ಪಾಟೀದಾರ್​ ಮೀಸಲಾತಿ ಆಗ್ರಹಿಸಿ ಉಪವಾಸ ಸತ್ಯಾಗ್ರಹ: ಹಾರ್ದಿಕ್​​ ಸಾವು-ಬದುಕಿನ ನಡುವೆ ಹೋರಾಟ


Updated:September 5, 2018, 7:45 PM IST
ಪಾಟೀದಾರ್​ ಮೀಸಲಾತಿ ಆಗ್ರಹಿಸಿ ಉಪವಾಸ ಸತ್ಯಾಗ್ರಹ: ಹಾರ್ದಿಕ್​​ ಸಾವು-ಬದುಕಿನ ನಡುವೆ ಹೋರಾಟ
Ahmedabad: A doctor checks the health of Patidar Anamat Andolan Samiti (PAAS) leader Hardik Patel on the 7th day of his indefinite hunger strike for reservation, in Ahmedabad on Friday, Aug 31, 2018. (PTI Photo/Santosh Hirlekar) (PTI8_31_2018_000071B)

Updated: September 5, 2018, 7:45 PM IST
ನ್ಯೂಸ್​-18 ಕನ್ನಡ

ನವದೆಹಲಿ(ಸೆಪ್ಟೆಂಬರ್​​.05): ಪಾಟೀದಾರ್​​ ಸಮುದಾಯಕ್ಕೆ ಮೀಸಲಾತಿಗಾಗಿ ಒತ್ತಾಯಿಸಿ ಹಾರ್ದಿಕ್​​ ಪಟೇಲ್​​ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ 12 ದಿನಕ್ಕೇ ಕಾಲಿಟ್ಟಿದೆ. ರೈತರ ಸಾಲ ಮನ್ನಾ, ದೇಶದ್ರೋಹ ಆರೋಪದಡಿಯಲ್ಲಿ ಜೈಲುಪಾಲಾಗಿರುವ ಅಲ್ಪೇಶ್ ಕಠಾರಿ ಬಿಡುಗಡೆ ಸೇರಿದಂತೆ ಹಲವು ಬೇಡಿಕೆಗಳೊಂದಿಗೆ ಬಿಜೆಪಿ ಸರ್ಕಾರದ ವಿರುದ್ಧ ಹಾರ್ದಿಕ್​​ ಉಪವಾಸ ಸತ್ಯಾಗ್ರಹ ​ಆಚರಿಸುತ್ತಿದ್ದಾರೆ ಎನ್ನಲಾಗಿದೆ.

ಕಳೆದ 12 ದಿನಗಳ ಉಪವಾಸ ಸತ್ಯಾಗ್ರಹ ಕಾರಣದಿಂದಾಗಿ ಹಾರ್ದಿಕ್‌ ಪಟೇಲ್‌ ದೇಹ ತೂಕ 20 ಕೆ.ಜಿಯಷ್ಟು ಇಳಿಕೆಯಾಗಿದೆ. ಆಹಾರ ಸೇವನೆ ಮಾಡದೇ ಸತತ ಉಪವಾಸ ಸತ್ಯಾಗ್ರಹ ತಲ್ಲೀನರಾಗಿದ್ದು, ಪಟೇಲ್‌ ಸಮುದಾಯದ ಹೋರಾಟಗಾರರಲ್ಲಿ ಕಳವಳ ಉಂಟು ಮಾಡಿದೆ. ಅಲ್ಲದೇ ಹಾರ್ದಿಕ್​​ ಚಿಕಿತ್ಸೆಯನ್ನು ಕೂಡ ನಿರಾಕರಿಸಿದ್ಧಾರೆ ಎನ್ನುತ್ತಿವೆ ಮೂಲಗಳು.

ಹಾರ್ದಿಕ್​​ ಉಪವಾಸ ಸತ್ಯಾಗ್ರಹದಿಂದ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಕೇಸರಿ ಪಕ್ಷದ ಬಂಡಾಯ ಸಂಸದರಾದ ಯಶವಂತ ಸಿನ್ಹಾ ಜತೆಗೆ ಗುಜರಾತ್​​ ಶಾಸಕ ಜಿಗ್ನೇಶ್​ ಮೇವಾನಿ ಕೂಡ ಸತ್ಯಾಗ್ರಹಕ್ಕೆ ಬೆಂಬಲ ನೀಡಿದ್ದಾರೆ. ಈ ಬೆನ್ನಲ್ಲೇ ಹಾರ್ದಿಕ್‌ ಸತ್ಯಾಗ್ರಹ ನಾಟಕೀಯ ಎಂದು ಬಿಜೆಪಿ ಟೀಕಿಸಿದೆ.

ಈ ನಡುವೆಯೇ ನಮ್ಮ ಹೋರಾಟ ಬಿಜೆಪಿ ಸರ್ಕಾರದ ವಿರುದ್ಧವೇ ಎಂದು ಉಪವಾಸನಿರತ ಹೋರಾಟಗಾರ ಹಾರ್ದಿಕ್​​ ತಿಳಿಸಿದ್ಧಾರೆ. ನನ್ನ ಆರೋಗ್ಯ ಕ್ಷೀಣಿಸುತ್ತಿದೆ, ದೇಹದ ಪ್ರಮುಖ ಅಂಗಾಂಗಗಳು ಸಾಮರ್ಥ್ಯ ಕಳೆದುಕೊಂಡಿವೆ. ಒಂದು ವೇಳೆ ನಾ ಸತ್ತರೆ, ನನ್ನ ಕಣ್ಣುಗಳನ್ನು ದಾನ ಮಾಡಿ. ನನ್ನ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಕುಟುಂಬಕ್ಕೆ ತಲುಪಿಸಿ ಎಂದಿದ್ಧಾರೆ.

ಇನ್ನು ಗುಜರಾತ್​​ ಸಿಎಂ ನೇತೃತ್ವದಲ್ಲಿ ಪಾಟೀಲ್​ ಸಮುದಾಯ ಪ್ರತಿನಿಧಿಸುವ ಮುಖಂಡರೊಂದಿಗೆ ಸಭೆಯನ್ನು ನಡೆಸಲಾಗಿದೆ. ಹಾರ್ದಿಕ್​​ ಉಪವಾಸ ಸತ್ಯಾಗ್ರಹವನ್ನು ನಿಲ್ಲುಸವಂತೆ ಮುಖಂಡರಿಗೆ ಬಿಜೆಪಿ ತಾಖೀತು ಮಾಡಿದೆ. ಇದಕ್ಕೆ ಸಮುದಾಯದ ರಾಜಕಾರಣಿಗಳು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಅಲ್ಲದೇ ನಾವು ಈ ವಿಚಾರಕ್ಕೆ ತಲೆ ಹಾಕುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
Loading...

ಪಾಟೀದಾರ್​​​ ಮೀಸಲಾತಿ ಹೋರಾಟ ಸಮಿತಿಯಿಂದ ಮಾಧ್ಯಮದವರೊಂದಿಗೆ ಮಾತಾಡಿದ ಮನೋಜ್​ ಅವರು, ನಮ್ಮ ಹೋರಾಟವನ್ನು ಮುಂದುವರೆಸುತ್ತಿದ್ದೇವೆ. ಸಮುದಾಯದ ಮೀಸಲಾತಿ ಹೋರಾಟಕ್ಕಾ ಎಲ್ಲರೂ ನಿಸ್ಪಕ್ಷಪಾತವಾಗಿ ಒಂದಾಗಬೇಕಿದೆ. ನಮ್ಮ ಬೇಡಿಕೆಗಳು ಈಡೇರುವ ತನಕ ಹೋರಾಟ ನಿಲ್ಲುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

 
First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...