HOME » NEWS » National-international » TAMIL ACTOR VIJAY CYCLES TO CHENNAI POLLING BOOTH TO CAST VOTE FANS SEE IT AS STATEMENT ON FUEL PRICE HIKE MAK

TamilNadu Election2021: ಮತಗಟ್ಟೆಗೆ ಸೈಕಲ್​ನಲ್ಲೇ ತೆರಳಿದ ತಮಿಳು ನಟ ವಿಜಯ್; ಇಂಧನ ಬೆಲೆ ಏರಿಕೆ ವಿರುದ್ಧ ಬಹಿರಂಗ ಪ್ರತಿಭಟನೆ?

ಕಪ್ಪು ಮುಖಗವಸಿನೊಂದಿಗೆ ತಿಳಿ ನೀಲಿ ಬಣ್ಣದ ಅಂಗಿಯನ್ನು ಧರಿಸಿದ್ದ ವಿಜಯ್, ಭಾರೀ ಭದ್ರತೆಯೊಂದಿಗೆ ತಮ್ಮ ಮನೆಯಿಂದ ನೀಲಾಂಗರೈ ಮತದಾನ ಕೇಂದ್ರಕ್ಕೆ ಸೈಕಲ್​ನಲ್ಲಿ ತೆರಳಿ ಮತದಾನ ಮಾಡಿದ್ದಾರೆ. ಈ ವಿಡಿಯೋ ಸಹ ಸಾಕಷ್ಟು ವೈರಲ್ ಆಗಿದೆ.

news18-kannada
Updated:April 6, 2021, 2:34 PM IST
TamilNadu Election2021: ಮತಗಟ್ಟೆಗೆ ಸೈಕಲ್​ನಲ್ಲೇ ತೆರಳಿದ ತಮಿಳು ನಟ ವಿಜಯ್; ಇಂಧನ ಬೆಲೆ ಏರಿಕೆ ವಿರುದ್ಧ ಬಹಿರಂಗ ಪ್ರತಿಭಟನೆ?
ಮತಗಟ್ಟೆಗೆ ಸೈಕಲ್​ನಲ್ಲಿ ತೆರಳಿದ ತಮಿಳು ನಟ ವಿಜಯ್.
  • Share this:
ಚೆನ್ನೈ (ಏಪ್ರಿಲ್ 06); ತಮಿಳುನಾಡು ವಿಧಾನಸಭೆಯ 234 ಕ್ಷೇತ್ರಗಳಿಗೆ ಇಂದು ಒಂದೇ ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಎಲ್ಲಾ ಪಕ್ಷಗಳೂ ಸೋಲು ಗೆಲುವಿನ ಲೆಕ್ಕಾಚಾರದಲ್ಲಿವೆ. ಆದರೆ, ಮತದಾನದ ದಿನವಾದ ಇಂದು ತಮಿಳುನಾಡಿನ ಖ್ಯಾತ ನಟ ದಳಪತಿ ವಿಜಯ್​ ಚೆನ್ನೈನ ನೀಲಾಂಗರೈನಲ್ಲಿರುವ ತನ್ನ ಮನೆಯಿಂದ ಮತದಾನ ಕೇಂದ್ರಕ್ಕೆ ಮೊದಲ ಬಾರಿ ಸೈಕಲ್​ನಲ್ಲಿ ತೆರಳುವ ಮೂಲಕ ಗಮನ ಸೆಳೆದಿದ್ದಾರೆ. ನಟ ವಿಜಯ್​ ಸೈಕಲ್​ನಲ್ಲಿ ಮತದಾನ ಕೇಂದ್ರಕ್ಕೆ ತೆರಳಿದ ತನ್ನ ಉದ್ದೇಶವನ್ನು ಈವರೆಗೆ ಬಹಿರಂಗಪಡಿಸಿಲ್ಲ. ಆದರೆ, ಕೇಂದ್ರ ಸರ್ಕಾರ ಸತತವಾಗಿ ತೈಲ ಬೆಲೆ ಏರಿಸುತ್ತಿದೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸುವ ನಿಟ್ಟಿನಿಂದಲೇ ನಟ ವಿಜಯ್ ಇಂದು ಸೈಕಲ್​ನಲ್ಲಿ ತೆರಳಿ ಮತ ಚಲಾಯಿಸಿದ್ದಾರೆ ಎಂದು ಅವರ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಇದು ಅವರ ಅಭಿಮಾನಿಗಳ ಸಂತೋಷಕ್ಕೂ ಕಾರಣವಾಗಿದೆ ಎನ್ನಲಾಗುತ್ತಿದೆ.



ಕಪ್ಪು ಮುಖಗವಸಿನೊಂದಿಗೆ ತಿಳಿ ನೀಲಿ ಬಣ್ಣದ ಅಂಗಿಯನ್ನು ಧರಿಸಿದ್ದ ವಿಜಯ್, ಭಾರೀ ಭದ್ರತೆಯೊಂದಿಗೆ ತಮ್ಮ ಮನೆಯಿಂದ ನೀಲಾಂಗರೈ ಮತದಾನ ಕೇಂದ್ರಕ್ಕೆ ಸೈಕಲ್​ನಲ್ಲಿ ತೆರಳಿ ಮತದಾನ ಮಾಡಿದ್ದಾರೆ. ಈ ವಿಡಿಯೋ ಸಹ ಸಾಕಷ್ಟು ವೈರಲ್ ಆಗಿದೆ. ತಮಿಳುನಾಡಿನ ಮಟ್ಟಿಗೆ ಈ ವಿಡಿಯೋ ಟ್ರೆಂಡಿಂಗ್​ನಲ್ಲಿದೆ.

ನಟ ವಿಜಯ್​ ನರೇಂದ್ರ ಮೋದಿ ನೇತ್ವದ ಕೇಂದ್ರದ ಬಿಜೆಪಿ ಸರ್ಕಾರವನ್ನು ಟೀಕಿಸಲು ಎಂದಿಗೂ ಹಿಂದೆ ಮುಂದೆ ನೋಡಿದ ವ್ಯಕ್ತಿಯಲ್ಲ. ತಮ್ಮ ಸಿನಿಮಾ ಮತ್ತು ಸಿನಿಮಾ ಕೇಂದ್ರಿತ ಕಾರ್ಯಕ್ರಮಗಳಲ್ಲಿ ಅವರು ಹಲವು ಬಾರಿ ಕೇಂದ್ರ ಸರ್ಕಾರದ ವಿರುದ್ಧ ನೇರಾ ನೇರ ವಾಗ್ದಾಳಿ ನಡೆಸಿದ್ದಾರೆ.


ಜಿಎಸ್​​ಟಿ ನೋಟ್​ಬ್ಯಾನ್​ ಸೇರಿದಂತೆ ಬಲಪಂಥೀಯರನ್ನು ಕೆರಳಿಸುವ ಹಲವಾರು ದೃಶ್ಯಗಳನ್ನು ಒಳಗೊಂಡಿದ್ದ ಅವರ ಮೆರ್ಸಲ್ ಚಲನಚಿತ್ರ ಬಿಡುಗಡೆಯಾದ ನಂತರ, ವಿಜಯ್ ತಮಿಳುನಾಡಿನ ಬಿಜೆಪಿಯಿಂದ ತೀವ್ರ ದಾಳಿಗೆ ಒಳಗಾಗಿದ್ದರು. ಇದೇ ಕಾರಣಕ್ಕೆ ಇತ್ತೀಚೆಗೆ ಬಿಡುಗಡೆಯಾಗಿದ್ದ ಅವರ ಮಾಸ್ಟರ್ ಚಿತ್ರದ ಶೂಟಿಂಗ್ ಸಮಯದಲ್ಲಿ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯಿಂದ ದಾಳಿ ನಡೆಸಲಾಗಿತ್ತು.

ಇದನ್ನೂ ಓದಿ: ಪಂಚರಾಜ್ಯ ಚುನಾವಣೆ; ಇಂದು ಮಹತ್ವದ ದಿನ – 4 ರಾಜ್ಯಗಳಲ್ಲಿ ಇಂದೇ ಮತದಾನ ಮುಕ್ತಾಯ

ನಟರಾದ ರಜನಿಕಾಂತ್​ ಮತ್ತು ಕಮಲಹಾಸನ್​ ನಂತರ ತಮಿಳುನಾಡಿನಲ್ಲಿ ಅತಿದೊಡ್ಡ ಅಭಿಮಾನಿ ಬಳಗ ಹೊಂದಿರುವ ಮತ್ತೊಬ್ಬ ನಟ ಎಂದರೆ ವಿಜಯ್. ವಿಜಯ್ ಅವರ ಯಾವುದೇ ಹೇಳಿಕೆ ರಾಜಕೀಯವಾಗಿ ದೊಡ್ಡ ಮಹತ್ವ ಪಡೆದುಕೊಳ್ಳುತ್ತದೆ. ಅವರನ್ನು ಅನುಸರಿಸುವ ಯುವಕರ ಸಂಖ್ಯೆಗೂ ಕಡಿಮೆ ಏನಲ್ಲ. ಇದೇ ಕಾರಣಕ್ಕೆ ಅವರನ್ನು ಸುಮ್ಮನಾಗಿಸಲು ಬಿಜೆಪಿ ಸಾಕಷ್ಟು ಪ್ರಯತ್ನಿಸುತ್ತಿದೆಯಾದರೂ ನಟ ವಿಜಯ್ ಮಾತ್ರ ತನ್ನ ಬಿಜೆಪಿ ವಿರುದ್ಧ ನಿಲುವಿನಿಂದ ಹಿಂದೆ ಸರಿಯುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ.
Published by: MAshok Kumar
First published: April 6, 2021, 2:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories