Taliban Promise Cash, Land : ಅಫ್ಘಾನಿಸ್ತಾನ (Afghanistan) ಅಕ್ಷರಶಃ ಭೂಮಿ(Earth) ಮೇಲೆ ಇರುವ ನರಕ(Hell)ದಂತಾಗಿದೆ. ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದೆ. ತಾಲಿಬಾನ್(Taliban) ಗಳ ಅಟ್ಟಹಾಸಕ್ಕೆ ಅಫ್ಘಾನಿಸ್ತಾನದ ಪ್ರಜೆಗಳು ನಲುಗಿಹೋಗಿದ್ದಾರೆ. ಚಿತ್ರ, ವಿಚಿತ್ರ ನಿಯಮ(Rules)ಗಳಿಗೆ ಅಲ್ಲಿನ ಜನ ಕಂಗಾಲಾಗಿದ್ದಾರೆ. ದೇಶ ಬಿಟ್ಟು ಹೊರ ಹೋಗಲಾಗದೆ, ರಕ್ಕಸರ ಮಧ್ಯೆ ಬದುಕಲು ಆಗದೇ ಪರದಾಡುತ್ತಿದ್ದಾರೆ. ಪ್ರಶ್ನೆ ಮಾಡಿದವರ ಗುಂಡಿಗೆಗೆ ಗುಂಡಿಟ್ಟು ಕೊಲ್ಲುತ್ತಿದ್ದಾರೆ. `ನಮ್ಮ ಜೊತೆ ಸೇರಿಕೊಳ್ಳಿ, ಇಲ್ಲ ಸಾಯಲು ಸಿದ್ಧರಾಗಿ’ ಎಂದು ಹೇಳಿರುವ ತಾಲಿಬಾನಿಗಳು ಕ್ರೌರ್ಯ ಮೆರೆಯುತ್ತಿದ್ದಾರೆ. ಮನೆಯಿಂದ ಹೊರಬಾರದ ಪರಿಸ್ಥಿತಿಯಲ್ಲಿ ಜನರು ಇದ್ದಾರೆ. ಇತ್ತ ಸರ್ಕಾರ(Government) ರಚಿಸಿ ತಮ್ಮದೇ ಆಡಳಿತ ನಡೆಸುತ್ತಿರುವ ತಾಲಿಬಾನಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಸೂಸೈಡ್ ಬಾಂಬರ್(Suicide Bombers) ಗಳನ್ನ ಹೀರೋ(Hero)ಗಳು ಎಂದು ಕರೆದಿದೆ. ಅಷ್ಟೇ ಅಲ್ಲದೇ ಬಾಂಬರ್ಗಳ ಕುಟುಂಬಕ್ಕೆ ನಗದು(Cash), ಭೂಮಿ(Land)ಯನ್ನು ನೀಡುವುದಾಗಿ ಭರವಸೆ ನೀಡಿದೆ. ಯುಎಸ್ ಸೇನೆ(US Army) ಹಾಗೂ ಆಫ್ಘನ್ ಸೈನಿಕರನ್ನು ಹತ್ಯೆಮಾಡಲು ಸಹಾಯ ಮಾಡಿದ ಸೂಸೈಡ್ ಬಾಂಬರ್ಗಳ ಕುಟುಂಬಸ್ಥರಿಗೆ ಈ ಭರವಸೆಯನ್ನು ತಾಲಿಬಾನಿಗಳು ನೀಡಿದ್ದಾರೆ.
`ಸೂಸೈಡ್ ಬಾಂಬರ್ಗಳು ನಿಜವಾದ ಹೀರೋಗಳು’
ತಾಲಿಬಾನ್ನ ಹಂಗಾಮಿ ಆಂತರಿಕ ಸಚಿವ ಹಕ್ಕಾನಿ ಬಾಂಬರ್ಗಳ ಕುಟುಂಬಸ್ಥರನ್ನು ಕರೆಸಿ ಸಭೆ ನಡೆಸಿದ್ದಾರೆ. ಕಾಬೂಲ್ನ ಹೋಟೆಲ್ವೊಂದರಲ್ಲಿ ಈ ಸಭೆ ನಡೆದಿದೆ. 12 ಕ್ಕೂ ಹೆಚ್ಚು ಸೂಸೈಡ್ ಬಾಂಬರ್ಗಳ ಕುಟುಂಬಸ್ಥರು ಸಭೆಯಲ್ಲಿ ಹಾಜರಿದ್ದರು. ಈ ವೇಳೆ ಮಾತನಾಡಿದ ತಾಲಿಬಾನ್ನ ಹಂಗಾಮಿ ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿ, ಸೂಸೈಡ್ ಬಾಂಬರ್ಸ್ಗಳ ಬಗ್ಗೆ ಹಾಡಿ ಹೊಗಳಿದ್ದಾರೆ. ಅವರು ನಮ್ಮ ದೇಶದ ರಿಯಲ್ ಹೀರೋಗಳು. ಈ ದೇಶಕ್ಕೆ ಅವರ ಕೊಡಗೆ ಅಪಾರ, ಅವರನ್ನು ನಾವು ಎಂದಿಗೂ ಮರೆಯಲ್ಲ. ಅವರ ಕುಟುಂಬಸ್ಥರಿಗೆ ನಾವು ಭೂಮಿ ಹಾಗೂ ಹಣವನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.
ಇದನ್ನು ಓದಿ :
ಅಫ್ಘಾನಿಸ್ತಾನದಲ್ಲಿ ಮತ್ತೆ ಬಾಂಬ್ ಸ್ಪೋಟ; ಮಸೀದಿ ಮೇಲೆ ಉಗ್ರರ ಕರಿನೆರಳು
10 ಸಾವಿರ ಮಂದಿಗೆ ತಲಾ 112 ಡಾಲರ್
ಆತ್ಮಾಹುತಿ ಬಾಂಬರ್ಗಳ ಕುಟುಂಬಸ್ಥರನ್ನ ಹೋಟೆಲ್ಗೆ ಕರೆಸಿ ಸಭೆ ನಡೆಸಿ ಹಕ್ಕಾನಿ ಈ ರೀತಿಯ ಭರವಸೆ ನೀಡಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಸಭೆಯಲ್ಲಿ ಹಕ್ಕಾನಿ ಇರುವ ಫೋಟೊಗಳು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಇನ್ನೂ ಸಭೆಯ ಬಳಿಕ 10 ಸಾವಿರ ಮಂದಿಗೆ ತಲಾ 112 ಡಾಲರ್, ಭಾರತದ ಕರೆನ್ಸಿ ಪ್ರಕಾರ ತಲಾ 8000ಕ್ಕೂ ಹೆಚ್ಚು ಹಣವನ್ನು ಹಕ್ಕಾನಿ ನೀಡಿದ್ದಾರೆ. ಇನ್ನೂ ಇದರ ಜತೆ ನಿವೇಶನ ನೀಡಿ, ಬಾಂಬರ್ಗಳ ಕುಟುಂಬದ ಬೆನ್ನಿಗೆ ನಿಲ್ಲುತ್ತೇವೆ ಅಂತ ಹೇಳಿದ್ದಾರೆ.
ಇದನ್ನು ಓದಿ :
ಅಪಘಾನಿಸ್ತಾನದಲ್ಲಿ ಶತ್ರುಗಳ ಜೊತೆ ಯುದ್ಧವಿಲ್ಲದೇ ತಾಲಿಬಾನಿಗಳು ಏನು ಮಾಡುತ್ತಿದ್ದಾರೆ..?
ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂ!
ತಾಲಿಬಾನಿಗಳ ಕೈವಶವಾಗಿರುವ ಅಫ್ಘಾನಿಸ್ತಾನದಲ್ಲಿ ಆಹಾರ ಬಿಕ್ಕಟ್ಟು ಎದುರಾಗಿದೆ. ಪ್ರತಿನಿತ್ಯ ಸರಿಯಾದ ಊಟ ಸಿಗದೇ ಲಕ್ಚಾಂತರ ಜನರು ಹಸಿವಿನಿಂದ ನರಳುತ್ತಿದ್ದಾರೆ. `ಅವರಿಗೆ ಮೊದಲು ಆಹಾರವನ್ನು ಒದಗಿಸಿ, ನಂತರ ಈ ನಿಮ್ಮ ಸೂಸೈಡ್ ಬಾಂಬರ್ಗಳ ಕುಟುಂಬಸ್ಥರಿಗೆ ಹಣ ನೀಡಿ’ ಎಂದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. `ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂ ಬೇಕೆ?’ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಭಾರತದಿಂದ 50, 000 ಮೆಟ್ರಿಕ್ ಟನ್ ಗೋಧಿ ಹಾಗೂ ವೈದ್ಯಕೀಯ ನೆರವನ್ನು ನೀಡಲು ಮುಂದಾಗಿದೆ. ಮಾನವೀಯ ನೆಲೆಗಟ್ಟಿನಲ್ಲಿ ಅಫ್ಘಾನಿಸ್ತಾನಕ್ಕೆ ಆಹಾರ ಹಾಗೂ ವೈದ್ಯಕೀಯ ನೆರವು ನೀಡಲು ಭಾರತ ಮುಂದಾಗಿದೆ. ಮೊದಲು ನಿಮ್ಮ ಪ್ರಜೆಗಳ ಹಸಿವನ್ನು ನಿಗಿಸಿ, ಬಳಿಕ ನಿಮ್ಮ ಉಗ್ರ ಕೃತ್ಯಗಳನ್ನು ಮುಂದುವರೆಸಿ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ