ಬಿಗ್​ಬಾಸ್ ಶೋಗೆ ಶುರುವಾಗಲಿದೆ ಕಂಟಕ; ಕಾರ್ಯಕ್ರಮದ ಸೆಟ್​ಗೆ ಬಂದು ಈ ನಟಿಯನ್ನು ಅರೆಸ್ಟ್ ಮಾಡಲಿದ್ದಾರೆ ಪೊಲೀಸರು!

ಕಳೆದ ಫೆಬ್ರವರಿ ತಿಂಗಳಲ್ಲಿ ತೆಲಂಗಾಣ ತೆರಳಿರುವ ನಟಿ ವನಿತಾ ಅಪಹರಣ ಮಾಡುವ ಸಲುವಾಗಿ ತಮ್ಮ ಮಗಳನ್ನು ಚೆನ್ನೈಗೆ ಕರೆತಂದಿದ್ದಾರೆ. ಹೀಗಾಗಿ ಆಕೆಯ ಮಾಜಿ ಪತಿ ಆನಂದ್​ರಾಜ್ ಆಕೆ ತನ್ನ ಮಗಳನ್ನು ಅಪಹರಣ ಮಾಡಿದ್ದಾರೆ ಎಂದು ತೆಲಂಗಾಣ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿಗೆ ಒಪ್ಪಿಗೆ ಸೂಚಿಸಿರುವ ತೆಲಂಗಾಣ ಪೊಲೀಸರು ನಟಿ ವನಿತಾ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದಾರೆ.

MAshok Kumar | news18
Updated:July 3, 2019, 1:29 PM IST
ಬಿಗ್​ಬಾಸ್ ಶೋಗೆ ಶುರುವಾಗಲಿದೆ ಕಂಟಕ; ಕಾರ್ಯಕ್ರಮದ ಸೆಟ್​ಗೆ ಬಂದು ಈ ನಟಿಯನ್ನು ಅರೆಸ್ಟ್ ಮಾಡಲಿದ್ದಾರೆ ಪೊಲೀಸರು!
ನಟಿ ವನಿತಾ ಮತ್ತು ಕಮಲಹಾಸನ್
MAshok Kumar | news18
Updated: July 3, 2019, 1:29 PM IST
ಚೆನ್ನೈ (ಜುಲೈ.03); ಪ್ರಸ್ತುತ ಇಡೀ ಭಾರತದಾದ್ಯಂತ ಜನಪ್ರಿಯತೆಯ ಮೂಲಕ ಮನೆಮಾತಾಗಿರುವ ಕಾರ್ಯಕ್ರಮ ಬಿಗ್​ಬಾಸ್. ತಮಿಳಿನಲ್ಲಿ ಸ್ಟಾರ್ ನಟ ಹಾಗೂ ರಾಜಕಾರಣಿ ಕಮಲಹಾಸನ್ ನಿರೂಪಿಸಿ ವಿಜಯ್ ಟಿವಿ ಪ್ರಸಾರ ಮಾಡುತ್ತಿರುವ ಈ ಕಾರ್ಯಕ್ರಮ ಕಳೆದ ಭಾನುವಾರ 3ನೇ ಸೀಸನ್ ಆರಂಭಿಸಿದೆ. ಆದರೆ, ಆರಂಭಕ್ಕೆ ವಿಘ್ನ ಎಂಬಂತೆ ಈ ಕಾರ್ಯಕ್ರಮದ ಪ್ರಮುಖ ಸ್ಪರ್ಧಿ ಜನಪ್ರಿಯ ನಟಿಯನ್ನು ಪೊಲೀಸರು ಬಂಧಿಸಲಿದ್ದಾರೆ ಎಂಬ ಸುದ್ದಿ ಇದೀಗ ಕುತೂಹಲಕ್ಕೆ ಕಾರಣವಾಗಿದೆ.

ತಮಿಳಿನ ಬಿಗ್​ಬಾಸ್-3 ಪ್ರಮುಖ ಸ್ಪರ್ಧಿ ನಟಿ ‘ವನಿತಾ ವಿಜಯಕುಮಾರ್’. ಈಕೆ ದಕ್ಷಿಣ ಭಾರತ ಜನಪ್ರಿಯ ನಟ ವಿಜಯಕುಮಾರ್ ಅವರ ಮಗಳು ಹೌದು. ಆದರೆ, ಈಕೆ ತನ್ನ ಸ್ವಂತ ಮಗಳನ್ನೇ ಅಪಹರಣ ಮಾಡಿದ ಆರೋಪದ ಮೇಲೆ ಈಕೆಯನ್ನು ಬಂಧಿಸಲು ಇದೀಗ ತೆಲಂಗಾಣ ಪೊಲೀಸರು ಚೆನ್ನೈಗೆ ಆಗಮಿಸಿರುವುದು ಭಾರೀ ಕುತೂಹಲ ಹಾಗೂ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ಲಕ್ಷ ಲಕ್ಷ ಸಂಬಳ ಬಿಟ್ಟು ಬಿಗ್​ ಬಾಸ್​ನಲ್ಲಿ 50 ಲಕ್ಷ ಗೆದ್ದ ಶಶಿ ಕುಮಾರ್​!

ನಟಿ ವನಿತಾ ಹಾಗೂ ತೆಲಂಗಾಣ ಮೂಲದ ಆನಂದ್​ರಾಜ್ ಜೋಡಿಗೆ 2007ರಲ್ಲಿ ಮದುವೆ ಆಗಿತ್ತು. ಇವರಿಗೆ ಜನಿತಾ ಎಂಬ 10 ವರ್ಷದ ಮಗಳಿದ್ದಾಳೆ. ವೈಮನಸ್ಯದ ಕಾರಣ ಈ ಜೋಡಿ 2012ರಲ್ಲಿ ವಿವಾಹ ವಿಚ್ಚೇದನ ಪಡೆದಿದೆ. ಆದರೆ, ಮಗಳು ಜನಿತಾ ಮಾತ್ರ ತೆಲಂಗಾಣದಲ್ಲಿ ತಂದೆಯ ಜೊತೆಗೆ ವಾಸವಿದ್ದಾರೆ.

vanitha-1
ಬಂಧನಕ್ಕೊಳಗಾಗಲಿರುವ ನಟಿ ವನಿತಾ ವಿಜಯಕುಮಾರ್.


ಕಳೆದ ಫೆಬ್ರವರಿ ತಿಂಗಳಲ್ಲಿ ತೆಲಂಗಾಣ ತೆರಳಿರುವ ನಟಿ ವನಿತಾ ತಮ್ಮ ಮಗಳನ್ನು ಚೆನ್ನೈಗೆ ಕರೆತಂದಿದ್ದಾರೆ. ಆದರೆ, ಆಕೆಯ ಮಾಜಿ ಪತಿ ಆನಂದ್​ರಾಜ್ ಆಕೆ ತನ್ನ ಮಗಳನ್ನು ಅಪಹರಣ ಮಾಡುವ ಸಲುವಾಗಿಯೇ ಚೆನ್ನೈಗೆ ಕರೆದುಕೊಂಡು ಹೋಗಿದ್ದಾರೆ ಎಂದು ತೆಲಂಗಾಣ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿಗೆ ಒಪ್ಪಿಗೆ ಸೂಚಿಸಿರುವ ತೆಲಂಗಾಣ ಪೊಲೀಸರು ನಟಿ ವನಿತಾ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ ; ಸಾಮಾಜಿಕ ಜಾಲತಾಣದಲ್ಲಿ ಬೆತ್ತಲೆ ಫೋಟೋ ಹಾಕಿ ಸುದ್ದಿಯಾದ ಬಿಗ್ ಬಾಸ್ ಸ್ಪರ್ಧಿ..!
Loading...

ಅತ್ತ ತೆಲಂಗಾಣದಲ್ಲಿ ಇಂತಹ ಪ್ರಸಂಗ ನಡೆಯುತ್ತಿದ್ದರೆ, ಇತ್ತ ಚೆನ್ನೈನಲ್ಲಿ ಕಳೆದ ಒಂದು ವಾರದ ಹಿಂದೆ ವನಿತಾ ಬಿಗ್​ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ಆದರೆ, ತನ್ನ ಮಗಳನ್ನು ಜೊತೆಗೆ ಕರೆದೊಯ್ಯುವ ಸಲುವಾಗಿ ಆನಂದ್​ರಾಜ್ ತೆಲಂಗಾಣ ಪೊಲೀಸರ ಜೊತೆಗೆ ಚೆನ್ನೈಗೆ ಆಗಮಿಸಿದ್ದಾರೆ. ಹೀಗಾಗಿ ಯಾವುದೇ ಸಂದರ್ಭದಲ್ಲಿ ಅಪಹರಣ ಪ್ರಕರಣ ಸಂಬಂಧ ನಟಿ ವನಿತಾ ಅವರನ್ನು ಬಂಧಿಸಲು ಪೊಲೀಸರು ಬಿಗ್​ಬಾಸ್ ಕಾರ್ಯಕ್ರಮ ನಡೆಯುತ್ತಿರುವ ಮನೆಗೆ ಪ್ರವೇಶಿಸಬಹುದು ಎಂದು ಹೇಳಲಾಗುತ್ತಿದೆ.

First published:July 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...