ಪ್ರೇಮಿಗಳ ದಿನ ಆಚರಿಸಲು ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ ನೀಡಿದ ಶಾಹೀನ್ ಬಾಗ್ ಪ್ರತಿಭಟನಾಕಾರರು..!

ಸಿಎಎ ಯಾರೊಬ್ಬರ ಪೌರತ್ವವನ್ನು ಕಿತ್ತುಕೊಳ್ಳುವುದಿಲ್ಲ ಎಂದು ಹೇಳುತ್ತಾರೆ. ಆದರೆ ಯಾರೂ ಸಹ ಈ ಕಾಯ್ದೆ ದೇಶಕ್ಕೆ ಹೇಗೆ ಸಹಕಾರಿಯಾಗುತ್ತದೆ ಎಂದು ಹೇಳುತ್ತಿಲ್ಲ. ದೇಶದ ಜ್ವಲಂತ ಸಮಸ್ಯೆಗಳಾದ ನಿರುದ್ಯೋಗ ಸಮಸ್ಯೆ, ಆರ್ಥಿಕ ಕುಸಿತತೆ ಮತ್ತಿತರ ಸಮಸ್ಯೆಗಳನ್ನು ಬಗೆಹರಿಸಲು ಪೌರತ್ವ ಕಾಯ್ದೆ ಹೇಗೆ ಸಹಕಾರಿಯಾಗುತ್ತದೆ ಎಂದು ಅಹಮದ್​ ಪ್ರಶ್ನಿಸಿದ್ದಾರೆ.

ಘೋಷಣೆ ಕೂಗುತ್ತಿರುವ ಪ್ರತಿಭಟನಾಕಾರರು

ಘೋಷಣೆ ಕೂಗುತ್ತಿರುವ ಪ್ರತಿಭಟನಾಕಾರರು

 • Share this:
  ನವದೆಹಲಿ(ಫೆ.14): ದೆಹಲಿಯ ಶಾಹೀನ್​ ಬಾಗ್​ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಹೋರಾಟ ನಡೆಸುತ್ತಿರುವ ಪ್ರತಿಭಟನಾಕಾರರು ಇಂದು ತಮ್ಮ ಜೊತೆ ಪ್ರೇಮಿಗಳ ದಿನವನ್ನು ಆಚರಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ ನೀಡಿದ್ದಾರೆ.

  ಸಿಎಎ ವಿರೋಧಿ ಪ್ರತಿಭಟನಾಕಾರರು ಕಳೆದ ಡಿಸೆಂಬರ್ 15ರಿಂದ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಪೌರತ್ವ ನೋಂದಣಿ ಕಾಯ್ದೆ(ಎನ್​ಆರ್​ಸಿ)ಯನ್ನು ವಾಪಸ್​ ಪಡೆಯುವಂತೆ ಆಗ್ರಹಿಸಿ ಶಾಹೀನ್​ ಬಾಗ್​ನಲ್ಲಿ ಧರಣಿ ಕುಳಿತಿದ್ದಾರೆ. ಇಂದು ಪ್ರೇಮಿಗಳ ದಿನಾಚರಣೆಯ ಪ್ರಯುಕ್ತ ಪ್ರಧಾನಿ ಮೋದಿಗೆ ಆಹ್ವಾನ ನೀಡಿದ್ದು, ಅವರಿಗೆ ಪ್ರೇಮಗೀತೆ ಮತ್ತು ವಿಶೇಷ ಉಡಗೊರೆಯನ್ನು ಕೊಡಲು ಸಿದ್ಧಮಾಡಿಕೊಂಡಿದ್ದಾರೆ.

  "ಪ್ರಧಾನಿ ಮೋದಿಯವರೇ ದಯವಿಟ್ಟು ಶಾಹೀನ್​ ಬಾಗ್​ಗೆ ಬಂದು ನಮ್ಮ ಜೊತೆ ಮಾತನಾಡಿ, ನಿಮ್ಮ ಉಡುಗೊರೆಯನ್ನು ತೆಗೆದುಕೊಂಡು ಹೋಗಿ," ಎಂಬ ಪೋಸ್ಟರ್​​ಗಳನ್ನು ಪ್ರತಿಭಟನಾಕಾರರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

  ಅಂಟಾರ್ಟಿಕಾದಲ್ಲಿ ತಾಪಮಾನ ಏರಿಕೆ, ಇರಾಕ್ ಮೇಲೆ ಮತ್ತೊಂದು ಕ್ಷಿಪಣಿ ದಾಳಿ; ನೀವು ಓದಲೇ ಬೇಕಾದ ಅಂತಾರಾಷ್ಟ್ರೀಯ ಸುದ್ದಿಗಳು

  "ಪ್ರಧಾನಿ ಮೋದಿ ಅಥವಾ ಕೇಂದ್ರ ಗೃಹ ಸಚಿವ ಅಮಿತ್​ ಶಾ ಯಾರಾದರೂ ಬಂದು ನಮ್ಮ ಜೊತೆ ಮಾತನಾಡಲಿ, ಪೌರತ್ವ ಕಾಯ್ದೆ ಸಂವಿಧಾನ ವಿರೋಧಿ ಅಲ್ಲ ಎಂದು ಅವರು ನಮ್ಮನ್ನು ಸಮಾಧಾನಪಡಿಸಿದರೆ, ನಾವು ಪ್ರತಿಭಟನೆಯನ್ನು ಕೈ ಬಿಡುತ್ತೇವೆ," ಎಂದು ಶಾಹೀನ್​ ಬಾಗ್​ನ ಮೊದಲ ಪ್ರತಿಭಟನಾಕಾರ ಸೈಯದ್ ತಸೀರ್​ ಅಹಮದ್​ ಹೇಳಿದ್ದಾರೆ.

  ಸಿಎಎ ಯಾರೊಬ್ಬರ ಪೌರತ್ವವನ್ನು ಕಿತ್ತುಕೊಳ್ಳುವುದಿಲ್ಲ ಎಂದು ಹೇಳುತ್ತಾರೆ. ಆದರೆ ಯಾರೂ ಸಹ ಈ ಕಾಯ್ದೆ ದೇಶಕ್ಕೆ ಹೇಗೆ ಸಹಕಾರಿಯಾಗುತ್ತದೆ ಎಂದು ಹೇಳುತ್ತಿಲ್ಲ. ದೇಶದ ಜ್ವಲಂತ ಸಮಸ್ಯೆಗಳಾದ ನಿರುದ್ಯೋಗ ಸಮಸ್ಯೆ, ಆರ್ಥಿಕ ಕುಸಿತತೆ ಮತ್ತಿತರ ಸಮಸ್ಯೆಗಳನ್ನು ಬಗೆಹರಿಸಲು ಪೌರತ್ವ ಕಾಯ್ದೆ ಹೇಗೆ ಸಹಕಾರಿಯಾಗುತ್ತದೆ ಎಂದು ಅಹಮದ್​ ಪ್ರಶ್ನಿಸಿದ್ದಾರೆ.

  ಸಿಎಎ ಮತ್ತು ಎನ್​ಆರ್​ಸಿ ವಿರೋಧಿಸಿ ಶಾಹೀನ್​ ಬಾಗ್​, ಜಕೀರ್ ನಗರ, ಜಾಮಿಯಾ ನಗರ, ಖುರೇಜಿ ಖಾಸ್ ಮತ್ತು ದೆಹಲಿಯ ಇನ್ನೂ ಹಲವೆಡೆ ಡಿಸೆಂಬರ್​ನಿಂದ ಪ್ರತಿಭಟನೆಗಳು ನಡೆಯುತ್ತಿವೆ. ಶಾಹೀನ್​ ಬಾಗ್​ ಪ್ರತಿಭಟನಾಕಾರರು ನೋಯ್ಡಾ-ಆಗ್ನೇಯ ದೆಹಲಿಗೆ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲೇ ಪ್ರತಿಭಟನೆಗೆ ಕುಳಿತಿದ್ದಾರೆ. ಆ ರಸ್ತೆಯಲ್ಲಿ ಪ್ರತಿನಿತ್ಯ 1.75 ಲಕ್ಷ ವಾಹನಗಳು ಸಂಚರಿಸುತ್ತವೆ.

  ಹೊಸಪೇಟೆ ಆಕ್ಸಿಡೆಂಟ್​ ಪ್ರಕರಣ; ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದ ಡಿಸಿಎಂ ಅಶ್ವತ್ಥ್ ನಾರಾಯಣ್

  ಹೀಗಾಗಿ ಸಿಎಎ ಪ್ರತಿಭಟನೆ ವಾಹನ ಸವಾರರಿಗೆ ಸಂಕಷ್ಟವನ್ನು ತಂದೊಡ್ಡಿದೆ. ಟ್ರಾಫಿಕ್ ಕಿರಿಕಿರಿಗೆ ಕಾರಣವಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಆರೋಪಗಳಿಗೆ ಸ್ಪಷ್ಟನೆ ನೀಡಿರುವ ಪ್ರತಿಭಟನಾಕಾರರ ಮುಖಂಡ ಸೈಯದ್ ತಸೀರ್​ ಅಹಮದ್, " ಪ್ರತಿಭಟನೆ ಶುರುವಾದಾಗಿನಿಂದ ಶಾಲಾ ವಾಹನಗಳು, ಆ್ಯಂಬುಲೆನ್ಸ್​​ ಮತ್ತು ತುರ್ತು ವಾಹನಗಳು ಸಂಚರಿಸಲು ನಾವು ಅನುವು ಮಾಡಿಕೊಡುತ್ತಿದ್ದೇವೆ. ಈ ಪ್ರತಿಭಟನೆಯಿಂದ ಜನಸಾಮಾನ್ಯರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂಬ ಮಾತು ಉತ್ಪ್ರೇಕ್ಷೆಯಾಗಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
  First published: