ಪೇಶಾವರದಲ್ಲಿ 132 ಶಾಲಾ ಮಕ್ಕಳನ್ನು ಬಲಿ ಪಡೆದಿದ್ದ ತಾಲಿಬಾನ್ ಉಗ್ರ ಪಾಕ್ ಜೈಲಿನಿಂದ ಪರಾರಿ

2012ರಲ್ಲಿ ಶಾಲಾ ಬಸ್​ನಲ್ಲಿ ಮನೆಗೆ ವಾಪಾಸಾಗುತ್ತಿದ್ದ ಮಲಾಲ ಯೂಸುಫ್​ ಮೇಲೆ ತಾಲಿಬಾನ್ ಉಗ್ರರು ದಾಳಿ ನಡೆಸಿದ್ದರು. ಆಕೆಯನ್ನು ಕೊಲ್ಲಲು ಸಂಚು ರೂಪಿಸಿದ್ದ ಅವರು ತಲೆ ಮತ್ತು ಕುತ್ತಿಗೆಗೆ ಗುಂಡು ಹಾರಿಸಿದ್ದರು.

ತಾಲಿಬಾನ್ ಉಗ್ರ ಎಹ್ಸಾನುಲ್ಲಾ ಎಹ್ಸಾನ್

ತಾಲಿಬಾನ್ ಉಗ್ರ ಎಹ್ಸಾನುಲ್ಲಾ ಎಹ್ಸಾನ್

  • Share this:
ಇಸ್ಲಮಾಬಾದ್ (ಫೆ. 7): ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಕಾರ್ಯಕರ್ತೆ ಮಲಾಲ ಯೂಸಫಜಾಯ್ ಮೇಲೆ 2012ರಲ್ಲಿ ಮಾರಣಾಂತಿಕ ದಾಳಿ ನಡೆಸಿದ್ದ ತಾಲಿಬಾನ್​​ ಉಗ್ರ ಸಂಘಟನೆಯ ಭಯೋತ್ಪಾದಕ ಎಹ್ಸಾನುಲ್ಲಾ ಎಹ್ಸಾನ್ ಪಾಕಿಸ್ತಾನದ ಜೈಲಿನಿಂದ ಪರಾರಿಯಾಗಿದ್ದಾನೆ.

ಮಲಾಲ ಮೇಲೆ ಹಲ್ಲೆ ನಡೆಸಿದ್ದ ಈ ಉಗ್ರ 2014ರಲ್ಲಿ ಪೇಶಾವರ​ ಆರ್ಮಿ ಶಾಲೆ ಮೇಲೂ ದಾಳಿ ನಡೆಸಿ 132 ವಿದ್ಯಾರ್ಥಿಗಳು ಸೇರಿದಂತೆ 149 ಜನರನ್ನು ಹತ್ಯೆಗೈದಿದ್ದ. ಈತ ಪಾಕಿಸ್ತಾನದ ಜೈಲಿನಿಂದ ಪರಾರಿಯಾಗಿರುವುದಾಗಿ ಖುದ್ದು ಆತನೇ ಆಡಿಯೋ ತುಣುಕೊಂದನ್ನು ರಿಲೀಸ್ ಮಾಡಿದ್ದಾನೆ. ಈ ಆಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 'ನಾನು 2017ರಲ್ಲಿ ಪೊಲೀಸರೆದುರು ಶರಣಾದಾಗ ಅವರು ನೀಡಿದ್ದ ಮಾತನ್ನು ಉಳಿಸಿಕೊಳ್ಳದ ಕಾರಣ 2020ರ ಜನವರಿ 11ರಂದು ಜೈಲಿನಿಂದ ತಪ್ಪಿಸಿಕೊಂಡಿದ್ದೇನೆ' ಎಂದು ಆತ ಹೇಳಿಕೊಂಡಿದ್ದಾನೆ. ಪಾಕಿಸ್ತಾನದ ಜೈಲಿನಲ್ಲಿರುವ ಭದ್ರತಾ ವ್ಯವಸ್ಥೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಸಿಎಎ ಬಗ್ಗೆ ಫೋನ್​ನಲ್ಲಿ ಮಾತಾಡಿದ್ದೇ ತಪ್ಪಾಯ್ತ? ಪ್ರಯಾಣಿಕನನ್ನು ಪೊಲೀಸರಿಗೆ ಒಪ್ಪಿಸಿದ ಕ್ಯಾಬ್ ಚಾಲಕ

'ದೇವರ ಆಶೀರ್ವಾದದಿಂದ ಕೊನೆಗೂ ನಾನು ಜೈಲಿನಿಂದ ಪರಾರಿಯಾಗಿದ್ದೇನೆ' ಎಂದು ಹೇಳಿಕೊಂಡಿರುವ ಎಹ್ಸಾನುಲ್ಲಾ  ಎಹ್ಸಾನ್ ಪತ್ತೆಗಾಗಿ ಪಾಕ್ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

2012ರಲ್ಲಿ ಶಾಲಾ ಬಸ್​ನಲ್ಲಿ ಮನೆಗೆ ವಾಪಾಸಾಗುತ್ತಿದ್ದ ಮಲಾಲ ಯೂಸುಫ್​ ಮೇಲೆ ತಾಲಿಬಾನ್ ಉಗ್ರರು ದಾಳಿ ನಡೆಸಿದ್ದರು. ಆಕೆಯನ್ನು ಕೊಲ್ಲಲು ಸಂಚು ರೂಪಿಸಿದ್ದ ಅವರು ತಲೆ ಮತ್ತು ಕುತ್ತಿಗೆಗೆ ಗುಂಡು ಹಾರಿಸಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಲಾಲಗೆ ಯುನೈಟೆಡ್​​ ಕಿಂಗ್​ಡಮ್​​ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅದಾದ ಬಳಿಕ ಚೇತರಿಸಿಕೊಂಡಿದ್ದ ಮಲಾಲಗೆ 2014ರಲ್ಲಿ ನೊಬೆಲ್​​ ಶಾಂತಿ ಪ್ರಶಸ್ತಿಯ ಗೌರವ ಸಿಕ್ಕಿತ್ತು.

ಇದನ್ನೂ ಓದಿ: 105ನೇ ವಯಸ್ಸಿನಲ್ಲಿ 4ನೇ ಕ್ಲಾಸ್​ ಪಾಸಾದ ಕೇರಳದ ಅಜ್ಜಿ; ಶತಾಯುಷಿಯ ಅಂಕ ನೋಡಿದರೆ ಅಚ್ಚರಿ ಪಡ್ತೀರ!

ಇದೊಂದೇ ಅಲ್ಲದೆ, ಹಲವಾರು ಉಗ್ರ ದಾಳಿಯಲ್ಲೂ ಎಹ್ಸಾನುಲ್ಲಾ ನಂಟು ಹೊಂದಿದ್ದ ಎಂಬುದು ತನಿಖೆ ವೇಳೆ ಬಯಲಾಗಿತ್ತು. 2017ರಲ್ಲಿ ತಾನೇ ಪಾಕ್ ಪೊಲೀಸರೆದುರು ಈತ ಶರಣಾಗಿದ್ದ. ಈ ವೇಳೆ ಮಾಡಿಕೊಂಡಿದ್ದ ಒಪ್ಪಂದವನ್ನು ಮೀರಿರುವ ಪೊಲೀಸರು ಮಾತು ತಪ್ಪಿದ ಕಾರಣಕ್ಕೆ ಇದೀಗ ಆ ಉಗ್ರ ಜೈಲಿನಿಂದ ಪರಾರಿಯಾಗಿದ್ದಾನೆ.
First published: