ಐದು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ; ಮಾಜಿ ಕಾಂಗ್ರೆಸ್ಸಿಗ ಅರಿಫ್ ಮೊಹಮ್ಮದ್ ಕೇರಳ ಗವರ್ನರ್

ಕೇಂದ್ರ ಸರ್ಕಾರದೊಂದಿಗೆ ಕೇರಳ ಸರ್ಕಾರದ ತಾಳಮೇಳ ಇದೆಯೋ ಗೊತ್ತಿಲ್ಲ. ಆದರೆ, ನಾನು ಸಂವಿಧಾನಿಕ ಹುದ್ದೆಯನ್ನು ಹೊಂದಿದ್ದು, ಕೇರಳ ಜನರಿಗೆ ನನ್ನ ಕರ್ತವ್ಯ ನಿಭಾಯಿಸುತ್ತೇನೆ ಎಂದು ಅರಿಫ್ ಮೊಹಮ್ಮದ್ ಹೇಳಿದ್ದಾರೆ.

Vijayasarthy SN | news18
Updated:September 1, 2019, 2:48 PM IST
ಐದು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ; ಮಾಜಿ ಕಾಂಗ್ರೆಸ್ಸಿಗ ಅರಿಫ್ ಮೊಹಮ್ಮದ್ ಕೇರಳ ಗವರ್ನರ್
ಅರಿಫ್ ಮೊಹಮ್ಮದ್ ಖಾನ್
  • News18
  • Last Updated: September 1, 2019, 2:48 PM IST
  • Share this:
ನವದೆಹಲಿ(ಸೆ. 01): ಮಾಜಿ ಕೇಂದ್ರ ಸಚಿವರಾದ ಬಂಡಾರು ದತ್ತಾತ್ರೇಯ, ಅರಿಫ್ ಮೊಹಮ್ಮದ್ ಖಾನ್ ಅವರನ್ನು ನೂತನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಇವರಿಬ್ಬರು ಸೇರಿ ಒಟ್ಟು ಐವರನ್ನು ವಿವಿಧ ರಾಜ್ಯಗಳಿಗೆ ರಾಜ್ಯಪಾಲರನ್ನಾಗಿ ನೇಮಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಆದೇಶ ಹೊರಡಿಸಿದ್ಧಾರೆ.

ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷೆ ಡಾ| ತಮಿಳಿಸೈ ಸೌಂದರರಾಜನ್ ಅವರನ್ನು ತೆಲಂಗಾಣ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಮಾಜಿ ಕಾಂಗ್ರೆಸ್ಸಿಗರಾಗಿರುವ ಅರಿಫ್ ಮೊಹಮ್ಮದ್ ಖಾನ್ ಅವರನ್ನ ಕೇರಳದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.

ಇದನ್ನೂ ಓದಿ: ದೇಶದ ಆರ್ಥಿಕ ಸ್ಥಿತಿ ಗಂಭೀರ, ಮೋದಿ ಸರ್ಕಾರ ವಿಫಲ; ಮೌನ ಮುರಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್

ನೂತನ ರಾಜ್ಯಪಾಲರು:
1) ತೆಲಂಗಾಣ - ಡಾ| ತಮಿಳಿಸೈ ಸೌಂದರರಾಜನ್
2) ಹಿಮಾಚಲ ಪ್ರದೇಶ – ಬಂಡಾರು ದತ್ತಾತ್ರೇಯ
3) ಕೇರಳ – ಅರಿಫ್ ಮೊಹಮ್ಮದ್ ಖಾನ್4) ಮಹಾರಾಷ್ಟ್ರ – ಭಗತ್ ಸಿಂಗ್ ಕೋಶ್ಯಾರಿ
5) ರಾಜಸ್ಥಾನ – ಕಲ್​ರಾಜ್ ಮಿಶ್ರಾ

ಮೋದಿಯನ್ನು ಬೆಂಬಲಿಸಿದ್ದ ಅರಿಫ್ ಮೊಹಮ್ಮದ್:
ಮಾಜಿ ಕಾಂಗ್ರೆಸ್ಸಿಗಾದ ಅರಿಫ್ ಮೊಹಮ್ಮದ್ ಖಾನ್ ಅವರು ಮೋದಿಯ ಹಲವು ಯೋಜನೆಗಳಿಗೆ ಬೆಂಬಲ ಸೂಚಿಸುತ್ತಾ ಬಂದಿದ್ದಾರೆ. 1986ರಲ್ಲಿ ಅಂದಿನ ರಾಜೀವ್ ಗಾಂಧಿ ಸರ್ಕಾರದಲ್ಲಿ ಸಚಿವರಾಗಿದ್ದ ಇವರು ಶಾ ಬಾನೋ ಪ್ರಕರಣ ಎದುರಾದಾಗ ಸರ್ಕಾರದಿಂದಲೇ ಹೊರ ಬಂದಿದ್ದರು. ಈಗ ಮೋದಿ ಜಾರಿಗೆ ತಂದ ತ್ರಿವಳಿ ತಲಾಖ್ ನಿಷೇಧ ಕಾನೂನನ್ನು ಇವರು ಪ್ರಶಂಸಿಸಿದ್ಧರು. ಹಾಗೆಯೇ, ಕಾಶ್ಮೀರದ 370ನೇ ವಿಧಿಯನ್ನು ರದ್ದು ಪಡಿಸಿದ ಕ್ರಮಕ್ಕೂ ಇವರು ಬೆಂಬಲ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಆರೋಗ್ಯ ಸ್ಥಿತಿ ಗಂಭೀರ; ಕಿಡ್ನಿ ಸೋಂಕಿನಿಂದ ಆಸ್ಪತ್ರೆಗೆ ದಾಖಲು

ಈಗ ತಮ್ಮನ್ನು ಕೇರಳ ರಾಜ್ಯಪಾಲರನ್ನಾಗಿ ನೇಮಿಸಿದ ಬಗ್ಗೆ ಅರಿಫ್ ಮೊಹಮ್ಮದ್ ಖಾನ್ ಸಂತಸ ವ್ಯಕ್ತಪಡಿಸಿದ್ಧಾರೆ. ಕೇಂದ್ರ ಸರ್ಕಾರದೊಂದಿಗೆ ಕೇರಳ ಸರ್ಕಾರದ ತಾಳಮೇಳ ಇದೆಯೋ ಗೊತ್ತಿಲ್ಲ. ಆದರೆ, ನಾನು ಸಂವಿಧಾನಿಕ ಹುದ್ದೆಯನ್ನು ಹೊಂದಿದ್ದು, ಕೇರಳ ಜನರಿಗೆ ನನ್ನ ಕರ್ತವ್ಯ ನಿಭಾಯಿಸುತ್ತೇನೆ ಎಂದು ಹೇಳಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:September 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading