HOME » NEWS » National-international » TAMIL NADU 103 KG GOLD GOES MISSING FROM CBI CUSTODY MADRAS HIGH COURT ORDERS CID INVESTIGATION SCT

ಸಿಬಿಐ ವಶದಲ್ಲಿದ್ದ 103 ಕೆಜಿ ಚಿನ್ನಾಭರಣ ನಾಪತ್ತೆ!; ಮದ್ರಾಸ್​ ಹೈಕೋರ್ಟ್​ನಿಂದ ​ಪೊಲೀಸ್ ತನಿಖೆಗೆ ಆದೇಶ

ತಮಿಳುನಾಡಿನಲ್ಲಿ 2012ರ ಸಿಬಿಐ ದಾಳಿ ವೇಳೆ 400 ಕೆಜಿ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆದರೆ, ಸಿಬಿಐ ಕಚೇರಿಯಲ್ಲಿ ಸೀಲ್ ಮಾಡಿ ಇರಿಸಲಾಗಿದ್ದ ಆ ಚಿನ್ನಾಭರಣದಲ್ಲಿ 103 ಕೆಜಿ ಚಿನ್ನ ನಾಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸಿಬಿಐ ವಿರುದ್ಧ ಸಿಐಡಿ ತನಿಖೆ ನಡೆಸಲು ಮದ್ರಾಸ್​ ಹೈಕೋರ್ಟ್​ ಆದೇಶಿಸಿದೆ.

Sushma Chakre | news18-kannada
Updated:December 12, 2020, 12:27 PM IST
ಸಿಬಿಐ ವಶದಲ್ಲಿದ್ದ 103 ಕೆಜಿ ಚಿನ್ನಾಭರಣ ನಾಪತ್ತೆ!; ಮದ್ರಾಸ್​ ಹೈಕೋರ್ಟ್​ನಿಂದ ​ಪೊಲೀಸ್ ತನಿಖೆಗೆ ಆದೇಶ
ಮದ್ರಾಸ್​ ಹೈಕೋರ್ಟ್​
  • Share this:
ಚೆನ್ನೈ (ಡಿ. 12): ದಾಳಿ ನಡೆಸಿದಾಗ ಸಿಬಿಐ ಅಧಿಕಾರಿಗಳು ವಶಪಡಿಸಿಕೊಂಡಿದ್ದ ಚಿನ್ನದಲ್ಲಿ 103 ಕೆಜಿ ತೂಕದ ಚಿನ್ನಾಭರಣ 2012ರಲ್ಲಿ ಸಿಬಿಐ ಕಚೇರಿಯಿಂದ ನಾಪತ್ತೆಯಾಗಿತ್ತು. ತನಿಖಾ ಸಂಸ್ಥೆಯಲ್ಲೇ ನಡೆದ ಈ ಕಳ್ಳತನ ಪ್ರಕರಣ ಭಾರೀ ಸದ್ದು ಮಾಡಿದ್ದು, ಈ ಪ್ರಕರಣದ ತನಿಖೆ ನಡೆಸಲು ಮದ್ರಾಸ್ ಹೈಕೋರ್ಟ್​ ತಮಿಳುನಾಡು ಪೊಲೀಸ್ ಇಲಾಖೆಗೆ ಆದೇಶಿಸಿದೆ. ಕೇಂದ್ರ ತನಿಖಾ ಸಂಸ್ಥೆಯಾದ ಸಿಬಿಐ ವಿರುದ್ಧ ಇತಿಹಾಸದಲ್ಲೇ ಮೊದಲ ಬಾರಿಗೆ ತಮಿಳುನಾಡು ಪೊಲೀಸ್ ಇಲಾಖೆಯ ಅಧೀನದಲ್ಲಿರುವ ಸಿಐಡಿ ತನಿಖೆ ನಡೆಸಲಿದೆ. ಇದರಿಂದ ಸಿಬಿಐಗೆ ಭಾರೀ ಮುಖಭಂಗವಾಗಿದೆ.

ಸ್ಥಳೀಯ ಪೊಲೀಸರಿಂದ ಈ ಪ್ರಕರಣದ ತನಿಖೆ ನಡೆದರೆ ಸಿಬಿಐನ ಘನತೆ ಕಡಿಮೆಯಾಗುತ್ತದೆ ಎಂದು ಸಿಬಿಐ ಪರ ವಕೀಲ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್​ ಹೈಕೋರ್ಟ್​, ಅಪರಾಧ ಪ್ರಕರಣಗಳನ್ನು ಭೇದಿಸುವ ಸಿಬಿಐ ವಿರುದ್ಧವೇ ಯಾಕೆ ಕಳ್ಳತನದ ಕೇಸ್ ದಾಖಲಿಸಬಾರದು? ನಿಮ್ಮ ವಶದಲ್ಲಿದ್ದ 103 ಕೆಜಿ ಚಿನ್ನಾಭರಣ ಎಲ್ಲಿ ಹೋಯಿತೆಂದು ಇನ್ನೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದರೆ ನಂಬುವ ಮಾತೇ? ಕಾನೂನಿನಲ್ಲಿ ಎಲ್ಲರಿಗೂ ಒಂದೇ ರೀತಿಯ ನ್ಯಾಯ ಸಿಗಬೇಕು, ಎಲ್ಲರ ತಪ್ಪಿಗೂ ಒಂದೇ ರೀತಿಯ ಶಿಕ್ಷೆ ಆಗಬೇಕು ಎಂದು ಮದ್ರಾಸ್​ ಹೈಕೋರ್ಟ್ ನ್ಯಾಯಮೂರ್ತಿ ಪಿ.ಎನ್. ಪ್ರಕಾಶ್​ ಹೇಳಿದ್ದಾರೆ.


ಇದು ಸಿಬಿಐಗೆ ಅಗ್ನಿ ಪರೀಕ್ಷೆಯಿದ್ದಂತೆ. ಸಿಬಿಐ ಅಧಿಕಾರಿ ಮತ್ತು ಸಿಬ್ಬಂದಿಯ ಕೈ ಪರಿಶುದ್ಧವಾಗಿದ್ದರೆ ಸೀತೆಯಂತೆ ಅವರು ನಿರಪರಾಧಿಗಳೆಂದು ಸಾಬೀತಾಗುತ್ತದೆ. ಒಂದುವೇಳೆ ಅವರೇ ತಪ್ಪಿತಸ್ಥರೆಂದು ಸಾಬೀತಾದರೆ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲೇಬೇಕು. ಬರೋಬ್ಬರಿ 45 ಕೋಟಿ ರೂ. ಮೌಲ್ಯದ ಚಿನ್ನಾಭರಣ ಎಲ್ಲಿ ಹೋಯಿತೆಂಬುದಕ್ಕೆ ಸಿಬಿಐ ಬಳಿ ಉತ್ತರವಿಲ್ಲ ಎಂದರೆ ಏನರ್ಥ? ಗಾಂಜಾದ ರೀತಿ ಚಿನ್ನಾಭರಣದ ತೂಕ ಇಟ್ಟ ಜಾಗದಲ್ಲಿಯೇ ಕಡಿಮೆಯಾಗಲು ಸಾಧ್ಯವೇ?Surana Corporation ಎಂದು ಹೈಕೋರ್ಟ್​ ನ್ಯಾಯಮೂರ್ತಿ ನಿನ್ನೆ ನಡೆದ ವಿಚಾರಣೆ ವೇಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Karnataka Weather: ಕರ್ನಾಟಕದ ಕರಾವಳಿ, ಮಲೆನಾಡು, ಕೊಡಗಿನಲ್ಲಿ ಇಂದು ಹಗುರ ಮಳೆ ಸಾಧ್ಯತೆ

ಈ ಘಟನೆಯಿಂದ ಭಾರೀ ಮುಜುಗರಕ್ಕೆ ಈಡಾಗಿರುವ ಸಿಬಿಐ ಇನ್ನೂ ನಾಪತ್ತೆಯಾಗಿರುವ 103 ಕೆಜಿ ತೂಕದ ಚಿನ್ನವನ್ನು ಹುಡುಕಲು ಸಾಧ್ಯವಾಗಿಲ್ಲ. ಸಿಬಿಐ ವಶದಲ್ಲಿದ್ದ ಚಿನ್ನವೇ ನಾಪತ್ತೆಯಾಗಿರುವುದರಿಂದ ಸಿಬಿಐ ತಲೆ ತಗ್ಗಿಸುವಂತಾಗಿದೆ.

ಏನಿದು ಘಟನೆ?:
ಭ್ರಷ್ಟಾಚಾರದ ಆರೋಪದ ಮೇಲೆ 2012ರಲ್ಲಿ ಚೆನ್ನೈನ ಸುರಾನಾ ಕಾರ್ಪೋರೇಷನ್ ಲಿಮಿಟೆಡ್ ಮೇಲೆ ಸಿಬಿಐ ದಾಳಿ ನಡೆದಿತ್ತು. ಈ ವೇಳೆ 400.5 ಕೆಜಿ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆ ಚಿನ್ನವನ್ನು ಸಿಬಿಐ ಕಚೇರಿಯಲ್ಲಿ ಭದ್ರವಾಗಿ ಇಡಲಾಗಿತ್ತು. ಆ ಚಿನ್ನಾಭರಣವನ್ನು ಪ್ರತ್ಯೇಕವಾಗಿ ತೂಕ ಮಾಡಿದಾಗ 103 ಕೆಜಿ ತೂಕ ಕಡಿಮೆ ಬಂದಿದೆ. ಕೆಲವೇ ಗ್ರಾಂಗಳ ತೂಕದಲ್ಲಿ ವ್ಯತ್ಯಾಸ ಬಂದಿದ್ದರೆ ದೊಡ್ಡ ಸುದ್ದಿಯಾಗುತ್ತಿರಲಿಲ್ಲ. ಆದರೆ, ನೂರಾರು ಕೆಜಿ ವ್ಯತ್ಯಾಸ ತೋರಿಸುತ್ತಿರುವುದನ್ನು ಸಮರ್ಥಿಸಿಕೊಳ್ಳಲು ಸಿಬಿಐಗೆ ಅವಕಾಶವೇ ಸಿಗದಂತಾಗಿದೆ.

ಈ ಹಿನ್ನೆಲೆಯಲ್ಲಿ ಸಿಬಿಐ ವಿರುದ್ಧವೇ ತನಿಖೆ ನಡೆಸುವಂತೆ ಮದ್ರಾಸ್​ ಹೈಕೋರ್ಟ್​ ತಮಿಳುನಾಡು ಪೊಲೀಸ್ ಇಲಾಖೆಯ ಅಧೀನದಲ್ಲಿ ಬರುವ ಸಿಬಿ-ಸಿಐಡಿಯ ಮೆಟ್ರೋ ವಿಭಾಗಕ್ಕೆ ಸೂಚನೆ ನೀಡಿದೆ. ಸಿಬಿಐ ವಿರುದ್ಧ ಎಫ್​ಐಆರ್​ ದಾಖಲಿಸಿಕೊಂಡು, ಎಸ್​ಪಿ ರ್ಯಾಂಕ್​ ಆಫೀಸರ್ ಮೂಲಕ 6 ತಿಂಗಳೊಳಗೆ ತನಿಖೆ ನಡೆಸಿ, ವರದಿ ನೀಡಲು ಸೂಚಿಸಿರುವುದರಿಂದ ಸಿಬಿಐಗೆ ಮುಖಭಂಗವಾಗಿದೆ.
Published by: Sushma Chakre
First published: December 12, 2020, 12:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories