ತಮಿಳು ವಿಶ್ವದ ಅತ್ಯಂತ ಪ್ರಾಚೀನ ಮತ್ತು ಶ್ರೇಷ್ಠ ಭಾಷೆ; ಮುಂದುವರೆದ ಪ್ರಧಾನಿ ಮೋದಿ ತಮಿಳು ಭಾಷಾ ಪ್ರೇಮ

ಪ್ರಧಾನಿ ಮೋದಿ ರಚಿಸಿದ್ದ ಪದ್ಯ ತಮಿಳಿನಲ್ಲಿ ಬಿಡುಗಡೆಯಾಗುತ್ತಿದ್ದಂತೆ ತಮಿಳುನಾಡಿನ ಚಲನಚಿತ್ರ ರಂಗದ ಗಣ್ಯರು ಸೇರಿದಂತೆ ಅನೇಕರು ಈ ಪದ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

MAshok Kumar | news18-kannada
Updated:October 21, 2019, 1:12 PM IST
ತಮಿಳು ವಿಶ್ವದ ಅತ್ಯಂತ ಪ್ರಾಚೀನ ಮತ್ತು ಶ್ರೇಷ್ಠ ಭಾಷೆ; ಮುಂದುವರೆದ ಪ್ರಧಾನಿ ಮೋದಿ ತಮಿಳು ಭಾಷಾ ಪ್ರೇಮ
ಮಹಾಬಲಿಪುರಂ ಕಡಲ ಕಿನಾರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ.
  • Share this:
ಚೆನ್ನೈ (ಅಕ್ಟೋಬರ್ 21); ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್​ ಪಿಂಗ್ ಇತ್ತೀಚೆಗೆ ತಮಿಳುನಾಡಿನ ಮಹಾಬಲಿಪುರಂ ನಲ್ಲಿ ಎರಡು ದಿನಗಳ ಔಪಚಾರಿಕ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ನರೇಂದ್ರ ಮೋದಿ ಮಹಾಬಲಿಪುರಂ ಕ್ಷೇತ್ರದ ಪ್ರಕೃತಿಯ ಸೊಬಗಿನ ಕುರಿತು ಹಿಂದಿ ಭಾಷೆಯಲ್ಲಿ ಪದ್ಯ ರಚಿಸಿದ್ದರು. ಆ ಪದ್ಯವನ್ನು ತಮಿಳರು ಇದೀಗ ತಮಿಳು ಭಾಷೆಗೆ ಭಾಷಾಂತರಿಸಿ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ.

ಹೀಗಾಗಿ ತಮಿಳು ಭಾಷೆಗೆ ಅನುವಾದವಾಗಿರುವ ತಮ್ಮದೇ ಪದ್ಯವನ್ನು ತಮ್ಮ ಟ್ವೀಟರ್​ ಖಾತೆಯಲ್ಲಿ ಹಾಕಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, "ತಮಿಳು ಭಾಷೆ ವಿಶ್ವದ ಅತ್ಯಂತ ಪ್ರಾಚೀನ ಮತ್ತು ಶ್ರೇಷ್ಠ ಭಾಷೆ" ಎಂದು ಹಾಡಿ ಹೊಗಳುವ ಮೂಲಕ ತಮ್ಮ ತಮಿಳು ಭಾಷಾ ಸ್ತುತಿಯನ್ನು ಮುಂದುವರೆಸಿದ್ದಾರೆ. ಈ ಹಿಂದೆಯೂ ಸಹ ಹಲವು ಭಾರಿ ಅವರು ತಮಿಳು ಭಾಷಾ ಪ್ರೇಮವನ್ನು ತೋರ್ಪಡಿಸಿದ್ದನ್ನು ಇಲ್ಲಿ ನೆನೆಯಬಹುದು.

ಪ್ರಧಾನಿ ಮೋದಿ ರಚಿಸಿದ್ದ ಪದ್ಯ ತಮಿಳಿನಲ್ಲಿ ಬಿಡುಗಡೆಯಾಗುತ್ತಿದ್ದಂತೆ ತಮಿಳುನಾಡಿನ ಚಲನಚಿತ್ರ ರಂಗದ ಗಣ್ಯರು ಸೇರಿದಂತೆ ಅನೇಕರು ಈ ಪದ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಈ ಪದ್ಯದ ಕುರಿತು ಟ್ವೀಟ್ ಮಾಡಿರುವ ತಮಿಳು ನಿರ್ದೇಶಕ ದನಂಜಯ್, “ತಮಿಳುನಾಡಿನ ಕುರಿತು ಪ್ರಧಾನಿ ಮೋದಿಗಿರುವ ಪ್ರೀತಿ ಅದ್ಭುತವಾದದ್ದು. ನಾವೆಲ್ಲರೂ ಪ್ರಧಾನಿ ನಮ್ಮ ಭಾಷೆಗೆ ತೋರಿಸಿರುವ ಪ್ರೀತಿಯನ್ನು ಗೌರವಿಸಬೇಕು ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, “ರೋಮಾಂಚನಕಾರಿ ಸಂಸ್ಕೃತಿಯನ್ನು ಪೋಷಿಸುತ್ತಿರುವ ವಿಶ್ವದ ಅತ್ಯಂತ ಹಳೆಯ ಭಾಷೆಯಲ್ಲಿ ನನ್ನ ಭಾವನೆಗಳನ್ನು ಅಭಿವ್ಯಕ್ತಪಡಿಸುತ್ತಿರುವುದು ನನಗೆ ಸಂತೋಷ ನೀಡುತ್ತಿದೆ. ಅಲ್ಲದೆ, ತಮಿಳು ಭಾಷೆ ಸುಂದರವಾಗಿದ್ದು, ಅಲ್ಲಿನ ಜನ ಪ್ರತಿಭಾವಂತರು” ಎಂದು ಪ್ರಶಂಶಿಸಿದ್ದಾರೆ.

ಇನ್ನೂ ತಮಿಳಿನ ಖ್ಯಾತ ಹಾಸ್ಯ ನಟ ವಿವೇಕ್ ಸಹ ಈ ಪದ್ಯದ ಕುರಿತು ಕಮೆಂಟ್ ಮಾಡಿದ್ದು, “ಪ್ರಕೃತಿಗೆ ವಂದನೆಗಳನ್ನು ಅರ್ಪಿಸುವುದು ಎಂದರೆ ದೇವರಿಗೆ ವಂದಿಸಿದಂತೆ. ಏಕೆಂದರೆ ಎಲ್ಲಾ ಕಾಲದಲ್ಲೂ ಪ್ರಕೃತಿಯೇ ಸರ್ವಶಕ್ತ ಮತ್ತು ಅದ್ಭುತ. ಹೀಗಾಗಿ ದೇಶದ ಪ್ರಧಾನಿಯಾಗಿ ಮೋದಿಯವರು ತಮಿಳುನಾಡಿನ ಮಹಾಬಲಿಪುರಂ ಕುರಿತು ಪದ್ಯ ರಚಿಸಿರುವುದಕ್ಕೆ ಧನ್ಯವಾದಗಳು” ಎಂದಿದ್ದಾರೆ.

ಹಾಸ್ಯ ನಟ ವಿವೇಕ್ ಅವರ ಅಭಿಪ್ರಾಯಕ್ಕೂ ಪ್ರತಿಕ್ರಿಯೆ ನೀಡಿರುವ ಮೋದಿ, “ಪ್ರಕೃತಿಯನ್ನು ಗೌರವಿಸುವುದು ನಮ್ಮ ನೀತಿಯ ಪ್ರಮುಖ ಭಾಗವಾಗಿದೆ. ಪ್ರಕೃತಿ ಎಂಬುದು ದೈವತ್ವ ಮತ್ತು ನಮ್ಮ ಶ್ರೇಷ್ಠತೆಯನ್ನು ಪ್ರಕಟಿಸುತ್ತದೆ. ಮಹಾಬಲಿಪುರಂನ ಸುಂದರವಾದ ಸಮುದ್ರ ತೀರ ಮತ್ತು ಬೆಳಗಿನ ಶಾಂತತೆಯು ನನ್ನ ಕೆಲವು ಆಲೋಚನೆಗಳನ್ನು ವ್ಯಕ್ತಪಡಿಸಲು ಉತ್ತಮ ಕ್ಷಣಗಳನ್ನು ಒದಗಿಸಿತು” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಅಮೆರಿಕ ತುಂಬೆಲ್ಲಾ ತಮಿಳು ಪ್ರತಿಧ್ವನಿಸುತ್ತಿದೆ; ಚೆನ್ನೈನಲ್ಲಿ ಪ್ರಧಾನಿ ಮೋದಿ ಹೇಳಿಕೆ

First published: October 21, 2019, 1:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading