Annamalai: ತಮಿಳುನಾಡಲ್ಲಿ ಹಿಂದಿ ಹೇರಲು ಬಿಡಲ್ಲ ಎಂದ ಅಣ್ಣಾಮಲೈ

ಹಿಂದಿ ಹೇರಿಕೆಯನ್ನು ನಾವು ಎಂದಿಗೂ ಒಪ್ಪುವುದಿಲ್ಲ. ಅದನ್ನು ವಿರೋಧಿಸುತ್ತೇವೆ. ಇಲ್ಲಿ  ನಮ್ಮಲ್ಲಿ ಯಾರೂ ಹಿಂದಿ ಮಾತನಾಡುವುದಿಲ್ಲ. ಆದರೆ ನೀವು ಅದನ್ನು ನಿಮ್ಮ ವೃತ್ತಿ, ವ್ಯಾಪಾರ ಅಥವಾ ಶಿಕ್ಷಣಕ್ಕಾಗಿ ಕಲಿಯಲು ಬಯಸಿದರೆ, ನೀವು ಮಾಡಬಹುದು, ”ಎಂದು ಅವರು ಹೇಳಿದ್ದಾರೆ.

ಅಣ್ಣಾಮಲೈ

ಅಣ್ಣಾಮಲೈ

  • Share this:
ಹಿಂದಿಯನ್ನು (Hindi) ಸಂಪರ್ಕ ಭಾಷೆಯಾಗಿ ಬಳಸಬೇಕು ಎಂದು ಸಚಿವ ಅಮಿತ್ ಶಾ (Amit Shah) ನೀಡಿದ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಇದೀಗ ಬಿಜೆಪಿಯ ಒಳಗಿಂದಲೇ ಇದಕ್ಕೆ ವ್ಯಕ್ತವಾಗಿರುವುದು ವಿಶೇಷ. ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ (Annamalai) ಅವರೇ ಅಮಿತ್ ಶಾ ಹೇಳಿಕೆಗೆ ಪ್ರತ್ಯುತ್ತರ ಕೊಟ್ಟಿದ್ದಾರೆ. ತಮಿಳುನಾಡು ಬಿಜೆಪಿಯು ರಾಜ್ಯದ ಮೇಲೆ ಹಿಂದಿ ಹೇರಿಕೆಯನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಅಥವಾ ಅನುಮತಿಸುವುದಿಲ್ಲ. ಭಾರತೀಯತೆಯನ್ನು ಸಾಬೀತುಪಡಿಸಲು ಬಲವಂತವಾಗಿ ಭಾಷೆ ಕಲಿಯುವ ಅಗತ್ಯವಿಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶ್ರೀ ಅಣ್ಣಾಮಲೈ, ಹಿಂದಿ ಹೇರಿಕೆಯನ್ನು ನಾವು ಎಂದಿಗೂ ಒಪ್ಪುವುದಿಲ್ಲ. ಅದನ್ನು ವಿರೋಧಿಸುತ್ತೇವೆ. ಇಲ್ಲಿ  ನಮ್ಮಲ್ಲಿ ಯಾರೂ ಹಿಂದಿ ಮಾತನಾಡುವುದಿಲ್ಲ. ಆದರೆ ನೀವು ಅದನ್ನು ನಿಮ್ಮ ವೃತ್ತಿ, ವ್ಯಾಪಾರ ಅಥವಾ ಶಿಕ್ಷಣಕ್ಕಾಗಿ ಕಲಿಯಲು ಬಯಸಿದರೆ, ನೀವು ಮಾಡಬಹುದು, ”ಎಂದು ಅವರು ಹೇಳಿದ್ದಾರೆ.

ಅಮಿತ್ ಸಾ ಹೇಳಿಕೆಗೆ ಆಕ್ಷೇಪ

ಇತ್ತೀಚೆಗೆ ಸಂಪರ್ಕ ಭಾಷೆಯಾಗಿ ಹಿಂದಿ ಬಳಕೆ ಮಾಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದರು. ಭಾರತೀಯರು ಎಂದು ಸಾಬೀತು ಮಾಡಲು ಒಂದು ಭಾಷೆಯನ್ನು ಕಲಿಯಬೇಕಾದ ಕಡ್ಡಾಯ ಸ್ಥಿತಿ ಇಲ್ಲ. ಉದ್ಯೋಗ ಅಥವಾ ಜೀವನಕ್ಕೆ ಅಗತ್ಯವಿದ್ದರೆ ಅವರಾಗಿಯೇ ಹಿಂದಿ ಕಲಿಯುತ್ತಾರೆ. ನಾವು ಯಾವುದೇ ಭಾಷೆಯನ್ನು ವಿರೋಧಿಸುತ್ತಿಲ್ಲ. ಆದರೆ ತಮಿಳನ್ನು ಬದಲಾಯಿಸುವ ಯಾವುದೇ ಭಾಷೆ ಹೇರಿಕೆಯನ್ನು ನಾವು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

ಹಿಂದಿ ಸಂವಹನ ಭಾಷೆಯಾಗಿ ಬಳಕೆ

ದೇಶದ ರಾಜ್ಯಗಳು ಇಂಗ್ಲಿಷ್‌ ಬದಲಿಗೆ ಹಿಂದಿಯನ್ನು ಸಂವಹನ ಭಾಷೆಯನ್ನಾಗಿ ಬಳಸಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೀಡಿದ ಹೇಳಿಕೆಗೆ ತಮಿಳುನಾಡಿನ ಡಿಎಂಕೆ ಹಾಗೂ ತೆಲಂಗಾಣದ ಪ್ರಭಾವಿ ಸಚಿವ ಕೆ.ಟಿ ರಾಮ ರಾವ್‌ ವಿರೋಧ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Andhra Pradesh: ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ, 6 ಸಾವು, 13 ಜನ ಗಾಯ

ಈ ಕುರಿತು ತಮಿಳುನಾಡಿನ ಆಡಳಿತರೂಢ ಡಿಎಂಕೆಯ ಮುಖವಾಣಿ ಪತ್ರಿಕೆಯಲ್ಲಿ ಬರೆಯಲಾಗಿದ್ದು, ಮಾಜಿ ಸಿಎಂ ಕರುಣಾನಿಧಿಯವರ ಘೋಷಣೆಯೊಂದರ ಮೂಲಕ ಹಿಂದಿ ಹೇರಿಕೆಗೆ ವಿರೋಧ ವ್ಯಕ್ತಪಡಿಸಿದೆ. ಅಲ್ಲದೆ, ಬಲವಂತದ ಭಾಷಾ ಕಲಿಕೆಯ ಹೇರಿಕೆ ಸಲ್ಲದು ಎಂದಿದೆ. ಇದರ ವಿರುದ್ಧ ಒಂದಾಗಲು ಜನತೆಗೆ ಕರೆಯನ್ನೂ ಕೊಟ್ಟಿದೆ.

ಸಚಿವ ಕೆ.ಟಿ. ರಾಮರಾವ್‌ ಅವರಿಂದಲೂ ವಿರೋಧ

ತೆಲಂಗಾಣದ ಪ್ರಭಾವಿ ಸಚಿವ ಕೆ.ಟಿ. ರಾಮರಾವ್‌ ಕೂಡ ಇದನ್ನು ವಿರೋಧಿಸಿದ್ದು, ‘ಭಾರತ ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ. ನಾವೆಲ್ಲರೂ ವಸುಧೈವ ಕುಟುಂಬಂ ಎಂಬಂತೆ ಬಾಳುವವರು. ಆದ್ದರಿಂದ ನಾವು ಹಿಂದಿಯನ್ನೇ ಕಲಿಯಬೇಕು ಎಂದು ಕಡ್ಡಾಯಗೊಳಿಸುವುದು ಅಸಮಂಜಸ. ಬದಲಿಗೆ ಸ್ಥಳೀಯ ಭಾಷೆ ಜೊತೆಗೆ ಹಿಂದಿ ಪರ್ಯಾಯವಾಗಿರಬೇಕಷ್ಟೆ’ ಎಂದು ಎಂದಿದ್ದಾರೆ.

ಇದನ್ನೂ ಓದಿ: Imran Khan: ಉಡುಗೊರೆ ಬಂದ ಆಭರಣ ಮಾರಿ ಕೋಟಿ ಕೋಟಿ ಗಳಿಸಿದ ಪಾಕ್ ಮಾಜಿ ಪಿಎಂ! ಎಂಥಾ ದುಸ್ಥಿತಿ?

ಅಣ್ಣಾಮಲೈ ಅವರು ಎ.ಆರ್. ರೆಹಮಾನ್ ಹೇಳಿದ್ದನ್ನು ತಿಳಿಸಿ ತಮಿಳು ಭಾರತದ ಲಿಂಕ್ ಭಾಷೆಯಾಗಬಹದು. ತಮಿಳು ಭಾರತದ ಸಂಪರ್ಕ ಭಾಷೆಯಾಗಿರುವುದು ನಮಗೆಲ್ಲರಿಗೂ ದೊಡ್ಡ ಹೆಮ್ಮೆ. ಆದರೆ ಭಾಷೆ ಬೆಳೆಯಲು ಸಹಾಯ ಮಾಡಲು ನಾವು ಪ್ರಯತ್ನಗಳನ್ನು ಮಾಡಿದ್ದೇವೆಯೇ? ಈ ಅಂಕಿಅಂಶವನ್ನು ಪರಿಗಣಿಸಿ: 2010 ರಲ್ಲಿ, 68% ವಿದ್ಯಾರ್ಥಿಗಳು ತಮ್ಮ XII ತರಗತಿಯ ಪರೀಕ್ಷೆಗಳನ್ನು ತಮಿಳಿನಲ್ಲಿ ಬರೆದಿದ್ದಾರೆ. 2020 ರಲ್ಲಿ, ಇದು 51% ಕ್ಕೆ ಕುಸಿಯಿತು. ಇದು ಶೀಘ್ರದಲ್ಲೇ 50% ಕ್ಕಿಂತ ಕಡಿಮೆಯಿರುತ್ತದೆ. ಹಾಗಾಗಿ ನಾವು ತಮಿಳು ಭಾಷೆಯಾಗಿ ಬೆಳೆಯಲು ಸಹಾಯ ಮಾಡಬೇಕೆಂದು ಹೇಳುತ್ತಿದ್ದೇವೆ ಆದರೆ ಆ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ಮಾಡಿಲ್ಲ ಎಂದರು.

ಪ್ರತಿ ರಾಜ್ಯದ 10 ಶಾಲೆಯಲ್ಲಿ ತಮಿಳು

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಬೇಕು, ಪ್ರತಿ ರಾಜ್ಯದಲ್ಲಿ ಕನಿಷ್ಠ 10 ಶಾಲೆಗಳಲ್ಲಿ ತಮಿಳು ಭಾಷೆಯಲ್ಲಿ ಕಲಿಸುವಂತೆ ಕೇಳಬೇಕು ಮತ್ತು ಅದಕ್ಕೆ ಹಣವನ್ನು ಒದಗಿಸಬೇಕು ಎಂದು ಅವರು ಹೇಳಿದರು.
Published by:Divya D
First published: