿಎಂಕೆ, ಎರಡೂ ಪಕ್ಷಗಳ ನಡುವೆ ಯಾವುದೇ ಸಂಬಂಧವಿಲ್ಲದ ಕಾರಣ ಡಿಎಂಕೆಯು ಬಿಜೆಪಿಯೊಂದಿಗೆ (DMK-BJP) ಚಿಕ್ಕ  ಹೊಂದಾಣಿಕೆಯನ್ನೂ ಮಾಡಿಕೊಳ್ಳುವುದಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (Tamil Nadu CM MK Stalin) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ರಾಷ್ಟ್ರ ರಾಜಧಾನಿ ದೆಹಲಿಗೆ ತೆರಳುವ ಮೊದಲು ತಿಳಿಸಿದ್ದಾರೆ. ತಮ್ಮ ನಿಗದಿತ ದೆಹಲಿ ಭೇಟಿಯ ಕುರಿತು ಮಾತನಾಡಿದ ಸಿಎಂ ಸ್ಟಾಲಿನ್, ಕೈ ಕಟ್ಟಿ ಸುಮ್ಮನೆ ಕೇಳಲು ಅಲ್ಲಿಗೆ ಹೋಗುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

    ಪ್ರಮುಖ ದಲಿತ ನಾಯಕ ಮತ್ತು ಡಿಎಂಕೆ ಮಿತ್ರಪಕ್ಷ ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಮುಖ್ಯಸ್ಥ ತೋಲ್ ತಿರುಮಾವಳವನ್ ಅವರ 60 ನೇ ಹುಟ್ಟುಹಬ್ಬದ ಅಂಗವಾಗಿ ನಡೆದ ಸಮಾರಂಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಸ್ಟಾಲಿನ್ ತಿಳಿಸಿದ್ದಾರೆ.

    ತಮಿಳುನಾಡಿಗೆ ಅಗತ್ಯ ಯೋಜನೆ ತರುವೆ
    ಕೇಂದ್ರ ಸರ್ಕಾರದಿಂದ ನಮ್ಮ ಜನರಿಗೆ ಅಗತ್ಯ ಯೋಜನೆಗಳನ್ನು ಪಡೆಯಲು ನಾನು ತಮಿಳುನಾಡಿನ ಮುಖ್ಯಮಂತ್ರಿಯಾಗಿ ದೆಹಲಿಗೆ ಹೋಗುತ್ತಿದ್ದೇನೆ. ತಮಿಳುನಾಡು ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವಿನ ಸಂಬಂಧವನ್ನು ಡಿಎಂಕೆ ಮತ್ತು ಬಿಜೆಪಿ ನಡುವಿನ ಸಂಬಂಧ ಎಂದು ತಪ್ಪಾಗಿ ಭಾವಿಸಬಾರದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತಿಳಿಸಿದ್ದಾರೆ.

    ಡಿಎಂಕೆ ಎಂದೂ ಹಿಂದೆ ಹೆಜ್ಜೆಯಿಡಲ್ಲ
    ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಯಾವಾಗಲೂ ತನ್ನ ನೀತಿಗಳನ್ನು ಬಲವಾಗಿ ಮಂಡಿಸುತ್ತದೆ.  ತಿರುಮಾವಲನ್ ಹೇಳಿದಂತೆ ಡಿಎಂಕೆ ಕನಿಷ್ಠ ರಾಜಿಯನ್ನು ಮಾಡಿಕೊಳ್ಳುವುದಿಲ್ಲ ಎಂದು ತಮಿಳುನಾಡು ಸಿಎಂ ಸ್ಟಾಲಿನ್ ಹೇಳಿದ್ದಾರೆ.

    ತಮಿಳು ಭಾಷೆಯ ಅಧಿಕೃತತೆಗೆ ಆಗ್ರಹಿಸಿದ್ದ ಸಿಎಂ ಸ್ಟಾಲಿನ್
    ಈ ಮುನ್ನ ದೇಶದಲ್ಲಿ ಹಿಂದಿ ಮತ್ತು ಪ್ರಾದೇಶಿಕ ಭಾಷಾ ವೈವಿಧ್ಯತೆಯ ಚರ್ಚೆಯ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಕೇಂದ್ರ ಸರ್ಕಾರಿ ಕಚೇರಿಗಳು ಮತ್ತು ಮದ್ರಾಸ್ ಹೈಕೋರ್ಟ್‌ನಲ್ಲಿ ತಮಿಳು ಭಾಷೆಯನ್ನು ಅಧಿಕೃತ ಭಾಷೆಯಾಗಿ ಘೋಷಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಉಪಸ್ಥಿತರಿದ್ದ ಸಮಾರಂಭದಲ್ಲಿಯೇ ಆಗ್ರಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ರಾಜ್ಯಪಾಲ ಆರ್ ಎನ್ ರವಿ, ಕೇಂದ್ರ ಸಚಿವ ಎಲ್ ಮುರುಗನ್ ಮತ್ತು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ಸಮ್ಮುಖದಲ್ಲಿ 2,960 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ 5 ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಿದ್ದರು.

    ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ತಮಿಳುನಾಡು ರಾಜ್ಯಕ್ಕೆ ಹೆಚ್ಚಿನ ಅನುದಾನ ಒದಗಿಸುವಂತೆಯೂ ಆಗ್ರಹಿಸಿದ್ದರು. ತಮಿಳುನಾಡಿನ ಬೆಳವಣಿಗೆಯು ಕೇವಲ ಆರ್ಥಿಕ ಮಾನದಂಡಗಳ ಮೇಲೆ ಮಾತ್ರವಲ್ಲದೆ ಅಂತರ್ಗತ ಬೆಳವಣಿಗೆಯ 'ದ್ರಾವಿಡ ಮಾದರಿ'ಯನ್ನು ಆಧರಿಸಿದೆ ಎಂದು ವಿವರಿಸಿದ್ದರು.

    ಇದನ್ನೂ ಓದಿ: Sabarimala Temple: ಭಕ್ತಾದಿಗಳೇ ಗಮನಿಸಿ, ಶಬರಿಮಲೆ ಅಯ್ಯಪ್ಪ ದೇವಸ್ಥಾನ ದರ್ಶನಕ್ಕೆ ಇಂದಿನಿಂದ ಅವಕಾಶ

    ತಮಿಳುನಾಡಿನ ಬೆಳವಣಿಗೆಗೆ ಇಂತಹ ಮೂಲಸೌಕರ್ಯ ಯೋಜನೆಗಳು ಪ್ರಮುಖವಾಗಿವೆ ಮತ್ತು ರಾಜ್ಯವು ಈಗಾಗಲೇ ಹಲವಾರು ಕ್ಷೇತ್ರಗಳಲ್ಲಿ ದೇಶದಲ್ಲಿ ಮುನ್ನಡೆಯಲ್ಲಿದೆ ಎಂದು ಅವರು ಆಗ್ರಹ ವ್ಯಕ್ತಪಡಿಸಿದ್ದರು.

    ಇದನ್ನೂ ಓದಿ: Mahanadi Flood: ಮಹಾನದಿ ಸಿಟ್ಟಿಗೆ ಒಡಿಶಾ ತತ್ತರ; 2 ಲಕ್ಷಕ್ಕೂ ಜನರಿಗೆ ಸಮಸ್ಯೆ, ಸಾವಿರಾರು ಎಕರೆ ಮುಳುಗಡೆ

    ತಮಿಳುನಾಡಿಗೆ ಧನ ಸಹಾಯ ಹೆಚ್ಚಿಸಿ
    ತಮಿಳುನಾಡಿನ ಬೆಳವಣಿಗೆಯ ಪಥವು ಅನನ್ಯವಾಗಿದೆ. ಏಕೆಂದರೆ ಇದು ಆರ್ಥಿಕ ಬೆಳವಣಿಗೆಗೆ ಮಾತ್ರವಲ್ಲ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯಿಂದ ನಡೆಸಲ್ಪಡುವ ಎಲ್ಲರನ್ನೂ ಒಳಗೊಂಡ ಬೆಳವಣಿಗೆಯಾಗಿದೆ. ಇದು 'ದ್ರಾವಿಡ ಮಾದರಿ'. ಇಂತಹ ಮಾದರಿಯನ್ನು ಅನುಸರಿಸಿ ಎಂದು ಎಂದು ಸ್ಟಾಲಿನ್ ಒತ್ತಾಯಿಸಿದ್ದರು.
    Published by:guruganesh bhat
    First published: