ತಮಿಳುನಾಡಿನಲ್ಲಿಂದು ಮಾಜಿ ಸಿಎಂಗಳಾದ ಜಯಲಲಿತಾ, ಎಂಜಿಆರ್​ ದೇಗುಲ ಉದ್ಘಾಟನೆ

ಮಧುರೈನ ಒಂದೂವರೆ ಎಕರೆ ಜಾಗದಲ್ಲಿ ದೇಗುಲ ನಿರ್ಮಾಣವಾಗಿದ್ದು, ಜಯಲಲಿತಾ ಮತ್ತು ಎಂ.ಜಿ. ರಾಮಚಂದ್ರನ್ ಅವರ ಕಂಚಿನ ಪುತ್ಥಳಿಗಳನ್ನು ಸ್ಥಾಪಿಸಲಾಗಿದೆ. 50 ಲಕ್ಷ ರೂ. ವೆಚ್ಚದಲ್ಲಿ ಈ ದೇವಾಲಯ ನಿರ್ಮಿಸಲಾಗಿದೆ.

ದೇವಸ್ಥಾನದ ಮುಂದೆ ಪ್ರತಿಷ್ಠಾಪಿಸಲಾದ ಜಯಲಲಿತಾ, ಎಂಜಿಆರ್​ ಕಂಚಿನ ಪುತ್ಥಳಿ

ದೇವಸ್ಥಾನದ ಮುಂದೆ ಪ್ರತಿಷ್ಠಾಪಿಸಲಾದ ಜಯಲಲಿತಾ, ಎಂಜಿಆರ್​ ಕಂಚಿನ ಪುತ್ಥಳಿ

  • Share this:
ಚೆನ್ನೈ (ಜ. 30): ತಮಿಳುನಾಡಿನ ಮಧುರೈನಲ್ಲಿ ನಿರ್ಮಿಸಲಾಗಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿಗಳಾದ ದಿ. ಜಯಲಲಿತಾ ಮತ್ತು ದಿ. ಎಂ.ಜಿ. ರಾಮಚಂದ್ರನ್ (ಎಂಜಿಆರ್) ಅವರ ದೇವಸ್ಥಾನವನ್ನು ಇಂದು ತಮಿಳುನಾಡಿನ ಮುಖ್ಯಮಂತ್ರಿ ಎ. ಪಳನಿಸ್ವಾಮಿ ಉದ್ಘಾಟಿಸಲಿದ್ದಾರೆ. ತಮಿಳುನಾಡು ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಈ ದೇವಸ್ಥಾನವನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. ಈ ಮೂಲಕ ಜಯಲಲಿತಾ ಮತ್ತು ಎಂಜಿಆರ್​ ಅಭಿಮಾನಿಗಳನ್ನು ಭಾವನಾತ್ಮಕವಾಗಿ ಸೆಳೆಯಲು ಎಐಎಡಿಎಂಕೆ ಮುಂದಾಗಿದೆ.

2016ರಲ್ಲಿ ಸಾವನ್ನಪ್ಪಿದ್ದ ಜಯಲಲಿತಾ ಅವರ ಸ್ಮರಣಾರ್ಥ ತಮಿಳುನಾಡಿನಲ್ಲಿ ಸಿದ್ಧವಾಗಿರುವ ದೇವಸ್ಥಾನ ಇದಾಗಿದೆ. ಇದರ ಜೊತೆಗೆ ಜಯಲಲಿತಾ ಅವರ ಆಪ್ತೆ ಶಶಿಕಲಾ ನಟರಾಜನ್ ಕೂಡ ಜೈಲಿನಿಂದ ಬಿಡುಗಡೆಯಾಗಿದ್ದು, ಇಂದೇ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎನ್ನಲಾಗಿತ್ತು. ಆದರೆ, ಶಶಿಕಲಾ ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆಗಳು ಹೆಚ್ಚಾಗಿವೆ.ತಮ್ಮ ರಾಜಕೀಯ ಗುರುವಾದ ಜಯಲಲಿತಾ ಅವರ ದೇಗುಲ ನಿರ್ಮಾಣದ ಜವಾಬ್ದಾರಿಯನ್ನು ತಮಿಳುನಾಡಿನ ಕಂದಾಯ ಸಚಿವ ಉದಯ್ ಕುಮಾರ್ ವಹಿಸಿಕೊಂಡಿದ್ದರು. ಮಧುರೈನ ಕಲ್ಲುಪಟ್ಟಿ ಪ್ರದೇಶದ ಒಂದೂವರೆ ಎಕರೆ ಜಾಗದಲ್ಲಿ ದೇಗುಲ ನಿರ್ಮಾಣವಾಗಿದ್ದು, ಜಯಲಲಿತಾ ಮತ್ತು ಎಂ.ಜಿ. ರಾಮಚಂದ್ರನ್ ಅವರ ಕಂಚಿನ ಪುತ್ಥಳಿಗಳನ್ನು ಸ್ಥಾಪಿಸಲಾಗಿದೆ. 50 ಲಕ್ಷ ರೂ. ವೆಚ್ಚದಲ್ಲಿ ಈ ದೇವಾಲಯ ನಿರ್ಮಿಸಲಾಗಿದೆ.

ಇದನ್ನೂ ಓದಿ: Rahul Gandhi: ತಮಿಳಿನ ವಿಲೇಜ್ ಕುಕಿಂಗ್ ಶೋನಲ್ಲಿ ಅಡುಗೆ ಮಾಡಿ, ಬಿರಿಯಾನಿ ಸವಿದ ರಾಹುಲ್ ಗಾಂಧಿ!

ಕಳೆದ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ ಎಐಡಿಎಂಕೆ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಜಯಲಲಿತಾ ಖ್ಯಾತಿಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ. ಈ ದೇಗುಲದ ಜೊತೆಗೆ ಚೆನ್ನೈನ ಪೋಯಸ್ ಗಾರ್ಡನ್​ನಲ್ಲಿ ಮೂರ್ನಾಲ್ಕು ದಿನಗಳ ಹಿಂದೆ 79 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಜಯಲಲಿತಾ ಸ್ಮಾರಕವನ್ನು ಸಿಎಂ ಸಿಎಂ ಪಳನಿಸ್ವಾಮಿ ಉದ್ಘಾಟಿಸಿದ್ದರು. ಹಾಗೇ, ಜಯಲಲಿತಾ ಅವರ ಬಂಗಲೆಯನ್ನು ಕೂಡ ಅವರ ಸ್ಮಾರಕವನ್ನಾಗಿ ಪರಿವರ್ತಿಸಲಾಗಿತ್ತು.

ಜಯಲಲಿತಾ ಅವರ ಸ್ಮಾರಕದಲ್ಲಿ ಉದ್ಯಾನಗಳು, ಸಣ್ಣ ಝರಿಗಳನ್ನು ಸೃಷ್ಟಿಸಲಾಗಿದೆ. ಹಾಗೇ, ವಸ್ತು ಸಂಗ್ರಹಾಲಯ, ಪ್ರವೇಶ ದ್ವಾರದಲ್ಲಿ ಎಂಜಿಆರ್‌ ಮತ್ತು ಜಯಲಲಿತಾ ಮೂರ್ತಿಯನ್ನೂ ಸ್ಥಾಪನೆ ಮಾಡಲಾಗಿದೆ. ಈ ಸ್ಮಾರಕಕ್ಕೆ ಮೂರು ವರ್ಷಗಳ ಹಿಂದೆ ಸಿಎಂ ಪಳನಿಸ್ವಾಮಿ ಶಂಕುಸ್ಥಾಪನೆ ನೆರವೇರಿಸಿದ್ದರು.

2016ರ ಫೆಬ್ರವರಿಯಲ್ಲಿ ಜಯಲಲಿತಾ ನಿಧನದ ಬಳಿಕ ತಮಿಳುನಾಡು ಸರಕಾರ ಅವರ ಸ್ಮರಣಾರ್ಥ ಸ್ಮಾರಕ ನಿರ್ಮಾಣ ಮಾಡಲು ನಿರ್ಧರಿಸಿತ್ತು. ಇಂದು ಜಯಲಲಿತಾ ಮತ್ತು ಎಂಜಿಆರ್​ ದೇವಸ್ಥಾನವನ್ನು ಉದ್ಘಾಟಿಸಲಾಗುತ್ತಿದೆ.
Published by:Sushma Chakre
First published: