Narendra Modi: ನಾವು ಗೋವನ್ನು ಮಾತೃ ಸ್ಥಾನದಲ್ಲಿ ಪೂಜಿಸುತ್ತೇವೆ: ಪ್ರಧಾನಿ ಮೋದಿ

ಹಸು ಹಾಗೂ ಎಮ್ಮೆಗಳನ್ನು ಗೇಲಿ ಮಾಡುವ ಜನರು ಇವುಗಳನ್ನು ನಂಬಿ ಜೀವನ ನಡೆಸುತ್ತಿರುವ ಸುಮಾರು 8 ಕೋಟಿ ಕುಟುಂಬಗಳನ್ನು ಮರೆತಿದ್ದಾರೆ ಎಂದು ಮೋದಿ ಕಿಡಿಕಾರಿದ್ದಾರೆ.

ಪ್ರಧಾನಿ ಮೋದಿ

ಪ್ರಧಾನಿ ಮೋದಿ

  • Share this:
ತಮ್ಮ ಲೋಕಸಭಾ ಕ್ಷೇತ್ರವಾದ ವಾರಾಣಸಿಯಲ್ಲಿ (Varanasi) 870 ಕೋಟಿ ವೆಚ್ಚದ 22 ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯ ನೆರವೇರಿಸಿದ ಪ್ರಧಾನಿ (Prime Minister)ನರೇಂದ್ರ ಮೋದಿಯವರು ಪ್ರತಿಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದರು. ಗೋವಿನ (Cow) ಕುರಿತಾಗಿ ಮಾತನಾಡುವುದನ್ನು ಕೆಲವರು ಅಪರಾಧ (Crime) ಎಂದು ಪರಿಗಣಿಸಿದ್ದಾರೆ(Considered). ಆದರೆ ನಾವು ಗೋವನ್ನು ತಾಯಿಯಂತೆ (Mother) ಪೂಜಿಸುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.

ಹೈನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಸರಕಾರದ ಗುರಿ:
ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ನಂತರ ನೆರೆದಿದ್ದ ಸಭಿಕರನ್ನುದ್ದೇಶಿಸಿದ ಮಾತನಾಡಿದ ಮೋದಿ, ಭಾರತದ ಹೈನುಗಾರಿಕೆ ಕ್ಷೇತ್ರ ಬಲಪಡಿಸುವುದು ಸರಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಗೋವು ಹಾಗೂ ಗೋವುಗಳ ಅಭಿವೃದ್ಧಿಯ ಕುರಿತು ಮಾತನಾಡುವುದನ್ನು ಕೆಲವೊಬ್ಬರು ಅಪರಾಧ ಎಂದು ಪರಿಗಣಿಸಿದ್ದಾರೆ.

ಇದನ್ನೂ ಓದಿ: Omicron ಪ್ರಕರಣಗಳ ಹೆಚ್ಚಳ ಹಿನ್ನೆಲೆ - ಯುಪಿ ಚುನಾವಣೆ ಮುಂದೂಡುವಂತೆ ಪ್ರಧಾನಿ ಹಾಗೂ ಚುನಾವಣಾ ಆಯೋಗಕ್ಕೆ ಅಲಹಾಬಾದ್ ಕೋರ್ಟ್ ಒತ್ತಾಯ

ಗೋವಿನ ಕುರಿತು ಮಾತನಾಡುವುದು ಕೆಲವರಿಗೆ ಅಪರಾಧ ಆದರೆ ನಮಗೆ ಗೋವು ತಾಯಿ ನಾವು ಗೋವನ್ನು ಮಾತೃ ಸ್ಥಾನದಲ್ಲಿ ಪೂಜಿಸುತ್ತೇವೆ. ಹಸು ಹಾಗೂ ಎಮ್ಮೆಗಳನ್ನು ಗೇಲಿ ಮಾಡುವ ಜನರು ಇವುಗಳನ್ನು ನಂಬಿ ಜೀವನ ನಡೆಸುತ್ತಿರುವ ಸುಮಾರು 8 ಕೋಟಿ ಕುಟುಂಬಗಳನ್ನು ಮರೆತಿದ್ದಾರೆ ಎಂದು ಕಿಡಿಕಾರಿದ್ದಾರೆ.

ವಿಶ್ವದ ಹಾಲು ಉತ್ಪಾದನೆಯಲ್ಲಿ ಭಾರತ ಮುಂದಿದೆ:
6-7 ವರ್ಷಗಳ ಹಿಂದಿನ ಹಾಲು ಉತ್ಪಾದನೆಯ ಪ್ರಗತಿ ಹೋಲಿಸಿದಾಗ ಇದೀಗ ದೇಶದಲ್ಲಿ ಉತ್ಪಾದನಾ ದರವು 45%ರಷ್ಟು ಹೆಚ್ಚಿದೆ ಅದೇ ರೀತಿ ವಿಶ್ವದ ಹಾಲು ಉತ್ಪಾದನೆಯಲ್ಲಿ ಭಾರತವು 22% ಅಂಶ ಹೊಂದಿದೆ ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ.

ಕ್ಷೀರ ಕ್ರಾಂತಿಯಿಂದ ದೇಶದ ರೈತರ ಜೀವನ ಸ್ಥಿತಿ ಸುಧಾರಿಸಿದೆ:
ದೇಶದಲ್ಲಿ ಅತಿ ಹೆಚ್ಚು ಹಾಲು ಉತ್ಪಾದಿಸುವ ರಾಜ್ಯವಾಗಿ ಉತ್ತರ ಪ್ರದೇಶವು ಮುಂದಿದ್ದು, ಹೈನುಗಾರಿಕೆ ಕ್ಷೇತ್ರದ ವಿಸ್ತರಣೆಯಲ್ಲಿ ಕೂಡ ಪ್ರಗತಿ ಸಾಧಿಸಿದೆ ಎಂದು ಶ್ಲಾಘಿಸಿದ್ದಾರೆ. ದೇಶದ ಶ್ವೇತ ಕ್ರಾಂತಿಯಲ್ಲಿ ಹೈನುಗಾರಿಕೆ ಮತ್ತು ಪಶುಸಂಗೋಪನೆ ಕ್ಷೇತ್ರವು ರೈತರ ಜೀವನ ಸ್ಥಿತಿ ಬದಲಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ದೃಢವಾಗಿ ನಂಬುತ್ತೇನೆ ಎಂದು ತಿಳಿಸಿರುವ ಪ್ರಧಾನಿ, ದೇಶದಲ್ಲಿ 10 ಕೋಟಿಗೂ ಹೆಚ್ಚು ಪ್ರಮಾಣದಲ್ಲಿ ಪಶುಸಂಗೋಪನೆಯು ಸಣ್ಣ ರೈತರಿಗೆ ಹೆಚ್ಚುವರಿ ಆದಾಯದ ಪ್ರಧಾನ ಮೂಲವಾಗಿದೆ ಎಂದು ತಿಳಿಸಿದ್ದಾರೆ.

ಚೌಧರಿ ಚರಣ್‌ಸಿಂಗ್ ಜನ್ಮದಿನ
ಭಾರತದ ಹೈನುಗಾರಿಕಾ ಉತ್ಪನ್ನಗಳು ಸಾಗರೋತ್ತರ ಮಾರುಕಟ್ಟೆ ಹೊಂದಿದ್ದು ಇದು ದೇಶದ ಬೆಳವಣಿಗೆಗೆ ಸಾಕಷ್ಟು ಸಾಮರ್ಥ್ಯ ಒದಗಿಸುತ್ತದೆ ಎಂಬ ಅಂಶವನ್ನು ಒತ್ತಿ ಹೇಳಿದ್ದಾರೆ. ಮಾಜಿ ಪ್ರಧಾನಿ ಚೌಧರಿ ಚರಣ್‌ಸಿಂಗ್ ಜನ್ಮದಿನದ ಸಲುವಾಗಿ ಗೌರವ ಸಲ್ಲಿಸಿದ ಅವರು ದೇಶದ ಬೆನೆಲ್ಲುಬಾಗಿದ್ದ ರೈತರ ಪ್ರಗತಿಗಾಗಿ ಚೌಧರಿಯವರು ಹೇಗೆ ಸುಧಾರಣೆಗಳನ್ನು ನಡೆಸಿದರು ಎಂಬುದನ್ನು ಸ್ಮರಿಸಿಕೊಂಡರು. ಅವರ ಜನ್ಮದಿನವನ್ನು ರಾಷ್ಟ್ರ ರೈತ ದಿನವನ್ನಾಗಿ ಆಚರಿಸುವ ಉದ್ದೇಶವನ್ನು ಸಭಿಕರಿಗೆ ಮನದಟ್ಟು ಮಾಡಿದರು.

ಇದನ್ನೂ ಓದಿ: Goa: ಸರ್ದಾರ್ ಪಟೇಲ್ ಇನ್ನೂ ಸ್ವಲ್ಪ ಕಾಲ ಬದುಕಿದ್ದರೆ ಗೋವಾ ಇನ್ನು ಬೇಗ ಮುಕ್ತವಾಗುತ್ತಿತ್ತು: ಮೋದಿ

ಅಭಿವೃದ್ಧಿ ಯೋಜನೆಗಳನ್ನು ಪರಿಶೀಲನೆ
ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯ ನೆರವೇರಿಸುವುದಕ್ಕೂ ಮುನ್ನ ಪ್ರಧಾನಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರೊಂದಿಗೆ ಅಭಿವೃದ್ಧಿ ಯೋಜನೆಗಳನ್ನು ಪರಿಶೀಲಿಸಿದರು. ಪ್ರಧಾನಿ ನರೇಂದ್ರ ಮೋದಿ ವಾರಾಣಸಿಯ ಕರ್ಖಿಯಾನ್‌ನಲ್ಲಿರುವ ಯುಪಿ ರಾಜ್ಯ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ಆಹಾರ ಉದ್ಯಾನವನದಲ್ಲಿ ‘ಬನಾಸ್ ಡೈರಿ ಸಂಕುಲ್’ನ ಶಂಕುಸ್ಥಾಪನೆ ಮಾಡಿದರು. 30 ಎಕರೆ ವಿಸ್ತೀರ್ಣದಲ್ಲಿ ಡೇರಿ ನಿರ್ಮಾಣವಾಗಿದ್ದು 475 ಕೋಟಿ ವೆಚ್ಚದಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ದಿನಕ್ಕೆ 5 ಲಕ್ಷ ಲೀಟರ್ ಹಾಲು ಸಂಸ್ಕರಿಸುವ ವ್ಯವಸ್ಥೆಯನ್ನು ಡೇರಿ ಒಳಗೊಳ್ಳಲಿದೆ.
Published by:vanithasanjevani vanithasanjevani
First published: