news18 Updated:September 9, 2019, 11:01 AM IST
ತಾಲಿಬಾನ್
- News18
- Last Updated:
September 9, 2019, 11:01 AM IST
ನವದೆಹಲಿ(ಸೆ.09): ಅಫ್ಘಾನಿಸ್ತಾನ್ ಸರ್ಕಾರದ ಜೊತೆಗೆ ನಡೆಯಬೇಕಾಗಿದ್ದ ಶಾಂತಿ ಮಾತುಕತೆಯಿಂದ ಹಿಂದೆ ಸರಿಯುವ ಅಮೆರಿಕಾ ನಿರ್ಧಾರ ಮತ್ತಷ್ಟು ಜನರನ್ನು ಬಲಿ ತೆಗೆದುಕೊಳ್ಳಲಿದೆ ಎಂದು ಉಗ್ರ ಸಂಘಟನೆ ತಾಲಿಬಾನ್ ಎಚ್ಚರಿಕೆಯ ಸಂದೇಶ ರವಾನಿಸಿದೆ. "ನಮ್ಮ ದೇಶದ ಓರ್ವ ಸೈನಿಕ ಸೇರಿದಂತೆ 11 ನಾಗರಿಕರನ್ನು ಬಲಿ ತೆಗೆದುಕೊಂಡ ಕಾಬೂಲ್ ಆತ್ಮಾಹುತಿ ದಾಳಿ ಹೊಣೆಯನ್ನು ತಾಲಿಬಾನ್ ಹೊತ್ತುಕೊಂಡಿದೆ. ಹೀಗಾಗಿ ಅಪ್ಘಾನಿಸ್ತಾನ್ ಜೊತೆಗೆ ಶಾಂತಿ ಮಾತುಕತೆ ನಡೆಸುವ ಮಾತೇ ಇಲ್ಲ" ಎಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಡಕ್ಕಾಗಿ ಹೇಳಿದ್ದರು. ಈ ಬೆನ್ನಲ್ಲೇ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ತಾಲಿಬಾನ್ ವಕ್ತಾರ ಜಬೀಹುಲ್ಲಾ ಮುಜಾಹಿದ್, ಟ್ರಂಪ್ ಅವರ ನಿರ್ಧಾರ ಮತ್ತಷ್ಟು ಅಮೆರಿಕಾದ ಅಮಾಯಕರನ್ನು ಬಲಿ ತೆಗೆದುಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಅಮೆರಿಕಾದ 11 ನಾಗರಿಕರನ್ನು ಬಲಿ ಪಡೆದುಕೊಂಡ ಕಾಬೂಲ್ ಆತ್ಮಾಹುತಿ ದಾಳಿ ಹೊಣೆಯನ್ನು ತಾಲಿಬಾನ್ ಹೊತ್ತುಕೊಂಡಿತ್ತು. ಈ ಬೆನ್ನಲ್ಲೇ ಅಪ್ಘಾನಿಸ್ತಾನ್ ಸರ್ಕಾರದ ಜೊತೆಗೆ ನಡೆಯಬೇಕಾಗಿದ್ದ ಶಾಂತಿ ಮಾತುಕತೆಯನ್ನು ಟ್ರಂಪ್ ರದ್ದುಗೊಳಿಸಿದರು.
ಎರಡು ದೇಶಗಳ ನಡುವೆ ಮಹತ್ವದ ಶಾಂತಿ ಮಾತುಕತೆ ನಡೆಯಬೇಕಿತ್ತು. ಈ ವೇಳೆಯಲ್ಲೇ ತಾಲಿಬಾನ್ ಕದನ ವಿರಾಮ ಉಲ್ಲಂಫಿಸಿರುವುದು ತಮ್ಮ ನಿಲುವು ಏನು ಎಂಬುವುದನ್ನು ಸ್ಪಷ್ಟಪಡಿಸಿದೆ. ಹೀಗಾಗಿ ಅಪ್ಘಾನಿಸ್ತಾನ್ ಜೊತೆಗೆ ಮಾತುಕತೆ ಸಾಧ್ಯವೇ ಇಲ್ಲ ಎಂದು ಟ್ವೀಟ್ ಮೂಲಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದರು.
ಕಳೆದ ಮಂಗಳವಾರ ಅಪ್ಘಾನಿಸ್ತಾನದ ಕಾಬೂಲ್ ಎಂಬ ಪ್ರದೇಶದಲ್ಲಿ ಸಂಭವಿಸಿದ ಭೀಕರ ಸ್ಟೋಟದಲ್ಲಿ 11 ಮಂದಿ ಸಾವನ್ನಪ್ಪಿದ್ದರು. ಅಲ್ಲದೇ ನೂರಾರು ಮಂದಿ ತೀವ್ರ ಗಾಯಗೊಂಡಿದ್ದರು. ಅಪ್ಘಾನಿಸ್ತಾನ ಸರ್ಕಾರದ ಜೊತೆಗೆ ಶಾಂತಿ ಮಾತುಕತೆ ನಡೆಯುವ ಸಂದರ್ಭದಲ್ಲೇ ಕಾಬೂಲ್ನಲ್ಲಿ ತಾಲಿಬಾನ್ ಈ ಬಾಂಬ್ ದಾಳಿ ನಡೆಸಿತ್ತು. ಸ್ಟೋಟದ ಹೊಣೆಯನ್ನು ಇದೇ ಸಂಘಟನೆ ಹೊತ್ತುಕೊಂಡ ಕಾರಣ, ಈ ಮಾತುಕತೆ ರದ್ದಾಗಿದೆ.
ಇದನ್ನೂ ಓದಿ: ಪುಲ್ವಾಮ ದಾಳಿಯ ಸೂತ್ರದಾರ ಮಸೂದ್ ಅಜರ್ ಬಿಡುಗಡೆ; ಭಾರತ ವಿರುದ್ಧ ಪಾಕ್ ಸಂಚು?
ಈಗಾಗಲೇ ಅಮೆರಿಕಾ ಹಾಗೂ ತಾಲಿಬಾನ್ ಪ್ರತಿನಿಧಿಗಳ ನಡುವೆ ಒಂಬತ್ತು ಸುತ್ತಿನ ಮಾತುಕತೆ ನಡೆದಿದೆ. ಅಂತೆಯೇ ಮತ್ತೊಂದು ಸುತ್ತಿನ ಮಾತುಕತೆಗೆ ಸೋಮವಾರ ಸಮಯವೂ ನಿಗದಿಯಾಗಿತ್ತು. ಇಲ್ಲಿ ಮಾತುಕತೆಯಲ್ಲಿ ಅಪ್ಘಾನಿಸ್ತಾನದ ವಶದಲ್ಲಿರುವ 14,000 ಯೋಧರ ಪೈಕಿ 5,400 ಯೋಧರನ್ನು ಹಿಂಪಡೆದುಕೊಳ್ಳುವ ಬಗ್ಗೆ ಚರ್ಚೆ ನಡೆದಿತ್ತು. ಇನ್ನೇನು ಇದಕ್ಕೆ ಟ್ರಂಪ್ ಅಂತಿಮ ಒಪ್ಪಿಗೆ ನೀಡಬೇಕು ಎನ್ನುವಷ್ಟರಲ್ಲೇ ತಾಲಿಬಾನ್ ಆತ್ಮಾಹುತಿ ದಾಳಿ ನಡೆಸಿ ಅಮಾಯಕರನ್ನು ಬಲಿಪಡೆದುಕೊಂಡಿದೆ.
ಈ ಹಿಂದೆಯೂ 2001 ಸೆಪ್ಟಂಬರ್ 11ರಂದು ಅಮೆರಿಕಾದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ಘಟನೆಯಲ್ಲಿ 3000 ಅಮಾಯಕರು ಮೃತಪಟ್ಟಿದ್ದರು. ವಿಶ್ವವನ್ನೇ ಬೆಚ್ಚಿ ಬೀಳಿಸಿದ ದಾಳಿಯ ಹೊಣೆಯನ್ನು ಅಪ್ಘಾನಿಸ್ತಾನದ ಅಲ್ ಕಾಯಿದಾ ಉಗ್ರ ಸಂಘಟನೆ ಹೊತ್ತುಕೊಂಡಿತ್ತು.
ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ
--------------
First published:
September 9, 2019, 10:52 AM IST