Flight to Afghanistan? ಮತ್ತೆ ವಿಮಾನ ಹಾರಾಟ ಆರಂಭಿಸುವಂತೆ ಪತ್ರ ಬರೆದ ತಾಲಿಬಾನ್; ಭಾರತದ ನಿರ್ಧಾರವೇನು?

ಅಫ್ಘಾನಿಸ್ತಾನದಲ್ಲಿ ರಚನೆಯಾಗಿರುವ ತಾಲಿಬಾನ್ ಸರ್ಕಾರಕ್ಕೆ ಭಾರತ ಮಾನ್ಯತೆ ನೀಡಿಲ್ಲ. ಈ ವಿಷಯ ಸಂಬಂಧ ನಾಗರಿಕ ವಿಮಾನಯಾನ ಸಚಿವಾಲಯ ಗಹನವಾದ ಚರ್ಚೆಯಲ್ಲಿ ನಿರತವಾಗಿದೆ.

File photo

File photo

 • Share this:
  ಕಾಬೂಲ್: ತಾಲಿಬಾನಿ ಸರ್ಕಾರ ಅಫ್ಘಾನಿಸ್ತಾನ ಮತ್ತು ಭಾರತದ ನಡುವೆ ಮತ್ತೆ ವಿಮಾಯಯಾನ ಆರಂಭಿಸಲು ಮುಂದಾಗಿದೆ. ಈ ಕುರಿತು ಸೆಪ್ಟೆಂಬರ್ 7ರಂದು ತಾಲಿಬಾನಿ ಸರ್ಕಾರ ಪತ್ರ ಬರೆದಿರೋದನ್ನು ಸುದ್ದಿ ಸಂಸ್ಥೆ ಖಚಿತಪಡಿಸಿದೆ. ಅಫ್ಘಾನಿಸ್ತಾನದ ನಾಗರಿಕ ವಿಮಾನಯಾನ ಪ್ರಾಧಿಕಾರದ (Taiban’s Islamic Emirate of Afghanistan) ಕಾರ್ಯವಾಹಕ ಮಂತ್ರಿ ಹಮೀದುಲ್ಲಾಹ ಅಖುನಾಜ್ದಾದ್ ಭಾರತದ ಡಿಜಿಸಿಎ (DGCA-Directorate General of Civil Aviation) ಮಹಾನಿರ್ದೇಶಕ ಅರುಣ್ ಕುಮಾರ್ ಅವರಿಗೆ ಪತ್ರ ಬರೆಯಲಾಗಿದೆ. ಈ ವಿಷಯ ಸಂಬಂಧ ನಾಗರಿಕ ವಿಮಾನಯಾನ ಸಚಿವಾಲಯ ಗಹನವಾದ ಚರ್ಚೆಯಲ್ಲಿ ನಿರತವಾಗಿದೆ. ಆಗಸ್ಟ್ 15ರಂದು ಭಾರತ ಎಲ್ಲ ವಿಮಾನಯಾನ ( commercial flight operations) ಸಂಚಾರವನ್ನ ಕಾಬೂಲ್ ನಿಂದ ಕಡಿತಗೊಳಿಸಿಕೊಂಡಿತ್ತು.

  ತಾಲಿಬಾನಿ ಪತ್ರದಲ್ಲಿ ಏನಿದೆ?

  ನಿಮಗೆ ಗೊತ್ತಿರುವಂತೆ ಅಮೆರಿಕದ ಸೇನೆ ಕಾಬೂಲ್ (Kabul) ವಿಮಾನ ನಿಲ್ದಾಣವನ್ನು ಹಾನಿಗೊಳಿಸಿದೆ. ಬಹುತೇಕ ವಿಮಾನಗಳನ್ನು ಅದು ನಿಷ್ಕ್ರಿಯಗೊಳಿಸಿದೆ. ಆದ್ರೆ ನಮ್ಮ ಸ್ನೇಹ ರಾಷ್ಟ್ರವಾಗಿರುವ ಕತಾರ್ ತಾಂತ್ರಿಕ ನೆರವಿನೊಂದಿಗೆ ಮತ್ತೆನಮ್ಮ ವಿಮಾನ ನಿಲ್ದಾಣ ಆರಂಭಗೊಳ್ಳುತ್ತಿದೆ. ಈ ಸಂಬಂಧ ಸೆಪ್ಟೆಂಬರ್ 6, 2021ರಂದು ನೋಟಮ್ (ಏರ್ ಮ್ಯಾನ್ ಗಳಿಗೆ ಬನೋಟಿಸ್) ಹೊರಡಿಸಲಾಗಿದೆ ಎಂದು ಪತ್ರ ಬರೆಯಲಾಗಿದೆ.

  ತಾಲಿಬಾನ್ ಸರ್ಕಾರಕ್ಕೆ ಮಾನ್ಯತೆ ನೀಡದ ಭಾರತ

  ಅಫ್ಘಾನಿಸ್ತಾನದಲ್ಲಿ ರಚನೆಯಾಗಿರುವ ತಾಲಿಬಾನ್ ಸರ್ಕಾರಕ್ಕೆ ಭಾರತ ಮಾನ್ಯತೆ ನೀಡಿಲ್ಲ. ಆದ್ರೆ ದೋಹಾ ಮತ್ತು ಕತಾರ್ ನಲ್ಲಿ ಭಾರತದ ರಾಯಭಾರಿ ದೀಪಲ್ ಮಿತ್ತಲ್ ಜೊತೆ ತಾಲಿಬಾನಿ ನಾಯಕ ಶೇರ್ ಮಹಮದ್ ಅಬ್ಬಾಸ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅಮೆರಿಕ ಸೇನೆ ಕಾಬೂಲ್ ನಿಂದ ತೆರಳುತ್ತಿದ್ದಂತೆ ಇಡೀ ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

  ಇದನ್ನೂ ಓದಿ: Umesh Reddy Sentenced to Death: ವಿಕೃತಕಾಮಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಖಾಯಂ: ತೀರ್ಪು ಎತ್ತಿ ಹಿಡಿದ ಹೈ ಕೋರ್ಟ್

  ಕಾಬುಲ್ ನಗರವನ್ನು ತಾಲಿಬಾನಿಗಳು ವಶಕ್ಕೆ ಪಡೆಯುತ್ತಿದ್ದಂತೆ ಭಾರತೀಯರನ್ನು ಭಾರತ ಏರ್ ಲಿಫ್ಟ್ ಮಾಡಿಕೊಂಡಿದೆ. ಭಾರತೀಯರ ಜೊತೆ ಹಲವು ವಿದೇಶಿ ಪ್ರಜೆಗಳು ಭಾರತ ತಲುಪಿ ಸಂತಸ ವ್ಯಕ್ತಪಡಿಸಿದ್ದರು. ಆಗಸ್ಟ್ 21ರಂದು ಕೊನೆಯ ಬಾರಿ ಭಾರತದ ವಿಮಾನ ಅಫ್ಘಾನಿಸ್ತಾನಕ್ಕೆ ಹಾರಾಟ ನಡೆಸಿತ್ತು. ಏರ್ ಇಂಡಿಯಾ ವಿಮಾನಗಳು ಮೊದಲು ದುಶಾಂಬೆ ತಲುಪಿ ನಂತರ ನವದೆಹಲಿಯಲ್ಲಿ ಲ್ಯಾಂಡ್ ಆಗಿದ್ದವು.

  ನರಕವಾದ ಅಫ್ಘಾನಿಸ್ತಾನ

  ತಾಲಿಬಾನಿಗಳು ವಶಕ್ಕೆ ಪಡೆದುಕೊಂಡ ನಂತರ ಅಫ್ಘಾನಿಸ್ತಾನ ಮತ್ತೆ 90ರ ದಶಕಕ್ಕೆ ಹಿಂದಿರುಗಿದೆ. ಮಹಿಳೆಯ ಮೇಲೆ ಕಠಿಣ ಕಾನೂನುಗಳು ಹೇರುತ್ತಿರುವ ತಾಲಿಬಾನಿಗಳು ಮತ್ತೆ ಅಸಲಿ ಮುಖವನ್ನ ಪ್ರದರ್ಶಿಸುತ್ತಿದ್ದಾರೆ. ಮಹಿಳಾ ಕ್ರಿಕೆಟ್ ಮೇಲೆ ನಿಷೇಧ ವಿಧಿಸುವ ಮೂಲಕ ಐಸಿಸಿಯ ಕೆಂಗಣ್ಣಿಗೂ ಗುರಿಯಾಗಿದೆ. ಕೆಲ ದಿನಗಳ ಹಿಂದೆ ಅಪಹರಣದ ಆರೋಪ ಕೇಳಿ ಬಂದ ನಾಲ್ವರನ್ನು ಗುಂಡಿಕ್ಕಿ ಕೊಲ್ಲಲ್ಲಾಗಿತ್ತು. ಓರ್ವನ ಹೆಣವನ್ನ ನಗರದ ಹೃದಯಭಾಗದಲ್ಲಿ ಕ್ರೇನ್ ಮೂಲಕ ನೇತು ಹಾಕಿ ಅಮಾನವೀಯವಾಗಿ ನಡೆದುಕೊಂಡಿದ್ದರು. ಈ ಎಲ್ಲ ಘಟನೆಯನ್ನು ಪ್ರತ್ಯಕ್ಷದರ್ಶಿ ಮಾಧ್ಯಮಗಳ ಮುಂದೆ ವಿವರಿಸಿದ್ದರು.

  ತಾಲಿಬಾನಿಗಳ ಶಿಕ್ಷೆ ಬಗ್ಗೆ ಮಾತನಾಡಿರುವ ಪ್ರತ್ಯಕ್ಷದರ್ಶಿ ವಜೀರ್, ತಪ್ಪಿಗೆ ಶಿಕ್ಷೆ ನೀಡಬೇಕು ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದ್ರೆ ಈ ರೀತಿ ಅಮಾನವೀಯವಾಗಿ ಮನುಷ್ಯತ್ವ ಮರೆತು ದಂಡಿಸೋದು ಖಂಡನೀಯ. ಅಫ್ಘಾನಿಸ್ತಾನದಲ್ಲಿ ಮತ್ತೊಮ್ಮೆ 90ರ ದಶಕ ಮರಳಿದೆ. ಈಗ ಜನರು ತಾಲಿಬಾನಿಗಳನ್ನು ಕಂಡ್ರೆ ನಡುಗುವಂತಾಗಿದೆ ಎಂದು ಸದ್ಯದ ಪರಿಸ್ಥಿತಿಯ ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದರು.

  ವರದಿ: ಮಹ್ಮದ್​ ರಫೀಕ್​ ಕೆ
  Published by:Kavya V
  First published: