ಚೆನ್ನೈ: ಚೆನ್ನೈನ (Chennai) ಅಶೋಕ್ ನಗರದಲ್ಲಿದ್ದ ಗೂಗಲ್ ಸಿಇಒ (Google CEO) ಸುಂದರ್ ಪಿಚೈ (Sundar Pichai) ಅವರ ಪೂರ್ವಜರ ಮನೆಯನ್ನು (House) ಬಹಿರಂಗಪಡಿಸದ ಮೊತ್ತಕ್ಕೆ ತಮಿಳು ನಟ (Tamil Actor) ಹಾಗೂ ನಿರ್ಮಾಪಕರೊಬ್ಬರು ಖರೀದಿಸಿದ್ದಾರೆ. ಮಾಧ್ಯಮದ ವರದಿಯ ಪ್ರಕಾರ ರಿಯಲ್ ಎಸ್ಟೇಟ್‌ನಲ್ಲಿ ತೊಡಗಿರುವ ನಟ ಮತ್ತು ನಿರ್ಮಾಪಕರಾದ ಮಣಿಕಂದನ್ (Manikandan) ಎಂಬುವವರು ಸುಂದರ್ ಪಿಚೈ ಅವರು ಹುಟ್ಟಿ ಬೆಳೆದ ಅಶೋಕ್ ನಗರದ ಮನೆಯನ್ನು ಖರೀಸಿದಿದ್ದಾರೆ ಎಂದು ಹಿಂದು ಬ್ಯುಸಿನೆಸ್ ಲೈನ್ ವರದಿ ಮಾಡಿದೆ. ಗೂಗಲ್ ಸಿಎಒ ಸುಂದರ್ ಪಿಚೈ ಅವರು ಜನಿಸಿದ ಮನೆಯನ್ನು ಖರೀದಿಸಲು ಹೆಮ್ಮೆಪಡುತ್ತೇನೆ ಎಂದು ಮಣಿಕಂದನ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ವಿಲ್ಲಾ ನಿರ್ಮಿಸುವುದಾಗಿ ತಿಳಿಸಿದ ನಟ
ಸುಂದರ್ ಪಿಚೈ ಅವರು ಭಾರತಕ್ಕೆ ಹೆಮ್ಮೆ ಅನ್ನಿಸಿದ್ದಾರೆ. ಅಂತಹ ವ್ಯಕ್ತಿ ಜನಿಸಿದ ಮನೆಯನ್ನು ಖರೀದಿಸಲು ನನಗೆ ತುಂಬಾ ಉತ್ಸುಕನಾಗಿದ್ದೆನೆ. ಆ ಜಾಗದಲ್ಲಿ ವಿಲ್ಲಾ ನಿರ್ಮಿಸಲು ಯೋಚನೆಯಲ್ಲಿದ್ದೇನೆ ಮಣಿಕಂದನ್ ಹೇಳಿದ್ದಾನೆ. ಮಣಿಕಂದನ್ ಅವರು ತಮ್ಮ ಬ್ರ್ಯಾಂಡ್ ಚೆಲ್ಲಪ್ಪಾಸ್ ಬಿಲ್ಡರ್ಸ್ ಅಡಿಯಲ್ಲಿ ನಗರದ ವಿವಿಧ ಭಾಗಗಳಲ್ಲಿ ಸುಮಾರು 300 ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿ ವಿತರಿಸಿದ್ದಾರೆ. ಮಣಿಕಂದನ್ ಪ್ರಕಾರ, ಸುಂದರ್ ಪಿಚೈ ತಂದೆ ಆರ್.ಎಸ್. ಪಿಚೈ ತಮ್ಮ ಸ್ವಂತ ವೆಚ್ಚದಲ್ಲಿ ಹಳೆಯ ಕಟ್ಟಡವನ್ನು ನೆಲಸಮಗೊಳಿಸಿ, ಆ ನಿವೇಶನವನ್ನು ಹಸ್ತಾಂತರಿಸಿದ್ದಾರೆ ಎಂದು ಮಣಿಕಂದನ್ ತಿಳಿಸಿದ್ದಾರೆ.
ಮನೆಯ ದಾಖಲಾತಿ ಪತ್ರ ಪಡೆಯಲು ತೆರಳಿದಾಗ ಸುಂದರ್ ಅವರ ತಾಯಿ ಸ್ವತಃ ಫಿಲ್ಟರ್ ಕಾಫಿ ಮಾಡಿಕೊಟ್ಟರು. ಅವರ ತಂದೆ ನನಗೆ ಮೊದಲ ಭೇಟಿಯಲ್ಲೇ ನವೇಷನದ ದಾಖಲೆಗಳನ್ನು ನೀಡಿದರು. ಅವರ ವಿನಮ್ರಯನ್ನು ನೋಡಿ ಮಂತ್ರಮುಗ್ಧನಾಗಿದ್ದೆ ಎಂದು ಮಣಿಕಂದನ್ ಪ್ರಶಂಸಿಸಿದ್ದಾರೆ.
ನೋಂದಣಿ ಶುಲ್ಕ ಬರಿಸಿದ ಪಿಚೈ
ಇಷ್ಟೇ ಅಲ್ಲದೆ ನೋಂದಣಿ ಮತ್ತು ವರ್ಗಾವಣೆ ಪ್ರಕ್ರಿಯೆಯನ್ನು ಬೇಗ ಮುಗಿಸುವಾಗ ಎಲ್ಲೂ ತಾವೂ ಗೂಗಲ್ ಸಿಇಒ ಸುಂದರ್ ಪಿಚೈ ಅವರ ತಂದೆ ಎಂಬ ಹೆಸರನ್ನು ಬಳಸದಂತೆ ಒತ್ತಾಯಿಸುತ್ತಿದ್ದರು. ಅವರು ನೋಂದಣಿ ಕಚೇರಿಯಲ್ಲಿ ಗಂಟೆಗಳ ಕಾಲ ಕೆಲಸ ಆಗುವವರೆಗೆ ಕಾದಿದ್ದಲ್ಲದೆ, ದಾಖಲೆಗಳನ್ನು ನನ್ನ ಹೆಸರಿಗೆ ಹಸ್ತಾಂತರಿಸುವ ಎಲ್ಲಾ ಅಗತ್ಯ ತೆರಿಗೆಗಳನ್ನು ಅವರೇ ಪಾವತಿಸಿದರು ಎಂದು ನಟ ವಿವರಿಸಿದ್ದಾರೆ.
ಕಣ್ಣೀರಿಟ್ಟ ಆರ್ಎಸ್ಎಸ್ ಪಿಚೈ
ಈ ನಿವೇಷನ ಪಿಚೈ ಅವರ ಮೊದಲ ಆಸ್ತಿಯಾಗಿತ್ತು. ದಾಖಲೆಗಳನ್ನು ತಮಗೆ ಹಸ್ತಾಂತರಿಸುವಾಗ ದಂಪತಿ ಭಾವುಕರಾದರು. ಈ ಮನೆಯಲ್ಲೇ ಸುಂದರ್ ಪಿಚೈ ಹುಟ್ಟಿ ಬೆಳೆದದ್ದರು, ಸುಂದರ್ ಅವರು 20 ವರ್ಷದವರೆಗೂ ಇದೇ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಅವರು 1989 ರಲ್ಲಿ ಐಐಟಿ ಓದುವುದಕ್ಕಾಗಿ ಪಶ್ಚಿಮ ಬಂಗಾಳದ ಖರಗ್‌ಪುರದಲ್ಲಿರುವ ಮೆಟಲರ್ಜಿಕಲ್ ಎಂಜಿನಿಯರಿಂಗ್ ಕಾಲೇಜು ಸೇರಲು ಚೆನ್ನೈ ನಗರವನ್ನು ತೊರೆದಿದ್ದರು. ಇದೀಗ ಆಸ್ತಿ ಮಾರಾಟಕ್ಕಿದೆ ಎಂಬ ವಿಷಯ ತಿಳಿದ ತಕ್ಷಣ ಅದನ್ನು ಖರೀದಿಸಲು ನಿರ್ಧರಿಸಿದೆ ಎಂದು ಮಣಿಕಂದನ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ