ಬೆಡ್ ಮೇಲೆ ಹಾವುಗಳ ಸರಸ; ಮೊಬೈಲ್​ನಲ್ಲಿ ಮಾತನಾಡುತ್ತಾ ತಿಳಿಯದೇ ಕೂತ ಮಹಿಳೆಯನ್ನು ಕಚ್ಚಿ ಸಾಯಿಸಿದ ಸರ್ಪಗಳು

ಮೃತ ಮಹಿಳೆಯನ್ನು ಗೀತಾ ಎಂದು ಗುರುತಿಸಲಾಗಿದೆ. ಥಾಯ್ಲೆಂಡ್​ನಲ್ಲಿ ಕೆಲಸ ಮಾಡುತ್ತಿದ್ದ ಈಕೆ ತನ್ನ ಗಂಡ ಜೈಸಿಂಗ್​​ ಯಾವದ್​​ ಜತೆ ಮೊಬೈಲ್ ನಲ್ಲಿ ಮಾತನಾಡುತ್ತಾ ತನ್ನ ಬೆಡ್ ರೂಮ್ ಪ್ರವೇಶಿಸಿರುತ್ತಾಳೆ. ಅಲ್ಲಿ ಜೋಡಿ ಹಾವುಗಳು ಹಾಸಿಗೆ ಮೇಲೆ ಸರಸವಾಡುತ್ತಿರುವುದನ್ನು ಈಕೆ ಗಮನಿಸಿರುವುದಿಲ್ಲ. ಅದು ಪ್ರಿಂಟೆಡ್ ಬೆಡ್ ಶೀಟ್ ಆದ್ದರಿಂದಲೂ ಹಾವುಗಳು ಈಕೆಯ ಕಣ್ಣಿಗೆ ಬಿದ್ದಿರುವುದಿಲ್ಲ.

G Hareeshkumar | news18
Updated:September 12, 2019, 1:10 PM IST
ಬೆಡ್ ಮೇಲೆ ಹಾವುಗಳ ಸರಸ; ಮೊಬೈಲ್​ನಲ್ಲಿ ಮಾತನಾಡುತ್ತಾ ತಿಳಿಯದೇ ಕೂತ ಮಹಿಳೆಯನ್ನು ಕಚ್ಚಿ ಸಾಯಿಸಿದ ಸರ್ಪಗಳು
ಸಾಂದರ್ಭಿಕ ಚಿತ್ರ
G Hareeshkumar | news18
Updated: September 12, 2019, 1:10 PM IST
ಗೋರಖ್​​​​​​​​ಪುರ್(ಸೆ. 12): ಮೊಬೈಲ್​​​ ಪೋನ್​​​​​​​​​ ನಲ್ಲಿ ಮಾತಾಡ್ತಾ ಇದ್ರೆ ಜನರು ತಾವು ಎಲ್ಲಿ ಇದ್ದೇವೆ ಅನ್ನೋದನ್ನು ಮರೆತು  ಬಿಡ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಪೋನ್​​​ ನಲ್ಲಿ ಮಾತಾಡ್ತಾ ಹಾವುಗಳ ಮೇಲೆಯೇ ಕುಳಿತು, ಅವುಗಳಿಂದ ಕಚ್ಚಿಸಿಕೊಂಡು ಸಾವನ್ನಪ್ಪಿರುವ ಘಟನೆಯೊಂದು ಉತ್ತರ ಪ್ರದೇಶದ ಗೋರಖ್​​​ಪುರದ ರಿಯಾನವ್ ಎಂಬ​​​​​ ಗ್ರಾಮದಲ್ಲಿ ಬುಧವಾರ ನಡೆದಿರುವುದು ಬೆಳಕಿಗೆ ಬಂದಿದೆ.

ಮೃತ ಮಹಿಳೆಯನ್ನು ಗೀತಾ ಎಂದು ಗುರುತಿಸಲಾಗಿದೆ. ಥಾಯ್ಲೆಂಡ್​ನಲ್ಲಿ ಕೆಲಸ ಮಾಡುತ್ತಿದ್ದ ಈಕೆ ತನ್ನ ಗಂಡ ಜೈಸಿಂಗ್​​ ಯಾವದ್​​ ಜತೆ ಮೊಬೈಲ್ ನಲ್ಲಿ ಮಾತನಾಡುತ್ತಾ ತನ್ನ ಬೆಡ್ ರೂಮ್ ಪ್ರವೇಶಿಸಿರುತ್ತಾಳೆ. ಅಲ್ಲಿ ಜೋಡಿ ಹಾವುಗಳು ಹಾಸಿಗೆ ಮೇಲೆ ಸರಸವಾಡುತ್ತಿರುವುದನ್ನು ಈಕೆ ಗಮನಿಸಿರುವುದಿಲ್ಲ. ಅದು ಪ್ರಿಂಟೆಡ್ ಬೆಡ್ ಶೀಟ್ ಆದ್ದರಿಂದಲೂ ಹಾವುಗಳು ಈಕೆಯ ಕಣ್ಣಿಗೆ ಬಿದ್ದಿರುವುದಿಲ್ಲ.

ಬೆಡ್ ಮೇಲಿದ್ದ ಸರಸನಿರತ ಹಾವುಗಳ ಮೇಲೆ ಕುಳಿತುಕೊಂಡ ಈಕೆಯನ್ನು ಅವು ಕಚ್ಚುತ್ತವೆ. ಅದಾದ ಬಳಿಕ ಈಕೆ ಪ್ರಜ್ಞೆ ಕಳೆದುಕೊಳ್ಳುತ್ತಾಳೆ. ಕುಟುಂಬ ಸದಸ್ಯರು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸುತ್ತಾರಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪುತ್ತಾಳೆ.

ಇದನ್ನೂ ಓದಿ : ಮಳೆ ನಿಲ್ಲಲಿ ಎಂದು ಮದುವೆ ಮಾಡಿಸಿದ ಕಪ್ಪೆಗಳಿಗೆ ವಿಚ್ಛೇದನ

ಅದಾದ ಬಳಿಕ ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರು ವಾಪಸ್ ಈಕೆಯ ರೂಮಿಗೆ ಹೋಗಿ ನೋಡಿದಾಗ ಆ ಹಾವುಗಳು ಇನ್ನೂ ಸರಸದಲ್ಲೇ ತೊಡಗಿರುತ್ತವೆ. ಕೋಪಗೊಂಡ ಜನರು ಈ ಎರಡು ಹಾವುಗಳನ್ನು ಹೊಡೆದು ಸಾಯಿಸುತ್ತಾರೆ.

ಪಶು ವೈದ್ಯರ ಪ್ರಕಾರ, ಮಹಿಳೆಯು ಹಾವುಗಳ ಮೇಲೆ ಕುಳಿತುಕೊಂಡಾಗ ಅವುಗಳು ಸಂಭೋಗದಲ್ಲಿ ನಿರತವಾಗಿದ್ದಿರಬಹುದು ಎನ್ನಲಾಗಿದೆ.

Loading...

First published:September 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...