ನವದೆಹಲಿ (ಡಿ.5): ಪ್ರತಿಭಟನೆ ಕೈ ಬಿಡುವಂತೆ ಸರ್ಕಾರ ರೈತರೊಂದಿಗೆ ನಡೆಸಿದ ಐದನೇ ಸುತ್ತಿನ ಮಾತುಕತೆ ಕೂಡ ವಿಫಲವಾಗಿದೆ. ಕೃಷಿ ಕಾಯ್ದೆ ತಿದ್ದುಪಡಿ ಪ್ರಸ್ತಾಪವನ್ನು ರೈತರು ತಿರಸ್ಕರಿಸಿದ್ದು, ಈ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದು ಮಾಡಬೇಕು ಎಂಬ ಬಿಗಿ ಪಟ್ಟನ್ನು ಅವರು ಹೊಂದಿದ್ದಾರೆ. ಈ ಹಿನ್ನಲೆ ಇಂದು ನಡೆದ ಮಾತುಕತೆ ಕೂಡ ಫಲಪ್ರದ ಕಾಣದ ಹಿನ್ನಲೆ ಡಿ. 9ರಂದು ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ನಿರ್ಧರಿಸಲಾಗಿದೆ. ಕೇಂದ್ರದ ಮೂವರು ಸಚಿವರೊಂದಿಗೆ ನಡೆದ ಈ ಮಾತುಕತೆ ವೇಳೆ ತಮ್ಮ ಬೇಡಿಕೆ ಪರಿಗಣಿಸದ ಹಿನ್ನಲೆ ಸಭೆಯಿಂದ ಹೊರನಡೆಯುವ ಬೆದರಿಕೆಯನ್ನು ರೈತರು ಹಾಕಿದ್ದರು. ಸರ್ಕಾರದೊಂದಿಗೆ ಇಂದು 40 ರೈತ ಸಂಘಟನೆ ಮುಖಂಡರು ಭಾಗಿಯಾಗಿ ಮಾತನಾಡಿದ್ದರು. ಈ ವೇಳೆ ಕೃಷಿ ಕಾಯ್ದೆಯನ್ನು ರದ್ದು ಪಡಿಸುತ್ತೀರಾ ಇಲ್ಲವಾ ಎಂಬ ಫಲಕವನ್ನು ರೈತರು ಹಿಡಿದು ಮೌನ ಪ್ರತಿಭಟನೆ ನಡೆಸಿದರು.
We have said that the MSP will continue, there is no threat to it. It is baseless to doubt this. Still, if someone is suspicious then the government is ready to resolve it: Agriculture Minister Narendra Singh Tomar #FarmLaws pic.twitter.com/MLIQ7bLwUQ
— ANI (@ANI) December 5, 2020
We said at the beginning of meeting that our demand is withdrawal of laws, don't want amendment. We took a firm stand. Finally we were told that next meeting will be held on Dec 9. It seems govt will definitely roll back the laws: Hannan Mollah, General Secy,All India Kisan Sabha pic.twitter.com/vNCJCagTJj
— ANI (@ANI) December 5, 2020
ರೈತರು ನಡೆಸುತ್ತಿದ್ದ ಪ್ರತಿಭಟನೆ 10ನೇ ದಿನಕ್ಕೆ ಕಾಲಿಟ್ಟಿದೆ. ಕೇಂದ್ರ ಸರ್ಕಾರದ ಜೊತೆಗಿನ ಮಾತುಕತೆ ಫಲಪ್ರದವಾಗಿಲ್ಲದ ಕಾರಣ ದೆಹಲಿ ಗಡಿಯಲ್ಲಿ ಪ್ರತಿಭಟನೆ ಮುಂದುವರೆಸಲು ನಿರ್ಧರಿಸಿರುವ ರೈತ ಸಂಘಟನೆಗಳು ಇಂದು ದೇಶಾದ್ಯಂತ ಹೋರಾಟ ಹಮ್ಮಿಕೊಂಡಿವೆ. ದೇಶದ ವಿವಿಧ ಭಾಗಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿಕೃತಿ ಸುಡಲು ಮುಂದಾಗಿವೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ