Accident: ಈ ಖ್ಯಾತ ನಟನ ಕಾರು ಅಪಘಾತದಲ್ಲಿ ಬಡಪಾಯಿಯ ಪ್ರಾಣವೇ ಹೋಯ್ತು! ಅಷ್ಟಕ್ಕೂ ಆ ದಿನ ಕಾರು ಓಡಿಸಿದ್ದು ಯಾರು?

ಆ ಖ್ಯಾತ ನಟನಿಗೆ ಸೇರಿದ ಕಾರು ಅಪಘಾತಕ್ಕೆ ಒಳಗಾಗಿದೆ. ಈ ಘಟನೆಯಲ್ಲಿ 70 ವರ್ಷದ ವಿಶೇಷ ಚೇತನ ವ್ಯಕ್ತಿ ಸಾವನ್ನಪ್ಪಿದ್ದು, ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ಆ್ಯಕ್ಸಿಡೆಂಟ್ ನಡೆಯುವ ವೇಳೆ ಕಾರು ಓಡಿಸುತ್ತಾ ಇದ್ದಿದ್ದು ಯಾರು? ಕಾರಿನಲ್ಲೇ ಇದ್ದರಾ ಆ ಖ್ಯಾತ ನಟ?

ನಟ ಸಿಂಬು

ನಟ ಸಿಂಬು

  • Share this:
ತಮಿಳುನಾಡು: ತಮಿಳು ಚಿತ್ರರಂಗದ (Tamil Film Industry) ಖ್ಯಾತ ನಟ (Hero) ಸಿಂಬು (Simbu) ಅವರ ಕಾರು (Car) ಅಪಘಾತಕ್ಕೆ (Accident) ಈಡಾಗಿದೆ. ಸಂಚಾರ ದಟ್ಟಣೆಯ ನಡುವೆ ತೆನಾಂಪೇಟೆಯ ರಸ್ತೆಯಲ್ಲಿ ಅಪಘಾತಕ್ಕೆ ಈಡಾಗಿದೆ. ಈ ಆ್ಯಕ್ಸಿಡೆಂಟ್‌ನಲ್ಲಿ ರಸ್ತೆಯಲ್ಲಿ ತೆವಳುತ್ತಾ ಹೋಗುತ್ತಿದ್ದ 70 ವರ್ಷದ ವಿಶೇಷ ಚೇತನ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ. ಕಳೆದ 2 ದಿನಗಳ ಹಿಂದೆ ಘಟನೆ ನಡೆದಿದ್ದು, ಘಟನೆಯ ದೃಶ್ಯ ಅಲ್ಲೇ ರಸ್ತೆಯಲ್ಲಿ ಹಾಕಿದ್ದ ಸಿಸಿ ಕ್ಯಾಮೆರಾದಲ್ಲಿ (CC Camera) ಸೆರೆಯಾಗಿದೆ. ಇನ್ನು ಘಟನೆಯಲ್ಲಿ ಗಾಯಗೊಂಡಿದ್ದ ಆ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಆತ ಮೃತಪಟ್ಟಿದ್ದಾನೆ. ಹಾಗಿದ್ರೆ ಆ್ಯಕ್ಸಿಡೆಂಟ್‌ ಆಗುವಾಗ ಕಾರು ಓಡಿಸಿದ್ದು ಯಾರು? ಮೃತ ವ್ಯಕ್ತಿ ಯಾರು? ಈ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ…

ರಸ್ತೆಯಲ್ಲಿ ತೆವಳುತ್ತಾ ಸಾಗುತ್ತಿದ್ದ ವ್ಯಕ್ತಿ ಮೇಲೆ ಹರಿದ ಕಾರು

ತೆನಾಂಪೇಟೆಯ ಎಲಂಗೋ ಸಲೈ-ಪೋಸ್  ರಸ್ತೆಯ ತಿರುವಿನಲ್ಲಿ ಘಟನೆ ನಡೆದಿದೆ. ನಟ ಸಿಂಬು ಅವರಿಗೆ ಸೇರಿದ ಎಸ್‌ಯುವಿ ಕಾರು ತಿರುವಿನಲ್ಲಿ ವಿಶೇಷ ಚೇತನ ವ್ಯಕ್ತಿಯ ಮೇಲೆ ಹರಿದಿದೆ. ಕಾರಿನ ಚಕ್ರದ ಅಡಿಯಲ್ಲಿ ಸಿಲುಕಿದ ಆತ, ಗಂಭೀರವಾಗಿ ಗಾಯಗೊಂಡಿದ್ದ. ಇದೀಗ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

 ಮೃತ ವ್ಯಕ್ತಿ ಯಾರು?

ಇನ್ನು ಮೃತನ ಹೆಸರು ಮನುಸ್ವಾಮಿ ಎನ್ನುವುದು ತಿಳಿದು ಬಂದಿದೆ. ಮುನುಸಾಮಿ ಸ್ಥಳೀಯ ನಿವಾಸಿಯಾಗಿದ್ದು, ಸುಮಾರು 15 ವರ್ಷಗಳಿಂದ ನೆರೆಹೊರೆಯಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು ಎಂದು ತನಿಖಾಧಿಕಾರಿ ತಿಳಿಸಿದ್ದಾರೆ. ಇತ್ತೀಚೆಗೆ ಮ್ಯಾನ್‌ಹೋಲ್ ಮುಚ್ಚಳವನ್ನು ಎತ್ತುವ ವೇಳೆ ಕಾಲಿಗೆ ಗಾಯವಾಗಿ ರಸ್ತೆಯಲ್ಲಿ ತೆವಳುತ್ತಿದ್ದರು.

ಇದನ್ನೂ ಓದಿ: 8 ಮಂದಿ ಸಜೀವ ದಹನ ಪ್ರಕರಣ: ಘಟನಾ ಸ್ಥಳಗಳಲ್ಲಿ CCTV ಅಳವಡಿಕೆಗೆ High Court ಆದೇಶ

ಅಪಘಾತದ ವೇಳೆ ಕಾರಿನಲ್ಲಿದ್ದರಾ ನಟ ಸಿಂಬು?

ಅಪಘಾತಕ್ಕೆ ಒಳಗಾದ ಕಾರು ನಟ ಸಿಂಬು ಅವರಿಗೆ ಸೇರಿದ್ದಾಗಿದೆ. ಆದರೆ ಅಪಘಾತ ನಡೆಯುವ ದಿನ ನಟ ಸಿಂಬು ಕಾರಿನಲ್ಲಿ ಇರಲಿಲ್ಲ. ಬದಲಾಗಿ ಅವರ ಕಾರು ಚಾಲಕ ಕಾರನ್ನು ಓಡಿಸುತ್ತಿದ್ದ ಎನ್ನಲಾಗಿದೆ. ಸಿಂಬು ಅವರ ತಂದೆ, ಹಿರಿಯ ನಟ ಹಾಗೂ ನಿರ್ದೇಶಕರಾಗಿರುವ ಟಿ. ರಾಜೇಂದರ್ ಕಾರಿನಲ್ಲೇ ಇದ್ದರು. ಅವರು ಮೊಮ್ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅಪಘಾತವಾಗಿತ್ತಿದ್ದಂತೆ ರಾಜೇಂದರ್ ಕಾರಿನಿಂದ ಇಳಿದು, ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

ಇನ್ನು ಕಾರು ಅಪಘಾತದ ದೃಶ್ಯ ಅಲ್ಲೇ ರಸ್ತೆ ಹಾಗೂ ಅಕ್ಕಪಕ್ಕದ ಅಂಗಡಿಗಳಲ್ಲಿ ಹಾಕಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ತನಿಖೆ ಆರಂಭಿಸಿದ ಪೊಲೀಸರು ಹತ್ತಿರದ ಕೆಲವು ನಿವಾಸಗಳು ಮತ್ತು ಅಂಗಡಿಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳಿಂದ ದೃಶ್ಯಗಳನ್ನು ಪಡೆದಿದ್ದಾರೆ.


ಸಿಂಬು ಕಾರು ಚಾಲಕ ಸೆಲ್ವಂ ಬಂಧನ

ಇನ್ನು ಈ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಾಗಿದೆ. ಆ ದೂರನ್ನು ಆಧರಿಸಿ ಸಿಂಬು ಅವರ ಕಾರು ಚಾಲಕ ಸೆಲ್ವಂ ಎಂಬುವನನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪಾಂಡಿ ಬಜಾರ್ ಟ್ರಾಫಿಕ್ ಪೊಲೀಸರಿಂದ ತನಿಖೆ

ಈ ಬಗ್ಗೆ ಪಾಂಡಿ ಬಜಾರ್ ಟ್ರಾಫಿಕ್ ತನಿಖಾ ವಿಭಾಗದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಐಪಿಸಿಯ ಸೆಕ್ಷನ್ 337 (ಯಾವುದೇ ಕೃತ್ಯವನ್ನು ದುಡುಕಿನ ಮತ್ತು ನಿರ್ಲಕ್ಷ್ಯದಿಂದ ಮಾಡುವ ಮೂಲಕ ವ್ಯಕ್ತಿಗೆ ನೋವುಂಟುಮಾಡುವುದು) ಮತ್ತು 279 (ಅಜಾಗರೂಕ ಚಾಲನೆ ಅಥವಾ ಸಾರ್ವಜನಿಕ ಮಾರ್ಗದಲ್ಲಿ ವೇಗವಾಗಿ ಸವಾರಿ ಮಾಡುವುದು) ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗಾಗಿ ಪ್ರಕರಣವನ್ನು ದಾಖಲಿಸಿದ್ದಾರೆ.

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಬಾಲಕಿಯರ ಶಾಲೆಗಳನ್ನು ಮುಚ್ಚಿಸಿದ Taliban.. ಅಳುತ್ತ ಹೊರ ನಡೆದ ವಿದ್ಯಾರ್ಥಿನಿಯರು!

ನಂತರ, ಅವರು ಪ್ರಕರಣವನ್ನು ಐಪಿಸಿಯ 304 (ಎ) (ನಿರ್ಲಕ್ಷ್ಯದ ಚಾಲನೆಯಿಂದ ಉಂಟಾದ ಸಾವು) ಎಂದು ಬದಲಾಯಿಸಿದರು. ಚಾಲಕ ಸೆಲ್ವಂ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Published by:Annappa Achari
First published: